Asianet Suvarna News Asianet Suvarna News

Sexual Wellness Tips: ಹದಿಹರೆಯದಲ್ಲೇ ಗರ್ಭಧಾರಣೆ! Safe Sex ಬಗ್ಗೆ ತಿಳಿದುಕೊಳ್ಳೋಕೆ ಇದು ಸಕಾಲ

Sexual Health Tips: ಇತ್ತೀಚೆಗೆ 17 ವರ್ಷದ ಹುಡುಗಿಯೊಬ್ಬಳು ಯೂಟ್ಯೂಬ್ ನೋಡಿಕೊಂಡು ಅಬಾರ್ಷನ್ ಮಾಡ್ಕೊಳ್ಳೋಕೆ ಹೋಗಿ ರಾದ್ಧಾಂತವಾಗಿತ್ತು. ಇಂಥ ಅಪಾಯಗಳನ್ನು ತಡೆಯುವುದು ಸೇಫ್ ಸೆಕ್ಸ್‌ನ ಉದ್ದೇಶ. ಅದು ಹೇಗೆ?

 

How to avoid Pregnancy in adolescence, Tips for safe sex
Author
Bengaluru, First Published Apr 9, 2022, 2:48 PM IST

ಇತ್ತೀಚೆಗೆ 17 ವರ್ಷದ ಹುಡುಗಿಯೊಬ್ಬಳು 27 ವರ್ಷದ ಬಾಯ್‌ಫ್ರೆಂಡ್ (Boyfriend) ಜೊತೆ ಸೇರಿ ಆಕೆಗೆ ಗರ್ಭ ಧರಿಸಿದ್ದಳು. ಇನ್ನೂ ಸಣ್ಣ ಪ್ರಾಯ. ಇಬ್ಬರಿಗೂ ಏನು ಮಾಡಬೇಕು ಎಂಬುದು ಗೊತ್ತಾಗಿಲ್ಲ. ಕಡೆಗೆ ಮೂರ್ಖ ಗೆಳೆಯನ ಸಹಾಯದಿಂದ ಯೂಟ್ಯೂಬ್ (Youtube) ನೋಡಿಕೊಂಡು ಅಬಾರ್ಷನ್ (Abortion) ಮಾಡಿಕೊಳ್ಳಲು ಹೊರಟಿದ್ದಾಳೆ. ವಿಪರೀತ ರಕ್ತಸ್ರಾವ ಆಗಿ ಪರಿಸ್ಥಿತಿ ಗಂಭೀರವಾಗಿದೆ. ಆಕೆಯ ತಾಯಿ ಸಕಾಲದಲ್ಲಿ ಆಸ್ಪತ್ರೆಗೆ ಸೇರಿಸಿದ್ದರಿಂದ ಬಚಾವಾಗಿದ್ದಾಳೆ.

ಇದು ಗಮನಕ್ಕೆ ಬಂದ ಪ್ರಕರಣ. ಗಮನಕ್ಕೆ ಬರದೇ ಹೋದ ಇಂಥ ಪ್ರಕರಣಗಳು ದೇಶದಲ್ಲಿ ಸಾವಿರಾರು ಇರಬಹುದು. ಈ ಕೆಳಗಿನ ಸಂಗತಿ ನಿಮಗೆ ಗೊತ್ತಿರಲಿ- ಭಾರತದ ಸಾಕಷ್ಟು ಹಳ್ಳಿಗಳಲ್ಲಿ ಇನ್ನೂ ಬಾಲ್ಯ ವಿವಾಹ ಪದ್ಧತಿ ಜಾರಿಯಲ್ಲಿದೆ. ಇದರ ಜೊತೆಯಲ್ಲಿ ಅತ್ಯಾಚಾರ (Rape) ಪ್ರಕರಣವೂ ಭಾರತದಲ್ಲಿ ಕಡಿಮೆಯೇನಿಲ್ಲ. ಈ ಎರಡರ ಮಧ್ಯೆ ಇನ್ನೊಂದು ಸಮಸ್ಯೆ ಹದಿಹರೆಯದ ಸಂಬಂಧ. ಸೆಕ್ಸ್ ಬಗ್ಗೆ ಅರೆ-ಬರೆ ತಿಳಿದಿರುವ ಹುಡುಗ ಹುಡುಗಿಯರು, ಹೈಸ್ಕೂಲ್ ಮೆಟ್ಟಿಲು ಏರುತ್ತಿದ್ದಂತೆ ಪ್ರೀತಿ-ಪ್ರೇಮದ ಗುಂಗಿನಲ್ಲಿ ತೇಲುತ್ತಾರೆ. ಸಂಬಂಧದ ವೇಳೆ ಸುರಕ್ಷಿತ ಕ್ರಮ ಕೈಗೊಳ್ಳದ ಕಾರಣ, ಹದಿಹರೆಯದಲ್ಲೇ ಗರ್ಭ ಧರಿಸುತ್ತಾರೆ, ತಾಯಿಯಾಗುತ್ತಾರೆ.

ಇತ್ತೀಚೆಗೆ ನಡೆದ ಸಮೀಕ್ಷೆಯೊಂದರ ಪ್ರಕಾರ, ಅತ್ಯಾಚಾರ(Rape), ಬಾಲ್ಯವಿವಾಹ (Child marriage) ಮತ್ತು ಅವೈಜ್ಞಾನಿಕ ಶಾರೀರಿಕ ಸಂಬಂಧ (Relationship) ಗಳಿಂದಾಗಿ, ದೇಶದಲ್ಲಿ ಹದಿಹರೆಯದ ಗರ್ಭಧಾರಣೆಯ ಪ್ರಕರಣಗಳಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಸಮೀಕ್ಷೆಯ ಪ್ರಕಾರ ಅದು ಶೇಕಡಾ 3.3ರಷ್ಟು ಏರಿದೆ.

ಯೂಟ್ಯೂಬ್ ನೋಡ್ಕೊಂಡು ಅಬಾರ್ಷನ್ ಮಾಡ್ಕೊಳ್ಳೋಕೆ ಹೊರಟ ಹುಡುಗಿ..ಮುಂದೆ ಆಗಿದ್ದೇನು?

ಹದಿಹರೆಯದ ಗರ್ಭಧಾರಣೆ (Teenage pregnancy)

ಹದಿಹರೆಯದ ಗರ್ಭಧಾರಣೆ ಅಂದರೆ 15 ಮತ್ತು 19 ವರ್ಷಗಳ ನಡುವೆ ಸಂಭವಿಸುವ ಗರ್ಭಧಾರಣೆ. ಅತ್ಯಾಚಾರ, ಬಾಲ್ಯ ವಿವಾಹ ಮತ್ತು ಹದಿಹರೆಯದಲ್ಲೇ ಸಂಬಂಧಗಳ ಸುಳಿಗೆ ಬೀಳುವುದು ಇದಕ್ಕೆ ಮುಖ್ಯ ಕಾರಣ. ಗ್ರಾಮೀಣ ಪ್ರದೇಶದಲ್ಲಿ ಇದು ಅತಿ ಹೆಚ್ಚು ವರದಿಯಾಗಿದೆ. ಹಳ್ಳಿಗಳಲ್ಲಿ ಶೇಕಡಾ 9.7ರಷ್ಟಿದ್ದರೆ ನಗರಗಳಲ್ಲಿ ಶೇಕಡಾ 3.2ರಷ್ಟಿದೆ.

ಗ್ರಾಮೀಣ ಜನರಿಗೆ ವೈದ್ಯಕೀಯ (Medical) ಸೌಲಭ್ಯದ ಬಗ್ಗೆ ಹೆಚ್ಚು ಮಾಹಿತಿಯಿಲ್ಲದ ಕಾರಣ ಸಕಾಲಕ್ಕೆ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ. ಇನ್ನೊಂದು ಮುಖ್ಯ ಕಾರಣ ಬಾಲ್ಯ ವಿವಾಹ. ನಗರಗಳಲ್ಲಿ ಬಾಲ್ಯವಿವಾಹ ಕಡಿಮೆ. ಇಲ್ಲಿ ವೈದ್ಯಕೀಯ ಸೌಲಭ್ಯ ಸುಲಭವಾಗಿ ಲಭಿಸುತ್ತದೆ. ಹುಡುಗಿಯರಿಗೆ ಇದರ ಬಗ್ಗೆ ಹೆಚ್ಚಿನ ಮಾಹಿತಿಯಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಗರ್ಭಪಾತ ಸದ್ದಿಲ್ಲದೆ ನಡೆಯುತ್ತದೆ.

Women Health : ಹೆರಿಗೆ ಸಂದರ್ಭದಲ್ಲಿ ಏಕೆ ಬಳಸ್ತಾರೆ ಐವಿ?

ಸೇಫ್ ಸೆಕ್ಸ್‌ಗೆ (Safe Sex) ಈ ಅಂಶಗಳನ್ನು ಮರೆಯಬೇಡಿ:

- ಹುಡುಗಿ 18 ವರ್ಷಕ್ಕಿಂತ ಕೆಳಗಿನವಳಾದರೆ, ಆಕೆ ಲೈಂಗಿಕ ಕ್ರಿಯೆಗೆ ಸಮ್ಮತಿಸಿದ್ದರೂ, ಅದನ್ನು ಅತ್ಯಾಚಾರ ಎಂದೇ ಪರಿಗಣಿಸಲಾಗುತ್ತದೆ. ಹುಡುಗನ ಮೇಲೆ ರೇಪ್ ಪ್ರಕರಣ ದಾಖಲಾಗುತ್ತದೆ. ಆದ್ದರಿಂದ ಹುಡುಗಿಗೆ ೧೮ ವರ್ಷ, ಹುಡುಗನಿಗೆ 21 ವರ್ಷ ಆಗುವವರೆಗೆ ಸೆಕ್ಸ್‌ಗೆ ನೋ ಎನ್ನಿ.

- ಸುರಕ್ಷಿತ ಲೈಂಗಿಕತೆಗೆ ಸುಲಭವಾಗಿ ಸಿಗುವ ಗರ್ಭನಿರೋಧಕ ಎಂದರೆ ಕಾಂಡೋಮ್. ಎಲ್ಲ ಕಡೆ ಕಾಂಡೋಮ್‌ಗಳು ಇಂದು ಲಭ್ಯ. ಸರಕಾರಿ ಆಸ್ಪತ್ರೆಗಳಲ್ಲೂ ಸಬ್ಸಿಡಿ ದರದ ಕಾಂಡೋಮ್‌ಗಳು ದೊರೆಯುತ್ತವೆ. ಪಟ್ಟಣಗಳಲ್ಲಿ ಮಹಿಳೆಯರು ಧರಿಸುವ ಕಾಂಡೋಮ್ ಕೂಡ ಸಿಗುತ್ತದೆ.

- ಮಹಿಳೆ ಮುಟ್ಟಾದ ಒಂಬತ್ತನೇ ದಿನದಿಂದ ಇಪ್ಪತ್ತನೇ ದಿನದ ನಡುವೆ ಲೈಂಗಿಕ ಕ್ರಿಯೆ ನಡೆಸಿದರೆ ಗರ್ಭಧಾರಣೆಯ ಸಾಧ್ಯತೆ ಹೆಚ್ಚು. ಆದ್ದರಿಂದ ಈ ದಿನಗಳಲ್ಲಿ ಸೆಕ್ಸ್ ನಡೆಸಬೇಡಿ.

- ಒಂದು ವೇಳೆ 18ರ ಹರೆಯದ ಒಳಗೆ ಲೈಂಗಿಕ ಕ್ರಿಯೆ ನಡೆದು ಗರ್ಭ ಧರಿಸಿದರೆ, ಆ ಮಗು ಬೇಡವಾಗಿದ್ದರೆ, 20 ವಾರಗಳಲ್ಲಿ ಗರ್ಭಪಾತ ಮಾಡಿಸಿಕೊಳ್ಳಬಹುದು. ಆದರೆ ಇದಕ್ಕೆ ಪರಿಣತ ವೈದ್ಯರ ಮೊರೆ ಹೋಗಬೇಕು. ಈಗ ಇದಕ್ಕೆ ಸುಲಭವಾದ ಮಾತ್ರೆಗಳು ಸಿಗುತ್ತವೆ. ಆದರೆ ವೈದ್ಯರು ಹೇಳಿದ ಪ್ರಮಾಣದಲ್ಲಿ, ಅದೇ ಸಮಯದಲ್ಲೇ ತೆಗೆದುಕೊಳ್ಳಬೇಕು.

- 15 ವರ್ಷದಲ್ಲಿ ಗರ್ಭ ಧರಿಸಿದರೆ ಹುಡುಗಿಯ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಖಾತ್ರಿ. ಹೆರಿಗೆ ಸಂದರ್ಭದಲ್ಲಿ ತಾಯಿ- ಮಗು ಸಾವು ಸಂಭವಿಸುವ ಸಾಧ್ಯತೆಯೂ ಇದೆ. ಜೊತೆಗೆ, ಕಡಿಮೆ ವಯಸ್ಸಿನಲ್ಲಿ ನಡೆಯುವ ಗರ್ಭಪಾತದಿಂದ ಗರ್ಭಕೋಶಕ್ಕೆ ಹಾನಿಯಾಗಿ, ಮುಂದೆ ದಾಂಪತ್ಯ ಜೀವನದಲ್ಲಿ ಸಂತಾನೋತ್ಪತ್ತಿ ಸಮಸ್ಯೆ ಕಾಣಿಸಿಕೊಳ್ಳಬಹುದು.

ಹೆಣ್ಣು ಮಕ್ಕಳಿಗೆ ಪ್ರಿಯಾಂಕಾ ಚೋಪ್ರಾ ಹೇಳಿದ 12 ಪಾಠಗಳು

Follow Us:
Download App:
  • android
  • ios