MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Health
  • ಈ 5 ದೇಸಿ ಪಾನೀಯ ಸಿಗರೇಟು , ಆಲ್ಕೋಹಾಲ್‌ಗಿಂತಲೂ ಕಿಕ್ ಕೊಡುತ್ತೆ

ಈ 5 ದೇಸಿ ಪಾನೀಯ ಸಿಗರೇಟು , ಆಲ್ಕೋಹಾಲ್‌ಗಿಂತಲೂ ಕಿಕ್ ಕೊಡುತ್ತೆ

ಮದ್ಯಪಾನ (Alcohol) ಇಂದು ದೊಡ್ಡ ಸಮಸ್ಯೆ. ಕೆಲಸದ ಒತ್ತಡ (Work Pressure), ಮನೆ ಕೆಲಸ, ಸಂಚಾರ (Traveelng) ಹತ್ತು ಗಂಟೆಗಳ ಕಾಲ ನಡೆಯುವ ದೀರ್ಘ ಪಾಳಿಗಳು, ಬಾಸ್ ಬೈಯುವುದು, ವೇಗವಾಗಿ ಮಾಲಿನ್ಯ ಹೆಚ್ಚುತ್ತಿರುವುದು, ಬಸ್-ರೈಲಿನಲ್ಲಿ ಧಾವಿಸುವುದು, ನಿಸ್ಸಂಶಯವಾಗಿ ಯಾವುದೇ ಮನುಷ್ಯನು ಅಂತಹ ಪರಿಸ್ಥಿತಿಯಲ್ಲಿ ಅಸಮಾಧಾನಗೊಳ್ಳಬಹುದು. ಉದ್ವಿಗ್ನತೆ ಮುಕ್ತವಾಗಲು ಸಂಜೆಯಾದ ತಕ್ಷಣ ಅನೇಕ ಜನರು ಮದ್ಯದ ಬಾಟಲಿಗಳನ್ನು ತೆರೆಯಲು ಪ್ರಾರಂಭಿಸುತ್ತಾರೆ ಎಂದು ಆಗಾಗ್ಗೆ ಕಂಡುಬರುತ್ತದೆ. 

2 Min read
Suvarna News | Asianet News
Published : Mar 04 2022, 08:16 PM IST
Share this Photo Gallery
  • FB
  • TW
  • Linkdin
  • Whatsapp
17

ಮದ್ಯಪಾನ (Alcohol Drinks)ದ ಚಟ ಹೆಚ್ಚಾದರೆ, ಅದರಿಂದ ಹಲವು ಆರೋಗ್ಯ (Health) ಸಮಸ್ಯೆ ಉಂಟಾಗುತ್ತದೆ. ಇದರಿಂದ ಕ್ಷಣದ ಸುಖ ಕಂಡರೂ, ನಂತರ ಒಂದರ ನಂತರ ಒಂದು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅದಕ್ಕಾಗಿ ಮದ್ಯಪಾನದ ಬದಲಾಗಿ ಬೇರೆ ಆಹಾರಗಳನ್ನು ಸೇವಿಸುವ ಮೂಲಕ ನಿಮ್ಮ ಮನಸ್ಸಿನ ಉದ್ವಿಗ್ನತೆಯನ್ನು ದೂರ ಮಾಡಿ ಕೊಳ್ಳಬಹುದು.

27

ಆಲ್ಕೋಹಾಲ್-ಸಿಗರೇಟುಗಳು ಅಥವಾ ಇತರ ಮಾದಕದ್ರವ್ಯಗಳು (Drugs) ಮನಸ್ಸಿನಲ್ಲಿನ ಉದ್ವಿಗ್ನತೆಯನ್ನು ಸ್ವಲ್ಪ ಕಡಿಮೆ ಮಾಡುತ್ತದೆ ಎಂಬುದರಲ್ಲಿ ಸಂದೇಹವಿಲ್ಲ, ಆದರೆ ದೈನಂದಿನ ಒತ್ತಡ ಮತ್ತು ಆತಂಕವನ್ನು ತೊಡೆದುಹಾಕಲು ಇದು ಸರಿಯಾದ ಮಾರ್ಗವೇ? ಮಾದಕ ದ್ರವ್ಯದ ದುರುಪಯೋಗವು ನಿಮ್ಮ ಅಸ್ವಸ್ಥತೆಯನ್ನು ಸ್ವಲ್ಪ ಸಮಯದವರೆಗೆ ಕಡಿಮೆ ಮಾಡಬಹುದು, ಆದರೆ ಅದರ ಅಡ್ಡ ಪರಿಣಾಮಗಳು ದೀರ್ಘಕಾಲದವರೆಗೆ ಆರೋಗ್ಯವನ್ನು ಹಾಳುಮಾಡಬಹುದು.

37

ಪೌಷ್ಟಿಕತಜ್ಞೆ ಮತ್ತು ಆಹಾರ ತಜ್ಞೆ ಶಿಖಾ ಅಗರ್ವಾಲ್ ಶರ್ಮಾ ಅವರು ಆರೋಗ್ಯಕರವಾದ ಮತ್ತು ಆಲ್ಕೋಹಾಲ್ (Alcohol)ಗೆ ಬದಲಿಯಾಗಬಹುದಾದ ಕೆಲವು ವಿಷಯಗಳ ಬಗ್ಗೆ ಹೇಳಿದ್ದಾರೆ. ಇವುಗಳನ್ನು ಸೇವಿಸುವ ಮೂಲಕ ದೇಹಕ್ಕೆ ತಕ್ಷಣ ಶಕ್ತಿ ಸಿಗುತ್ತದೆ ಮತ್ತು ಮನಸ್ಸಿನ (Mind) ಉದ್ವೇಗವನ್ನು ತಕ್ಷಣ ತೊಡೆದುಹಾಕುತ್ತದೆ. ನೀವು ಮಾಡಬಹುದಾದ ಅತ್ಯಂತ ಪ್ರಮುಖ ಕೆಲಸವೆಂದರೆ ಅವುಗಳನ್ನು ನಿಮ್ಮ ಮನೆಯಲ್ಲಿ ಮಾಡುವುದು.

