ಕುಲದೇವಿ ದರ್ಶನಕ್ಕಾಗಿ ಮೊದಲ ಬಾರಿ ಗಂಡನ ಜೊತೆ ಕೇರಳಕ್ಕೆ ತೆರಳಿದ ನಟಿ ವೈಷ್ಣವಿ ಗೌಡ
Vaishnavi Gowda: ನಟಿ ವೈಷ್ಣವಿ ಗೌಡ, ಈಗಷ್ಟೇ ಉದಯ ಟಿವಿ ಸೀರಿಯಲ್ ಮೂಲಕ ಮತ್ತೊಮ್ಮೆ ಕಿರುತೆರೆಗೆ ರೀ ಎಂಟ್ರಿ ಕೊಟ್ಟಿದ್ದರು. ಇದೀಗ ಶಾರ್ಟ್ ಬ್ರೇಕ್ ತೆಗೆದುಕೊಂಡು ಗಂಡನ ಜೊತೆ ಕೇರಳಕ್ಕೆ ತೆರಳಿ ತಮ್ಮ ಕುಲ ದೇವಿಯ ದರ್ಶನ ಪಡೆದು ಬಂದಿದ್ದಾರೆ ನಟಿ.

ವೈಷ್ಣವಿ ಗೌಡ
ಕನ್ನಡ ಕಿರುತೆರೆಯ ಜನಪ್ರಿಯ ನಟಿ ವೈಷ್ಣವಿ ಗೌಡ, ಮತ್ತೆ ಕಿರುತೆರೆಗೆ ಕಂ ಬ್ಯಾಕ್ ಮಾಡುವ ಮೂಲಕ ಅಭಿಮಾನಿಗಳ ಸಂಭ್ರಮ ಹೆಚ್ಚಿಸಿದ್ದಾರೆ. ಇದೀಗ ತಮ್ಮ ಬ್ಯುಸಿ ಸೀರಿಯಲ್ ಶೆಡ್ಯೂಲ್ ನಡುವೆ ನಟಿ ಬ್ರೇಕ್ ತೆಗೆದುಕೊಂಡು ಕುಲದೇವಿ ದರ್ಶನ ಪಡೆದು ಬಂದಿದ್ದಾರೆ. ತಮ್ಮ ಪತಿ ಜೊತೆಗಿನ ಫೋಟೊಗಳನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ವೈಷ್ಣವಿ ಸೋಶಿಯಲ್ ಮೀಡಿಯಾ ಪೋಸ್ಟ್
ಕೇರಳದ ನಮ್ಮ ಕುಲದೇವಿ ದೇವಸ್ಥಾನಕ್ಕೆ ನಮ್ಮ ಮೊದಲ ಭೇಟಿ. ಆಶೀರ್ವಾದಗಳನ್ನು ಹುಡುಕುವುದು, ಪ್ರಶಾಂತವಾದ ಸುತ್ತಮುತ್ತಲಿನ ಪ್ರದೇಶಗಳನ್ನು ಅನ್ವೇಷಿಸುವುದು ಮತ್ತು ಕುಟುಂಬವಾಗಿ ಒಟ್ಟಿಗೆ ಅಮೂಲ್ಯ ಸಮಯವನ್ನು ಕಳೆಯುವ ಸುಂದರ ಅನುಭವ. ಕೆಲವು ಪ್ರಯಾಣಗಳು ನಾವು ಭೇಟಿ ನೀಡುವ ಸ್ಥಳಗಳಿಗೆ ಮಾತ್ರವಲ್ಲ, ದಾರಿಯುದ್ದಕ್ಕೂ ನಾವು ಸೃಷ್ಟಿಸುವ ನೆನಪುಗಳಿಗೂ ವಿಶೇಷವಾಗಿರುತ್ತದೆ ಎಂದು ವೈಷ್ಣವಿ ಬರೆದುಕೊಂಡಿದ್ದಾರೆ.
ಕೇರಳ ಸೀರೆಯಲ್ಲಿ ಮಿಂಚಿದ ನಟಿ
ವೈಷ್ಣವಿ ಗೌಡ, ಸೋಶಿಯಲ್ ಮೀಡಿಯಾದಲ್ಲಿ ಒಂದಷ್ಟು ಫೋಟೊಗಳನ್ನು ಹಂಚಿಕೊಂಡಿದ್ದು, ಫೋಟೋಗಳಲ್ಲಿ ನಟಿ ಕೇರಳ ಕಸುವು ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ತಲೆ ತುಂಬ ದುಂಡು ಮಲ್ಲಿಗೆ ಮುಡಿದು, ಜುಮುಕಿ ಧರಿಸಿ, ತುಂಬಾನೆ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಪತಿ ಅನುಕೂಲ್ ಮಿಶ್ರಾ ಪಂಚೆ ಹಾಗೂ ಶಾಲು ಧರಿಸಿ ಫೋಟೊಗೆ ಹೆಂಡ್ತಿ ಜೊತೆ ಪೋಸ್ ಕೊಟ್ಟಿದ್ದಾರೆ.
ಟ್ರಾವೆಲ್ ಪ್ರಿಯ ಕಪಲ್ಸ್
ವೈಷ್ಣವಿ ಗೌಡ ಹಾಗೂ ಅನುಕೂಲ್ ಮಿಶ್ರಾ ಇಬ್ಬರೂ ಸಹ ಟ್ರಾವೆಲ್ ಪ್ರಿಯರಾಗಿದ್ದು, ಹೆಚ್ಚಾಗಿ ದೇಶದ ವಿವಿಧ ಸುಂದರ ತಾಣಗಳನ್ನು ಜೊತೆಯಾಗಿ ಎಕ್ಸ್ ಪ್ಲೋರ್ ಮಾಡುತ್ತಲೇ ಇರುತ್ತಾರೆ. ಇತ್ತೀಚೆಗೆ ಈ ಜೋಡಿ ಮೇಘಾಲಯದ ಸುಂದರ ಜಾಗವನ್ನು ಎಕ್ ಪ್ಲೋರ್ ಮಾಡಿ ಬಂದಿದ್ದರು. ಅಲ್ಲಿನ ಪ್ರಕೃತಿ ಜೊತೆ ಕಳೆದು ಹೋಗಿದ್ದರು. ಇದೀಗ ಕೇರಳದ ಸೌಂದರ್ಯಕ್ಕೆ ಮನ ಸೋತಿದ್ದಾರೆ ಜೋಡಿ.
ಗೆಳತಿ ಗಾಯತ್ರಿ ಧಾರಾವಾಹಿಯಲ್ಲಿ ವೈಷ್ಣವಿ
ವೈಷ್ಣವಿ ಗೌಡ, ಸದ್ಯ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ ‘ಗೆಳತಿ ಗಾಯತ್ರಿ’ಯಲ್ಲಿ ಪಾರ್ವತಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಬಾಲ್ಯದಲ್ಲಿಜೊತೆಯಾಗಿದ್ದ ಗೆಳತಿ ಗಾಯತ್ರಿಯನ್ನು ಹುಡುಕುವ ಪ್ರಯತ್ನದಲ್ಲಿರುವ, ಅದಕ್ಕಾಗಿ ಪ್ರತಿ ವರ್ಷ ರಿ ಯೂನಿಯನ್ ಮಾಡುತ್ತಿರುವ ಶ್ರೀಮಂತ ಮನೆಯ ಹುಡುಗಿ ಹಾಗೂ ಪ್ರೀತಿ ಮಾಡುವ ಗಂಡ ಮುದ್ದಾದ ಮಗುವಿನ ಅಮ್ಮ ಪಾರ್ವತಿಯಾಗಿ ವೈಷ್ಣವಿ ಗೌಡ ನಟಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

