ಪ್ರಯಾಣಿಕರೇ ಗಮನಿಸಿ: ಅಕ್ಟೋಬರ್ 1ರಿಂದ ರೈಲ್ವೆ ಟಿಕೆಟ್ ಬುಕಿಂಗ್‌ನಲ್ಲಿ ಮಹತ್ತರ ಬದಲಾವಣೆ
ಭಾರತೀಯ ರೈಲ್ವೆಯು ಅಕ್ಟೋಬರ್ 1 ರಿಂದ ಟಿಕೆಟ್ ಬುಕಿಂಗ್ ನಿಯಮಗಳಲ್ಲಿ ಮಹತ್ವದ ಬದಲಾವಣೆ ತಂದಿದೆ. ಈ ಕ್ರಮವು ವಂಚನೆಯನ್ನು ತಡೆಯಲು ಮತ್ತು ಪಾರದರ್ಶಕತೆಯನ್ನು ಹೆಚ್ಚಿಸಲು ಜಾರಿಗೆ ತರಲಾಗಿದೆ.

ಭಾರತೀಯ ರೈಲ್ವೆ
ಭಾರತದಲ್ಲಿ ಲಕ್ಷಾಂತರ ಜನರು ಇಂಡಿಯನ್ ರೈಲ್ವೇಸ್‌ನಲ್ಲಿ ಪ್ರಯಾಣಿಸುತ್ತಿದ್ದಾರೆ. ಪ್ರಯಾಣಿಕರ ಅನುಕೂಲಕ್ಕಾಗಿ ಭಾರತೀಯ ರೈಲ್ವೆ ತನ್ನ ಸೇವೆಗಳ ಗುಣಮಟ್ಟವನ್ನು ಸುಧಾರಿಸುತ್ತಾ ಬರುತ್ತಿದೆ. ಅಕ್ಟೋಬರ್ 1ರಿಂದ ರೈಲ್ವೆ ಟಿಕೆಟ್ ಬುಕಿಂಗ್‌ನಲ್ಲಿ ಮಹತ್ತರ ಬದಲಾವಣೆ ತಂದಿದೆ. ಹಾಗಾಗಿ ರೈಲ್ವೆ ಪ್ರಯಾಣಿಕರು ಈ ಪ್ರಮುಖ ಬದಲಾವಣೆ ತಿಳಿದುಕೊಳ್ಳುವುದು ಅಗತ್ಯವಾಗಿದೆ.
IRCTC ರೈಲ್ವೆ ಟಿಕೆಟ್
ಅಕ್ಟೋಬರ್ 1 ರಿಂದ, IRCTC ರೈಲ್ವೆ ಟಿಕೆಟ್‌ಗಳನ್ನು ಬುಕ್ ಮಾಡುವ ನಿಯಮಗಳನ್ನು ಬದಲಾಯಿಸಿದೆ. ಈ ಹೊಸ ನಿಯಮಗಳ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳುವುದು ಮುಖ್ಯವಾಗಿದೆ. ಟಿಕೆಟ್ ಬುಕ್ಕಿಂಗ್‌ನಲ್ಲಾಗುವ ವಂಚನೆಯನ್ನು ತಡೆಯಲು ಈ ನಿಯಮ ಜಾರಿಗೆ ತರಲಾಗುತ್ತಿದೆ.
ಆಧಾರ್ ಕಾರ್ಡ್
ಈಗಾಗಲೇ ತತ್ಕಾಲ್ ಟಿಕೆಟ್ ಬುಕಿಂಗ್ ಮಾಡಲು ಪ್ರಯಾಣಿಕರು ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಲಿಂಕ್ ಮಾಡಲು ಸೂಚಿಸಲಾಗಿದೆ. ಇದೀಗ ಅಕ್ಟೋಬರ್ 1 ರಿಂದ ಆಧಾರ್ ಕಾರ್ಡ್ ಇಲ್ಲದೆ ಜನರಲ್ ಟಿಕೆಟ್‌ಗಳನ್ನು ಬುಕ್ ಮಾಡಲು ಸಾಧ್ಯವಾಗುವುದಿಲ್ಲ. IRCTC ವೆಬ್‌ಸೈಟ್ ಅಥವಾ ಅಪ್ಲಿಕೇಶನ್‌ನಿಂದ ಆನ್‌ಲೈನ್‌ನಲ್ಲಿ ಸಾಮಾನ್ಯ ಟಿಕೆಟ್‌ಗಳನ್ನು ಬುಕ್ ಮಾಡುತ್ತಿದ್ರೂ ಆಧಾರ್ ಸಂಖ್ಯೆ ಲಿಂಕ್ ಮಾಡಿರಬೇಕಾಗುತ್ತದೆ. ಈ ಹೊಸ ನಿಯಮದಿಂದ ಜನರಲ್ ಟಿಕೆಟ್‌ಗಳಿಗೂ ಆಧಾರ್ ಪರಿಶೀಲನೆ ಬಹಳ ಮುಖ್ಯವಾಗಲಿದೆ.
ಇದನ್ನೂ ಓದಿ: ಅರ್ಜೆಂಟ್‌ನಲ್ಲಿ ಟಿಕೆಟ್ ಇಲ್ಲದೇ Indian Railways ಪ್ರಯಾಣಿಸಬಹುದಾ? ನಿಯಮ ಏನು ಹೇಳುತ್ತೆ?
ಆಧಾರ್ ಸಂಖ್ಯೆ ಲಿಂಕ್ ಮಾಡೋದು ಹೇಗೆ?
- IRCTC ವೆಬ್‌ಸೈಟ್‌ಗೆ ಯುಸರ್ ನೇಮ್ ಮತ್ತು ಪಾಸ್‌ವರ್ಡ್ ಹಾಕಿ ಲಾಗಿನ್ ಆಗಬೇಕು.
- ನಂತರ ಮೈ ಅಕೌಂಟ್ ಮೇಲೆ ಕ್ಲಿಕ್ ಮಾಡಿ. ಆಧಾರ್ KYC' ಲಿಂಕ್ ಮಾಡಲು ಕ್ಲಿಕ್ ಮಾಡಿ.
- ಅಲ್ಲಿರುವ ಸ್ಥಳದಲ್ಲಿ ಆಧಾರ್ ಸಂಖ್ಯೆಯನ್ನು ನಮೂದಿಸಿ, Send OTP ಮೇಲೆ ಕ್ಲಿಕ್ಕಿಸಿ.
- ಈಗ ನಿಮ್ಮ ಮೊಬೈಲ್‌ಗೆ ಬಂದಿರೋ OTPಯನ್ನು ವೆಬ್‌ಸೈಟ್ ನಮೂಸಿಬೇಕು.
- ಈಗ IRCTC ಖಾತೆ ಆಧಾರ್‌ನೊಂದಿಗೆ ಲಿಂಕ್ ಮಾಡಲಾಗಿದೆ ಎಂಬ ಮೆಸೇಜ್, ನಿಮ್ಮ ಸ್ಕ್ರೀನ್ ಮೇಲೆ ಕಾಣಿಸುತ್ತದೆ
ಯಾಕೆ ಈ ನಿಯಮ?
ಅನಾಮಧೇಯ ಖಾತೆಗಳ ಮೂಲಕ ಟಿಕೆಟ್ ಬುಕ್ ಮಾಡಿ, ಕೃತಕ ಬಿಕ್ಕಟ್ಟು ಸೃಷ್ಟಿ ಮಾಡುವ ಆರೋಪ ಕೇಳಿ ಬಂದಿತ್ತು. ಸಾರ್ವಜನಿಕರಿಗೆ ಪಾರದರ್ಶಕವಾದ ಸೇವೆಯನ್ನು ಒದಗಿಸಲು ಆಧಾರ್ ಲಿಂಕ್ ಪ್ರಕ್ರಿಯೆ ತೆಗೆದುಕೊಂಡು ಬರಲಾಗಿದೆ. ಇನ್ನು ಕೌಂಟರ್‌ನಲ್ಲಿ ಟಿಕೆಟ್ ಬುಕ್ ಮಾಡುವವರಿಗೆ ನಿಯಮಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ. ಅವರು ಮೊದಲಿನಂತೆ ಟಿಕೆಟ್ ಬುಕ್ ಮಾಡಬಹುದು
ಇದನ್ನೂ ಓದಿ: Viral Video: ಎಸಿ ಕೋಚ್‌ನಲ್ಲಿ ಧಮ್ ಎಳೆದ ಲೇಡಿ, ಪ್ರಶ್ನೆ ಮಾಡಿದ್ದಕ್ಕೆ ಪ್ರಯಾಣಿಕರಿಗೆ ಆವಾಜ್ ಹಾಕಿದ ಯುವತಿ!