- Home
- Entertainment
- Sandalwood
- ಬಿಂದಿಯಾ ಹೆಸರನ್ನು ಬದಲಾಯಿಸಿಕೊಂಡಿದ್ದೇಕೆ 'ಬುಲ್‌ಬುಲ್' ರಚಿತಾ ರಾಮ್? ನ್ಯೂ ನೇಮ್ ಹಿಂದಿನ ಸೀಕ್ರೆಟ್ ಇದೇನಾ?
ಬಿಂದಿಯಾ ಹೆಸರನ್ನು ಬದಲಾಯಿಸಿಕೊಂಡಿದ್ದೇಕೆ 'ಬುಲ್‌ಬುಲ್' ರಚಿತಾ ರಾಮ್? ನ್ಯೂ ನೇಮ್ ಹಿಂದಿನ ಸೀಕ್ರೆಟ್ ಇದೇನಾ?
ಬಿಂದಿಯಾ ರಾಮ್ ಹೆಸರು ಬದಲಾಗಲು ಕಾರಣವೇನು? ಹೆಸರು ಬದಲಾವಣೆ ಎಂಬುದು ಚಿತ್ರರಂಗದಲ್ಲಿ ಹೊಸ ವಿಷಯವೇನಲ್ಲ. ಅದು ಎಲ್ಲಾ ಕಾಲದಲ್ಲೂ ಇತ್ತು, ಈಗಲೂ ಇದೆ. ಹೆಸರು ಬದಲಾವಣೆ ಹಿಂದೆ ನ್ಯೂಮರಾಲಜಿ ನಂಬಿಕೆ ಇರಬಹುದು. ಅಥವಾ, ಈ ಕಾರಣ?

ಮಾಲಾಶ್ರೀ ಬಳಿಕ ಕನ್ನಡ ಚಿತ್ರರಂಗವನ್ನು ಎ ಟು ಝಡ್ ಆಳಿದವರು ಇಲ್ಲವೆಂದೇ ಹೇಳಬಹುದು. ಆದರೆ, ದಶಕಗಳ ಕಾಲ ಚಿತ್ರರಂಗವನ್ನು ಆಳಿದ ನಟಿಯರು ಅನೇಕರಿದ್ದಾರೆ. ಅಂದಿನ ಭಾರತಿ, ಜಯಂತಿ, ಆರತಿ, ಲಕ್ಷ್ಮೀ ಸೇರಿದಂತೆ ಅನೇಕ ನಟಿಯರು ಸಾಕಷ್ಟು ಕಾಲ ಚಿತ್ರರಂಗದಲ್ಲಿ ನಾಯಕಿಯರಾಗಿ ಮೆರೆದಿದ್ದಾರೆ. ಆ ಬಳಿಕ, ಮಾಲಾಶ್ರೀ ಕಾಲ ದಶಕಗಳ ಕಾಲ ಇತ್ತು. ಅದೇ ಸಮಯದಲ್ಲಿ ಸುಧಾರಾಣಿ, ಶ್ರುತಿ ಸಾಕಷ್ಟು ಮಿಂಚಿದ್ದರು. ಬಳಿಕ ಪ್ರೇಮಾ, ರಕ್ಷಿತಾ, ರಮ್ಯಾ ಹಾಗೂ ರಾಧಿಕಾ ಸಾಕಷ್ಟು ಜನಪ್ರಿಯತೆ ಪಡೆದುಕೊಂಡ ನಟಿಯರು.
ಮುಂದಿನ ತಲೆಮಾರು ಎಂಬಂತೆ, ರಾಧಿಕಾ ಪಂಡಿತ್ ಕನ್ನಡದ ಟಾಪ್ ಹಿರೋಯಿನ್ ಆಗಿ ಮಿಂಚಿ ಮರೆಯಾದರು. ಅದೇ ಕಾಲದಲ್ಲಿ ನಟ ದರ್ಶನ್ ಜೋಡಿಯಾಗಿ ಸ್ಯಾಂಡಲ್‌ವುಡ್ ಚಿತ್ರರಂಗಕ್ಕೆ ಕಾಲಿಟ್ಟವರು 'ಡಿಂಪಲ್ ಕ್ವೀನ್' ಖ್ಯಾತಿಯ ನಟಿ ರಚಿತಾ ರಾಮ್. ಇವರೂ ಈಗಲೂ ಕೂಡ ಕನ್ನಡದ ನಂಬರ್ ಒನ್ ನಟಿ. ಇಂದಿಗೂ ಕೂಡ ಹೊಸಬರು ಹಳಬರು ಎಂಬ ಬೇಧಭಾವವಿಲ್ಲದೇ ಹೆಚ್ಚುಕಡಿಮೆ ಕನ್ನಡದ ಎಲ್ಲಾ ನಟರೊಂದಿಗೆ, ಸ್ಟಾರ್ ನಟರೊಂದಿಗೆ ನಟಿ ರಚಿತಾ ರಾಮ್ ತೆರೆ ಹಂಚಿಕೊಂಡಿದ್ದಾರೆ. ಆದರೆ, ರಚಿತಾ ರಾಮ್ ಮೂಲ ಹೆಸರು 'ಬಿಂದಿಯಾ ರಾಮ್' ಎಂಬುದು ಹಲವರಿಗೆ ಗೊತ್ತಿಲ್ಲ!
ನಟಿ ರಚಿತಾ ರಾಮ್ ಅವರು ನೇರವಾಗಿ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟವರಲ್ಲ. ಧಾರಾವಾಹಿಯಲ್ಲಿ ಬಣ್ಣಹಚ್ಚುವ ಮೂಲಕ ಅವರು ಬಣ್ಣದ ಲೋಕ ಪ್ರವೇಶಿಸಿರುವ ನಟಿ. 'ಬೆಂಕಿಯಲ್ಲಿ ಅರಳಿದ ಹೂ' ಸೀರಿಯಲ್‌ನಲ್ಲಿ ಅವರು ತಮ್ಮ ಮೂಲ ಹೆಸರು 'ಬಿಂದಿಯಾ ರಾಮ್' ಮೂಲಕ ನಟನೆಗೆ ಕಾಲಿಟ್ಟವರು. ಬಳಿಕ ಅವರಿಗೆ ದರ್ಶನ್ ಜೋಡಿಯಾಗಿ 'ಬುಲ್ ಬುಲ್' ಸಿನಿಮಾದಲ್ಲಿ ಚಾನ್ಸ್ ಸಿಕ್ಕಾಗ ಅವರ ಮೂಲ ಹೆಸರು ಬಿಂದಿಯಾ ರಾಮ್ ಎಂಬುದನ್ನು 'ರಚಿತಾ ರಾಮ್' ಎಂದು ಬದಲಾಯಿಸಲಾಯಿತು.
ಹಾಗಿದ್ದರೆ, ಬಿಂದಿಯಾ ರಾಮ್ ಹೆಸರು ಬದಲಾಗಲು ಕಾರಣವೇನು? ಹೆಸರು ಬದಲಾವಣೆ ಎಂಬುದು ಚಿತ್ರರಂಗದಲ್ಲಿ ಹೊಸ ವಿಷಯವೇನಲ್ಲ. ಅದು ಎಲ್ಲಾ ಕಾಲದಲ್ಲೂ ಇತ್ತು, ಈಗಲೂ ಇದೆ. ಹೆಸರು ಬದಲಾವಣೆ ಹಿಂದೆ ನ್ಯೂಮರಾಲಜಿ (Numerology) ನಂಬಿಕೆ ಇರಬಹುದು. ಅಥವಾ, ಬೇರೆ ಯಾವುದೋ ಒಂದು ರಹಸ್ಯ ಕಾರಣವೂ ಇರಬಹುದು. ಆದರೆ, 'ರಚಿತಾ' ಹೆಸರು ಬರಲು ಕಾರಣ ತಿಳಿಯುವುದು ಕಷ್ಟವಾದರೂ 'ಬಿಂದಿಯಾ' ಎಂಬ ಹೆಸರು ಹೋಗಿ ಹೊಸ ಹೆಸರು ಬರಲು ಕಾರಣವನ್ನು ಊಹಿಸಬಹುದು.
ಕನ್ನಡ ಸಿನಿಮಾದಲ್ಲಿ ಅದಾಗಲೇ 'ಬಿಂದಿಯಾ' ಹೆಸರಿನಲ್ಲಿ ನಟಿಯೊಬ್ಬರು ನಟಿಸಿ ಆಗಿತ್ತು. ರವಿಚಂದ್ರನ್ ಅಭಿನಯದ 'ಹಳ್ಳಿಮೇಸ್ಟ್ರು' ಚಿತ್ರದ ನಾಯಕಿ ಹೆಸರು ಬಿಂದಿಯಾ. ಹಾಗಿರುವಾಗ ಅದೇ ಹೆಸರಿನ ಮತ್ತೊಬ್ಬರು ನಟಿ ಬಂದರೆ ಜನರಿಗೆ ಗೊಂದಲ ಮೂಡುವುದು ಸಹಜ ತಾನೇ? ಈ ಕಾರಣಕ್ಕೇ ಬಿಂದಿಯಾ ಹೆಸರು ಬದಲಾಗಿದೆ ಎನ್ನಬಹುದು. ಆದರೆ, ರಚಿತಾ ಎಂಬ ಹೆಸರನ್ನೇ ಮರುನಾಮಕರಣ ಮಾಡಿರುವುದಕ್ಕೆ ಕಾರಣವನ್ನು ಸ್ವತಃ ರಚಿತಾ ರಾಮ್ ಅಥವಾ 'ಬುಲ್ ಬುಲ್' ಚಿತ್ರತಂಡವೇ ಹೇಳಬೇಕು.
ಅದೇನೇ ಇರಲಿ, ನಟಿ ರಚಿತಾ ರಾಮ್ ಅವರು ಒಂದು ದಶಕಗಳಿಗೂ ಹೆಚ್ಚು ಕಾಲದಿಂದ ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿಯೇ ಉಳಿದಿರುವುದು, ಟಾಪ್ ಸ್ಥಾನವನ್ನು ಇನ್ನೂ ಕಾಯ್ದುಕೊಂಡಿರುವುದು ಸಣ್ಣ ಸಂಗತಿಯೇ ಅಲ್ಲ. ಏಕೆಂದರೆ, ಕೇವಲ ಒಂದೆರಡು ಸಿನಿಮಾಗಳಿಗೇ ಸುಸ್ತಾಗಿ ಸೈಡ್‌ಗೆ ಹೋಗುವ ಅನೇಕ ನಟಿಯರ ಮಧ್ಯೆ, ನಟಿ ರಚಿತಾ ರಾಮ್ ಅವರು ಈಗಲೂ ಸ್ಟಾರ್ ನಾಯಕರು ಹಾಗೂ ಹೊಸಬರೊಂದಿಗೆ ನಾಯಕಿಯಾಗಿಯೇ ನಟಿಸುತ್ತಿರುವುದು 'ರಿಯಲೀ ಗ್ರೇಟ್'..!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

