MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಡೋಂಟ್ ವರಿ ಭೂಮಿಕಾ? ಕೆಡಿ ಜೈದೇವ್ ಏನೇ ಮಾಡಿದ್ರೂ ಎಲ್ಲಾ ಒಳ್ಳೇದಕ್ಕೆ ಅಲ್ಲವಾ? ಮರುಜನ್ಮ ಸಿಗುತ್ತಾ?

ಡೋಂಟ್ ವರಿ ಭೂಮಿಕಾ? ಕೆಡಿ ಜೈದೇವ್ ಏನೇ ಮಾಡಿದ್ರೂ ಎಲ್ಲಾ ಒಳ್ಳೇದಕ್ಕೆ ಅಲ್ಲವಾ? ಮರುಜನ್ಮ ಸಿಗುತ್ತಾ?

ಜೈದೇವ್ ಮತ್ತು ಶಕುಂತಲಾ ಸೇರಿ ಭೂಮಿಕಾಳನ್ನು ಕೊಂದು ಆ ಜಾಗಕ್ಕೆ ತದ್ರೂಪಿ ದೀಪಿಕಾಳನ್ನು ತರಲು ಸಂಚು ರೂಪಿಸಿದ್ದಾರೆ. ಅವರ ಪ್ಲಾನ್‌ನಂತೆ ಭೂಮಿಕಾಳ ಕಾರು ಪ್ರಪಾತಕ್ಕೆ ಬಿದ್ದಿದ್ದು, ವೀಕ್ಷಕರಲ್ಲಿ ತೀವ್ರ ಕುತೂಹಲ ಮೂಡಿಸಿದೆ.

1 Min read
Author : Mahmad Rafik
Published : Sep 23 2026, 04:34 PM IST
Share this Photo Gallery
  • FB
  • TW
  • Linkdin
  • Whatsapp
15
ಅಮೃತಧಾರೆ ಸೀರಿಯಲ್
Image Credit : zee Kannada

ಅಮೃತಧಾರೆ ಸೀರಿಯಲ್

ಈಗ ಮುಗಿಯುತ್ತೆ, ಅಗ ಮುಗಿಯುತ್ತೆ ಅನ್ನೋ ಅಮೃತಧಾರೆ ಸೀರಿಯಲ್ ಹೊಸ ತಿರುವುಗಳ ಮೂಲಕ ಮತ್ತೆ ತನ್ನ ಪಯಣವನ್ನು ಮುಂದುವರಿಸುತ್ತಿದ್ದಾರೆ. ಭೂಮಿಕಾ ವಿರುದ್ಧ ದ್ವೇಷ ಸಾಧನೆಗೆ ಮುಂದಾಗಿರುವ ಜೈದೇವ್, ತದ್ರೂಪಿಯಾಗಿರುವ ದೀಪಿಕಾಳನ್ನು ಪತ್ತೆ ಮಾಡಿದ್ದಾನೆ. ದೀಪಿಕಾ ಬರುತ್ತಿದ್ದಂತೆ ಕಥೆಯೆಲ್ಲಾ ಸಂಪೂರ್ಣವಾಗಿ ಬದಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಜೆಡಿ, ಶಕುಂತಲಾ ಪ್ಲಾನ್
Image Credit : zee Kannada

ಜೆಡಿ, ಶಕುಂತಲಾ ಪ್ಲಾನ್

ಭೂಮಿಕಾಳನ್ನು ಕೊಂದು ಆ ಜಾಗಕ್ಕೆ ದೀಪಿಕಾಳನ್ನು ಕರೆದುಕೊಂಡು ಬರೋದು ಜೈದೇವ್ ಮತ್ತು ಶಕುಂತಲಾ ಪ್ಲಾನ್ ಆಗಿದೆ. ಇದಕ್ಕಾಗಿ ಭೂಮಿಕಾ ಒಂಟಿಯಾಗಿ ಮನೆಯಿಂದ ಹೊರಬರುವಂತೆ ಮಾಡಿದ್ದಾನೆ. ಚಿಕ್ಕಮಗಳೂರಿನಲ್ಲಿರುವ ಅಜ್ಜಿಗೆ ಆರೋಗ್ಯ ಸರಿ ಇಲ್ಲ ಎಂಬ ವಿಷಯ ತಿಳಿದ ಕೂಡಲೇ ರಾತ್ರಿ ಒಬ್ಬಳೇ ಭೂಮಿಕಾ ಹೊರಟಿದ್ದಾಳೆ.

Related Articles

Related image1
Amruthadhaare Serial: ರಿಯಲ್​ ಮದ್ವೆಗಾಗಿ ಜೈದೇವ್​ ಪ್ಲಾಸ್ಟಿಕ್​ ಸರ್ಜರಿ? ಹೊಸ ಅವತಾರದಲ್ಲಿ ಜೈ- ಯಾರೀ ನಟ
Related image2
Amruthadhaare ಜೈದೇವ್​ ಮದ್ವೆಗೆ ದಿನಗಣನೆ: ಮದುಮಕ್ಕಳ ರೂಪದಲ್ಲಿ ರಾಣವ್​- ರಾಧಾ ಕ್ಯೂಟ್​ ಫೋಟೋಶೂಟ್​
35
ದಾರಿ ತಪ್ಪಿದ ಭೂಮಿಕಾ
Image Credit : zee Kannada

