- Home
- Entertainment
- Sandalwood
- 'ಸ್ಯಾಂಡಲ್‌ವುಡ್ ಶೈನಿಂಗ್' ಸೆಷನ್‌ನಲ್ಲಿ ಸಪ್ತಮಿ ಗೌಡ ಹೇಳಿದ್ದೇನು? 'ಪ್ಯಾನ್ ಇಂಡಿಯಾ ಸಿನಿಮಾ' ಸೀಕ್ರೆಟ್ ತೆರೆದಿಟ್ಟ ನಟಿ!
'ಸ್ಯಾಂಡಲ್‌ವುಡ್ ಶೈನಿಂಗ್' ಸೆಷನ್‌ನಲ್ಲಿ ಸಪ್ತಮಿ ಗೌಡ ಹೇಳಿದ್ದೇನು? 'ಪ್ಯಾನ್ ಇಂಡಿಯಾ ಸಿನಿಮಾ' ಸೀಕ್ರೆಟ್ ತೆರೆದಿಟ್ಟ ನಟಿ!
"ಸಿನಿಮಾ ಎಂಬುದು ಕೇವಲ ಭಾಷೆಯಲ್ಲ, ಅದು ಸಂಸ್ಕೃತಿಯ ಪ್ರತಿಬಿಂಬ. 'ಕಾಂತಾರ' ಸಿನಿಮಾ ಗೆದ್ದಿದ್ದು ಅದರ ಮಣ್ಣಿನ ವಾಸನೆಯಿಂದ. ಶ್ರೀಮಂತ ಮತ್ತು ಬಡವನ ನಡುವಿನ ಸಂಘರ್ಷ ಜಗತ್ತಿನ ಯಾವುದೇ ಮೂಲೆಯ ಪ್ರೇಕ್ಷಕನಿಗೂ ಅರ್ಥವಾಗುತ್ತದೆ.

Sapthami Gowda, talk in Sandalwood Shining of India Today Karnataka Roundtable- ಸ್ಯಾಂಡಲ್‌ವುಡ್ ‘ಲೀಲಾ’ ಸಪ್ತಮಿ ಗೌಡ ಸಿಡಿಸಿದ ಸತ್ಯದ ಪಟಾಕಿ: ಪ್ಯಾನ್-ಇಂಡಿಯಾ ಕ್ರೇಜ್ ಮತ್ತು ಸಂಭಾವನೆಯ ಗುಟ್ಟು ಬಯಲು!
ಬೆಳ್ಳಿತೆರೆಯ ಮೇಲೆ ‘ಲೀಲಾ’ ಆಗಿ ಬಂದು ಇಡೀ ಭಾರತದಾದ್ಯಂತ ಮೋಡಿ ಮಾಡಿದ ಬೆಡಗಿ ಸಪ್ತಮಿ ಗೌಡ ಈಗ ಕೇವಲ ನಟಿಯಷ್ಟೇ ಅಲ್ಲ, ಸ್ಯಾಂಡಲ್‌ವುಡ್‌ನ ಪ್ರಬಲ ಧ್ವನಿಯಾಗಿಯೂ ಹೊರಹೊಮ್ಮುತ್ತಿದ್ದಾರೆ.
ಇತ್ತೀಚೆಗೆ ನಡೆದ 'ಇಂಡಿಯಾ ಟುಡೇ ಕರ್ನಾಟಕ ರೌಂಡ್‌ಟೇಬಲ್'ನ 'ಸ್ಯಾಂಡಲ್‌ವುಡ್ ಶೈನಿಂಗ್' ಸಂವಾದದಲ್ಲಿ ಭಾಗವಹಿಸಿದ್ದ ಸಪ್ತಮಿ, ಸಿನಿಮಾ ರಂಗದ ಒಳಸುಳಿಗಳನ್ನು ಬಿಚ್ಚಿಟ್ಟ ರೀತಿ ನಿಜಕ್ಕೂ ಬೆರಗುಗೊಳಿಸುವಂತಿತ್ತು. ಸಹ-ನಟಿ ಆಶಿಕಾ ರಂಗನಾಥ್ ಅವರೊಂದಿಗೆ ವೇದಿಕೆ ಹಂಚಿಕೊಂಡ ಸಪ್ತಮಿ, ಯಾವುದೇ ಮುಲಾಜಿಲ್ಲದೆ ಸಿನಿಮಾ ಇಂಡಸ್ಟ್ರಿಯ ಕಹಿ ಸತ್ಯಗಳನ್ನು ‘ಧಮಾಕಾ’ ಶೈಲಿಯಲ್ಲಿ ವಿವರಿಸಿದರು.
