- Home
- Entertainment
- TV Talk
- BBK 12: ಆ ವಿಷ್ಯ Suraj Singh ಮುಚ್ಚಿಟ್ಟಿದ್ದ- ಸೂರಜ್ ಎಂಗೇಜ್ಮೆಂಟ್ ಕುರಿತು ರಾಶಿಕಾ ಹೇಳಿದ್ದೇನು?
BBK 12: ಆ ವಿಷ್ಯ Suraj Singh ಮುಚ್ಚಿಟ್ಟಿದ್ದ- ಸೂರಜ್ ಎಂಗೇಜ್ಮೆಂಟ್ ಕುರಿತು ರಾಶಿಕಾ ಹೇಳಿದ್ದೇನು?
ಬಿಗ್ಬಾಸ್ ಮನೆಯಿಂದ ಹೊರಬಂದಿರುವ ರಾಶಿಕಾ ಶೆಟ್ಟಿ, ಸೂರಜ್ ಸಿಂಗ್ ಜೊತೆಗಿನ ಪ್ರೇಮ ಸಂಬಂಧದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ತಾವಿಬ್ಬರೂ ಕೇವಲ ಸ್ನೇಹಿತರು ಎಂದಿರುವ ಅವರು, ಸೂರಜ್ ಸೀರಿಯಲ್ನಲ್ಲಿ ನಟಿಸುತ್ತಿರುವ ವಿಷಯ ತನಗೆ ಮನೆಯಲ್ಲಿ ತಿಳಿದಿರಲಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಬಿಗ್ಬಾಸ್ ಲವ್ ಸ್ಟೋರಿ
ಬಿಗ್ಬಾಸ್ ಮನೆಯಲ್ಲಿ (Bigg Boss 12) ಮನೆಯಲ್ಲಿ ಸೀರಿಯಲ್ ಲವ್ ಅಂತ ಈ ಬಾರಿ ಫೇಮಸ್ ಆಗಿದ್ದು ರಾಶಿಕಾ ಶೆಟ್ಟಿ ಮತ್ತು ಸೂರಜ್ ಸಿಂಗ್ ಜೋಡಿ. ಗಿಲ್ಲಿ ನಟ ಮತ್ತು ಕಾವ್ಯಾ ಅವರು ತಮಾಷೆಯಾಗಿ ನಡೆದುಕೊಳ್ತಿರೋದರಿಂದ ಅದನ್ನು ತಮಾಷೆಯ ಲವ್ ಎಂದೇ ಹೇಳಲಾಗ್ತಿದೆ. ಆದರೆ ಸೂರಜ್ ಮತ್ತು ರಾಶಿಕಾ (Rashika Shetty and Suraj Singh Love story) ವಿಷ್ಯದಲ್ಲಿ ಅದನ್ನು ಸೀರಿಯಲ್ ಎಂದೇ ಕರೆಯಲಾಗುತ್ತಿತ್ತು.
ರಾಶಿಕಾ ಶೆಟ್ಟಿ ಸ್ಪಷ್ಟನೆ
ಆದರೆ ರಾಶಿಕಾ ಶೆಟ್ಟಿ ಅವರು ಹೊರಕ್ಕೆ ಬಂದಿದ್ದು, ಈ ಬಗ್ಗೆ ಸ್ಪಷ್ಟನೆಯನ್ನೂ ಕೊಟ್ಟಾಗಿದೆ. ಅಂಥದ್ದೇನೂ ಇಲ್ಲ. ನಾನು ಮತ್ತು ಆತ ಒಳ್ಳೆಯ ಫ್ರೆಂಡ್ಸ್ ಅಷ್ಟೇ. ನನಗೆ ಬಿಗ್ಬಾಸ್ ಮನೆಯಲ್ಲಿ ಮನಸ್ಸಿನಲ್ಲಿ ಇರುವುದನ್ನು ಹೇಳಿಕೊಂಡು ಕನ್ಫರ್ಟ್ ಎನ್ನಿಸ್ತಿದ್ದದ್ದು ಸೂರಜ್ ಬಳಿ. ಅದನ್ನೇ ಬೇರೆ ರೀತಿ ಕಲ್ಪಿಸಿಕೊಳ್ಳಲಾಗಿತ್ತು ಎಂದಿದ್ದಾರೆ.
ಸೂರಜ್ಸಿಂಗ್ ಎಂಗೇಜ್ಮೆಂಟ್
ಆದರೆ, ಇದೇವೇಳೆ ಸೂರಜ್ ಸಿಂಗ್ ಎಂಗೇಜ್ಮೆಂಟ್ ಬಗ್ಗೆಯೂ ರಾಶಿಕಾ ಶೆಟ್ಟಿ ಮಾತನಾಡಿದ್ದಾರೆ. ಸೂರಜ್ ಸಿಂಗ್ ಮನೆಗೆ ಬಂದಾಗ ಅವರಿಗೆ ಎಂಗೇಜ್ಮೆಂಟ್ ಆಯಿತು ಎನ್ನುವಂತೆ ಮಾತನಾಡಲಾಗಿತ್ತು. ಸುದೀಪ್ ಸರ್ ಅವರು ಅದೇ ರೀತಿ ತಮಾಷೆ ಮಾಡಿದ್ದರು. ಅವರಿಗೆ ನಿಜವಾಗಿಯೂ ಎಂಗೇಜ್ಮೆಂಟ್ ಆಗಿತ್ತು ಎಂದೇ ನಾನು ಅಂದುಕೊಂಡಿದ್ದೆ. ಆಮೇಲೆ ಅದು ಸುಳ್ಳು ಎಂದು ತಿಳಿಯಿತು ಎಂದಿದ್ದಾರೆ.
ನನಗೆ ಹೇಳಲೇ ಇಲ್ಲ
ಕೊನೆಗೆ, ಸೂರಜ್ ಸಿಂಗ್ ಸೀರಿಯಲ್ ಮಾಡ್ತಿದ್ದಾನೆ ಅಂತ ಬಿಗ್ಬಾಸ್ನಿಂದ ಹೊರಕ್ಕೆ ಬಂದ ಮೇಲೆ ಗೊತ್ತಾಯ್ತು. ಮನೆಯಲ್ಲಿ ಇದ್ದಾಗ ಈ ವಿಷ್ಯವನ್ನು ಆತ ಹೇಳಿರಲೇ ಇಲ್ಲ. ನನ್ನ ತಮ್ಮ ಹೇಳಿದಾಗಲೇ ಗೊತ್ತಾಯ್ತು. ಬಳಿಕ ಇನ್ಸ್ಟಾಗ್ರಾಮ್‌ನಲ್ಲಿ ಸೀರಿಯಲ್ ಪ್ರೋಮೋ ನೋಡಿದೆ. ತುಂಬಾ ಖುಷಿಯಾಯ್ತು. ಆದರೆ ಈ ವಿಷಯವನ್ನು ಆತ ನನಗೆ ಮೊದಲೇ ಹೇಳಿದ್ದರೆ ತುಂಬಾ ಖುಷಿಯಾಗುತ್ತಿತ್ತು ಎಂದಿದ್ದಾರೆ.
ರಾಶಿಕಾ ಹಾರೈಕೆ
ಅಷ್ಟಕ್ಕೂ ಸೂರಜ್ ಸೀರಿಯಲ್ ಮಾಡ್ತಾನೆ ಅಂತ ನಾನು ನಿರೀಕ್ಷೆ ಮಾಡಿರಲಿಲ್ಲ. ನಟನೆ ಎಲ್ಲಾ ಬರಲ್ಲ ಎಂದಿದ್ದ. ಆದರೆ ನಟನೆ ನೋಡಿ ಖುಷಿ ಆಯ್ತು. ಅವನ ಆಸೆ ಎಲ್ಲಾ ಈಡೇರಲಿ. ಅವನು ಏನೆಲ್ಲಾ ಆಗಬೇಕು ಅಂದುಕೊಂಡಿದ್ದಾನೋ ಅದೆಲ್ಲವೂ ಆಗಲಿ ಎಂದು ರಾಶಿಕಾ ಹಾರೈಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

