‘ಬಿಗ್ ಬಾಸ್ ಕನ್ನಡ ಸೀಸನ್ 13’ ಈಗಾಗಲೇ ಟ್ವಿಸ್ಟ್‌ಗಳ ಮೇಲೆ ಟ್ವಿಸ್ಟ್ ನೀಡುತ್ತಿರುವ ಹೊತ್ತಿನಲ್ಲಿ, ‘ಆ ನಟಿ’ ಹಾಗೂ ‘ಈ ನಟ’ ಅವರಿಬ್ಬರ ವೈಲ್ಡ್‌ಕಾರ್ಡ್ ಎಂಟ್ರಿ ಕುರಿತ ಗಾಸಿಪ್ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಆದರೆ ಕೊನೆಯ ಮಾತು ಬಿಗ್ ಬಾಸ್‌ನದ್ದೇ. ಹಾಗಾಗಿ ಈ ಬಾರಿ ನಿಜವಾಗಿಯೂ ಬಿಗ್ ಬಾಸ್ ಮನೆಯ ಹೊಸ ಅತಿಥಿಯಾಗಿ ಯಾರು? ಕಾದು ನೋಡಬೇಕಿದೆ..
‘ಬಿಗ್ ಬಾಸ್ ಕನ್ನಡ ಸೀಸನ್ 13’ ದಿನದಿಂದ ದಿನಕ್ಕೆ ಮತ್ತಷ್ಟು ರೋಚಕವಾಗುತ್ತಲೇ ಇದೆ. ಒಂದೆಡೆ ಮನೆಯೊಳಗಿನ ಸ್ಪರ್ಧಿಗಳ ನಡುವೆ ಜಗಳ, ವಾದ-ವಿವಾದ, ಟಾಸ್ಕ್‌ಗಳ ಪೈಪೋಟಿ ಮತ್ತು ಮೈತ್ರಿಗಳ ಆಟ ಜೋರಾಗಿದ್ದರೆ, ಮತ್ತೊಂದೆಡೆ ಬಿಗ್ ಬಾಸ್ ನೀಡುತ್ತಿರುವ ಅನಿರೀಕ್ಷಿತ ಟ್ವಿಸ್ಟ್‌ಗಳು ವೀಕ್ಷಕರ ಕುತೂಹಲವನ್ನು ಇನ್ನಷ್ಟು ಹೆಚ್ಚಿಸುತ್ತಿವೆ. ಅದರಲ್ಲೂ ಮಧ್ಯರಾತ್ರಿ ಏಕಾಏಕಿ ಮೊಳಗಿದ ಸೈರನ್ ಹಾಗೂ ‘ಎಮರ್ಜೆನ್ಸಿ ಎಕ್ಸಿಟ್’ ವಿಚಾರ ಇದೀಗ ಬಿಗ್ ಬಾಸ್ ಮನೆಯಲ್ಲಿ ಮಾತ್ರವಲ್ಲ, ಸಾಮಾಜಿಕ ಜಾಲತಾಣಗಳಲ್ಲೂ ಭಾರೀ ಚರ್ಚೆಗೆ ಕಾರಣವಾಗಿದೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ಇದೀಗ ಮತ್ತೊಂದು ಸುದ್ದಿ ಬಿಗ್ ಬಾಸ್ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಇದೇ ಸೀಸನ್‌ಗೆ ಹೊಸ ವೈಲ್ಡ್‌ಕಾರ್ಡ್ ಸ್ಪರ್ಧಿಯೊಬ್ಬರು ಎಂಟ್ರಿ ಕೊಡಲಿದ್ದಾರೆ ಎಂಬ ಗಾಸಿಪ್ ಹರಿದಾಡುತ್ತಿದೆ. ಆ ಹೊಸ ಸ್ಪರ್ಧಿ ಯಾರು ಎಂಬ ಚರ್ಚೆ ಶುರುವಾಗುತ್ತಿದ್ದಂತೆಯೇ ಎರಡು ಹೆಸರುಗಳು ಕೇಳಿ ಬರುತ್ತಿವೆ.. ಮೊದಲ ಹೆಸರು ನಟಿ ವಿಜಯಲಕ್ಷ್ಮೀ.. ಎರಡನೇ ಹೆಸರು ‘ಗಿಚ್ಚಿ ಗಿಲಿಗಿಲಿ’ ಖ್ಯಾತಿಯ ಪ್ರಶಾಂತ್ ಗೌಡ.

ನಟಿ ವಿಜಯಲಕ್ಷ್ಮೀ ಅವರು 'ನಾಗಮಂಡಲ' ಕನ್ನಡ ಸಿನಿಮಾದ ಮೂಲಕ ಇಡೀ ಕನ್ನಡನಾಡಿಗೇ ಪರಿಚಿತರು. ಡಾ ವಿಷ್ಣುವರ್ಧನ್ ಜೊತೆ ಸೂರ್ಯವಂಶ, ಶಿವರಾಜ್‌ಕುಮಾರ್ ಜೊತೆ 'ಜೋಡಿ ಹಕ್ಕಿ', ಸೇರಿದಂತೆ ಬಹಳಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡವರು. ಕನ್ನಡ ಸಿನಿಮಾದಲ್ಲಿ ನಟಿಸಿದ ಬಳಿಕ ಅವರು ತಮಿಳು ಕಿರುತೆರೆಯಲ್ಲಿಯೂ ನಟಿಸಿದ್ದಾರೆ. ಜೊತೆಗೆ, ವೈಯಕ್ತಿಕ ಜೀವನದಲ್ಲಿ ಕೂಡ ಸಾಕಷ್ಟು ಹೆಸರು ಮಾಡಿ ಸುದ್ದಿಯಾದವರು. ಇದೀಗ, ಬಿಗ್ ಬಾಸ್ ಕನ್ನಡ ಸೀಸನ್ 12'ರಲ್ಲಿ ನಟಿ ಸದ್ದಿಲ್ಲದೇ ವೈಲ್ಡ್‌ಕಾರ್ಡ್ ಮೂಲಕ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದೆ. ಆದರೆ, ಇದು ಅಧಿಕೃತ ಸುದ್ದಿ ಅಲ್ಲ, ಏಕೆಂದರೆ, ಅದನ್ನು ಸಂಚಿಕೆ ನೋಡಿಯೇ ತಿಳಿಯಬೇಕಾಗಿದೆ.
ಪ್ರಶಾಂತ್ ಗೌಡ ಕಿರುತೆರೆ ಪ್ರೇಕ್ಷಕರಿಗೆ ಈಗಾಗಲೇ ಪರಿಚಿತ ಮುಖ. ತಮ್ಮ ಕಾಮಿಡಿ ಟೈಮಿಂಗ್ ಹಾಗೂ ಸಹಜ ನಿರೂಪಣೆಯಿಂದ ಗಮನ ಸೆಳೆದಿರುವ ಅವರು ‘ಕ್ವಾಟ್ಲೆ ಕಿಚನ್’ ಮೊದಲ ಸೀಸನ್‌ನ ವಿಜೇತರಾಗಿಯೂ ಗುರುತಿಸಿಕೊಂಡಿದ್ದಾರೆ. ಕಿರುತೆರೆಯಲ್ಲಿ ತಮ್ಮದೇ ಆದ ಸ್ಥಾನ ನಿರ್ಮಿಸಿಕೊಂಡಿರುವ ಪ್ರಶಾಂತ್, ಇತ್ತೀಚಿನ ದಿನಗಳಲ್ಲಿ ಉದ್ಯಮ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ತಮ್ಮ ವೃತ್ತಿಜೀವನಕ್ಕೆ ಮತ್ತೊಂದು ಆಯಾಮ ನೀಡಿರುವ ಅವರು ಇತ್ತೀಚೆಗೆ ‘ಸೆಲೆಬ್ರೇಟ್ ಲೈಫ್’ ಹೆಸರಿನ ಐಷಾರಾಮಿ ಸಲೂನ್‌ನ್ನು ಕೂಡ ಆರಂಭಿಸಿದ್ದಾರೆ.
ಇದೀಗ ವೈಯಕ್ತಿಕ ಜೀವನದಲ್ಲೂ ಹೊಸ ಅಧ್ಯಾಯ ಆರಂಭಿಸಿರುವ ಪ್ರಶಾಂತ್ ಗೌಡ, ತಮ್ಮ ಪ್ರೀತಿಯ ಹುಡುಗಿ ಕೃತಿ ಗೌಡ ಅವರೊಂದಿಗೆ ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯ ಸಂಭ್ರಮದ ಬೆನ್ನಲ್ಲೇ ಇದೀಗ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿ ಅವರ ಅಭಿಮಾನಿಗಳಲ್ಲಿ ಹೊಸ ಕುತೂಹಲ ಮೂಡಿಸಿದೆ.

ಆದರೆ ಈ ವೈಲ್ಡ್‌ಕಾರ್ಡ್ ಎಂಟ್ರಿಗೆ ಸಂಬಂಧಿಸಿದಂತೆ ಬಿಗ್ ಬಾಸ್ ತಂಡದಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ. ಹೀಗಾಗಿ ಪ್ರಶಾಂತ್ ಗೌಡ ನಿಜವಾಗಿಯೂ ಮನೆಗೆ ಕಾಲಿಡುತ್ತಾರಾ? ಅಥವಾ ಇದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮತ್ತೊಂದು ಗಾಸಿಪ್ ಮಾತ್ರವೇ? ಎಂಬ ಪ್ರಶ್ನೆ ಇನ್ನೂ ಉಳಿದಿದೆ.
ಇದರ ನಡುವೆ ಬಿಗ್ ಬಾಸ್ ಬಿಡುಗಡೆ ಮಾಡಿರುವ ಹೊಸ ಪ್ರೋಮೋ ಕೂಡ ವೀಕ್ಷಕರ ಟೆನ್ಷನ್ ಹೆಚ್ಚಿಸಿದೆ. ಮನೆಯಲ್ಲಿರುವ ಸ್ಪರ್ಧಿಗಳು ಗಾಢ ನಿದ್ರೆಯಲ್ಲಿದ್ದ ವೇಳೆ ಏಕಾಏಕಿ ಸೈರನ್ ಮೊಳಗಿರುವ ದೃಶ್ಯ ಪ್ರೋಮೋದಲ್ಲಿದೆ. ಈ ವಾರ ಮನೆಯಲ್ಲಿ ‘ಎಮರ್ಜೆನ್ಸಿ ಎಕ್ಸಿಟ್’ ಇರಲಿದೆ ಎಂಬ ಸೂಚನೆಯೂ ಸಿಕ್ಕಿದೆ. ಹೀಗಾಗಿ ಯಾರಿಗೆ ಈ ಎಮರ್ಜೆನ್ಸಿ ಎಕ್ಸಿಟ್ ಎದುರಾಗಬಹುದು ಎಂಬ ಪ್ರಶ್ನೆ ಇದೀಗ ಎಲ್ಲರ ತಲೆಯಲ್ಲೂ ಓಡಾಡುತ್ತಿದೆ.
ಇಷ್ಟೇ ಅಲ್ಲ, ಪ್ರತಿಯೊಬ್ಬ ಸ್ಪರ್ಧಿಯನ್ನೂ ಕಿಚ್ಚ ಸುದೀಪ್ ಅವರೇ ನಾಮಿನೇಟ್ ಮಾಡಿರುವುದು ಈ ವಾರದ ಆಟಕ್ಕೆ ಮತ್ತಷ್ಟು ತಿರುವು ನೀಡಿದೆ. ಯಾವ ಕ್ಷಣದಲ್ಲಿ ಯಾರು ಮನೆಯಿಂದ ಹೊರಹೋಗಬಹುದು ಎಂಬ ಅನಿಶ್ಚಿತತೆ ಮನೆಮಂದಿಯಲ್ಲೂ, ವೀಕ್ಷಕರಲ್ಲೂ ಟೆನ್ಷನ್ ಹೆಚ್ಚಿಸಿದೆ.
ಇಂತಹ ಸಂದರ್ಭದಲ್ಲಿ ವೈಲ್ಡ್‌ಕಾರ್ಡ್ ಎಂಟ್ರಿ ಸುದ್ದಿ ಕೇಳಿಬರುತ್ತಿರುವುದು ಆಟದ ಮೇಲೆ ಇನ್ನಷ್ಟು ಕುತೂಹಲ ಮೂಡಿಸಿದೆ. ಹೊಸ ಸದಸ್ಯನೊಬ್ಬ ಮನೆಗೆ ಬಂದರೆ ಈಗಾಗಲೇ ರೂಪುಗೊಂಡಿರುವ ಗುಂಪುಗಳು, ಸ್ನೇಹಗಳು ಮತ್ತು ಲೆಕ್ಕಾಚಾರಗಳಲ್ಲಿ ಬದಲಾವಣೆ ಸಂಭವಿಸುವ ಸಾಧ್ಯತೆ ಇದೆ. ಹೊಸ ಸ್ಪರ್ಧಿ ಯಾರೊಂದಿಗೆ ಕೈಜೋಡಿಸುತ್ತಾರೆ? ಯಾರೊಂದಿಗೆ ವಿರೋಧ ಬೆಳೆಸುತ್ತಾರೆ? ಟಾಸ್ಕ್‌ಗಳಲ್ಲಿ ತಮ್ಮ ಸಾಮರ್ಥ್ಯವನ್ನು ಹೇಗೆ ತೋರಿಸುತ್ತಾರೆ? ಎಂಬ ಪ್ರಶ್ನೆಗಳು ಸಹಜವಾಗಿಯೇ ಮೂಡುತ್ತವೆ.
ಒಂದು ವೇಳೆ ಪ್ರಶಾಂತ್ ಗೌಡ ನಿಜವಾಗಿಯೂ ಬಿಗ್ ಬಾಸ್ ಮನೆಗೆ ಕಾಲಿಟ್ಟರೆ, ಗಂಭೀರವಾಗುತ್ತಿರುವ ಆಟಕ್ಕೆ ಅವರ ಹಾಸ್ಯಮಯ ಶೈಲಿ ಹೊಸ ರಂಗು ತುಂಬುವ ಸಾಧ್ಯತೆಯಿದೆ. ಸ್ಪರ್ಧಿಗಳೊಂದಿಗೆ ಅವರ ಸಂಭಾಷಣೆ, ಟಾಸ್ಕ್‌ಗಳಲ್ಲಿ ಅವರ ಆಟ ಹಾಗೂ ಮನೆಯೊಳಗಿನ ತಮ್ಮದೇ ಆದ ಕಾಮಿಡಿ ಕನೆಕ್ಷನ್ ಪ್ರೇಕ್ಷಕರಿಗೆ ಮನರಂಜನೆಯ ಹೊಸ ಅಧ್ಯಾಯವಾಗಬಹುದು.
ಒಟ್ಟಿನಲ್ಲಿ, ‘ಬಿಗ್ ಬಾಸ್ ಕನ್ನಡ ಸೀಸನ್ 13’ ಈಗಾಗಲೇ ಟ್ವಿಸ್ಟ್‌ಗಳ ಮೇಲೆ ಟ್ವಿಸ್ಟ್ ನೀಡುತ್ತಿರುವ ಹೊತ್ತಿನಲ್ಲಿ, ನಟಿ ವಿಜಯಲಕ್ಷ್ಮೀ ಹಾಗೂ ಪ್ರಶಾಂತ್ ಗೌಡ ಅವರ ವೈಲ್ಡ್‌ಕಾರ್ಡ್ ಎಂಟ್ರಿ ಕುರಿತ ಗಾಸಿಪ್ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಆದರೆ ಕೊನೆಯ ಮಾತು ಬಿಗ್ ಬಾಸ್‌ನದ್ದೇ. ಹಾಗಾಗಿ ಈ ಬಾರಿ ನಿಜವಾಗಿಯೂ ಮನೆಗೆ ಹೊಸ ಅತಿಥಿಯಾಗಿ ಯಾರು ಕಾಲಿಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.


