ಹಿರಿಯ ನಾಗರಿಕರು, 45+ ಮಹಿಳೆಯರಿಗೆ ಗುಡ್ ನ್ಯೂಸ್ ಕೊಟ್ಟ ರೈಲ್ವೆ; ಇಲ್ಲಿದೆ ಸೂಪರ್ ಅಪ್‌ಡೇಟ್
ಭಾರತೀಯ ರೈಲ್ವೆಯ ಹೊಸ ನಿಯಮದ ಪ್ರಕಾರ, ಹಿರಿಯ ನಾಗರಿಕರು, 45 ವರ್ಷ ಮೇಲ್ಪಟ್ಟ ಮಹಿಳೆಯರು ಮತ್ತು ಗರ್ಭಿಣಿ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ. ಈ ಬದಲಾವಣೆ ಪ್ರಯಾಣವನ್ನು ಸುಲಭಗೊಳಿಸುತ್ತದೆ. ಏನಿದು ಸಿಹಿ ಸುದ್ದಿ ಗೊತ್ತಾ?

ಭಾರತೀಯ ರೈಲ್ವೆ
ಭಾರತದಾದ್ಯಂತ ಪ್ರತಿದಿನ ಕೋಟ್ಯಂತರ ಜನರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ಪ್ರಯಾಣಿಕರ ಪ್ರಯಾಣವನ್ನು ಹೆಚ್ಚು ಆರಾಮದಾಯಕವಾಗಿಸಲು ರೈಲ್ವೆ ಹಲವು ಬದಲಾವಣೆಗಳನ್ನು ಮಾಡುತ್ತಿದೆ. ಇದರಲ್ಲಿ ಲೋವರ್ ಬರ್ತ್ ಹಂಚಿಕೆಯನ್ನು ಈಗ ಸ್ವಯಂಚಾಲಿತಗೊಳಿಸಲಾಗಿದೆ. ಮೊದಲು ಟಿಕೆಟ್ ಬುಕ್ ಮಾಡುವಾಗ ಲೋಯರ್ ಬರ್ತ್ ಆಯ್ಕೆ ಮಾಡಲು ಮರೆತರೆ ಪ್ರಯಾಣ ಕಷ್ಟವಾಗುತ್ತಿತ್ತು.
ರೈಲ್ವೆಯ ಹೊಸ ನಿಯಮ
ರೈಲ್ವೆಯ ಹೊಸ ನಿಯಮದ ಪ್ರಕಾರ, ಹಿರಿಯ ನಾಗರಿಕರು, 45 ವರ್ಷ ಮೇಲ್ಪಟ್ಟ ಮಹಿಳೆಯರು ಮತ್ತು ಗರ್ಭಿಣಿಯರಿಗೆ ಲೋವರ್ ಬರ್ತ್‌ಗಳನ್ನು ಸ್ವಯಂಚಾಲಿತವಾಗಿ ನೀಡಲಾಗುತ್ತದೆ. ಖಾಲಿ ಲೋಯರ್ ಬರ್ತ್ ಇದ್ದರೆ, ಕಂಪ್ಯೂಟರ್ ಸಿಸ್ಟಮ್ ತಕ್ಷಣವೇ ಅವರಿಗೆ ಆದ್ಯತೆಯ ಮೇಲೆ ಸೀಟು ಹಂಚಿಕೆ ಮಾಡುತ್ತದೆ. ಇದರಿಂದ ಟಿಟಿಇ ಜೊತೆ ಮಾತನಾಡಿ ಸೀಟು ಬದಲಿಸಿಕೊಳ್ಳುವ ಅಗತ್ಯ ಕಡಿಮೆಯಾಗುತ್ತದೆ.
ಆಸನ
ಪ್ರತಿ ರೈಲು ಕೋಚ್‌ನಲ್ಲಿ ಕೆಲವು ಲೋವರ್ ಬರ್ತ್‌ಗಳನ್ನು ಮೊದಲೇ ಮೀಸಲಿಡಲಾಗಿದೆ. ಸ್ಲೀಪರ್ ಕೋಚ್‌ನಲ್ಲಿ 6-7, ಥರ್ಡ್ ಎಸಿಯಲ್ಲಿ 4-5 ಮತ್ತು ಸೆಕೆಂಡ್ ಎಸಿಯಲ್ಲಿ 3-4 ಲೋವರ್ ಬರ್ತ್‌ಗಳನ್ನು ಈ ವರ್ಗದವರಿಗೆ ಮೀಸಲಿಡಲಾಗಿದೆ. ದೈಹಿಕ ವಿಕಲಚೇತನ ಪ್ರಯಾಣಿಕರಿಗೆ ರೈಲ್ವೆಯಲ್ಲಿ ಈಗಾಗಲೇ ಪ್ರತ್ಯೇಕ ಕೋಟಾ ಇದೆ.
ಲೋವರ್ ಬರ್ತ್
ಒಟ್ಟಾರೆಯಾಗಿ, ಲೋವರ್ ಬರ್ತ್ ಅಗತ್ಯವಿರುವ ಪ್ರಯಾಣಿಕರಿಗೆ ರೈಲ್ವೆಯ ಈ ಹೊಸ ಸ್ವಯಂಚಾಲಿತ ಆದ್ಯತೆಯ ವ್ಯವಸ್ಥೆಯು ಪ್ರಯಾಣವನ್ನು ಸುಲಭ ಮತ್ತು ಆರಾಮದಾಯಕವಾಗಿಸುತ್ತದೆ. ಇನ್ನು ಮುಂದೆ ಹಿರಿಯ ನಾಗರಿಕರು, ಮಹಿಳೆಯರು ಮತ್ತು ಗರ್ಭಿಣಿಯರಿಗೆ ಲೋಯರ್ ಬರ್ತ್ ಸಿಗದ ಸಮಸ್ಯೆ ಬಹುತೇಕ ಕಡಿಮೆಯಾಗುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