ದಾರಿ ತಪ್ಪಿದ ಭೂಮಿಕಾ

ರಾತ್ರಿ ಒಂಟಿಯಾಗಿಯೇ ಹೊರಟಿರುವ ಭೂಮಿಕಾ ದಾರಿಯನ್ನು ಜೈದೇವ್ ತಪ್ಪಿಸಿದ್ದಾನೆ. ರಸ್ತೆ ದುರಸ್ತಿ ಎಂಬ ಫಲಕ ನೋಡಿದ ಭೂಮಿಕಾ, ಬೋರ್ಡ್‌ನಲ್ಲಿರುವ ಸೂಚನೆ ಪ್ರಕಾರವೇ ಭೂಮಿಕಾ ಹೋಗಿದ್ದಾಳೆ. ಫಲಕದ ಮಾರ್ಗದಂತೆ ಕಾರ್ ತಿರುಗಿಸುತ್ತಿದ್ದಂತೆ ಪ್ರಪಾತದಲ್ಲಿ ಬಿದ್ದಿದೆ. ಇಲ್ಲಿಗೆ ಭೂಮಿಕಾಳ ಕಥೆ ಮುಗಿಯುತ್ತೆ, ಆ ಜಾಗಕ್ಕೆ ದೀಪಿಕಾಳನ್ನು ಕರೆದುಕೊಂಡು ಜೈದೇವ್ ಬರಲಿದ್ದಾನೆ.

45
ಡೋಂಟ್ ವರಿ ಭೂಮಿಕಾ?
Image Credit : zee Kannada

ಡೋಂಟ್ ವರಿ ಭೂಮಿಕಾ?

ಕಳೆದ ನಾಲ್ಕೈದು ಸಂಚಿಕೆಗಳನ್ನು ವೀಕ್ಷಿಸಿರುವ ವೀಕ್ಷಕರು, ಜೈದೇವ್ ಮಾಡೋದೆಲ್ಲಾ ಒಳ್ಳೇದಕ್ಕೆ. ಡೋಂಟ್ ವರಿ ಭೂಮಿಕಾ? ನಿನಗೇನು ಆಗಲ್ಲ. ಎಷ್ಟೋ ವರ್ಷಗಳ ಹಿಂದೆ ಕಳೆದು ಹೋಗಿದ್ದ ನಿನ್ನ ತಂಗಿ ನಿನಗೆ ಸಿಗಲಿದ್ದಾಳೆ ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರಂತೂ ವಿನಾಕಾರಣ ಧಾರಾವಾಹಿಯನ್ನು ರಬ್ಬರ್‌ನಂತೆ ಎಳೆದುಕೊಂಡು ಹೋಗಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

55
ಗೌತಮ್ ಎಲ್ಲಿ?
Image Credit : zee Kannada

ಗೌತಮ್ ಎಲ್ಲಿ?

ಕಳೆದ ಒಂದು ತಿಂಗಳಿನಿಂದ ಗೌತಮ್ ಪಾತ್ರವನ್ನು ತೆರೆಯಿಂದ ಹಿಂದಕ್ಕೆ ಸರಿಸಲಾಗಿದೆ. ಭೂಮಿಕಾ ಪಾತ್ರದ ಬದಲಾಗಿ ದೀಪಿಕಾ ಕಾಣಿಸಿಕೊಳ್ಳಲಿದ್ದಾಳೆ. ಇದೀಗ ಗೌತಮ್ ಮುಂದೆ ತನ್ನ ಪತ್ನಿಯನ್ನು ಕಂಡು ಹಿಡಿಯುವ ಸವಾಲು ಎದುರಾಗಲಿದೆ. ಮುಂದೆ ಧಾರಾವಾಹಿ ಹೇಗೆ ಸಾಗುತ್ತೆ ಎಂಬುದರ ಬಗ್ಗೆಯೂ ಕುತೂಹಲ ಮೂಡಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

MR
Mahmad Rafik
ಮಹ್ಮದ್ ರಫಿಕ್ ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಅಮೃತಧಾರೆ
ಜೀ ಕನ್ನಡ
ಕನ್ನಡ ಧಾರಾವಾಹಿ
 

Latest Videos
Recommended Stories
Recommended image1
'ಯಾವ ಮಟ್ಟಿಗಾದ್ರೂ ಇಳೀತೇನೆ ಎನ್ನೋರಿಗೆ Bigg Boss: ಬಾತ್ರೂಮನ್ನೂ ತೋರಿಸ್ತೀನಿ ಅನ್ನೋಳಲ್ಲ ನಾನು'
Recommended image2
ಯೂಟ್ಯೂಬ್ ಚಾನೆಲ್ ಆರಂಭಿಸಿದ ಸಲ್ಮಾನ್ ಖಾನ್.. ಫಸ್ಟ್ ವಿಡಿಯೋದಲ್ಲಿ ಮಾಡಿದ್ದೇನು?
Recommended image3
Bigg Boss Kannada "ಪ್ರೋಮೋ ನಿಜವಾಗಿದ್ರೆ ಮಾತ್ರ ಕರ್ನಾಟಕ ನಿಮ್ಮನ್ನು ನಂಬುತ್ತೆ"
Related Stories
Recommended image1
Amruthadhaare Serial: ರಿಯಲ್​ ಮದ್ವೆಗಾಗಿ ಜೈದೇವ್​ ಪ್ಲಾಸ್ಟಿಕ್​ ಸರ್ಜರಿ? ಹೊಸ ಅವತಾರದಲ್ಲಿ ಜೈ- ಯಾರೀ ನಟ
Recommended image2
Amruthadhaare ಜೈದೇವ್​ ಮದ್ವೆಗೆ ದಿನಗಣನೆ: ಮದುಮಕ್ಕಳ ರೂಪದಲ್ಲಿ ರಾಣವ್​- ರಾಧಾ ಕ್ಯೂಟ್​ ಫೋಟೋಶೂಟ್​
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved