MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Amit Shah Karnataka Visit
Karnataka Govt Social Pension
US Tariff on India
Mysuru Dasara 2026
Abhishek Sharma
Bengaluru Cantonment Railway Station
Kalyana Karnataka Development
Vande Mataram Row
Karnataka SSLC Mid-term Exam
Mangaluru Dharmasthala Railway Line
Shivamogga Mega Job Fair
Bengaluru Traffic
Mangaluru Cabinet Meeting
  • Home
  • Entertainment
  • News
  • ಗೀತೂ ಮೋಹನ್‌ದಾಸ್ 'ಟಾಕ್ಸಿಕ್' ಕೆಲಸದಲ್ಲಿ ನಟ ಯಶ್ ಹಸ್ತಕ್ಷೇಪ ಮಾಡಿದ್ದು ನಿಜವೇ? ಅಸಲಿ ಸಂಗತಿಗೆ ಈಗ ಸಾಕ್ಷಿ ಸಿಕ್ತು!

ಗೀತೂ ಮೋಹನ್‌ದಾಸ್ 'ಟಾಕ್ಸಿಕ್' ಕೆಲಸದಲ್ಲಿ ನಟ ಯಶ್ ಹಸ್ತಕ್ಷೇಪ ಮಾಡಿದ್ದು ನಿಜವೇ? ಅಸಲಿ ಸಂಗತಿಗೆ ಈಗ ಸಾಕ್ಷಿ ಸಿಕ್ತು!

ಟಾಕ್ಸಿಕ್ ಸಿನಿಮಾ ಬಿಡುಗಡೆ ಬಳಿಕ ಮಿಶ್ರ ಪ್ರತಿಕ್ರಿಯೆ ಬಂದು, ಚಿತ್ರದ ಗಳಿಕೆ ತೃಪ್ತಿದಾಯಕವಷ್ಟೇ ಎಂದಾದ ಬಳಿಕ, ಈ ಚಿತ್ರವು ಕಳಪೆಯಾಗಿ ಮೂಡಿ ಬಂದಿದ್ದಕ್ಕೆ ಯಶ್ ಅವರೇ ಕಾರಣ ಎಂದು ಪ್ರೇಕ್ಷಕರ ಒಂದು ವರ್ಗವು ದೂಷಿಸಲು ಆ ವದಂತಿಗಳೇ ಕಾರಣವಾಗಿದ್ದವು. ಆದರೆ, ಈಗ ಬಂದಿರುವ ಸುದ್ದಿ ಏನು? ನೋಡಿ..

2 Min read
Author : Shriram Bhat
Published : Sep 19 2026, 01:28 PM IST
Share this Photo Gallery
  • FB
  • TW
  • Linkdin
  • Whatsapp
17
Image Credit : Asianet News

ಕನ್ನಡದ ರಾಕಿಂಗ್ ಸ್ಟಾರ್ ಯಶ್ (Yash) ನಟನೆಯ 'ಟಾಕ್ಸಿಕ್' ಸಿನಿಮಾ ಸಿಕ್ಕಾಪಟ್ಟೆ ಸಂಚಲನ ಸೃಷ್ಟಿಸಿದ್ದು ಗೊತ್ತೇ ಇದೆ. ಕೆಜಿಎಫ್-2 ಸಿನಿಮಾದ ಬಳಿಕ ಪ್ರಪಂಚವೇ ಎದುರು ನೋಡುತ್ತಿದ್ದ ಯಶ್ ನಟನೆಯ ಟಾಕ್ಸಿಕ್ (Toxic) ಸಿನಿಮಾ ಅಂದುಕೊಂಡಷ್ಟು ಕ್ಲಿಕ್ ಆಗಿಲ್ಲ ಅನ್ನೋ ಸಂಗತಿ ಈಗ ಗುಟ್ಟೇನೂ ಅಲ್ಲ. ಮೊದಲ ದಿನ ದಾಖಲೆ ಗಳಿಕೆ ಕಂಡಿದ್ದ ಈ ಸಿನಿಮಾ, ಸದ್ಯಕ್ಕೆ ಅಂದಾಜು 347 ಕೋಟಿ ರೂಪಾಯಿ ಗಳಿಸಿದೆ ಎಂಬ ಮಾಹಿತಿ ಇದೆ. ಅದಕ್ಕಿಂತಲೂ ಮುಖ್ಯವಾದ ಸುದ್ದಿ ಬೇರೆಯೇ ಇದೆ..

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
Image Credit : instagram

ಅದೇನು ಗೊತ್ತಾ? ಟಾಕ್ಸಿಕ್ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದ ಸಂದರ್ಭದಲ್ಲಿ- 'ನಟ ಹಾಗೂ ನಿರ್ಮಾಕರಾಗಿರುವ ಯಶ್ ಅವರು ನಿರ್ದೇಶಕಿ ಗೀತೂ ಮೋಹನ್‌ದಾಸ್ ಮಾಡಬೇಕಾದ ಕೆಲಸದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ' ಎಂಬ ಸುದ್ದಿ. ಹೌದು, ಆ ಸಮಯದಲ್ಲಿ ಇಂತಹ ಸುದ್ದಿಯೊಂದು ಹರಿದಾಡಿ ಹಲವರ ಹುಬ್ಬೇರಿಸಿದ್ದವರು. ಆದರೆ ಆ ಸುದ್ದಿ ಅಂದು ಹಬ್ಬಿ ಅಷ್ಟೇ ವೇಗವಾಗಿ ಮಾಯವಾಗಿತ್ತು. ಆದರೆ, ಇತ್ತೀಚೆಗೆ ಮತ್ತೆ ಆ ಸುದ್ದಿ ಹರಿದಾಡುತ್ತಿತ್ತು. ಅದಕ್ಕೀಗ ಸ್ಪಷ್ಟ ಉತ್ತರ ಸಿಕ್ಕಿದೆ.. ರಿಯಾಲಿಟಿ ಅದೇ ಚಿತ್ರದ ನಟರೊಬ್ಬರ ಮೂಲಕ ಜಗತ್ತಿಗೆ ಅನಾವರಣವಾಗಿದೆ. ಹಾಗಿದ್ದರೆ ಅವರು ಯಾರು? ಆ ನಟ ಹೇಳಿದ್ದೇನು? ಈ ಸ್ಟೋರಿ ನೋಡಿ..

Related Articles

Related image1
ಟಾಕ್ಸಿಕ್ ಸಿನಿಮಾ ಈಗಲೂ ಪ್ರದರ್ಶನ ಕಾಣುತ್ತಿದೆಯೇ? ಯಶ್ ಸಿನಿಮಾದ ಒಟ್ಟೂ ಕಲೆಕ್ಷನ್ ಎಷ್ಟು? ರಿಯಾಲಿಟಿ ಏನು?!
Related image2
ಸ್ವಂತ 'ಐಲ್ಯಾಂಡ್' ಹೊಂದಿರೋ ಈ ನಟಿ ಕನ್ನಡದಲ್ಲೂ ನಟಿಸಿದ್ದಾರೆ.. ಈಕೆಯ ಒಟ್ಟೂ ಆಸ್ತಿ ಕೇಳಿದ್ರೆ ಶಾಕ್ ಆಗ್ತೀರಾ!
37
Image Credit : Asianet News

ಹೌದು.. ಟಾಕ್ಸಿಕ್' ಚಿತ್ರವು ನಿರ್ಮಾಣ ಹಂತದಲ್ಲಿದ್ದಾಗ, ನಿರ್ದೇಶಕಿ ಗೀತು ಮೋಹನ್‌ದಾಸ್ ಅವರ ಕೆಲಸದ ಬಗ್ಗೆ ಯಶ್ ಅಸಮಾಧಾನಗೊಂಡಿದ್ದಾರೆ ಮತ್ತು ಅವರೇ ಸ್ವತಃ ಆ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ (ಅಂದರೆ ತೆರೆಮರೆಯಲ್ಲಿ ಯಶ್ ನಿರ್ದೇಶನ ಮಾಡುತ್ತಿದ್ದಾರೆ) ಹಾಗೂ ಕೆಲವು ಪ್ರಮುಖ ದೃಶ್ಯಗಳನ್ನು ಮರುಚಿತ್ರೀಕರಣ ಮಾಡುತ್ತಿದ್ದಾರೆ ಎಂಬಂತಹ ಹಲವು ವದಂತಿಗಳು ಹರಿದಾಡಿದ್ದವು. ಅದನ್ನು ಕೆಲವರು ನಂಬಿದ್ದರು ಕೆಲವರು ತಳ್ಳಿಹಾಕಿದ್ದರು.

47
Image Credit : Instagram

ಆದರೆ, ಟಾಕ್ಸಿಕ್ ಸಿನಿಮಾ ಬಿಡುಗಡೆ ಬಳಿಕ ಮಿಶ್ರ ಪ್ರತಿಕ್ರಿಯೆ ಬಂದು, ಚಿತ್ರದ ಗಳಿಕೆ ಕೂಡ ಅಷ್ಟೇನೂ ತೃಪ್ತಿದಾಯಕ ಆಗದ ಬಳಿಕ, ಈ ಚಿತ್ರವು ಕಳಪೆಯಾಗಿ ಮೂಡಿ ಬಂದಿದ್ದಕ್ಕೆ ಯಶ್ ಅವರೇ ಕಾರಣ ಎಂದು ಪ್ರೇಕ್ಷಕರ ಒಂದು ವರ್ಗವು ದೂಷಿಸಲು ಆ ವದಂತಿಗಳೇ ಕಾರಣವಾಗಿದ್ದವು. ಆದರೆ, ಆ ವದಂತಿಗೆ, ಹರದಾಡುತ್ತಿದ್ದ ಸುದ್ದಿಗೆ ಈಗ ಒಂದು ಕ್ಲಾರಿಟಿ ಸಿಕ್ಕಿದೆ. ಅದನ್ನು ಕೊಟ್ಟಿದ್ದು ಬೇರೆ ಯಾರೂ ಅಲ್ಲ, ಸ್ವತಃ ಅದೇ ಚಿತ್ರದಲ್ಲಿ ನಟಿಸಿರುವ ಬಾಲಿವುಡ್ ನಟ ವಿವೇಕ್ ಒಬೆರಾಯ್!

57
Image Credit : Social Media X

'ನಿರ್ದೇಶಕಿ ಗೀತೂ ಮೋಹನ್‌ದಾಸ್ ಕೆಲಸದಲ್ಲಿ ನಟ-ನಿರ್ಮಾಪಕ ಯಶ್ ಹಸ್ತಕ್ಷೇಪ ಮಾಡಲಿಲ್ಲ. ನಟನ ಕೆಲಸವನ್ನಷ್ಟೇ ಯಶ್ ಮಾಡುತ್ತಿದ್ದರು, ನಿರ್ದೇಶನದ ಕೆಲಸವನ್ನು ನಿರ್ದೇಶಕಿಗೆ ಬಿಟ್ಟಿದ್ದರು' ಎಂದು ನಟ ವಿವೇಕ್ ಒಬೆರಾಯ್ ಹೇಳಿದ್ದಾರೆ ಎಂಬ ಮಾತು ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.

67
Image Credit : Asianet News

ಈಗ ಸೋಷಿಯಲ್ ಮೀಡಿಯಾಗಳಲ್ಲಿ ಹಲವು ಮಂದಿ 'ಎಲ್ಲದಕ್ಕೂ ಕಾಲವೇ ಉತ್ತರ ಕೊಡುತ್ತದೆ' ಎಂದು ಹಲವರು ಕಾಮೆಂಟ್ಮಾಡುತ್ತಿದ್ದಾರೆ. ಅದಕ್ಕೆ ಕೆಲವರು, 'ಹೌದು' ಕೆಲವಕ್ಕೆ ಕಾಲ ಸ್ವಲ್ಪ ಲೇಟ್ ಆಗಿ ಉತ್ತರ ಕೊಡುತ್ತದೆ' ಎಂದು ಹೇಳಿದ್ದರೆ ಇನ್ನೂ ಕೆಲವರು, 'ಹೌದು ಹೌದು, ಎಲ್ಲ ಸಂಗತಿಗಳಿಗೂ ಕಾಲ ಒಂದಲ್ಲ ಒಂದು ದಿನ ಉತ್ತರ ಕೊಡುತ್ತದೆ, ಕಾಯುತ್ತಿರಿ' ಎಂದು ಪ್ರತ್ಯುತ್ತರ ಕೊಡುತ್ತಿದ್ದಾರೆ.

77
Image Credit : Asianet News

ಅಂದಹಾಗೆ, ಬಾಕ್ಸ್ ಆಫೀಸ್ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿಯ ಪ್ರಕಾರ, 26 ಆಗಸ್ಟ್ 2026 ರಂದು ತೆರೆಕಂಡ ಟಾಕ್ಸಿಕ್ ಚಿತ್ರವು ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಈವರೆಗೆ ₹333.45 ಕೋಟಿಗೂ ಅಧಿಕ ಗಳಿಕೆ ಮಾಡಿದೆ. ಆದರೆ, ಕೆಲವು ವರದಿಗಳು ಟಾಕ್ಸಿಕ್ ಸಿನಿಮಾದ ಗಳಿಕೆ 341.39 ಕೋಟಿ ರೂ. ಎನ್ನುತ್ತಿವೆ.

ಟಾಕ್ಸಿಕ್ ಸಿನಿಮಾ ಸದ್ಯ ಕೆಲವು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರವು ಸೆಪ್ಟೆಂಬರ್ 25ರಂದು ಜೀ5 (ZEE5) ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಲಿದೆ. ನಿರ್ಮಾಪಕರ ಕಡೆಯಿಂದ ಇನ್ನೂ ಈ ಚಿತ್ರದ ಗಳಿಕೆ ಬಗ್ಗೆ ಯಾವುದೇ ಅಧಿಕೃತ ಬಹಿರಂಗ ಹೇಳಿಕೆ ಬಂದಿಲ್ಲ ಎಂಬುದನ್ನು ಗಮನಿಸಬೇಕು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SB
Shriram Bhat
ಏಷ್ಯಾನೆಟ್ ಸುವರ್ಣನ್ಯೂಸ್.ಕಾಮ್‌ನಲ್ಲಿ ಉಪ ಸಂಪಾದಕ. ಸಿನಿಮಾ, ಲೈಫ್‌ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದೇನೆ. ಇಂಡಿಯನ್ ಎಕ್ಸ್‌ಪ್ರೆಸ್‌, ಒನ್‌ ಇಂಡಿಯಾ ಕನ್ನಡ ಹಾಗೂ ವಿಜಯ ಕರ್ನಾಟಕ ವೆಬ್‌ನಲ್ಲಿ ಕೆಲಸ ಮಾಡಿದ ಅನುಭವವಿದೆ. ಕಳೆದ 15 ವರ್ಷಗಳಿಂದ ನಿರಂತರ ಬರವಣಿಗೆ ಉದ್ಯೋಗದಲ್ಲಿದ್ದೇನೆ. ಸುದ್ದಿ ಮಾಧ್ಯಮವಲ್ಲದೇ ಮನರಂಜನಾ ಮಾಧ್ಯಮದಲ್ಲೂ ಕೆಲಸ ಮಾಡಿದ್ದೇನೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಹುಟ್ಟೂರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದೇನೆ. ಸಾಮಾಜಿಕ ಕಳಕಳಿಗೆ ಹೆಚ್ಚಿನ ಆದ್ಯತೆ, ಮಾನವೀಯತೆಗೆ ಮೊದಲ ಪ್ರಾಶಸ್ತ್ಯ.
ಯಶ್
ಟಾಕ್ಸಿಕ್
ಮನರಂಜನಾ ಸುದ್ದಿ
ವೈರಲ್ ಸುದ್ದಿ
 

Latest Videos
Recommended Stories
Recommended image1
ಟಾಕ್ಸಿಕ್ ಸಿನಿಮಾ ಈಗಲೂ ಪ್ರದರ್ಶನ ಕಾಣುತ್ತಿದೆಯೇ? ಯಶ್ ಸಿನಿಮಾದ ಒಟ್ಟೂ ಕಲೆಕ್ಷನ್ ಎಷ್ಟು? ರಿಯಾಲಿಟಿ ಏನು?!
Recommended image2
'ಬಿಗ್‌ ಬಾಸ್‌'ನಲ್ಲಿ ವಿಜಯ್ ಸೇತುಪತಿ ಹೇಳಿದ 'ಆ ಮಾತು' ಸಿಎಂ ವಿಜಯ್‌ಗೆ ಲಿಂಕ್ ಆಗಿ ಭಾರೀ ಕೋಲಾಹಲ ಸೃಷ್ಟಿ!
Recommended image3
ಸಿನಿಮಾ ಶೂಟಿಂಗ್‌ನಿಂದಲೇ ಫೇಮಸ್ ಆಯ್ತು ಈ 5 ಟಾಪ್ ತಾಣಗಳು: ಒಂದೊಂದರ ಕಥೆಯೇ ರೋಚಕ!
Related Stories
Recommended image1
ಟಾಕ್ಸಿಕ್ ಸಿನಿಮಾ ಈಗಲೂ ಪ್ರದರ್ಶನ ಕಾಣುತ್ತಿದೆಯೇ? ಯಶ್ ಸಿನಿಮಾದ ಒಟ್ಟೂ ಕಲೆಕ್ಷನ್ ಎಷ್ಟು? ರಿಯಾಲಿಟಿ ಏನು?!
Recommended image2
ಸ್ವಂತ 'ಐಲ್ಯಾಂಡ್' ಹೊಂದಿರೋ ಈ ನಟಿ ಕನ್ನಡದಲ್ಲೂ ನಟಿಸಿದ್ದಾರೆ.. ಈಕೆಯ ಒಟ್ಟೂ ಆಸ್ತಿ ಕೇಳಿದ್ರೆ ಶಾಕ್ ಆಗ್ತೀರಾ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved