MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • Amruthadhaare ಜೈದೇವ್​ ಮದ್ವೆಗೆ ದಿನಗಣನೆ: ಮದುಮಕ್ಕಳ ರೂಪದಲ್ಲಿ ರಾಣವ್​- ರಾಧಾ ಕ್ಯೂಟ್​ ಫೋಟೋಶೂಟ್​

Amruthadhaare ಜೈದೇವ್​ ಮದ್ವೆಗೆ ದಿನಗಣನೆ: ಮದುಮಕ್ಕಳ ರೂಪದಲ್ಲಿ ರಾಣವ್​- ರಾಧಾ ಕ್ಯೂಟ್​ ಫೋಟೋಶೂಟ್​

ಅಮೃತಧಾರೆ ಧಾರಾವಾಹಿಯ ಜೈದೇವ್ ಪಾತ್ರಧಾರಿ ರಾಣವ್ ಗೌಡ ಮತ್ತು ನಟಿ ರಾಧಾ ಭಗವತಿ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಆರಂಭದಲ್ಲಿ ರಾಧಾ ಅವರ ಪ್ರಪೋಸಲ್ ಅನ್ನು ರಾಣವ್ ರಿಜೆಕ್ಟ್ ಮಾಡಿದ್ದರೂ, ನಂತರ ಅವರ ವ್ಯಕ್ತಿತ್ವ ಮೆಚ್ಚಿ ಪ್ರೀತಿಗೆ ಒಪ್ಪಿಕೊಂಡರು.

2 Min read
Author : Suchethana D
Published : Sep 21 2026, 06:17 PM IST
Share this Photo Gallery
  • FB
  • TW
  • Linkdin
  • Whatsapp
16
ಅಮೃತಧಾರೆ ಹ್ಯಾಂಡ್​ಸಮ್​ ವಿಲನ್​  ಜೈದೇವ್​
Image Credit : Ranav Gowda and Radha Bhagavati Instagram

ಅಮೃತಧಾರೆ ಹ್ಯಾಂಡ್​ಸಮ್​ ವಿಲನ್​ ಜೈದೇವ್​

ಅಮೃತಧಾರೆ ಸೀರಿಯಲ್​ನಲ್ಲಿ (Amruthadhaare Serial) ಜೈದೇನ ಪಾತ್ರವನ್ನು ಮೆಚ್ಚಿಕೊಳ್ಳದ ವೀಕ್ಷಕರೇ ಇಲ್ಲ. ಅಸಲಿಗೆ ಇದು ವಿಲನ್​ ರೋಲ್​ ಆದರೂ ನಟ ರಾಣವ್​ ಗೌಡ ಅವರ ನಟನೆಯ ಜೊತೆ ಸ್ಯಾಂಡ್​ಸಮ್​ ನಟನನ್ನು ನೋಡಿ, ವಿಲನ್​ಗೇ ಸಪೋರ್ಟ್​ ಮಾಡ್ತಿರೋರು ಹೆಚ್ಚುಮಂದಿ. ಇದೀಗ ಅವರ ಮದುವೆ ಇದೇ ಸೀರಿಯಲ್​ ಹಿಂದಿನ ಮಲ್ಲಿ ಹಾಗೂ ಭಾರ್ಗವಿ ಎಲ್​ಎಲ್​ಬಿ ಸೀರಿಯಲ್​ ಭಾರ್ಗವಿಯಾಗಿದ್ದ ರಾಧಾ ಭಗವತಿ ಜೊತೆಗೆ ನಡೆಯಲಿದೆ. ಇವರಿಬ್ಬರೂ ಮದುವೆಯ ಡೇಟ್​ ಇನ್ನೂ ಅನೌನ್ಸ್​ ಮಾಡಿಲ್ಲವಾದರೂ ಶೀಘ್ರದಲ್ಲಿಯೇ ಮದುವೆ ಎನ್ನುವುದು ತಿಳಿದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಮದುಮಕ್ಕಳ ರೂಪದಲ್ಲಿ...
Image Credit : Ranav Gowda and Radha Bhagavati Instagram

ಮದುಮಕ್ಕಳ ರೂಪದಲ್ಲಿ...

ಇದೀಗ ಈ ಜೋಡಿ ಮದುಮಕ್ಕಳ ರೂಪದಲ್ಲಿ ಫೋಟೋಶೂಟ್​ ಮಾಡಿಸಿಕೊಂಡಿದ್ದು, ಸೋಷಿಯಲ್​ ಮೀಡಿಯಾದಲ್ಲಿ ತಾರಾ ಜೋಡಿ ಶೇರ್​ ಮಾಡಿಕೊಂಡಿದೆ. ಇವರಿಬ್ಬರು ಶೀಘ್ರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.

Related Articles

Related image1
Karna Serial ಭವ್ಯಾ ಗೌಡ ಮನೆಯಲ್ಲಿ ಮದುವೆ ಸಂಭ್ರಮ: ತಾರೆಯರ ಸಮಾಗಮ- ಬೀಳ್ಕೊಡುವೆ ವೇಳೆ ನಟಿ ಕಣ್ಣೀರು
Related image2
Bigg Boss ಮನೆಯಲ್ಲೇ ಮೇಕಪ್​ ಕೋರ್ಸ್​ ಮಾಡಿದ ಗಗನ್, ತಾಂಡವ್​​! ಬ್ಯೂಟಿ ಪಾರ್ಲರ್​ ಇಡಲು ರೆಡಿ
36
ಇಂಟರೆಸ್ಟಿಂಗ್​ ಲವ್​ ಸ್ಟೋರಿ
Image Credit : Ranav Gowda and Radha Bhagavati Instagram

ಇಂಟರೆಸ್ಟಿಂಗ್​ ಲವ್​ ಸ್ಟೋರಿ

ಅಷ್ಟಕ್ಕೂ ಇವರ ಲವ್​ಸ್ಟೋರಿ ತುಂಬಾ ಇಂಟರೆಸ್ಟಿಂಗ್​ ಆಗಿದೆ. ಇದೀಗ ಆರಂಭದಲ್ಲಿ ನಟಿ ರಾಧಾ ಭಗವತಿ ಅವರು ಪ್ರಪೋಸ್‌ ಮಾಡಿದಾಗ, ರಾಣವ್‌ ಬೇಡ ಎಂದ ಬಗ್ಗೆ ನಟಿ ಮಾತನಾಡಿದ್ದಾರೆ. ಸುಮನ್ ಟಿವಿಗೆ ನೀಡಿರುವ ಸಂದರ್ಶನದಲ್ಲಿ ನಟಿ, ನನಗೆ ಗೊತ್ತಿಲ್ಲದೇ ಅವರ ಮೇಲೆ ಲವ್‌ ಆಯ್ತು, ಅವರ ಕ್ಯೂಟ್‌ನೆಸ್‌ ನನ್ನನ್ನ ಅಟ್ರ್ಯಾಕ್ಟ್‌ ಮಾಡಿತು. ಆದರೆ ಅವರ ಹಿನ್ನೆಲೆ ಏನೂ ಗೊತ್ತಿರಲಿಲ್ಲ. ಅವರು ಹಣವಂತರಾ, ಕಾರು, ಬಂಗ್ಲೆ ಇದ್ಯಾ ಏನೂ ಅರಿವು ಇರಲಿಲ್ಲ. ಮನಸ್ಸು ಅವರನ್ನು ಕೇಳುತ್ತಿತ್ತು ಅಷ್ಟೇ ಎಂದು ತಮಗೆ ಆರಂಭದಲ್ಲಿ ಆದ ಲವ್‌ ಫೀಲಿಂಗ್ಸ್‌ ಬಗ್ಗೆ ಹೇಳಿದ್ದಾರೆ.

