- Home
- Life
- Relationship
- ಸದ್ದಿಲ್ಲದೇ ಮದ್ವೆಯಾದ 'ಯಜಮಾನ' ನಟಿ: ಸೀಕ್ರೆಟ್ ಇಟ್ಟಿದ್ದ ಪತಿಯ ಮುಖ ಕೊನೆಗೂ ರಿವೀಲ್ ಆಯ್ತು
ಸದ್ದಿಲ್ಲದೇ ಮದ್ವೆಯಾದ 'ಯಜಮಾನ' ನಟಿ: ಸೀಕ್ರೆಟ್ ಇಟ್ಟಿದ್ದ ಪತಿಯ ಮುಖ ಕೊನೆಗೂ ರಿವೀಲ್ ಆಯ್ತು
'ಯಜಮಾನ' ಸೀರಿಯಲ್ ಖ್ಯಾತಿಯ ನಟಿ ಸ್ಫೂರ್ತಿ ರಮಿತಾ ಅವರು ತಮ್ಮ ನಿಶ್ಚಿತಾರ್ಥದ ನಂತರ ಭಾವಿ ಪತಿಯ ಮುಖವನ್ನು ಮರೆಮಾಚಿ ಕುತೂಹಲ ಮೂಡಿಸಿದ್ದರು. ಇದೀಗ ಅವರು ವಿಷ್ಣು ಎಂಬುವವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಅವರ ಸ್ನೇಹಿತೆ ಅಂಕಿತಾ ಜಯರಾಮ್ ಈ ಸುದ್ದಿಯನ್ನು ಬಹಿರಂಗಪಡಿಸಿದ್ದಾರೆ.

ಯಜಮಾನ ನಟಿ ಸಸ್ಪೆನ್ಸ್
ʻಯಜಮಾನʼ ಸೀರಿಯಲ್ ಮೂಲಕ ಮನೆಮಾತಾಗಿದ್ದ ನಟಿ ಸ್ಫೂರ್ತಿ ರಮಿತಾ. ಯಜಮಾನʼ ಧಾರಾವಾಹಿಯಲ್ಲಿ ನೆಗೆಟಿವ್ ಪಾತ್ರದ ಮೂಲಕ ಪ್ರೇಕ್ಷಕರ ಮನಸ್ಸು ಗೆದ್ದಿರೋ ನಟಿ ಕಳೆದ ಜುಲೈ ತಿಂಗಳಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ಆಗ ಎಂಗೇಜ್ಮೆಂಟ್ ಫೋಟೋ ಶೇರ್ ಮಾಡಿದ್ರೂ ಭಾವಿ ಪತಿಯ ಮುಖವನ್ನು ಮಾತ್ರ ಮರೆ ಮಾಚಿದ್ದರು.
ನೆಗೆಟಿವ್ ಶೇಡ್
ಯಜಮಾನ’ ಸೀರಿಯಲ್‌ನಲ್ಲಿ ನೆಗೆಟಿವ್ ಶೇಡ್ ಹೊಂದಿದ್ದ ಪಲ್ಲವಿ ಪಾತ್ರಕ್ಕೆ ಜೀವ ತುಂಬಿದ್ದವರು ನಟಿ ಸ್ಫೂರ್ತಿ ರಮಿತಾ. ‘ಯಜಮಾನ’ ಸೀರಿಯಲ್ ಇತ್ತೀಚೆಗಷ್ಟೇ ಮುಗಿದಿದ್ದು, ಈಗ ಅವರ ಮದುವೆಯೂ ಆಗಿದೆ.
ಮುಖ ರಿವೀಲ್ ಇಲ್ಲ!
ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಎಂಗೇಜ್ಮೆಂಟ್ ಸುದ್ದಿ ಕೊಟ್ಟಿದ್ದ ನಟಿ, ಭಾವಿ ಪತಿಯ ಮುಖವನ್ನ ಪೂರ್ತಿಯಾಗಿ ತೋರಿಸದೆ ಸಾಫ್ಟ್ ಲಾಂಚ್ ಮಾಡ್ತಿದ್ದರು. ಮುಖವನ್ನು ಬ್ಲರ್ ಮಾಡಿದ್ದರು. ಕುತೂಹಲ ಎಂದರೆ, ಇಂದು ಅವರ ಮದುವೆಯಾಗಿದ್ದು, ಕೊನೆಗೂ ಅವರು ಪತಿಯ ಮುಖವನ್ನು ರಿವೀಲ್ ಮಾಡಿದ್ದಾರೆ.
ವಿಷ್ಣು ಎನ್ನುವವರ ಜೊತೆ ಮದುವೆ
ವಿಷ್ಣು ಎಂಬುವರನ್ನು ನಟಿ ಸ್ಫೂರ್ತಿ ರಮಿತಾ ಮದುವೆಯಾಗಿದ್ದಾರೆ. ಆದರೆ ಇದನ್ನು ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ರಿವೀಲ್ ಮಾಡಿರಲಿಲ್ಲ. ಆದರೆ, ಅವರ ಸ್ನೇಹಿತೆ, ಯಜಮಾನ ಸೀರಿಯಲ್‌ನಲ್ಲಿ ಅವರ ಜೊತೆ ಕೆಲಸ ಮಾಡಿದ್ದ, ಈಗ ಕರ್ಣ ಸೀರಿಯಲ್‌ನಲ್ಲಿ ದಿಯಾ ಪಾತ್ರ ಮಾಡುತ್ತಿರುವ ಅಂಕಿತಾ ಜಯರಾಮ್ ಅವರು ಇದನ್ನು ರಿವೀಲ್ ಮಾಡಿದ್ದರು. ಬಳಿಕ ಸ್ಫೂರ್ತಿ ರಮಿತಾ ಅವರು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಮದುವೆ ರಿವೀಲ್ ಮಾಡಿದ ಸ್ನೇಹಿತೆ
ಕುಟುಂಬಸ್ಥರು, ಆತ್ಮೀಯರು ಹಾಗೂ ಕೆಲವು ನಟ-ನಟಿಯರು ಸಮ್ಮುಖದಲ್ಲಿ ಸ್ಫೂರ್ತಿ ರಮಿತಾ ಅವರು ವಿಷ್ಣು ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಅದು ನಟಿ ಅಂಕಿತಾ ಜಯರಾಮ್ ಶುಭಾಶಯ ಕೋರಿದ್ದರಿಂದ ಬೆಳಕಿಗೆ ಬಂದಿದೆ.
ಅಂಕಿತಾ ಜಯರಾಮ್ ಪೋಸ್ಟ್
ಹೊಸ ಜೀವನಕ್ಕೆ ಅಡಿಯಿಟ್ಟ ನಟಿ ಸ್ಫೂರ್ತಿ ರಮಿತಾಗೆ ಶುಭಾಶಯಗಳನ್ನ ಕೋರಿದ್ದಾರೆ ನಟಿ ಅಂಕಿತಾ ಜಯರಾಮ್‘’ಇಂದು ದಾಂಪತ್ಯ ಜೀವನಕ್ಕೆ ಅಡಿ ಇಡುತ್ತಿರುವ ಕಿರುತೆರೆಯ ನಟಿ ಸ್ಫೂರ್ತಿ ರಮಿತಾ ಹಾಗೂ ವಿಷ್ಣು ದಂಪತಿಗಳಿಗೆ ಮದುವೆಯ ಶುಭ ದಿನದ ಶುಭಾಶಯಗಳು. ನಿಮ್ಮ ದಾಂಪತ್ಯ ಜೀವನ ಹಾಲು ಜೇನಿನಂತೆ ಸಿಹಿಯಾಗಿರಲಿ. ದಂಪತಿಗಳಿಗೆ ಶುಭವಾಗಲಿ’’ ಎಂದು ನಟಿ ಅಂಕಿತಾ ಜಯರಾಮ್ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಸ್ಫೂರ್ತಿ ಅವರು ಇದು ನನ್ನ ಜೀವನದ ವಾಸ್ತವ ಎಂದು ಬರೆದುಕೊಂಡಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

