- Home
- Entertainment
- Movie Reviews
- ಸಂಗಾತಿಗಾಗಿ 3 ಜನ್ಮ ಕಾಯೋ ಹೆಣ್ಣು ಹಾವು; 1991ರ ಸಸ್ಪೆನ್ಸ್ ಥ್ರಿಲ್ಲರ್ ಕನ್ನಡ ಸಿನಿಮಾ
ಸಂಗಾತಿಗಾಗಿ 3 ಜನ್ಮ ಕಾಯೋ ಹೆಣ್ಣು ಹಾವು; 1991ರ ಸಸ್ಪೆನ್ಸ್ ಥ್ರಿಲ್ಲರ್ ಕನ್ನಡ ಸಿನಿಮಾ
1991ರಲ್ಲಿ ತೆರೆಕಂಡ ಬ್ಲಾಕ್‌ಬಸ್ಟರ್ ಚಿತ್ರ, ತನ್ನ ಸಂಗಾತಿಗಾಗಿ ಮೂರು ಜನ್ಮಗಳ ಕಾಲ ಕಾಯುವ ಇಚ್ಛಾಧಾರಿ ಹಾವಿನ ಕಥೆಯಾಗಿದೆ. ಬೇಟೆಗಾರರಿಂದ ಹತನಾದ ಪ್ರಿಯಕರನಿಗಾಗಿ, ಶತ್ರುಗಳ ಮೇಲೆ ಸೇಡು ತೀರಿಸಿಕೊಳ್ಳುವ ಈ ಹಾವಿನ ಪಯಣ ಇದಾಗಿದೆ.

1991ರ ಕನ್ನಡದ ಬ್ಲಾಕ್‌ಬಸ್ಟರ್ ಸಿನಿಮಾ
ಇದು 1991ರ ಸಿನಿಮಾ. ಸಂಗಾತಿಗಾಗಿ ಹೆಣ್ಣು ಹಾವು ಮೂರು ಜನ್ಮ ಕಾದಿರುತ್ತದೆ. ತನ್ನ ವಿರುದ್ಧ ನಿಂತಿರೋ ಶತ್ರುಗಳನ್ನು ಹೇಗೆ ನಾಶ ಮಾಡುತ್ತೆ ಎಂಬುವುದು ಸಿನಿಮಾದ ಒಂದು ಸಾಲಿನ ಕಥೆಯಾಗಿದೆ. ಈ ಚಿತ್ರದಲ್ಲಿ ಮೂವರು ಸ್ಟಾರ್ ನಟರು ಮುಖ್ಯಭೂಮಿಕೆಯಲ್ಲಿ ನಟಿಸಿದ್ರೆ, ಚಿತ್ರದ ಹಾಡುಗಳು ಸಿನಿಮಾದ ಪ್ಲಾಸ್ ಪಾಯಿಂಟ್. ಇಂತಹ ಸಿನಿಮಾಗಳನ್ನು ಇಂದಿನ ಯುವ ಸಮುದಾಯ ನೋಡಿದ್ರೆ ವಾವ್ ಅಂತಾರೆ.
ಪ್ರಿಯಕರನ ಮತ್ತೊಂದು ಜನ್ಮಕ್ಕಾಗಿ ಕಾಯುವ ಹೆಣ್ಣು ಹಾವು
ದಟ್ಟವಾದ ಅರಣ್ಯದಲ್ಲಿ ಎರಡು ಇಚ್ಛಾಧಾರಿ ಜೋಡಿ ಹಾವುಗಳು ಮಾನವ ರೂಪಕ್ಕೆ ಬಂದು ಏಕಾಂತದಲ್ಲಿರುತ್ತವೆ. ಈ ವೇಳೆ ಅಲ್ಲಿಗೆ ಬಂದ ಬೇಟೆಗಾರರು ಗಂಡು ಹಾವನ್ನು ಕೊಲ್ಲುತ್ತಾರೆ. ಇದರಿಂದ ಕೋಪಗೊಂಡ ಹೆಣ್ಣು ಹಾವು, ಎಲ್ಲಾ ಬೇಟೆಗಾರರನ್ನು ಕೊಲ್ಲುತ್ತದೆ. ಸಂಗಾತಿಯನ್ನು ಕಳೆದುಕೊಂಡ ಹೆಣ್ಣು ಹಾವು, ವಿರಹ ವೇದನೆಯಿಂದಲೇ ಪ್ರಿಯಕರನ ಮತ್ತೊಂದು ಜನ್ಮಕ್ಕಾಗಿ ಕಾಯುತ್ತದೆ.
ಯಾವುದು ಈ ಸಿನಿಮಾ?
1991ರಲ್ಲಿ ಬಿಡುಗಡೆಗೊಂಡ 'ನಾಗಿಣಿ' ಸಿನಿಮಾದಲ್ಲಿ(Nagini Movie) ಅನಂತ್‌ನಾಗ್, ಶಂಕರನಾಗ್, ದೇವರಾಜ್, ತಾರಾ ಅನುರಾಧಾ, ಗೀತಾ ಮತ್ತು ರಜನಿ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಇಚ್ಛಾಧಾರಿ ನಾಗಿಣಿಯಾಗಿ ಗೀತಾ ನಟಿಸಿದ್ದಾರೆ. ನಾಗಿಣಿ ಚಿತ್ರದ ಹಾಡುಗಳು ಇಂದಿಗೂ ಎವರ್‌ಗ್ರೀನ್ ಲಿಸ್ಟ್‌ನಲ್ಲಿವೆ. ಈ ಚಿತ್ರದ ಕಥೆ ಏನು ಎಂಬುದನ್ನು ನೋಡೋಣ ಬನ್ನಿ.
ಚಿತ್ರದ ಕಥೆ ಏನು?
ಅನಂತ್‌ನಾಗ್ ಅರಣ್ಯಾಧಿಕಾರಿಯಾಗಿ ಕಾಡಿಗೆ ಬರುತ್ತಾನೆ. ಈ ವೇಳೆ ಅನಂತ್‌ನಾಗ್‌ನನ್ನು ಹಾವು ಹಿಂಬಾಲಿಸಿಕೊಂಡು ಬರುತ್ತದೆ. ನಂತರ ಅನಂತ್‌ನಾಗ್ ಮುಂದೆ ಹಾವು ಮಾನವ ರೂಪದಲ್ಲಿ ಕಾಣಿಸಿಕೊಂಡು ತನ್ನ ಕಥೆಯನ್ನು ಹೇಳಲಾರಂಭಿಸುತ್ತದೆ. ಗುಂಡೇಟಿಗೆ ಬಲಿಯಾದ ನಂತರ, ನಾಗರಹಾವು ಶಂಕರ್‌ನಾಗ್ ರೂಪದಲ್ಲಿ ಹುಟ್ಟುತ್ತದೆ. ಆದ್ರೆ ಎರಡನೇ ಜನ್ಮದಲ್ಲಿಯೂ ಪ್ರಿಯಕರನನ್ನು ಸೇರಲು ರಾಣಿ ಹಾವಿಗೆ ಸಾಧ್ಯವಾಗಲ್ಲ. ಅದು ಏಕೆ ಸಾಧ್ಯವಾಗಲ್ಲ? ಪ್ರಿಯಕರನ ಮಿಲನಕ್ಕಾಗಿ ಹಾವಿನ ರೂಪ ರಾಣಿ ಏನೆಲ್ಲಾ ಮಾಡ್ತಾಳೆ ಅನ್ನೋದು ಕುತೂಹಲ ಮೂಡಿಸುತ್ತದೆ.
ಸಸ್ಪೆನ್ಸ್ ಕ್ಲೈಮ್ಯಾಕ್ಸ್
ಇದಾದ ಎಷ್ಟೋ ವರ್ಷಗಳ ಬಳಿಕ ಮೊದಲ ಜನ್ಮದ ರೂಪದಲ್ಲಿಯೇ ಹಾವಿನ ಜನ್ಮ ಆಗುತ್ತದೆ. ಈ ಹಿಂದೆ ಮಾಡಿದ ತಪ್ಪುಗಳಿಂದ ಎಚ್ಚೆತ್ತ ಹೆಣ್ಣು ಹಾವು, ನೇರವಾಗಿಯೇ ತನ್ನ ಕಥೆಯೆಲ್ಲವನ್ನು ಹೇಳಿಕೊಳ್ಳುತ್ತದೆ. ಈ ಕಥೆ ಕೇಳಿದ ಬಳಿಕ ಅನಂತ್‌ನಾಗ್ ಏನ್ ಮಾಡ್ತಾರೆ? ಸಿನಿಮಾದ ಅಂತ್ಯ ಹೇಗೆ ಆಗುತ್ತೆ ಅನ್ನೋದು ಸಸ್ಪೆನ್ಸ್. ನೀವು ಈ ಸಿನಿಮಾವನ್ನು ಉಚಿತವಾಗಿ ಯುಟ್ಯೂಬ್‌ನಲ್ಲಿಯೇ ನೋಡಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