47

ಮನೆಯಲ್ಲಿ ತಯಾರಿಸಿಬಹುದಾದ ಎನರ್ಜಿ ಡ್ರಿಂಕ್ಸ್(Energy Drinks)
ಮನೆಯಲ್ಲಿ ಎನರ್ಜಿ ಡ್ರಿಂಕ್ ತಯಾರಿಸಲು ಒಂದು ಲೋಟ ತಣ್ಣೀರನ್ನು ತೆಗೆದುಕೊಳ್ಳಿ ಮತ್ತು ಅದರಲ್ಲಿ ಅರ್ಧ ಟೀ ಚಮಚ ಕಾಫಿ ಪುಡಿ (Coffee Powder) ಮತ್ತು ಅರ್ಧ ಟೀ ಚಮಚ ಹಾಲನ್ನು ಮಿಶ್ರಣ ಮಾಡಿ. ಇದನ್ನು ಕುಡಿಯುವುದರಿಂದ ದೇಹಕ್ಕೆ ತಕ್ಷಣದ ಶಕ್ತಿ ಬರುತ್ತದೆ ಮತ್ತು ಆಯಾಸವನ್ನು ನಿವಾರಿಸುತ್ತದೆ.

57

ಬಾದಾಮಿ ಮತ್ತು ವಾಲ್ ನಟ್ಸ್ (Walnut) ಮಿಶ್ರಣ
ಬಾದಾಮಿ ಮತ್ತು ವಾಲ್‌ನಟ್‌ಗಳನ್ನು ಪುಡಿ ಮಾಡಿ. ಕೆಲವು ಸಣ್ಣ ಏಲಕ್ಕಿಗಳನ್ನು ಪುಡಿ ಮಾಡಿ ಮತ್ತು ಅದನ್ನು ಮಿಶ್ರಣ ಮಾಡಿ. ಇದರಲ್ಲಿ ಸ್ವಲ್ಪ ಬೆಲ್ಲದ ಪುಡಿಯನ್ನೂ ಬೆರೆಸಿಕೊಳ್ಳಬಹುದು. ಮಲಗುವ ಮೊದಲು ಈ ಮಿಶ್ರಣವನ್ನು ತೆಗೆದುಕೊಳ್ಳಿ. ಇದು ಉತ್ತಮ ನಿದ್ರೆಗೆ ಕಾರಣವಾಗುತ್ತದೆ.

67

ಸರ್ಪಗಂಧ (Sarpa Gandha)
ಇದು ನಿದ್ರೆಯನ್ನು ಉತ್ತೇಜಿಸಲು, ಆತಂಕವನ್ನು ನಿವಾರಿಸಲು ಮತ್ತು ಒತ್ತಡ ನಿಭಾಯಿಸಲು ಸಹಾಯಕವಾದ ಗಿಡಮೂಲಿಕೆ. ಮನಸ್ಸನ್ನು ನಿಧಾನಗೊಳಿಸುವಲ್ಲಿಯೂ ಇದು ಸಹಾಯಕ. ನೀವು ಅದನ್ನು ನೀರು ಅಥವಾ ಹಾಲಿನೊಂದಿಗೆ ತೆಗೆದುಕೊಳ್ಳಬಹುದು. ಅದನ್ನು ತೆಗೆದುಕೊಂಡ ನಂತರ, ಮಾದಕತೆಯು ಮನಸ್ಸಿನಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ, ಆದ್ದರಿಂದ ಇದನ್ನು ಸೇವಿಸಿ ವಾಹನ ಚಾಲನೆ ಮಾಡುವುದನ್ನು ತಪ್ಪಿಸಿ.

77

ಶಕ್ತಿಯುತ ಡಿಟಾಕ್ಸ್ ನೀರು (Detox water)
ಇದನ್ನು ತಯಾರಿಸಲು ಅರ್ಧ ಟೀ ಚಮಚ ಕೊತ್ತಂಬರಿ ಪುಡಿ, ಅರ್ಧ ಟೀ ಚಮಚ ಸಣ್ಣ ಏಲಕ್ಕಿ ಪುಡಿ, ಅರ್ಧ ಟೀ ಚಮಚ ಹುರಿದ ಜೀರಿಗೆ ಮತ್ತು ಅರ್ಧ ನಿಂಬೆ ಹಣ್ಣನ್ನು ಒಂದು ಲೋಟ ನೀರಿನಲ್ಲಿ ಸೇರಿಸಿ ಮಿಶ್ರಣ ಮಾಡಿ. ದಿನವಿಡೀ ಆರಾಮವಾಗಿ ಕುಡಿಯಬಹುದು. ಇದರಿಂದ ಮನಸ್ಸು ನಿರಾಳವಾಗುತ್ತದೆ.

About the Author

SN
Suvarna News
ಮದ್ಯ
ಆರೋಗ್ಯ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved