MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
India Iran Relationship
Karnataka Cabinet Meeting Today
Abhinandan Varthaman
Today's Horoscope in Kannada
Dharmasthala Sangha Employee
Ramanagara Fake Currency Racket
AI Micro Data Centre Chamarajanagar
Belagavi Cantonment Merger
US-Iran Tensions
Vijayapura Airport
Ram Mandir New CEO
Minister Basavaraj Rayareddy
  • Home
  • Entertainment
  • TV Talk
  • ಸದ್ದಿಲ್ಲದೆ ದಾಂಪತ್ಯಕ್ಕೆ ಕಾಲಿಟ್ಟ ನಟಿ ಚೈತ್ರಾ ರಾವ್; ಸಿಂಪಲ್ಲಾಗ್ ಕೌಶಿಕ್ ಮದ್ವೆಯಾದ ಜೋಡಿ ಹಕ್ಕಿಯ ಟೀಚರ್!

ಸದ್ದಿಲ್ಲದೆ ದಾಂಪತ್ಯಕ್ಕೆ ಕಾಲಿಟ್ಟ ನಟಿ ಚೈತ್ರಾ ರಾವ್; ಸಿಂಪಲ್ಲಾಗ್ ಕೌಶಿಕ್ ಮದ್ವೆಯಾದ ಜೋಡಿ ಹಕ್ಕಿಯ ಟೀಚರ್!

'ಜೋಡಿ ಹಕ್ಕಿ' ಧಾರಾವಾಹಿ ಖ್ಯಾತಿಯ ನಟಿ ಚೈತ್ರಾ ರಾವ್, ರಂಗಭೂಮಿ ಕಲಾವಿದ ಕೌಶಿಕ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಯಾವುದೇ ಆಡಂಬರವಿಲ್ಲದೆ, ಕರಾವಳಿ ಸಂಪ್ರದಾಯದಂತೆ ದೇವಾಲಯವೊಂದರಲ್ಲಿ ಕೇವಲ ಆಪ್ತರ ಸಮ್ಮುಖದಲ್ಲಿ ಈ ಜೋಡಿ ಸಪ್ತಪದಿ ತುಳಿದಿದೆ. ಫೋಟೋಗಳು ಇಲ್ಲಿವೆ.

2 Min read
Author : Sathish Kumar KH
Published : Sep 03 2026, 11:27 AM IST
Share this Photo Gallery
  • FB
  • TW
  • Linkdin
  • Whatsapp
18
Image Credit : @Chaithra Rao

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ 'ಜೋಡಿ ಹಕ್ಕಿ' ಮೂಲಕ ನಾಡಿನ ಮನೆಮಾತಾಗಿದ್ದ ಪ್ರತಿಭಾವಂತ ನಟಿ ಚೈತ್ರಾ ರಾವ್ (Chaithra Rao) ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಯಾವುದೇ ಆಡಂಬರ, ಅದ್ಧೂರಿತನವಿಲ್ಲದೆ ಅತ್ಯಂತ ಸರಳವಾಗಿ ರಂಗಭೂಮಿ ಕಲಾವಿದ ಕೌಶಿಕ್ ಅವರ ಕೈಹಿಡಿಯುವ ಮೂಲಕ ಸಪ್ತಪದಿ ತುಳಿದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
28
Image Credit : @ChaithraRao

ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಚೈತ್ರಾ ರಾವ್ ಮತ್ತು ರಂಗಕರ್ಮಿ ಕೌಶಿಕ್ ಜೋಡಿಯ ವಿವಾಹ ಮಹೋತ್ಸವವು ಇತ್ತೀಚೆಗೆ ಕರಾವಳಿ ಸಂಪ್ರದಾಯದಂತೆ ದೇವಾಲಯವೊಂದರಲ್ಲಿ ಅತ್ಯಂತ ಅರ್ಥಪೂರ್ಣವಾಗಿ ನೆರವೇರಿದೆ.

Related Articles

Related image1
ಕಾರಣವಿಲ್ಲದೇ ಸಾಯುವ ಯೋಚನೆ ಬರ್ತಿದೆಯಾ? ಹಾಗಿದ್ರೆ ಈ ಶಾರ್ಟ್ ಮೂವಿ ನೋಡಿ!
Related image2
ಹೌದು, 'ಆ ನಟಿ' ಮದುವೆ ಆದಾಗ ಮಾತ್ರ ಕ್ರೇಜಿಸ್ಟಾರ್ ರವಿಚಂದ್ರನ್ ಹಾರ್ಟ್ ಬ್ರೇಕ್ ಆಗಿತ್ತು!
38
Image Credit : @Chaithra Rao

ಆಡಂಬರವಿಲ್ಲದ ಸರಳ ಮದುವೆ: ಕರಾವಳಿ ಶೈಲಿಯ ಸಂಪ್ರದಾಯ

ಸಾಮಾನ್ಯವಾಗಿ ಸೆಲೆಬ್ರಿಟಿಗಳ ಮದುವೆ ಎಂದರೆ ಗ್ರ್ಯಾಂಡ್ ಸೆಟ್, ಸಾವಿರಾರು ಅತಿಥಿಗಳು, ಕಣ್ಮನ ಸೆಳೆಯುವ ಡೆಕೋರೇಷನ್ ಇರುತ್ತದೆ. ಆದರೆ, ಈ ಕಲಾವಿದ ಜೋಡಿ ಮಾತ್ರ ಯಾವುದೇ ಆಡಂಬರಕ್ಕೆ ಹೋಗದೆ, ಕೇವಲ ಎರಡೂ ಕುಟುಂಬದ ಹಿರಿಯರು ಮತ್ತು ಅತ್ಯಂತ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಮದುವೆಯಾಗಿದ್ದಾರೆ.

48
Image Credit : @Chaithra Rao

ತಮ್ಮ ಮದುವೆಯ ಅಪರೂಪದ ಹಾಗೂ ನಯನಮನೋಹರ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ನವದಂಪತಿ, ಭಾವನಾತ್ಮಕ ಸಾಲುಗಳನ್ನು ಬರೆದುಕೊಂಡಿದ್ದಾರೆ.

58
Image Credit : @Chaithra Rao

'ಸರಳ, ಪವಿತ್ರ ಮತ್ತು ಪ್ರಶಾಂತ... ಕರಾವಳಿಯ ಸುಂದರ ಸಂಪ್ರದಾಯ ಹಾಗೂ ಪ್ರೀತಿಪಾತ್ರರ ಹಾರೈಕೆಗಳ ನಡುವೆ, ಚೈತ್ರಾ ಮತ್ತು ಕೌಶಿಕ್ ದೇವಾಲಯದ ಆವರಣದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕ್ಯಾಮೆರಾ, ತೆರೆಯ ಮೇಲಿನ ಲೈಮ್‌ಲೈಟ್ ಬದಿಗೊತ್ತಿ, ಅತ್ಯಂತ ನೈಜ ಹಾಗೂ ಮನದಾಳದ ಕ್ಷಣಗಳೊಂದಿಗೆ ಹೊಸ ಅಧ್ಯಾಯ ಆರಂಭವಾಗಿದೆ' ಎಂದು ಮದುವೆಯ ಕ್ಷಣಗಳನ್ನು ವರ್ಣಿಸಿದ್ದಾರೆ.

68
Image Credit : @Chaithra Rao

'ಜಾನಕಿ ಟೀಚರ್' ಪಾತ್ರದಿಂದ ವಿಲನ್ ಆಗುವವರೆಗೆ...

ಚೈತ್ರಾ ರಾವ್ ಕನ್ನಡ ಕಿರುತೆರೆಯ ಬಹುಮುಖ ಪ್ರತಿಭೆ. ಜೀ ಕನ್ನಡದ ಸೂಪರ್ ಹಿಟ್ ಧಾರಾವಾಹಿ 'ಜೋಡಿ ಹಕ್ಕಿ'ಯಲ್ಲಿ 'ಜಾನಕಿ ಟೀಚರ್' ಆಗಿ ಇವರು ನಿಭಾಯಿಸಿದ್ದ ಮುಗ್ಧ ಪಾತ್ರ ಪ್ರತಿಯೊಬ್ಬ ಕನ್ನಡಿಗರ ಹೃದಯ ಗೆದ್ದಿತ್ತು.

78
Image Credit : @Chaithra Rao

ಈ ಧಾರಾವಾಹಿ ಮುಗಿದ ನಂತರ ನಟನೆಯಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದ ಚೈತ್ರಾ, ಕೆಲವು ಸ್ಯಾಂಡಲ್‌ವುಡ್ ಸಿನಿಮಾಗಳಲ್ಲೂ ಅಭಿನಯಿಸಿದ್ದರು. ಬಳಿಕ ಸ್ಟಾರ್ ವಾಹಿನಿಯ 'ಭಾರ್ಗವಿ ಎಲ್‌ಎಲ್‌ಬಿ' ಧಾರಾವಾಹಿಯ ಮೂಲಕ ಮತ್ತೆ ಕಿರುತೆರೆಗೆ ರೀ-ಎಂಟ್ರಿ ಕೊಟ್ಟಿದ್ದ ಅವರು, ಸದಾ ಪಾಸಿಟಿವ್ ಪಾತ್ರಗಳಲ್ಲಿ ಮಿಂಚುತ್ತಿದ್ದ ತಮ್ಮ ಇಮೇಜ್ ಬದಲಾಯಿಸಿ, ಖಳನಾಯಕಿಯಾಗಿ (ವಿಲನ್) ಪ್ರೇಕ್ಷಕರನ್ನು ಬೆರಗುಗೊಳಿಸಿದ್ದರು.

88
Image Credit : @Chaithra Rao

ಶುಭಾಶಯಗಳ ಮಹಾಪೂರ

ಇತ್ತ ನಟ ಕೌಶಿಕ್ ಕೂಡ ರಂಗಭೂಮಿಯಲ್ಲಿ ಸಕ್ರಿಯರಾಗಿರುವ ಪ್ರತಿಭಾವಂತ ಕಲಾವಿದರಾಗಿದ್ದಾರೆ. ಇಬ್ಬರೂ ಕಲಾ ಹಿನ್ನೆಲೆಯವರೇ ಆಗಿರುವುದರಿಂದ ಈ ಜೋಡಿಗೆ ಕಿರುತೆರೆಯ ತಾರೆಯರು, ಸಹ ಕಲಾವಿದರು ಹಾಗೂ ಅಪಾರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶುಭ ಹಾರೈಸಿ, 'ನಿಮ್ಮ ಹೊಸ ಜೀವನ ನೂರು ಕಾಲ ಸುಖ-ಶಾಂತಿಯಿಂದ ಕೂಡಿರಲಿ' ಎಂದು ಹರಸುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ನಟಿ
ಸೀರಿಯಲ್ ಶೂಟಿಂಗ್
ಮನರಂಜನಾ ಸುದ್ದಿ
ಟಿವಿ ಶೋ

Latest Videos
Recommended Stories
Recommended image1
ಅಪರ್ಣಾ ಮೆಟ್ರೋ ವಾಯ್ಸ್ ರೆಕಾರ್ಡಿಂಗ್ ಆಗಿದ್ದು ಯಾವಾಗ? ಪತಿ ನಾಗರಾಜ್ ವಸ್ತಾರೆ ಬಿಚ್ಚಿಟ್ಟ ಅಚ್ಚರಿಯ ಸತ್ಯ
Recommended image2
ಪತಿಯ ಜೊತೆ ವಿದೇಶ ಸುತ್ತಾಟ: ವಾರ್ಷಿಕೋತ್ಸವ ಸಂಭ್ರಮದಲ್ಲಿ Anchor Anushree- ಕ್ಯೂಟ್​ ಫೋಟೋಸ್​​ ವೈರಲ್​
Recommended image3
‘ನಂದಗೋಕುಲ’ ಧಾರಾವಾಹಿ ಕೇಶವ ಪಾತ್ರದ ಮೂಲಕ ಎಂಟ್ರಿ ಕೊಡ್ತಿದ್ದಾರೆ ‘ಕನ್ನಡತಿ’ ನಟ
Related Stories
Recommended image1
ಕಾರಣವಿಲ್ಲದೇ ಸಾಯುವ ಯೋಚನೆ ಬರ್ತಿದೆಯಾ? ಹಾಗಿದ್ರೆ ಈ ಶಾರ್ಟ್ ಮೂವಿ ನೋಡಿ!
Recommended image2
ಹೌದು, 'ಆ ನಟಿ' ಮದುವೆ ಆದಾಗ ಮಾತ್ರ ಕ್ರೇಜಿಸ್ಟಾರ್ ರವಿಚಂದ್ರನ್ ಹಾರ್ಟ್ ಬ್ರೇಕ್ ಆಗಿತ್ತು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved