- Home
- Entertainment
- TV Talk
- ಸೂರಜ್ ಸಿಂಗ್‌ಗೆ ಈಗಾಗಲೇ ಮದುವೆ ಆಗಿದ್ಯಾ? ಶಾಕಿಂಗ್ ಸೀಕ್ರೆಟ್ ರಿವೀಲ್ ಮಾಡಿದ ಬೆಸ್ಟ್ ಫ್ರೆಂಡ್
ಸೂರಜ್ ಸಿಂಗ್‌ಗೆ ಈಗಾಗಲೇ ಮದುವೆ ಆಗಿದ್ಯಾ? ಶಾಕಿಂಗ್ ಸೀಕ್ರೆಟ್ ರಿವೀಲ್ ಮಾಡಿದ ಬೆಸ್ಟ್ ಫ್ರೆಂಡ್
Suraj Singh: ‘ಬಿಗ್ ಬಾಸ್’ ಮೂಲಕ ಎಂಟ್ರಿ ಕೊಟ್ಟು, ಸ್ವಲ್ಪ ಸಮಯದಲ್ಲೇ ಕನ್ನಡಿಗರ ಫೇವರಿಟ್ ನಟನಾಗಿ ಗುರುತಿಸಿಕೊಂಡಿರುವ ಸೂರಜ್ ಸಿಂಗ್ ಕುರಿತು ಇದೀಗ ಅವರ ಬ್ರೆಸ್ಟ್ ಫ್ರೆಂಡ್ ದೊಡ್ಡದಾದ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ. ಇದನ್ನು ಕೇಳಿ ಫ್ಯಾನ್ಸ್ ಮಾತ್ರ ಅಲ್ಲ, ಸ್ವತಃ ಸೂರಜ್ ಶಾಕ್ ಆಗಿದ್ದಾರೆ.

ಸೂರಜ್ ಸಿಂಗ್ ಸೀಕ್ರೆಟ್ ರಿವೀಲ್
‘ಬಿಗ್ ಬಾಸ್ ಸೀಸನ್ 12’ ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟವರು ಸೂರಜ್ ಸಿಂಗ್. ಜನಕ್ಕೆ ಪರಿಚಿತರಾದ ಕೆಲವೇ ಸಮಯದಲ್ಲಿ ಜನಪ್ರಿಯತೆಯ ಜೊತೆಗೆ, ಸಾಲು ಸಾಲು ಅವಕಾಶಗಳನ್ನು ಪಡೆದವರು ಇವರು. ಸದ್ಯ ಕ್ವಾಟ್ಲೆ ಕಿಚನ್ ನಲ್ಲಿ ಸ್ಪರ್ಧಿಯಾಗಿ, ತಮ್ಮ ಕೈ ರುಚಿಯನ್ನು ಬಡಿಸುತ್ತಿದ್ದಾರೆ.
ಕ್ವಾಟ್ಲೆ ಕಿಚನ್
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕ್ವಾಟ್ಲೆ ಕಿಚನ್ ಎನ್ನುವುದು ಕಾಮಿಡಿ ಜೊತೆ ಕುಕ್ಕಿಂಗ್ ಮಾಡುವ ರಿಯಾಲಿಟಿ ಶೋ. ಇಲ್ಲಿ ಸ್ಪರ್ಧಿಗಳ ಜೊತೆಗೆ ಕ್ವಾಟ್ಲೆಗಳು ಕೂಡ ಇದ್ದಾರೆ. ಇವರು ಕುಕ್ ಗಳಿಗೆ ತರಲೆ ಮಾಡುತ್ತಲೇ ಇರುತ್ತಾರೆ, ಇವರ ನಡುವೆಯೇ ಬೆಸ್ಟ್ ಡಿಶ್ ತಯಾರಿ ಮಾಡಬೇಕಾಗುತ್ತದೆ. ಈ ವಾರ ಫ್ಯಾಮಿಲಿ ರೌಂಡ್ ನಡೆಯುತ್ತಿದೆ.
ಕ್ವಾಟ್ಲೆ ಕಿಚನ್ ಗೆ ಸೂರಜ್ ಫ್ರೆಂಡ್ ಎಂಟ್ರಿ
ಇದೀಗ ಕ್ವಾಟ್ಲೆ ಕಿಚನ್’ಗೆ ಸೂರಜ್ ಸಿಂಗ್ ಬೆಸ್ಟ್ ಫ್ರೆಂಡ್ ಎಂಟ್ರಿ ಕೊಟ್ಟಿದ್ದಾರೆ. ಕಲರ್ಸ್ ಕನ್ನಡ ಸೋಶಿಯಲ್ ಮೀಡೀಯಾದಲ್ಲಿ ಇದೀಗ ಇಬ್ಬರ ಹೊಸದೊಂದು ವಿಡಿಯೋ ಶೇರ್ ಆಗಿದ್ದು, ವಿಡಿಯೋದಲ್ಲಿ ಫ್ರೆಂಡ್ ವೀರು ಸೂರಜ್ ಸಿಂಗ್ ಕುರಿತು ದೊಡ್ಡ ಸೀಕ್ರೆಟ್ ರಿವೀಲ್ ಮಾಡಿದ್ದಾರೆ.
ಸೂರಜ್ ಸಿಂಗ್ ಸೀಕ್ರೆಟ್ ರಿವೀಲ್
ನಾನು ವೀರು, ಸೂರಜ್ ಸಿಂಗ್ ಬೆಸ್ಟ್ ಫ್ರೆಂಡ್, ನಾವಿಬ್ಬರು ಸುಮಾರು 13 ವರ್ಷಗಳಿಂದ ಫ್ರೆಂಡ್ಸ್ ಎಂದಿದ್ದಾರೆ. ಜೊತೆಗೆ ನಾನೀಗ ಸೂರಜ್ ಬಗ್ಗೆ ನಿಮಗೆ ಯಾರಿಗೂ ಗೊತ್ತೇ ಇರದಂತಹ, ಸೀಕ್ರೆಟ್ ರಿವೀಲ್ ಮಾಡುತ್ತೇನೆ ಎಂದಿದ್ದಾರೆ. ಇದನ್ನು ಕೇಳಿ ಸೂರಜ್ ಕೂಡ ಶಾಕ್ ಆಗಿದ್ದಾರೆ.
ಸೂರಜ್ ಗೆ ಈಗಾಗ್ಲೆ ಮದ್ವೆ ಆಗಿದ್ಯಂತೆ!
ಸೂರಜ್’ಗೆ ಈಗಾಗಲೆ ಮದುವೆ ಆಗಿದೆ ಎನ್ನುತ್ತಿದ್ದಂತೆ ಸೂರಜ್ ಪೂರ್ತಿಯಾಗಿ ಶಾಕ್ ಆಗಿದ್ದು, ನಂತರ ವೀರು ಹುಡುಗಿ ಯಾರು ಗೊತ್ತಾ, ಪವಿತ್ರ ಅಂತ, ಪವಿತ್ರ ಯಾರೂ ಅಂತ ಯೋಚನೆ ಮಾಡ್ತಿದ್ದೀರಾ ? ಬೇರೆ ಯಾರು ಅಲ್ಲ, ಪವಿತ್ರ ಬಂಧನದ ಪವಿತ್ರ ಎಂದಿದ್ದಾರೆ. ಇದನ್ನು ಕೇಳಿ ಸೂರಜ್, ಅಲ್ಲಿ ಕ್ವಾಟ್ಲೆಗಳ ಕಾಟ ಸಾಕಾಗಲ್ಲ ಅಂತ ನೀನು ಶುರು ಮಾಡ್ಕೊಂಡ್ಯಾ ಎಂದಿದ್ದಾರೆ.
ಪವಿತ್ರ ಬಂಧನದಲ್ಲಿ ಸೂರಜ್
ಬಿಗ್ ಬಾಸ್ ನಿಂದ ಹೊರ ಬರುತ್ತಿದ್ದಂತೆ, ಸೂರಜ್ ಸಿಂಗ್’ಗೆ ‘ಪವಿತ್ರ ಬಂಧನ’ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಇದೀಗ ಧಾರಾವಾಹಿ ಅದ್ಭುತವಾಗಿ ಬರುತ್ತಿದ್ದು, ದೇವ್ ಮತು ಪವಿತ್ರ ಜೋಡಿಯನ್ನು ಜನರು ಸಿಕ್ಕಾಪಟ್ಟೆ ಇಷ್ಟ ಪಟ್ಟಿದ್ದಾರೆ. ಇಬ್ಬರು ಆದಷ್ಟು ಬೇಗ ಒಂದಾಗಲಿ ಎಂದು ಹಾರೈಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

