MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Duleep Trophy Final
Today's Horoscope in Kannada
Hubballi Ganeshotsava
Pitru Paksha 2026 Date
PM Modi Meeting
Karnataka Farmers
Gulbarga Bus Accident
Bigg Boss Kannada 13
Karnataka Farmers Loan Waiver
Sharavathi Pumped Storage Project
Bengaluru FSSAI Inspection
KPSC Ex-chairman Shivashankarappa
India Forex Reserves
  • Home
  • Entertainment
  • TV Talk
  • ಅಪ್ಪನ ಮುಖವನ್ನೇ ನೋಡದೆ, ಅಮ್ಮ-ಅಜ್ಜಿ ಜೊತೆ ಬೆಳೆದ ನಟಿ ವೈಷ್ಣವಿ; 16ನೇ ವಯಸ್ಸಿಗೇ ನಾಯಕಿ, ಈಗ Bigg boss ಮನೆಯಲ್ಲಿ

ಅಪ್ಪನ ಮುಖವನ್ನೇ ನೋಡದೆ, ಅಮ್ಮ-ಅಜ್ಜಿ ಜೊತೆ ಬೆಳೆದ ನಟಿ ವೈಷ್ಣವಿ; 16ನೇ ವಯಸ್ಸಿಗೇ ನಾಯಕಿ, ಈಗ Bigg boss ಮನೆಯಲ್ಲಿ

ಕಿರುತೆರೆ ನಟಿ ವೈಷ್ಣವಿ ಕೌಂಡಿನ್ಯ ಇದೀಗ ‘ಬಿಗ್‌ ಬಾಸ್‌ ಕನ್ನಡ ಸೀಸನ್‌ 13’ರ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಧಾರಾವಾಹಿಗಳ ಮೂಲಕ ಕಿರುತೆರೆ ಪ್ರೇಕ್ಷಕರ ಮನಗೆದ್ದಿರುವ ವೈಷ್ಣವಿ, ಇದೀಗ ತಮ್ಮ ರಿಯಲ್‌ ಲೈಫ್‌ ಕಥೆಯನ್ನು ಬಿಗ್‌ಬಾಸ್‌ ವೇದಿಕೆಯಲ್ಲಿ ತೆರೆದಿಟ್ಟಿದ್ದಾರೆ.

2 Min read
Author : Sushma Hegde
Published : Sep 07 2026, 11:01 AM IST
Share this Photo Gallery
  • FB
  • TW
  • Linkdin
  • Whatsapp
14
ಕಿರುತೆರೆ ನಟಿ ವೈಷ್ಣವಿ ಕೌಂಡಿನ್ಯ
Image Credit : Asianet News

ಕಿರುತೆರೆ ನಟಿ ವೈಷ್ಣವಿ ಕೌಂಡಿನ್ಯ

ಕಿರುತೆರೆ ನಟಿ ವೈಷ್ಣವಿ ಕೌಂಡಿನ್ಯ ಇದೀಗ ‘ಬಿಗ್‌ ಬಾಸ್‌ ಕನ್ನಡ ಸೀಸನ್‌ 13’ರ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ‘ಮಿಥುನ ರಾಶಿ’, ‘ಪ್ರೇಮಕಾವ್ಯ’ ಧಾರಾವಾಹಿಗಳ ಮೂಲಕ ಕಿರುತೆರೆ ಪ್ರೇಕ್ಷಕರ ಮನಗೆದ್ದಿರುವ ವೈಷ್ಣವಿ, ಇದೀಗ ತಮ್ಮ ರಿಯಲ್‌ ಲೈಫ್‌ ಕಥೆಯನ್ನು ಬಿಗ್‌ಬಾಸ್‌ ವೇದಿಕೆಯಲ್ಲಿ ತೆರೆದಿಟ್ಟಿದ್ದಾರೆ. ಅದರಲ್ಲೂ ತಮ್ಮ ಬಾಲ್ಯದ ಕಹಿ ಅನುಭವಗಳು, ಹೆತ್ತವರ ವಿಚ್ಛೇದನ ಹಾಗೂ ತಂದೆಯ ಮುಖವನ್ನೇ ನೋಡದ ನೋವಿನ ಬಗ್ಗೆ ಮಾತನಾಡಿದ್ದಾರೆ.

ಅಪ್ಪ-ಅಮ್ಮನ ಡಿವೋರ್ಸ್‌... ಅಪ್ಪನ ಮುಖವನ್ನೇ ನೋಡಿಲ್ಲ

ಬಿಗ್‌ಬಾಸ್‌ ವೇದಿಕೆಯಲ್ಲಿ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡ ವೈಷ್ಣವಿ, ತಾವು ತಂದೆ-ತಾಯಿಯ ಏಕೈಕ ಮಗಳು ಎಂದು ಹೇಳಿದ್ದಾರೆ. ತಮ್ಮ ಮನೆಯಲ್ಲಿ ತಾಯಿ, ಅಜ್ಜಿ ಮತ್ತು ತಾವು ಮಾತ್ರ ಇದ್ದಿದ್ದು, ತಂದೆ-ತಾಯಿ ವಿಚ್ಛೇದನ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ. ನಾನು ಇದುವರೆಗೆ ನನ್ನ ತಂದೆಯ ಮುಖವನ್ನೂ ನೋಡಿಲ್ಲ ಎಂದು ವೈಷ್ಣವಿ ಹೇಳಿಕೊಂಡಿದ್ದು, ಅವರ ಮಾತುಗಳು ಬಿಗ್‌ಬಾಸ್‌ ವೇದಿಕೆಯಲ್ಲಿ ಭಾವುಕ ಕ್ಷಣಕ್ಕೆ ಕಾರಣವಾಗಿವೆ. ಚಿಕ್ಕ ವಯಸ್ಸಿನಿಂದಲೇ ಸ್ವಂತ ಕಾಲಿನ ಮೇಲೆ ನಿಲ್ಲಬೇಕು, ಯಾರ ಮುಂದೆಯೂ ಕೈಚಾಚಬಾರದು ಎಂಬ ದೃಢ ನಿರ್ಧಾರ ಮಾಡಿಕೊಂಡು ಬೆಳೆದಿದ್ದಾಗಿ ಅವರು ಹೇಳಿದ್ದಾರೆ.

16ನೇ ವಯಸ್ಸಿಗೇ ನಾಯಕಿಯಾದ ವೈಷ್ಣವಿ

ವೈಷ್ಣವಿ ಕೌಂಡಿನ್ಯ ಅವರ ನಟನಾ ಪಯಣವೇ ವಿಶೇಷ. ಕೇವಲ 16ನೇ ವಯಸ್ಸಿನಲ್ಲೇ ಕಿರುತೆರೆಗೆ ಕಾಲಿಟ್ಟ ಅವರು, ‘ಮಿಥುನ ರಾಶಿ’ ಧಾರಾವಾಹಿಯಲ್ಲಿ ‘ರಾಶಿ’ ಪಾತ್ರದ ಮೂಲಕ ಮನೆಮಾತಾದರು. ಆಟೋ ಓಡಿಸುವ ಯುವತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರಾಶಿ, ಅಕ್ಕನಿಗಾಗಿ ಎಲ್ಲ ತ್ಯಾಗಕ್ಕೂ ಸಿದ್ಧವಾಗುವ ಪಾತ್ರವಾಗಿತ್ತು. ಈ ಪಾತ್ರವನ್ನು ವೈಷ್ಣವಿ ಅತ್ಯಂತ ಸಹಜವಾಗಿ ನಿರ್ವಹಿಸಿ ಕಿರುತೆರೆ ಪ್ರೇಕ್ಷಕರ ಗಮನ ಸೆಳೆದಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
‘ಪ್ರೇಮಕಾವ್ಯ’ ಮುಗಿಸಿ ನೇರವಾಗಿ ಬಿಗ್‌ಬಾಸ್‌ ಮನೆಗೆ
Image Credit : Asianet News

‘ಪ್ರೇಮಕಾವ್ಯ’ ಮುಗಿಸಿ ನೇರವಾಗಿ ಬಿಗ್‌ಬಾಸ್‌ ಮನೆಗೆ

ಇತ್ತೀಚೆಗೆ ‘ಪ್ರೇಮಕಾವ್ಯ’ ಧಾರಾವಾಹಿಯಲ್ಲಿ ನಟಿಸಿ ಸದ್ದು ಮಾಡುತ್ತಿದ್ದ ವೈಷ್ಣವಿ, ಧಾರಾವಾಹಿ ಮುಗಿದ ಬೆನ್ನಲ್ಲೇ ‘ಬಿಗ್‌ಬಾಸ್‌ ಕನ್ನಡ ಸೀಸನ್‌ 13’ ಮನೆಗೆ ಎಂಟ್ರಿ ನೀಡಿದ್ದಾರೆ. ಈ ಹಿಂದೆ ‘ಬಿಗ್‌ಬಾಸ್‌ ಮಿನಿ ಸೀಸನ್‌’ನಲ್ಲೂ ಭಾಗವಹಿಸಿದ್ದ ವೈಷ್ಣವಿ ತಮ್ಮ ಆಟದ ವೈಖರಿಯಿಂದ ಗಮನ ಸೆಳೆದಿದ್ದರು. ಇದೀಗ ಮತ್ತೊಮ್ಮೆ ದೊಡ್ಮನೆ ಪ್ರವೇಶಿಸಿರುವ ಅವರು, ಈ ಬಾರಿ ತಮ್ಮ ನಿಜವಾದ ವ್ಯಕ್ತಿತ್ವದ ಮೂಲಕ ಪ್ರೇಕ್ಷಕರ ಮನ ಗೆಲ್ಲುವ ಸವಾಲು ಎದುರಿಸುತ್ತಿದ್ದಾರೆ.

ತಮಿಳು, ಮಲಯಾಳಂ ಕಿರುತೆರೆಯಲ್ಲೂ ನಟಿಸಿದ್ದಾರೆ

ವೈಷ್ಣವಿ ಕೌಂಡಿನ್ಯ ಕೇವಲ ಕನ್ನಡ ಕಿರುತೆರೆಗೆ ಸೀಮಿತವಾಗಿಲ್ಲ. ತಮಿಳು ಹಾಗೂ ಮಲಯಾಳಂ ಧಾರಾವಾಹಿಗಳಲ್ಲೂ ನಟಿಸಿರುವ ಅವರು, ಅಲ್ಲಿನ ಕಿರುತೆರೆ ಪ್ರೇಕ್ಷಕರಿಂದಲೂ ಮೆಚ್ಚುಗೆ ಪಡೆದಿದ್ದಾರೆ. ನಟನೆ ಮಾತ್ರವಲ್ಲದೆ ಸೈಕಾಲಜಿ ಮತ್ತು ಜರ್ನಲಿಸಂ ವಿಷಯದಲ್ಲಿ ಪದವಿ ಪೂರ್ಣಗೊಳಿಸಿರುವ ವೈಷ್ಣವಿ, ಭರತನಾಟ್ಯ ಕಲಾವಿದೆಯೂ ಹೌದು.

34
ವೈರಲ್‌ ವಿಡಿಯೋ, ಟ್ರೋಲ್‌... ಎರಡು ದಿನ ಮನೆಯಿಂದ ಹೊರಬರಲಾಗಿರಲಿಲ್ಲ
Image Credit : Asianet News

ವೈರಲ್‌ ವಿಡಿಯೋ, ಟ್ರೋಲ್‌... ಎರಡು ದಿನ ಮನೆಯಿಂದ ಹೊರಬರಲಾಗಿರಲಿಲ್ಲ

ವೈಷ್ಣವಿ ಅವರ ಜೀವನದಲ್ಲಿ ಯಶಸ್ಸಿನ ಜೊತೆಗೆ ಕೆಲವು ಕಹಿ ಅನುಭವಗಳೂ ಇವೆ. ಇತ್ತೀಚೆಗೆ ಈವೆಂಟ್‌ವೊಂದರಲ್ಲಿ ಅವರು ಧರಿಸಿದ್ದ ಉಡುಪು ಹಾಗೂ ವಿಡಿಯೋ ಚಿತ್ರೀಕರಣದ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ತಪ್ಪು ಆಂಗಲ್‌ನಲ್ಲಿ ವಿಡಿಯೋ ಮಾಡಲಾಗಿತ್ತು ಮತ್ತು ಕಾಮೆಂಟ್‌ಗಳಲ್ಲಿ ಕೆಟ್ಟ ಪದಗಳನ್ನು ಬಳಸಲಾಗಿತ್ತು ಎಂದು ವೈಷ್ಣವಿ ಬಿಗ್‌ಬಾಸ್‌ ವೇದಿಕೆಯಲ್ಲಿ ನೋವು ತೋಡಿಕೊಂಡಿದ್ದಾರೆ. ಆ ಘಟನೆ ಬಳಿಕ ಎರಡು ದಿನಗಳ ಕಾಲ ಮನೆಯಿಂದ ಹೊರಗೆ ಬರಲು ಸಾಧ್ಯವಾಗಿರಲಿಲ್ಲ, ಆ ರಾತ್ರಿ ಪೂರ್ತಿ ಅತ್ತಿದ್ದೆ ಎಂದು ಅವರು ಹೇಳಿಕೊಂಡಿದ್ದಾರೆ.

44
‘ಬಿಗ್‌ಬಾಸ್‌’ಗೆ ಬಂದಿದ್ದೇಕೆ?
Image Credit : Asianet News

‘ಬಿಗ್‌ಬಾಸ್‌’ಗೆ ಬಂದಿದ್ದೇಕೆ?

ಜೀವನದಲ್ಲಿ ಎದುರಾದ ನೋವು, ಟ್ರೋಲ್‌ಗಳು ಹಾಗೂ ನಿರಂತರ ಓಟದಿಂದಾಗಿ ಮಾನಸಿಕವಾಗಿ ಒಂದು ಬ್ರೇಕ್‌ ಬೇಕಿತ್ತು. ಅದಕ್ಕಾಗಿಯೇ ಬಿಗ್‌ಬಾಸ್‌ ಮನೆಗೆ ಬಂದಿದ್ದೇನೆ ಎಂದು ವೈಷ್ಣವಿ ಹೇಳಿದ್ದಾರೆ. ಬಾಲ್ಯದಲ್ಲೇ ತಂದೆಯಿಂದ ದೂರವಾಗಿ, ತಾಯಿ-ಅಜ್ಜಿಯ ಜೊತೆ ಬೆಳೆದ ವೈಷ್ಣವಿ, ಕೇವಲ 16ನೇ ವಯಸ್ಸಿಗೆ ನಾಯಕಿಯಾಗಿ, ಕನ್ನಡದ ಜೊತೆಗೆ ತಮಿಳು-ಮಲಯಾಳಂ ಕಿರುತೆರೆಯಲ್ಲೂ ಗುರುತಿಸಿಕೊಂಡು ಇದೀಗ ಬಿಗ್‌ಬಾಸ್‌ ಅಖಾಡಕ್ಕೆ ಕಾಲಿಟ್ಟಿದ್ದಾರೆ. ಅವರ ಈ ಜೀವನಕಥೆ ಇದೀಗ ಬಿಗ್‌ಬಾಸ್‌ ಪ್ರೇಕ್ಷಕರಲ್ಲೂ ಕುತೂಹಲ ಮೂಡಿಸಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SH
Sushma Hegde
ಸುವರ್ಣ ನ್ಯೂಸ್ ಸುದ್ದಿ ಮಾಧ್ಯಮದ ಡಿಜಿಟಲ್ ವಿಭಾಗದಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ದೃಶ್ಯ ಮಾಧ್ಯಮ, ಡಿಜಿಟಲ್‌ ಮಾಧ್ಯಮದಲ್ಲಿ 5 ವರ್ಷ ಕೆಲಸ ಮಾಡಿದ ಅನುಭವವಿದೆ. SDM ಉಜಿರೆಯಲ್ಲಿ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ. ಸುದ್ದಿಲೋಕದಲ್ಲಿ ರಾಜಕೀಯ, ದೇಶ, ಜ್ಯೋತಿಷ್ಯ, ಜೀವನಶೈಲಿ, ವಾಣಿಜ್ಯ, ಕ್ರೈಂ ಸುದ್ದಿಗಳಲ್ಲಿ ಆಸಕ್ತಿ.
ಬಿಗ್ ಬಾಸ್ ಕನ್ನಡ
ಟಿವಿ ಶೋ
ಮನರಂಜನಾ ಸುದ್ದಿ

Latest Videos
Recommended Stories
Recommended image1
Bigg Boss Kannada 13 ಆರಂಭ; ಎಲ್ಲಾ 16 ಸ್ಪರ್ಧಿಗಳ ಸಂಪೂರ್ಣ ವಿವರ ಇಲ್ಲಿದೆ ನೊಡಿ
Recommended image2
'ಆಕ್ಷನ್‌ಗೆ ಪಕ್ಕಾ ರಿಯಾಕ್ಷನ್': ತಾಂಡವ್ ರಾಮ್ ಎಂಟ್ರಿಗೆ ಬಿಗ್‌ ಬಾಸ್ ಮನೆಯಲ್ಲಿ ಶುರುವಾಯ್ತು ಹೊಸ ಆಟ!
Recommended image3
'ಅದೇ ಆಕೆಗೆ ಮೈನಸ್ ಆಗಬಹುದು': ಕಿಚ್ಚನ ಮುಂದೆ ಆಸಿಯಾ ಅಮ್ಮ ಹೇಳಿದ ಆ ಮಾತಿನ ಅರ್ಥವೇನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved