Bigg Boss Kannada: ಕಾವ್ಯಾ ಗೌಡ ಪ್ರಶ್ನೆಯಿಂದ ಸುದೀಪ್ ರಿವೀಲ್ ಮಾಡಿದ್ರು ರಹಸ್ಯ
Kavya Gowda: ಬಿಗ್‌ಬಾಸ್ ಕನ್ನಡ ಸೀಸನ್ 13 ರ ವೇದಿಕೆಯಲ್ಲಿ ಸ್ಪರ್ಧಿ ಕಾವ್ಯಾ ಗೌಡ ಅವರು ಶೋಕೇಸ್‌ನಲ್ಲಿದ್ದ ವಸ್ತುಗಳ ಬಗ್ಗೆ ಪ್ರಶ್ನಿಸಿದಾಗ, ನಿರೂಪಕ ಸುದೀಪ್ ರಹಸ್ಯವೊಂದನ್ನು ಬಹಿರಂಗಪಡಿಸಿದರು.

ಕಾವ್ಯಾ ಗೌಡ ಪ್ರಶ್ನೆಯಿಂದ ರಹಸ್ಯವೊಂದು ರಿವೀಲ್
ಬಿಗ್‌ಬಾಸ್ ಕನ್ನಡ ಸೀಸನ್ 13 ಅದ್ಧೂರಿಯಾಗಿ ಆರಂಭವಾಗಿದ್ದು, ಈ ಬಾರಿ ಒಟ್ಟು 16 ಸ್ಪರ್ಧಿಗಳು ಮನೆಯಲ್ಲಿದ್ದಾರೆ. 16 ಸ್ಪರ್ಧಿಗಳ ಪೈಕಿ ನಾಲ್ವರು ಕಾಮನ್ ಮ್ಯಾನ್‌ಗಳಾಗಿದ್ದಾರೆ. ಸುದೀಪ್ ಅವರೇ ಎಲ್ಲಾ ಸ್ಪರ್ಧಿಗಳಿಗೆ ಬಿಗ್‌ಬಾಸ್ ಮನೆಯ ಬೋರ್ಡಿಂಗ್ ಪಾಸ್ ನೀಡಿ ಶುಭ ಹಾರೈಸಿ ಕಳುಹಿಸಿದ್ದಾರೆ. ಏಳನೇ ಸ್ಪರ್ಧಿಯಾಗಿ ಬಂದ ಕಾವ್ಯಾ ಗೌಡ ಅವರ ಪ್ರಶ್ನೆಯಿಂದ ರಹಸ್ಯವೊಂದು ರಿವೀಲ್ ಆಗಿದೆ.
ಅಲ್ಲಿರೋದು ಏನು?
ಹೌದು, ಈ ಬಾರಿ ಸುದೀಪ್ ಅವರು ನಿರೂಪಣೆ ಮಾಡುವ ವೇದಿಕೆಯನ್ನು ಸಹ ಅದ್ಧೂರಿಯಾಗಿ ಡಿಸೈನ್ ಮಾಡಲಾಗಿದೆ. ವೇದಿಕೆ ಬಲಭಾಗದ ಗೋಡೆ ಮೇಲೆ ಬ್ಯಾಟ್ ಸೇರಿದಂತೆ ಕೆಲ ವಸ್ತುಗಳನ್ನು ಜೋಡಿಸಲಾಗಿತ್ತು. ಈ ಶೋಕೇಸ್ ಗಮನಿಸಿದ ಕಾವ್ಯಾ ಗೌಡ, ಅಲ್ಲಿರೋದು ಏನು? ಯಾಕೆ ಈ ವಸ್ತುಗಳನ್ನು ಅಲ್ಲಿ ಜೋಡಿಸಲಾಗಿದೆ ಎಂದು ನೇರವಾಗಿಯೇ ಸುದೀಪ್ ಅವರನ್ನು ಪ್ರಶ್ನೆ ಮಾಡಿದರು.
ಅಲ್ಲಿರುವ ವಸ್ತುಗಳು ಯಾರದ್ದು?
ಶೋಕೇಸ್‌ನಲ್ಲಿ ಜೋಡಿಸಲಾಗಿರುವ ಎಲ್ಲಾ ವಸ್ತುಗಳು ನನಗೆ ಸೇರಿದ್ದು. ವಾರದ ಅಂತ್ಯದಲ್ಲಿ ಯಾವ ಸ್ಪರ್ಧಿ ಕಿಚ್ಚನ ಚಪ್ಪಾಳೆ ಪಡೆಯುತ್ತಾರೆಯೋ ಅಲ್ಲಿರುವ ಒಂದು ವಸ್ತು ಅವರಿಗೆ ಸೇರುತ್ತದೆ. ಮುಂದಿನ ದಿನಗಳಲ್ಲಿ ಅಲ್ಲಿರುವ ವಸ್ತುಗಳ ಮಾಹಿತಿಯನ್ನು ನೀಡಲಾಗುತ್ತದೆ ಎಂದು ಸುದೀಪ್ ಹೇಳಿದರು.
ಮೊದಲ ಕಿಚ್ಚನ ಚಪ್ಪಾಳೆ
ಸೀಸನ್ 13ರ ಮೊದಲ ಕಿಚ್ಚನ ಚಪ್ಪಾಳೆ ಬಿಗ್‌ಬಾಸ್ ಪಡೆದುಕೊಂಡಿದ್ದಾರೆ. ಜಗತ್ತಿನ ಏಳು ಅದ್ಭುತಗಳು ಈ ಬಾರಿಯ ಬಿಗ್‌ಬಾಸ್ ಮನೆಯಲ್ಲಿವೆ. ಹೊಸದಾಗಿ ನಿರ್ಮಾಣಗೊಂಡಿರುವ ಮನೆಯನ್ನು ನೋಡಿದ ಸುದೀಪ್, ಸಂತೋಷದಿಂದ ಬಿಗ್‌ಬಾಸ್ ಅವರಿಗೆ ಸೀಸನ್ 13ರ ಮೊದಲ ಕಿಚ್ಚನ ಚಪ್ಪಾಳೆಯನ್ನು ನೀಡಿದರು.
ಬಿಗ್‌ಬಾಸ್ ಸ್ಪರ್ಧಿಗಳು
ಜಗದೀಶ್, ಸೌಂದರ್ಯಾ ಶೆಟ್ಟಿ, ಅವಿನಾಶ್ ಶತಮರ್ಷನ, ಪ್ರಥಮಾ ಪ್ರಸಾದ್, ಗಗನ್ ಚಿನ್ನಪ್ಪ, ಸಂಗೀತಾ ಭಟ್, ಕಾವ್ಯಾ ಗೌಡ, ಓಂ ಪ್ರಕಾಶ್ ರಾವ್, ಕಿರಣ್ ಶಾಸ್ತ್ರಿ, ಆಸಿಯಾ ಫಿರ್ದೋಸ್,ಲಿಖಿತ್ ಗೋಂದಿ, ತಾಂಡವ್ ರಾಮ್, ವೈಷ್ಣವಿ ಕೌಂಡಿನ್ಯ, ಧನುಷ್, ಯಶಸ್ ಕೃಷ್ಣ ಮತ್ತು ಮಾಡರ್ನ್ ಕವಿ ಮಂಜ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

