Yash Toxic Day 1 Box Collection: ಯಶ್ ‘ಟಾಕ್ಸಿಕ್’ ಮೊದಲ ದಿನದ ಕಲೆಕ್ಷನ್ ಎಷ್ಟು?
Yash Toxic Day 1 Collection: ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಓಪನಿಂಗ್ ಸಿಕ್ಕಿದೆ ಎನ್ನಲಾಗಿದೆ. ವರದಿಗಳ ಪ್ರಕಾರ, ಸಿನಿಮಾ ವಿಶ್ವಾದ್ಯಂತ ಮೊದಲ ದಿನ ₹125 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂದು ಅಂದಾಜಿಸಲಾಗಿದೆ.

ಮೊದಲ ದಿನದ ಕಲೆಕ್ಷನ್
ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಹರಿದುಬಂದಿದೆ. ಆದರೆ ಇದು ಸಿನಿಮಾದ ಮೊದಲ ದಿನದ ಕಲೆಕ್ಷನ್ ಮೇಲೆ ಅಷ್ಟೇನೂ ಪರಿಣಾಮ ಬೀರಿದಂತಿಲ್ಲ. ವಿಶ್ವಾದ್ಯಂತ ಚಿತ್ರದ ಮೊದಲ ದಿನದ ಕಲೆಕ್ಷನ್ ರೂ.125 ಕೋಟಿಗಿಂತ ಅಧಿಕ ಎಂದು ಅಂದಾಜಿಸಲಾಗಿದೆ.
ಫ್ಯಾನ್ ಶೋಗಳು ಹೌಸ್‌ಫುಲ್
ಭಾರತದಲ್ಲಿ ಸಿನಿಮಾ ರೂ.90ರಿಂದ 95 ಕೋಟಿ ರು.ಗಳಷ್ಟು ಗಳಿಕೆ ಮಾಡಿದೆ ಎನ್ನಲಾಗಿದೆ. ಯಾವುದೇ ಪ್ರೀಮಿಯರ್ ಶೋ, ಸೆಲೆಬ್ರಿಟಿ ಶೋಗಳಿಲ್ಲದೇ ಆರು ಭಾಷೆಗಳಲ್ಲಿ ರಿಲೀಸ್ ದಿನದಂದೇ ತೆರೆಗೆ ಬಂದ ಸಿನಿಮಾದ ಹೆಚ್ಚಿನೆಲ್ಲ ಫ್ಯಾನ್ ಶೋಗಳು ಹೌಸ್‌ಫುಲ್ ಆಗಿದ್ದವು.
ಹಿಂದಿ ಭಾಷೆಯಲ್ಲಿ ಹೆಚ್ಚು ಕಲೆಕ್ಷನ್
ಕನ್ನಡದಲ್ಲಿ ಚಿತ್ರ ಮೊದಲ ದಿನ 20 ಕೋಟಿ ರು.ಗೂ ಅಧಿಕ ಗಳಿಕೆ ಮಾಡಿದರೆ, ಹಿಂದಿ ಭಾಷೆಯಲ್ಲಿ 50 ಕೋಟಿ ರು.ಗಳಿಗೂ ಹೆಚ್ಚು ಕಲೆಕ್ಷನ್ ಆಗಿದೆ. ತೆಲುಗು ಭಾಷೆಯಲ್ಲಿ 11 ಕೋಟಿ ರು.ಗಳಷ್ಟು ಗಳಿಕೆ ದಾಖಲಾಗಿದೆ. ಕನ್ನಡದಲ್ಲಿ ಈ ಹಿಂದೆ ‘ಕೆಜಿಎಫ್ 2’ ಈ ರೀತಿಯ ತೀವ್ರ ಗಳಿಕೆಯ ಮೂಲಕ ಸುದ್ದಿಯಾಗಿತ್ತು.
ಅತ್ಯಧಿಕ ಗಳಿಕೆ
ಆ ಬಳಿಕ ಯಶ್ ಅವರದೇ ಎರಡನೇ ಸಿನಿಮಾ ಮತ್ತೆ ದಾಖಲೆ ಮಾಡುತ್ತಿದೆ. ಭಾರತೀಯ ಚಿತ್ರರಂಗದಲ್ಲಿ ಈ ವರ್ಷ ಮಾರ್ಚ್‌ನಲ್ಲಿ ತೆರೆಕಂಡ ‘ಧುರಂಧರ್ 2’ ಸಿನಿಮಾ 146 ಕೋಟಿ ರು. ಮೂಲಕ ಮೊದಲ ದಿನವೇ ಅತ್ಯಧಿಕ ಗಳಿಕೆ ದಾಖಲಿಸಿತ್ತು.
ಟಾಕ್ಸಿಕ್‌ಗೆ ಮಿಶ್ರ ಪ್ರತಿಕ್ರಿಯೆ
ಎರಡನೇ ಸ್ಥಾನದಲ್ಲಿ ‘ಟಾಕ್ಸಿಕ್’ ಇದೆ. ಯಶ್ ಅಭಿಮಾನಿಗಳು 4 ವರ್ಷಗಳ ಬಳಿಕ ಬಂದ ಯಶ್ ಸಿನಿಮಾವನ್ನು ಸಂಭ್ರಮಿಸಿದ್ದಾರೆ. ಒಟ್ಟಾರೆಯಾಗಿ ಟಾಕ್ಸಿಕ್‌ಗೆ ಮಿಶ್ರ ಪ್ರತಿಕ್ರಿಯೆ ಬಂದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

