ಬಿಗ್ಬಾಸ್ ಕನ್ನಡ 13ಕ್ಕೆ ಎಂಟ್ರಿ ಕೊಟ್ಟಿರುವ ನಟಿ ಸಂಗೀತಾ ಭಟ್, ಮನೆಯಲ್ಲಿ 'ಅನ್ನಪೂರ್ಣೇಶ್ವರಿ' ಎಂದು ಖ್ಯಾತರಾಗಿದ್ದಾರೆ. ಇತ್ತೀಚೆಗೆ ಮನೆಯಲ್ಲಿ ಅವರ ವಯಸ್ಸಿನ ಬಗ್ಗೆ ನಡೆದ ಚರ್ಚೆ ವೀಕ್ಷಕರಲ್ಲಿ ಕುತೂಹಲ ಮೂಡಿಸಿದ್ದು, ಅವರ ನಿಜವಾದ ವಯಸ್ಸು ತಿಳಿದುಬಂದಿದೆ. ಈ ಲೇಖನವು ಅವರ ಬಿಗ್ ಬಾಸ್ ಪಯಣ ಮತ್ತು ವೃತ್ತಿಜೀವನದ ಬಗ್ಗೆ ಬೆಳಕು ಚೆಲ್ಲುತ್ತದೆ.
ಬಿಗ್ಬಾಸ್ ಕನ್ನಡ 13 (Bigg Boss Kananda 13)ನಲ್ಲಿ ಭಾಗ್ಯಲಕ್ಷ್ಮಿ ಸೀರಿಯಲ್ ತಾಂಡವ್ ಉರ್ಫ್ ಸುದರ್ಶನ್ ರಂಗಪ್ರಸಾದ್ ಅವರ ರಿಯಲ್ ಪತ್ನಿ ಸಂಗೀತಾ ಭಟ್ ಎಂಟ್ರಿ ಕೊಟ್ಟಿದ್ದಾರೆ. ಸದ್ಯ ಇವರು ಬಿಗ್ಬಾಸ್ ಮನೆಯ ಅನ್ನಪೂರ್ಣೇಶ್ವರಿ ಎನ್ನುವ ಹೆಸರನ್ನೂ ಪಡೆದುಕೊಂಡಿದ್ದಾರೆ. ಏಕೆಂದರೆ ಷೋ ಶುರುವಾಗಿ, ಮೊದಲ ವಾರವೇ ಮನೆಯ ಎಲ್ಲಾ ಸ್ಪರ್ಧಿಗಳಿಗೆ ರುಚಿಕರ ಅಡುಗೆ ಬಡಿಸುವ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತಿರುವ ಸಂಗೀತಾ ಭಟ್, ಎಲ್ಲರಿಗೂ ಪ್ರೀತಿಯಿಂದ ಉಣಬಡಿಸುತ್ತಿದ್ದಾರೆ. ಇವರ ಸೇವೆಯನ್ನು ಮೆಚ್ಚಿದ ತಾಂಡವ್ ರಾಮ್ ಹಾಗೂ ಜಗ್ಗ ಸೇರಿದಂತೆ ಬಹುತೇಕ ಸಹ-ಸ್ಪರ್ಧಿಗಳು ಸಂಗೀತಾಗೆ ಪ್ರೀತಿಯಿಂದ ‘ಅನ್ನಪೂರ್ಣೇಶ್ವರಿ’ ಎಂಬ ಬಿರುದನ್ನೇ ನೀಡಿದ್ದಾರೆ. ಉಳಿದ ಸ್ಪರ್ಧಿಗಳಿಂದ ಅವರಿಗೆ ಸಂಪೂರ್ಣ ಬೆಂಬಲ ವ್ಯಕ್ತವಾಗುತ್ತಿದೆ.
ಸಂಗೀತಾ ಭಟ್ ವಯಸ್ಸಿನ ಚರ್ಚೆ
ಇದೀಗ ಸಂಗೀತಾ ಭಟ್ ಅವರ ವಯಸ್ಸಿನ ಬಗ್ಗೆ ಭಾರಿ ಚರ್ಚೆ ಶುರುವಾಗಿದೆ. ನಿಮ್ಮ ವಯಸ್ಸೆಷ್ಟು ಎಂದು ಲಿಖಿತ್ ಅವರು ಮೊದಲಿಗೆ ಕೇಳಿದಾಗ, ಸಂಗೀತಾ 40 ಎಂದಿದ್ದಾರೆ. ನಲವತ್ತಾ ಎಂದು ಲಿಖಿತ್ ಪ್ರಶ್ನಿಸಿದಾಗ, ತಾಂಡವ್ ಮತ್ತು ಗಗನ್ ಚಿನ್ನಪ್ಪ ಅವರು ಲಿಖಿತ್ ಅವರಿಗೆ ತುಂಬಾ ಬೇಸರ ಆಯ್ತು ಎಂದು ತಮಾಷೆ ಮಾಡಿದ್ದಾರೆ. ಕೊನೆಗೆ ಸಂಗೀತಾ ನನಗೆ ಅಷ್ಟು ವಯಸ್ಸಾಗಿಲ್ಲ. ನೀವೇ ಗೆಸ್ ಮಾಡಿ ಎಂದು ಹೇಳಿದಾಗ, ಗಗನ್ ಅವರು ಅಲ್ಲಿಂದಲೇ ಹಿಂಟ್ ಕೊಡುತ್ತಲೇ ಇದ್ದರು. ಕೊನೆಗೂ ಲಿಖಿತ್ ಅವರು ಸರಿಯಾದ ಉತ್ತರ ಕೊಟ್ಟಿದ್ದಾರೆ. ಅದಕ್ಕೆ ಗಗನ್, ಲಿಖಿತ್ಗೆ ಮೊದಲೇ ವಯಸ್ಸು ಗೊತ್ತಿತ್ತು. ಆದರೂ ತಮಾಷೆ ಮಾಡಿದ್ದಾರೆ ಎಂದು ಹೇಳಿದರು.
ಹಾಗಿದ್ದರೆ, ಸಂಗೀತಾ ಭಟ್ (Bigg Boss Sangeeta Bhat) ಅವರ ರಿಯಲ್ ವಯಸ್ಸೆಷ್ಟು ಎಂದು ವೀಕ್ಷಕರಿಗೂ ಕುತೂಹಲ ಇರುತ್ತದೆ. ಅವರಿಗೆ ಈಗ 34 ವರ್ಷ ವಯಸ್ಸು. ಗೂಗಲ್ ದಾಖಲೆಯ ಪ್ರಕಾರ, ಸಂಗೀತಾ ಅವರು ಹುಟ್ಟಿದ್ದು, 1992ರ ಜುಲೈ 4 ರಂದು. ಇದನ್ನು ಪರಿಗಣಿಸಿದರೆ ಅವರಿಗೆ 34 ವರ್ಷ ವಯಸ್ಸು. ಲಿಖಿತ್ ಅವರು ಇದನ್ನೇ ಹೇಳಿದಾಗ, ಸಂಗೀತಾ ಒಪ್ಪಿಕೊಂಡರು. ಒಟ್ಟಿನಲ್ಲಿ ಸಂಗೀತಾ ಅವರ ವಯಸ್ಸಿನ ಬಗ್ಗೆ ಬಿಗ್ಬಾಸ್ನಲ್ಲಿ ಸಾಕಷ್ಟು ಚರ್ಚೆಯಾಯಿತು.
ಸಂಗೀತಾ ಭಟ್ ಕುರಿತು
ಇನ್ನು ನಟಿ ಸಂಗೀತಾ ಭಟ್ ಅವರ ಕುರಿತು ಹೇಳುವುದಾದರೆ, ಸಂಗೀತಾ ಭಟ್ ಸಂಗೀತಾ ಭಟ್ ನಟಿಯಾಗಿ, ಮಾಡೆಲ್ ಆಗಿ ಗುರುತಿಸಿಕೊಂಡಿದ್ದಾರೆ. ತಮಿಳು ಸಿನಿಮಾ ಮೂಲಕ ಸಂಗೀತ ಭಟ್ ಚಿತ್ರರಂಗಕ್ಕೂ ಪದಾರ್ಪಣೆ ಮಾಡಿದ್ದಾರೆ. ಕನ್ನಡದಲ್ಲಿ ಕೆಲವೊಂದು ಸಿನಿಮಾಗಳಲ್ಲಿ ನಟಿಸಿದ್ದ ಸಂಗೀತಾ ಭಟ್ ಸ್ವಲ್ಪ ಕಾಲ ಸಿನಿ ಪಯಣದಿಂದ ದೂರವೇ ಉಳಿದು 2 ವರ್ಷಗಳ ನಂತರ ಮತ್ತೆ ಸಿನಿಮಾಗಳಲ್ಲಿ ನಟಿಸಿದ್ದರು. ಇವರು ತುಂಬಾ ಸುದ್ದಿ ಮಾಡಿದ್ದು, ಮೀ ಟೂ ಅಭಿಯಾನ ಜೋರಾಗಿ ನಡೆಯುತ್ತಿದ್ದ ಸಂದರ್ಭದಲ್ಲಿ. 2018 ರಲ್ಲಿ ನಡೆದ ಮಿ ಟೂ ಅಭಿಯಾನದ ವೇಳೆ ಸಂಗೀತಾ ಭಟ್, ತಾವೂ ಕೂಡಾ ಚಿತ್ರರಂಗದಲ್ಲಿ ಕಿರುಕುಳ ಅನುಭವಿಸಿರುವ ಬಗ್ಗೆ ತಿಳಿಸಿದ್ದರು. ನಟನೆಯಿಂದ ದೂರ ಉಳಿದ ನಂತರ ಸಂಗೀತಾ ಅವರು ಕೆಲವು ದಿನಗಳ ಕಾಲ ಜರ್ಮನಿಯಲ್ಲಿದ್ದರು. ಕಳೆದ ವರ್ಷ ಬಿಡುಗಡೆಯಾದ '48 ಅವರ್ಸ್' ಸಿನಿಮಾ ಅವರ ಕೊನೆಯ ಚಿತ್ರ.


