Asianet Suvarna News Asianet Suvarna News

ಪಿಸಿಒಎಸ್‌ ಬಗ್ಗೆ ತಿಳಿಯಬೇಕಾದ ಮಾಹಿತಿ; ಮೂರು ಬಗೆಯಲ್ಲಿ ಕಾಡುವ ಪಾಲಿಸಿಸ್ಟಿಕ್‌ ಒವೇರಿಯನ್!

ಪಾಲಿಸಿಸ್ಟಿಕ್‌ ಒವೇರಿಯನ್‌ ಸಿಂಡ್ರೋಮ್‌ ನ ಪರಿಣಾಮ ಈಗಿನ ಕೊರೊನಾ ಹೊಸ ಸಹಜತೆ ಸಂದರ್ಭದಲ್ಲಿ ತುಸು ಗಂಭೀರವಾಗಿಯೇ ಇದೆ. ಉದ್ಯೋಗ ಕಳೆದುಕೊಳ್ಳುವುದು/ಮನೆಯಿಂದಲೇ ಉದ್ಯೋಗ, ಕುಟುಂಬ ಸದಸ್ಯರ ಕ್ವಾರಂಟೈನ್‌, ಮಕ್ಕಳ ಆರೈಕೆ ಮತ್ತು ಮನೆಗೆಲಸ ಸೇರಿದಂತೆ ಹತ್ತು ಹಲವಾರು ಜಂಜಾಟಗಳಿಂದ ಮಹಿಳೆಯರ ಮೇಲಿನ ಒತ್ತಡ ಹೆಚ್ಚಾಗುತ್ತಿದೆ. ಇದು ನಿದ್ದೆ, ಆಹಾರ, ದೈಹಿಕ ಚಟುವಟಿಕೆ ಮೇಲೂ ಪರಿಣಾಮ ಬೀರಿದೆ. ಈ ಒತ್ತಡ ಪೀರಿಯೆಡ್ಸ್‌ ಮೇಲೆ ಪರಿಣಾಮ ಬೀರುತ್ತದೆ.

Three types of Polycystic ovary syndrome you must know
Author
Bangalore, First Published Sep 10, 2020, 3:23 PM IST

ಡಾ.ಶಶಿಕಲಾ ಕ್ಷೀರಸಾಗರ್‌

ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞರು

ನಿಗದಿತ ಅವಧಿಗಿಂತ ತಡವಾಗಿ ಮುಟ್ಟಾಗುತ್ತಿದೆ ಎಂದು ನಮ್ಮಲ್ಲಿಗೆ ಬರುವ ಮಹಿಳೆಯರು ಹೆಚ್ಚಾಗುತ್ತಿದ್ದಾರೆ. ಕೆಲವರಿಗೆ ಹೆಚ್ಚಿನ ಸ್ರಾವ, ದೀರ್ಘಕಾಲದ ಪೀರಿಯೆಡ್ಸ್‌ ಅನುಭವವಾಗುತ್ತಿದೆ.

ಮೂರು ಬಗೆಯಲ್ಲಿ ಪಿಸಿಒಎಸ್‌ ಮಹಿಳೆಯರನ್ನು ಕಾಡುತ್ತಿದೆ.

1. ದೀರ್ಘಕಾಲ ಅಂಡ ಉತ್ಪತ್ತಿಯಾಗದೇ ಋುತುಚಕ್ರದಲ್ಲಿ ವ್ಯತ್ಯಾಸವಾಗೋದು, ಗರ್ಭ ಧರಿಸುವುದರಲ್ಲಿ ತೊಂದರೆಯಾಗುವುದು.

Three types of Polycystic ovary syndrome you must know

2. ಹೈಪರ್‌ ಆ್ಯಂಡ್ರೋಜೆನಿಸಂ ಅಂದರೆ ಪುರುಷರಲ್ಲಿ ಹೆಚ್ಚಿರುವ ಆ್ಯಂಡ್ರೋಜೆನ್‌ ಹಾರ್ಮೋನ್‌ ಮಹಿಳೆಯಲ್ಲಿ ಹೆಚ್ಚಾಗಿ ಮೊಡವೆ, ಮುಖದಲ್ಲಿ ಕೂದಲು ಬೆಳೆಯೋದು ಇತ್ಯಾದಿ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

3. ಅಲ್ಟಾ್ರಸೌಂಡ್‌ ಸ್ಕಾ್ಯನಿಂಗ್‌ ವೇಳೆ ಅಂಡಾಶಯದಲ್ಲಿ ಸಿಸ್ಟ್‌ ಅಥವಾ ಗುಳ್ಳೆಗಳ ರಚನೆ ಗೋಚರಿಸೋದು.

ಏನೆಲ್ಲ ಸಮಸ್ಯೆ?

- ಪೀರಿಯೆಡ್ಸ್‌ನಲ್ಲಿ ವ್ಯತ್ಯಯ, ಫಲವತ್ತತೆ ಕಡಿಮೆಯಾಗೋದು, ಮೊಡವೆ, ಅಸಹಜ ಕೂದಲಿನ ಬೆಳವಣಿಗೆ, ಗರ್ಭಪಾತ, ಗರ್ಭಧಾರಣೆ ಸಮಸ್ಯೆ, ಗರ್ಭಧಾರಣೆ ಅವಧಿಯಲ್ಲಿ ಡಯಾಬಿಟೀಸ್‌, ಬೊಜ್ಜಿನ ಸಮಸ್ಯೆ, ಅವಧಿಗೆ ಮುನ್ನ ಹೆರಿಗೆಯಾಗೋದು ಇತ್ಯಾದಿ.

ಚೆನ್ನಾಗಿ ವ್ಯಾಯಾಮ ಮಾಡೋದು, ಹೆಲ್ದಿ ಆಹಾರ ಸೇವಿಸಿ ತೂಕ ಇಳಿಸಿಕೊಳ್ಳುವುದು, ಪೋಲಿಕ್‌ ಆ್ಯಸಿಡ್‌ ಹೊಂದಿರುವ ಹಣ್ಣು ಮತ್ತು ತರಕಾರಿ ಸೇವನೆ, ಮಾದಕ ವ್ಯಸನದಿಂದ ದೂರವಿರೋದರ ಮೂಲಕ ಪಿಸಿಒಎಸ್‌ ಬರದಂತೆ ತಡೆಯಬಹುದು.

ಬಹುತೇಕ ಮಹಿಳೆಯರು ಈ ವೇಳೆ ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳಲು ಆರಂಭಿಸುತ್ತಾರೆ. ಇದಕ್ಕಿಂತ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳೋದು ಉತ್ತಮ. ತೂಕವನ್ನು ಇಳಿಸಿಕೊಂಡರೆ ಅಂಡ ಸರಿಯಾದ ಸಮಯಕ್ಕೆ ಉತ್ಪತ್ತಿಯಾಗುತ್ತೆ. ಆಗ ಪೀರಿಯೆಡ್ಸ್‌ ಕರೆಕ್ಟ್ ಆಗಿ, ಗರ್ಭ ಧರಿಸಲೂ ಸಮಸ್ಯೆ ಆಗಲ್ಲ. ನಿಮ್ಮ ಸೊಂಟದ ಸುತ್ತಳತೆ 80 ಸೆಂ.ಮೀಗಿಂತ ಕಡಿಮೆ ಇರುವಂತೆ ನೋಡಿಕೊಳ್ಳಿ. ಜೊತೆಗೆ ಆರೋಗ್ಯಕರ ಜೀವನಶೈಲಿ ರೂಪಿಸಿ, ಪಿಸಿಒಎಸ್‌ನಿಂದ ಹೊರಬನ್ನಿ.

Follow Us:
Download App:
  • android
  • ios