ಪುರುಷರಿಗಿಂತ ಮಹಿಳೆಯರಲ್ಲಿ ಹೃದಯಾಘಾತದ ಲಕ್ಷಣಗಳು ಮತ್ತು ಕಾರಣಗಳು ಬೇರೆಯಾಗಿರುತ್ತವೆ. ಇದೇ ಕಾರಣಕ್ಕೆ ರೋಗ ಪತ್ತೆ ಮಾಡುವುದು ಕೂಡ ತಡವಾಗಬಹುದು. ಈ ಬಗ್ಗೆ ಮಹಿಳೆಯರು ತಿಳಿದುಕೊಳ್ಳಲೇಬೇಕಾದ ಕೆಲವು ಮುಖ್ಯ ವಿಚಾರಗಳು ಇಲ್ಲಿವೆ.

ಮಹಿಳೆಯರಲ್ಲಿ ಸಾವಿಗೆ ಪ್ರಮುಖ ಕಾರಣಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಕೂಡ ಒಂದು. ಪುರುಷರಿಗಿಂತ ಮಹಿಳೆಯರಲ್ಲಿ ಇದರ ಲಕ್ಷಣಗಳು ಮತ್ತು ಅಪಾಯಕಾರಿ ಅಂಶಗಳು ಬೇರೆಯಾಗಿರುತ್ತವೆ. ಇದೇ ಕಾರಣಕ್ಕೆ ರೋಗವನ್ನು ಪತ್ತೆ ಮಾಡುವುದು ಕೂಡ ತಡವಾಗುತ್ತದೆ. ಹಾಗಾಗಿ, ಮಹಿಳೆಯರು ಈ ವಿಚಾರಗಳನ್ನು ಮುಖ್ಯವಾಗಿ ತಿಳಿದುಕೊಂಡಿರಬೇಕು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಹಿಳೆಯರು ಗಮನಿಸಬೇಕಾದ ಅಂಶಗಳು: ಪುರುಷರಂತೆ ಮಹಿಳೆಯರಿಗೂ ಹೈ ಬಿಪಿ, ಕೊಲೆಸ್ಟ್ರಾಲ್, ಶುಗರ್ ಮತ್ತು ಕುಟುಂಬದಲ್ಲಿ ಯಾರಿಗಾದರೂ ಹೃದಯದ ಸಮಸ್ಯೆ ಇದ್ದರೆ (ಫ್ಯಾಮಿಲಿ ಹಿಸ್ಟರಿ) ಹೃದಯದ ಕಾಯಿಲೆಗಳ ಅಪಾಯ ಹೆಚ್ಚಿರುತ್ತೆ. ಆದರೆ, ಇವುಗಳ ಜೊತೆಗೆ ಪಿಸಿಓಎಸ್ (PCOS), ಲೂಪಸ್, ಮತ್ತು ರುಮಟಾಯ್ಡ್ ಆರ್ಥ್ರೈಟಿಸ್‌ನಂತಹ ಆಟೋ ಇಮ್ಯೂನ್ ಕಾಯಿಲೆಗಳು ಕೂಡ ಹೃದಯ ಮತ್ತು ರಕ್ತನಾಳಗಳಿಗೆ ಹಾನಿ ಮಾಡುತ್ತವೆ.

ಮುಟ್ಟು ನಿಲ್ಲುವುದು (Menopause) ಹೃದಯದ ಮೇಲೆ ಪರಿಣಾಮ ಬೀರುತ್ತೆ: ಈಸ್ಟ್ರೋಜೆನ್ ಅನ್ನೋ ಹಾರ್ಮೋನ್ ಹೃದಯ ಮತ್ತು ರಕ್ತನಾಳಗಳಿಗೆ ಒಂದು ರೀತಿ ರಕ್ಷಣೆ ನೀಡುತ್ತದೆ. ಆದರೆ, ಮುಟ್ಟು ನಿಂತ ನಂತರ ಈಸ್ಟ್ರೋಜೆನ್ ಮಟ್ಟ ಕಡಿಮೆಯಾಗುತ್ತದೆ. ಆಗ ರಕ್ತದೊತ್ತಡ (BP) ಮತ್ತು ಕೊಲೆಸ್ಟ್ರಾಲ್ ಹೆಚ್ಚಾಗಲು ಶುರುವಾಗುತ್ತೆ. ರಕ್ತನಾಳಗಳು ದಪ್ಪ ಆಗುವ ಸಾಧ್ಯತೆಯೂ ಇರುತ್ತದೆ. ಹೀಗಾಗಿ, ಈ ಸಮಯದಲ್ಲಿ ಮಹಿಳೆಯರು ಹೃದಯದ ಆರೋಗ್ಯದ ಬಗ್ಗೆ ಪರೀಕ್ಷೆ ಮಾಡಿಸಿಕೊಳ್ಳುವುದು ತುಂಬಾನೇ ಮುಖ್ಯ.

ಹೃದಯಾಘಾತದ ಲಕ್ಷಣಗಳು: ಮಹಿಳೆಯರಲ್ಲಿ ಹೃದಯಾಘಾತ ಅಂದ ತಕ್ಷಣ ಯಾವಾಗಲೂ ಜೋರಾಗಿ ಎದೆನೋವು ಕಾಣಿಸಿಕೊಳ್ಳಬೇಕು ಅಂತೇನಿಲ್ಲ. ಉಸಿರಾಟದ ತೊಂದರೆ, ತಲೆಸುತ್ತು, ದವಡೆ ನೋವು, ಬೆನ್ನಿನ ಮೇಲ್ಭಾಗದಲ್ಲಿ ನೋವು, ವಿಪರೀತ ಬೆವರುವುದು ಮತ್ತು ಸುಸ್ತಾಗುವುದು - ಇಂತಹ ಲಕ್ಷಣಗಳು ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ.

ರಕ್ತನಾಳದಲ್ಲಿ ಬ್ಲಾಕ್

ಸಾಮಾನ್ಯವಾಗಿ ಪುರುಷರಲ್ಲಿ ದೊಡ್ಡ ರಕ್ತನಾಳಗಳಲ್ಲಿ ಬ್ಲಾಕ್ ಆಗುವುದರಿಂದ ಹೃದಯಾಘಾತ ಆಗುತ್ತದೆ. ಆದರೆ ಮಹಿಳೆಯರಲ್ಲಿ ಸಣ್ಣ ರಕ್ತನಾಳಗಳ ಮೇಲೆ ಪರಿಣಾಮ ಬೀರುವ ಮೈಕ್ರೋವಾಸ್ಕುಲರ್ ಕಾಯಿಲೆ (Microvascular Disease), ರಕ್ತನಾಳಗಳು ಇದ್ದಕ್ಕಿದ್ದಂತೆ ಸಂಕುಚಿತಗೊಳ್ಳುವುದು, ಹೆರಿಗೆಯ ನಂತರ ಆಗಬಹುದಾದ ಸ್ಪೊಂಟೇನಿಯಸ್ ಆರ್ಟರಿ ಡಿಸೆಕ್ಷನ್ (SCAD), ಅಥವಾ ತೀವ್ರ ಭಾವನಾತ್ಮಕ ಒತ್ತಡದಿಂದ ಬರುವ 'ಬ್ರೋಕನ್ ಹಾರ್ಟ್ ಸಿಂಡ್ರೋಮ್' (Broken Heart Syndrome) ಕೂಡ ಹೃದಯಾಘಾತಕ್ಕೆ ಕಾರಣವಾಗಬಹುದು.