46
ಒಲ್ಲೆ ಎಂದು ಬಿಟ್ಟರು
Image Credit : Ranav Gowda and Radha Bhagavati Instagram

ಒಲ್ಲೆ ಎಂದು ಬಿಟ್ಟರು

ಮನಸ್ಸು ಕೇಳದೇ ನಾನೇ ಒಂದು ದಿನ ನಾನು ಅವರಿಗೆ ಹೋಗಿ ಹೇಳಿಬಿಟ್ಟೆ. ಆದರೆ ಅವರು ಅದಕ್ಕೆ ಒಪ್ಪಲಿಲ್ಲ. ಈಗ ಸದ್ಯಕ್ಕೆ ಅದರ ಬಗ್ಗೆ ಏನೂ ಪ್ಲ್ಯಾನ್ಸ್‌ ಇಲ್ಲ, ಸಾರಿ ಅಂತ ಹೇಳಿಬಿಟ್ಟರು. ನನಗೆ ಆಗ ಏನು ಮಾತಾಡಬೇಕು ಅಂತ ಗೊತ್ತಾಗಿರ್ಲಿಲ್ಲ. ಕಂಪ್ಲೀಟ್‌ ಆಗಿ ಬ್ಲ್ಯಾಂಕ್‌ ಆಗಿಬಿಟ್ಟೆ. ಅದು ನನಗೆ ಹರ್ಟ್‌ ಆಯ್ತು ಎಂದು ನಟಿ ಹೇಳಿದ್ದಾರೆ.

56
ಅವರೇ ನನ್ನ ಗಂಡ ಎಂದು ಫಿಕ್ಸ್‌ ಆಗಿಬಿಟ್ಟಿದ್ದೆ
Image Credit : Ranav Gowda and Radha Bhagavati Instagram

ಅವರೇ ನನ್ನ ಗಂಡ ಎಂದು ಫಿಕ್ಸ್‌ ಆಗಿಬಿಟ್ಟಿದ್ದೆ

ಅವರು ನನ್ನ ಪ್ರೀತಿಯನ್ನ ರಿಜೆಕ್ಟ್‌ ಮಾಡಿದ್ದಾರೆ ಅಂತ ಗೊತ್ತಿದ್ರೂ ಕೂಡ, ಅವರ ಮೇಲೆ ಇದ್ದ ಪ್ರೀತಿ ಹೋಗ್ತಾನೆ ಇರ್ಲಿಲ್ಲ. ಮದುವೆ ಆದರೆ ಇವರನ್ನೇ ಆಗ್ತೀನಿ. ಇಲ್ಲದೇ ಇದ್ರೆ ಆ ಮದುವೆ ಅನ್ನೋ ಕಾನ್ಸೆಪ್ಟ್‌ ಬೇಡ ನನ್ನ ಜೀವನದಲ್ಲಿ ಅಂತ ನಾನು ಫಿಕ್ಸ್‌ ಅಗಿಬಿಟ್ಟಿದ್ದೆ. ಆದರೂ ಶೂಟಿಂಗ್‌ನಲ್ಲಿ ಏನೂ ಗೊತ್ತಿಲ್ಲದವರ ರೀತಿ ಭಾಗಿಯಾಗಿದ್ದೆ ಎಂದು ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಇದಕ್ಕೆ ರಾಣವ್‌ ಅವರು, ಮೊದಲು ಪಾತ್ರದ ಪರಿಚಯ ಆಗಿತ್ತು ಬಿಟ್ರೆ, ನಮ್ಮಿಬ್ಬರ ವ್ಯಕ್ತಿತ್ವದ ಪರಿಚಯ ಅಗಿರ್ಲಿಲ್ಲ. ಅವರಿಗೆ ಯಾವಾಗ ನನ್ನ ವ್ಯಕ್ತಿತ್ವದ ಪರಿಚಯ ಆಯ್ತೋ ಅವರಿಗೆ ನನ್ನ ಮೇಲೆ ಆಸೆ ಆಗೋಕೆ ಶುರುವಾಯ್ತು. ಅವರ ವ್ಯಕ್ತಿತ್ವದ ಪರಿಚಯ ನನಗೆ ಆಗಿದ್ರೂ ಕೂಡ ನಾನು ಅದರ ಮೇಲೆ ಗಮನ ಕೊಟ್ಟಿರಲಿಲ್ಲ. ಬಹುಶಃ ಗಮನ ಕೊಟ್ಟಿದಿದ್ರೆ ನನಗೇ ಮೊದಲು ಇವರ ಮೇಲೆ ಫೀಲಿಂಗ್ಸ್‌ ಶುರುವಾಗುತ್ತಿತ್ತೋ ಗೊತ್ತಿಲ್ಲ. ಅಷ್ಟಕ್ಕೂ ಇಂಥ ನಿರ್ಧಾರ ಏಕಾಏಕಿ ತೆಗೆದುಕೊಳ್ಳುವುದು ಅಲ್ಲವಲ್ಲ ಎಂದಿದ್ದಾರೆ.

66
ವ್ಯಕ್ತಿತ್ವ ಬದಲಾಗಲಿಲ್ಲ
Image Credit : Ranav Gowda and Radha Bhagavati Instagram

ವ್ಯಕ್ತಿತ್ವ ಬದಲಾಗಲಿಲ್ಲ

ಆದಕ್ಕೆ ಅವರು ಪ್ರಪೋಸ್‌ ಮಾಡಿದಾಗ ನಾನು ಒಪ್ಪಿಕೊಂಡಿರಲಿಲ್ಲ. ಆದರೆ, ಈಕೆಯ ವ್ಯಕ್ತಿತ್ವ ಬದಲಾಗಲಿಲ್ಲ ಅನ್ನೋದು ಗೊತ್ತಾಯ್ತು. ಆಮೇಲೆ ನಾನೇ ಇದಕ್ಕೆ ಒಪ್ಪಿಕೊಂಡೆ ಎಂದಿದ್ದಾರೆ. ಮುಂಚೆ ನನ್ನ ಜೊತೆಗೆ ಇವರ ಒಡನಾಟ ಹೇಗಿತ್ತೋ ಹಾಗೆ ಇತ್ತು. ಅದು ನನಗೆ ಇಷ್ಟ ಆಯ್ತು. ಅಲ್ಲಿಗೆ ನಮ್ಮ ಮದುವೆ ಫಿಕ್ಸ್‌ ಆಯ್ತು ಎಂದರು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಮನರಂಜನಾ ಸುದ್ದಿ
ಟಿವಿ ಶೋ
ಅಮೃತಧಾರೆ
ಜೀ ಕನ್ನಡ
ಪ್ರೀತಿ
ಮದುವೆ
ಸಂಬಂಧಗಳು
 

Latest Videos
Recommended Stories
Recommended image1
Viral News: ದಕ್ಷಿಣ ಕೊರಿಯಾದ ಮಹಿಳೆ ವಿಡಿಯೋ ವೈರಲ್.. ಭಾರತದ 'ಈ ಜಾಗ, ಜನರ ಬಗ್ಗೆ' ಆ ಟೂರಿಸ್ಟ್ ಹೇಳಿದ್ದೇನು?
Recommended image2
3 ಗಂಡು ಮಕ್ಕಳಿದ್ದ ಆಕೆ ಬಯಸಿದ್ದು ಹೆಣ್ಣು ಮಗು, ಮತ್ತೊಮ್ಮೆ ಗರ್ಭಿಣಿಯಾದ ತಾಯಿಗೆ ತ್ರಿವಳಿ ಗಂಡು!
Recommended image3
ಸೌತ್ ಇಂಡಿಯಾದ ನೂರಾರು ಕುಟುಂಬಗಳಿಗೆ ಆಸರೆಯಾದ ರಶ್ಮಿಕಾ ಮಂದಣ್ಣ; ಈ ಕಾರ್ಯಕ್ಕೆ 'ಜಯಮ್ಮ' ಕೊಡುಗೆ ಏನು?
Related Stories
Recommended image1
Karna Serial ಭವ್ಯಾ ಗೌಡ ಮನೆಯಲ್ಲಿ ಮದುವೆ ಸಂಭ್ರಮ: ತಾರೆಯರ ಸಮಾಗಮ- ಬೀಳ್ಕೊಡುವೆ ವೇಳೆ ನಟಿ ಕಣ್ಣೀರು
Recommended image2
Bigg Boss ಮನೆಯಲ್ಲೇ ಮೇಕಪ್​ ಕೋರ್ಸ್​ ಮಾಡಿದ ಗಗನ್, ತಾಂಡವ್​​! ಬ್ಯೂಟಿ ಪಾರ್ಲರ್​ ಇಡಲು ರೆಡಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved