ಅರ್ಜೆಂಟ್‌ನಲ್ಲಿ ಟಿಕೆಟ್ ಇಲ್ಲದೇ Indian Railways ಪ್ರಯಾಣಿಸಬಹುದಾ? ನಿಯಮ ಏನು ಹೇಳುತ್ತೆ?
ತುರ್ತು ಪ್ರಯಾಣದ ಅವಶ್ಯಕತೆ ಬಂದಾಗ, ಟಿಕೆಟ್ ಇಲ್ಲದಿದ್ದರೆ ಏನು ಮಾಡಬೇಕು? ಭಾರತೀಯ ರೈಲ್ವೆ ನಿಯಮ ಏನು ಹೇಳುತ್ತೆ? travel by train without a ticket What are the Indian Railways rules

ತುರ್ತು ಪ್ರಯಾಣ
ಯಾವಾಗ ಅರ್ಜೆನ್ಸಿ ಬರುತ್ತೆ ಅಂತ ಹೇಳೋಕಾಗಲ್ಲ. ಹಾಸ್ಪಿಟಲ್‌ಗೆ ಹೋಗಬೇಕಾದ್ರೆ, ಮನೇಲಿ ಏನಾದ್ರೂ ಅರ್ಜೆಂಟ್ ಕೆಲಸ ಇದ್ರೆ, ಇಲ್ಲ ಏನಾದ್ರೂ ಮುಖ್ಯ ಕೆಲಸಕ್ಕೆ ತಕ್ಷಣ ಹೋಗಬೇಕಾದ್ರೆ ಟಿಕೆಟ್ ತಗೊಳ್ಳೋಕೆ ಟೈಮ್ ಇರಲ್ಲ. ಆನ್‌ಲೈನ್‌ನಲ್ಲೂ ಟಿಕೆಟ್ ಸಿಗದಿದ್ರೆ ಏನ್ ಮಾಡೋದು? ಇಂತಹ ಸಮಯದಲ್ಲಿ ಟಿಕೆಟ್ ಇಲ್ಲದೇ ಪ್ರಯಾಣಿಸಬಹುದೇ? ಈ ಬಗ್ಗೆ ಭಾರತೀಯ ರೈಲ್ವೆ ನಿಯಮಗಳು ಏನು ಹೇಳುತ್ತವೆ ಎಂಬುದನ್ನು ನೋಡೋಣ ಬನ್ನಿ.
ಭಾರತೀಯ ರೈಲ್ವೆ
ಇಂತಹ ತುರ್ತು ಪರಿಸ್ಥಿತಿಗಾಗಿ ಭಾರತೀಯ ರೈಲ್ವೆ ಒಂದು ಸ್ಪೆಷಲ್ ರೂಲ್ ಮಾಡಿದೆ. ಪ್ಲಾಟ್‌ಫಾರ್ಮ್ ಟಿಕೆಟ್ ತಗೊಂಡು ರೈಲಲ್ಲಿ ಹತ್ತಬಹುದು. ಆದ್ರೆ ಇದನ್ನ ತಪ್ಪಾಗಿ ಉಪಯೋಗಿಸಿದ್ರೆ ಫೈನ್ ಕಟ್ಟಬೇಕಾಗುತ್ತದೆ. ಹಾಗಾಗಿ ನಿಜವಾಗ್ಲೂ ಅರ್ಜೆನ್ಸಿ ಇದ್ರೆ ಮಾತ್ರ ಈ ಫೆಸಿಲಿಟಿ ಉಪಯೋಗಿಸಿಕೊಳ್ಳಬಹುದು. ಪ್ಲಾಟ್‌ಫಾರಂ ಟಿಕೆಟ್ ಪ್ರತ್ಯೇಕವಾಗಿರೋದರಿಂದ ಟಿಕೆಟ್ ಬೇಗ ಸಿಗುತ್ತದೆ.
ಪ್ಲಾಟ್‌ಫಾರಂ ಟಿಕೆಟ್
ಟಿಕೆಟ್ ತಗೊಳ್ಳೋಕೆ ಟೈಮ್ ಇಲ್ದಿದ್ರೆ, ಪ್ಲಾಟ್‌ಫಾರ್ಮ್ ಟಿಕೆಟ್ ತಗೊಂಡು ರೈಲಲ್ಲಿ ಹತ್ತಿ. ಆಮೇಲೆ ಟಿಟಿಇ ಹತ್ರ ಹೋಗಿ ನಿಮ್ಮ ಪ್ರಾಬ್ಲಮ್ ಹೇಳಿ. ಅವರು ನಿಮಗೆ ಟಿಕೆಟ್ ಕೊಡ್ತಾರೆ. ಆದ್ರೆ ಫುಲ್ ಚಾರ್ಜ್ ಜೊತೆಗೆ ಫೈನ್ ಕೂಡ ಕಟ್ಟಬೇಕಾಗುತ್ತದೆ. ಟಿಕೆಟ್ ಇಲ್ಲದೇ ಪ್ರಯಾಣ ಮಾಡಿದ್ರೆ ದಂಡ ಪಾವತಿಸಬೇಕಾಗುತ್ತದೆ. ಜನರಲ್ ಕೋಚ್ ಟಿಕೆಟ್ ತೆಗೆದುಕೊಡು ಸ್ಲೀಪರ್ ಅಥವಾ ಎಸಿ ಕೋಚ್ ಪ್ರಯಾಣ ಮಾಡಿದರೂ ನೀವು ದಂಡ ಸಹಿತ ಟಿಕೆಟ್ ದರ ಪಾವತಿಸಬೇಕಾಗುತ್ತದೆ. ಆದ್ದರಿಂದ ಪ್ಲಾಟ್‌ಫಾರಂ ಟಿಕೆಟ್ ತೆಗೆದುಕೊಳ್ಳುವುದು ಉತ್ತಮವಾಗಿದೆ.
ಜನರಲ್ ಟಿಕೆಟ್
ಜನರಲ್ ಟಿಕೆಟ್ ತಗೊಂಡು ಹೋಗೋದು ಸೇಫ್. ಜಾಸ್ತಿ ಜನ ಇರ್ತಾರೆ ಅಷ್ಟೇ. ಲಾಂಗ್ ಜರ್ನಿಗೆ ಕಷ್ಟ ಆದ್ರೂ, ಅರ್ಜೆಂಟ್ ಟ್ರಿಪ್‌ಗೆ ಜನರಲ್ ಟಿಕೆಟ್ ಬೆಸ್ಟ್ ಆಯ್ಕೆಯಾಗಿರುತ್ತದೆ. ನಿಮಗೆ ಎಲ್ಲಾ ಸಮಯದಲ್ಲಿಯೂ ಜನರಲ್ ಟಿಕೆಟ್ ಸಿಗುತ್ತದೆ. ಎಲ್ಲಾ ರೈಲಲ್ಲೂ ಜನರಲ್ ಕಂಪಾರ್ಟ್‌ಮೆಂಟ್ ಇರುತ್ತೆ. ರಿಸರ್ವೇಷನ್ ಇಲ್ಲದೇ ಹೋಗ್ಬಹುದು. ಆದ್ರೆ ಜನ ಜಾಸ್ತಿ ಇರ್ತಾರೆ. ಲಾಂಗ್ ಜರ್ನಿಗೆ ಕಷ್ಟ ಆದ್ರೂ, ಸಡನ್ ಟ್ರಿಪ್‌ಗೆ ಜನರಲ್ ಟಿಕೆಟ್ ಬೆಸ್ಟ್.
ಇದನ್ನೂ ಓದಿ: ರೈಲು ಪ್ರಯಾಣದ 45 ಪೈಸೆ ವಿಮೆಯ ಲಾಭಗಳು; ಕಡಿಮೆ ಹಣಕ್ಕೆ ದೊಡ್ಡ ರಕ್ಷಣೆ
ದಂಡ
ಕೆಲವೊಮ್ಮೆ ದಂಡ ಪಾವತಿಸಲು ನೀವು ಸಿದ್ದರಿದ್ರೂ ರೈಲಿನಲ್ಲಿ ಕನ್ಫರ್ಮ್ ಟಿಕೆಟ್ ಸಿಗೋದು ಅನುಮಾನ. ಭಾರತೀಯ ರೈಲಿನ ನಿಯಮಗಳ ಪ್ರಕಾರ, ವೇಟಿಂಗ್ ಟಿಕೆಟ್ ಹಿಡಿದುಕೊಂಡು ಸ್ಲೀಪರ್ ಕೋಚ್‌ನಲ್ಲಿ ಪ್ರಯಾಣಿಸುವಂತಿಲ್ಲ.
ಇದನ್ನೂ ಓದಿ: ರೂಮ್ ಸಿಗದಿದ್ದಕ್ಕೆ ರೈಲನ್ನೇ Oyo ಮಾಡ್ಕೊಂಡ್ರು; ಎಲ್ಲರ ಮುಂದೆಯೇ ಜೋಡಿಯ ಅಸಹ್ಯ ಕೆಲಸ