ಬರೀ ಡಬ್ಬಿಂಗ್ ಮಾಡಿದ್ರೆ 'ಪ್ಯಾನ್-ಇಂಡಿಯಾ' ಆಗಲ್ಲ ಗುರು!
ಇತ್ತೀಚಿನ ದಿನಗಳಲ್ಲಿ ಸಣ್ಣ ಬಜೆಟ್‌ನಿಂದ ದೊಡ್ಡ ಬಜೆಟ್ ಸಿನಿಮಾಗಳವರೆಗೆ ಎಲ್ಲರೂ ‘ಪ್ಯಾನ್-ಇಂಡಿಯಾ’ ಎಂಬ ಹಣೆಪಟ್ಟಿ ಹಚ್ಚಿಕೊಳ್ಳುತ್ತಿದ್ದಾರೆ. ಆದರೆ, ಸಪ್ತಮಿ ಇದಕ್ಕೆ ಹೊಸ ವ್ಯಾಖ್ಯಾನ ನೀಡಿದ್ದಾರೆ. "ಒಂದು ಸಿನಿಮಾವನ್ನು ನಾಲ್ಕು ಭಾಷೆಗೆ ಡಬ್ಬಿಂಗ್ ಮಾಡಿ ಪ್ರಚಾರ ಮಾಡಿದ ತಕ್ಷಣ ಅದು ಪ್ಯಾನ್-ಇಂಡಿಯಾ ಆಗುವುದಿಲ್ಲ" ಎಂದು ಅವರು ಖಡಕ್ ಆಗಿ ಹೇಳಿದರು.
"ಸಿನಿಮಾ ಎಂಬುದು ಕೇವಲ ಭಾಷೆಯಲ್ಲ, ಅದು ಸಂಸ್ಕೃತಿಯ ಪ್ರತಿಬಿಂಬ. 'ಕಾಂತಾರ' ಸಿನಿಮಾ ಗೆದ್ದಿದ್ದು ಅದರ ಮಣ್ಣಿನ ವಾಸನೆಯಿಂದ. ಶ್ರೀಮಂತ ಮತ್ತು ಬಡವನ ನಡುವಿನ ಸಂಘರ್ಷ ಜಗತ್ತಿನ ಯಾವುದೇ ಮೂಲೆಯ ಪ್ರೇಕ್ಷಕನಿಗೂ ಅರ್ಥವಾಗುತ್ತದೆ. ಇಂತಹ ಕಥೆಗಳಿದ್ದಾಗ ಸಿನಿಮಾ ತನ್ನಿಂತಾನೇ ಎಲ್ಲೆ ಮೀರಿ ಬೆಳೆಯುತ್ತದೆ" ಎಂಬ ಅವರ ಮಾತುಗಳು ಸಿನಿ ಪ್ರೇಕ್ಷಕರ ಮನಗೆದ್ದವು.
ಪ್ರೇಕ್ಷಕರ ನಂಬಿಕೆ ದ್ರೋಹದ ಬಗ್ಗೆ ಅಚ್ಚರಿಯ ಒಪ್ಪಿಗೆ!
ಕನ್ನಡ ಸಿನಿಮಾಗಳಿಗೆ ಪ್ರೇಕ್ಷಕರಿಲ್ಲ ಎಂಬ ಮಾತನ್ನು ಸಪ್ತಮಿ ಸುಳ್ಳಾಗಿಸಿದರು. "ನಮ್ಮಲ್ಲಿ ಅದ್ಭುತ ಪ್ರೇಕ್ಷಕರಿದ್ದಾರೆ, ಆದರೆ ನಾವು (ಚಿತ್ರರಂಗದವರು) ಅವರ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ಸೋತಿದ್ದೇವೆ" ಎಂದು ಸಪ್ತಮಿ ಒಂದು ಕಹಿ ಸತ್ಯವನ್ನು ಬಿಚ್ಚಿಟ್ಟರು. ಚಿತ್ರತಂಡಗಳು ದೊಡ್ಡ ಮಟ್ಟದ ಪ್ರಾಮಿಸ್ ಮಾಡಿ, ನಂತರ ಕಳಪೆ ಗುಣಮಟ್ಟದ ಸಿನಿಮಾ ನೀಡಿದಾಗ ವೀಕ್ಷಕರು ಸಹಜವಾಗಿಯೇ ದೂರ ಸರಿಯುತ್ತಾರೆ. ಆದರೆ, ಒಂದು ಒಳ್ಳೆ ಸಿನಿಮಾ ಬಂದರೆ ಕನ್ನಡಿಗರು ಯಾವತ್ತೂ ಕೈಬಿಟ್ಟಿಲ್ಲ ಎಂಬ ಭಾವನಾತ್ಮಕ ಅಂಶವನ್ನು ಅವರು ಹಂಚಿಕೊಂಡರು. ಒಟಿಟಿಯಲ್ಲಿ ಸೂಪರ್ ಹಿಟ್ ಆಗುವ ಸಿನಿಮಾಗಳು ಚಿತ್ರಮಂದಿರದಲ್ಲಿ ಯಾಕೆ ಸೋಲುತ್ತಿವೆ ಎಂಬುದರ ಬಗ್ಗೆಯೂ ಅವರು ಆತ್ಮಾವಲೋಕನ ಮಾಡಿಕೊಂಡರು.
ಸಂಭಾವನೆ ಅಸಮಾನತೆ: ಗ್ಲಾಮರ್ ಹಿಂದಿನ ಕರಾಳ ಮುಖ!
ಇನ್ನು ಸಂಭಾವನೆ ವಿಷಯಕ್ಕೆ ಬಂದಾಗ ಸಪ್ತಮಿ ಯಾವುದೇ ಫಿಲ್ಟರ್ ಇಲ್ಲದೆ ಮಾತನಾಡಿದರು. ಚಿತ್ರರಂಗದಲ್ಲಿ ನಟ ಮತ್ತು ನಟಿಯರ ನಡುವೆ ಇರುವ ದೊಡ್ಡ ಮಟ್ಟದ ‘ಸಂಭಾವನೆ ಕಂದಕ’ದ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದರು. "ನಟಿಯರು ಕೇವಲ ಮೇಕಪ್ ಹಾಕಿಕೊಂಡು ಕ್ಯಾಮೆರಾ ಮುಂದೆ ನಗುವುದಕ್ಕೆ ಸೀಮಿತವಲ್ಲ. ಅವರ ಶ್ರಮವೂ ಬಹಳಷ್ಟಿದೆ. ಚಿತ್ರಮಂದಿರಕ್ಕೆ ಜನರನ್ನು ಸೆಳೆಯುವ ಶಕ್ತಿ (Crowd Pulling Power) ಇರುವ ನಟರಿಗೆ ದೊಡ್ಡ ಮೊತ್ತ ಸಿಗುವುದು ಸರಿ, ಆದರೆ ಮಹಿಳಾ ಕಲಾವಿದರಿಗೂ ಅವರ ಅರ್ಹತೆಗೆ ತಕ್ಕಂತೆ ನ್ಯಾಯಯುತವಾದ ಸಂಭಾವನೆ ಸಿಗಬೇಕು" ಎಂಬುದು ಸಪ್ತಮಿ ಅವರ ಆಗ್ರಹವಾಗಿತ್ತು. ಸೆಟ್‌ಗಳಲ್ಲಿ ಸಿಗುವ ಗೌರವದ ಜೊತೆಗೆ, ಕೈ ಸೇರುವ ಸಂಭಾವನೆಯಲ್ಲೂ ಸಮಾನತೆ ಇರಲಿ ಎಂಬುದು ಅವರ ದಿಟ್ಟ ನಿಲುವಾಗಿತ್ತು.
ಒಟ್ಟಿನಲ್ಲಿ, 'ಕಾಂತಾರ' ಮತ್ತು 'ದಿ ವ್ಯಾಕ್ಸಿನ್ ವಾರ್' ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಸಪ್ತಮಿ ಗೌಡ, ಸಿನಿಮಾ ಅಂದರೆ ಬರೀ ಬಣ್ಣದ ಲೋಕವಲ್ಲ, ಅದೊಂದು ಸವಾಲಿನ ಕಣಜ ಎಂಬ ಸಂದೇಶವನ್ನು ಈ ಸಂವಾದದ ಮೂಲಕ ರವಾನಿಸಿದ್ದಾರೆ. ಸಪ್ತಮಿ ಅವರ ಈ ಬೋಲ್ಡ್ ಮಾತುಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

