- Home
- Entertainment
- Movie Reviews
- ಆತ್ಮದ ಸಂಗೀತ, ಕ್ಷಣ ಕ್ಷಣಕ್ಕೂ ಢವ ಢವ; 24 ವರ್ಷದ ನಂತ್ರ ಗೆದ್ದ ನಿಗೂಢ ಮಲಯಾಳಂ ಚಿತ್ರ
ಆತ್ಮದ ಸಂಗೀತ, ಕ್ಷಣ ಕ್ಷಣಕ್ಕೂ ಢವ ಢವ; 24 ವರ್ಷದ ನಂತ್ರ ಗೆದ್ದ ನಿಗೂಢ ಮಲಯಾಳಂ ಚಿತ್ರ
2000ರಲ್ಲಿ ಬಿಡುಗಡೆಯಾದ ಮಲಯಾಳಂ ಸಿನಿಮಾ ಆರಂಭದಲ್ಲಿ ಸೋತರೂ, ನಂತರ ಕಲ್ಟ್ ಕ್ಲಾಸಿಕ್ ಎನಿಸಿಕೊಂಡಿತು. ಸಂಗೀತಗಾರನೊಬ್ಬನಿಗೆ ಆತ್ಮವೊಂದು ಕಾಣಿಸಿಕೊಳ್ಳುವ ನಿಗೂಢ ಕಥೆಯುಳ್ಳ ಈ ಚಿತ್ರ, 2024ರಲ್ಲಿ ಮರು ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ಐತಿಹಾಸಿಕ ದಾಖಲೆ ಬರೆಯಿತು.

ಮಲಯಾಳಂ ಸಿನಿಮಾ
ಇದು 2000ರಲ್ಲಿ ಬಿಡುಗಡೆಯಾದ ಮಲಯಾಳಂ ಸಿನಿಮಾ. ಸಿಬಿ ಮಲಯಿಲ್ ನಿರ್ದೇಶಿಸಿದ ಪ್ರಸಿದ್ಧ ಮಲಯಾಳಂ ನಿಗೂಢ-ಭಯಾನಕ ಮತ್ತು ಮ್ಯೂಸಿಕಲ್ ಹಿಟ್ ಸಿನಿಮಾ ಇದಾಗಿದ್ದು, ಬೆಸ್ಟ್ ಸ್ಟೋರಿ ಹೊಂದಿರುವ ಕಲ್ಟ್ ಕ್ಲಾಸಿಕ್ ಸಿನಿಮಾ ಎಂದು ಪರಿಗಣಿಸಲಾಗುತ್ತದೆ. ಅಭಿಮಾನಿಗಳ ಒತ್ತಾಯದ ಮೇರೆಗೆ ಈ ಸಿನಿಮಾ 26ನೇ ಜುಲೈ 2024ರಂದು ಬಿಡುಗಡೆಯಾಗಿತ್ತು.
ಚಿತ್ರದ ಕಥೆ ಏನು?
ವಿಶಾಲ್ ಕೃಷ್ಣಮೂರ್ತಿ (ಮೋಹನ್‌ಲಾಲ್) ಎಂಬ ಸಂಗೀತಗಾರನ ಸುತ್ತ ಸಿನಿಮಾ ಸಾಗುತ್ತದೆ. ನಿರ್ಬಂಧಿತ ವಾದ್ಯ (Seven Bells) ನುಡಿಸೋದಕ್ಕಾಗಿ ವಿಶಾಲ್ ಕೃಷ್ಣಮೂರ್ತಿಯನ್ನು ಕಾಲೇಜಿನಲ್ಲಿದ್ದ ಹೊರಗೆ ಹಾಕಲಾಗುತ್ತದೆ. ನಿಗೂಢವಾದ ವಾದ್ಯ ತಾನೇ ಮೊಳಗುತ್ತದೆ ಎಂದು ಹೇಳಿದ್ರೂ ವಿಶಾಲ್ ಮಾತನ್ನು ಯಾರೂ ಕೇಳಿಸಿಕೊಳ್ಳಲ್ಲ. ಹೀಗೆ ಕಥೆ ಮುಂದುವರಿಯುತ್ತಾ ಹೋಗುತ್ತದೆ.
ನಾಯಕನಿಗೆ ಕಾಣಿಸಿಕೊಳ್ಳುವ ಆತ್ಮ
ಕೆಲ ವರ್ಷಗಳ ನಂತರ ಇದೇ ಕಾಲೇಜಿಗೆ ಸಂಗೀತ ಕಾರ್ಯಕ್ರಮ ನೀಡಲು ವಿಶಾಲ್ ಕೃಷ್ಣಮೂರ್ತಿ ಬರುತ್ತಾನೆ. ಈ ವೇಳೆ ವಿಶಾಲ್‌ಗೆ ಕಾಲೇಜಿನಲ್ಲಿ ಅದೃಶ್ಯ ಮಹಿಳೆಯ ಆತ್ಮ ಕಾಣಿಸಿಕೊಳ್ಳುತ್ತದೆ. ಇದು ಕಾಲೇಜಿನ ಒಡತಿ ಏಂಜಲೀನಾಳ (ಜಯಪ್ರದಾ) ಆತ್ಮವಾಗಿರುತ್ತದೆ. ವಿಶಾಲ್‌ಗೆ ಆತ್ಮ ಕಾಣಿಸಿಕೊಂಡಿದ್ಯಾಕೆ? ಆತ್ಮದ ಕಥೆ ಏನು ಎಂಬುವುದೇ ಸಿನಿಮಾದ ಸಸ್ಪೆನ್ಸ್. ಹಾಗಾದ್ರೆ ಇದು ಯಾವ ಸಿನಿಮಾ ಎಂದು ನೋಡೋಣ ಬನ್ನಿ.
ಥಿಯೇಟರ್‌ನಲ್ಲಿ ನೀರಸ ಪ್ರತಿಕ್ರಿಯೆ
2000ರಲ್ಲಿ ಬಿಡುಗಡೆಯಾದ ದೇವದೂತನ್ (Devadoothan) ಸಿನಿಮಾದಲ್ಲಿ ಮೋಹನ್‌ಲಾಲ್, ಜಯಪ್ರದಾ, ಮುರಳಿ, ಜನಾರ್ಧನ್, ವಿನಿತ್ ಕುಮಾರ್, ಜಗತಿ ಶ್ರೀಕುಮಾರ್ ಸೇರಿದಂತೆ ಹಲವರು ನಟಿಸಿದ್ದಾರೆ. ರಘುನಾಥ್ ಪಲೆರಿ ಕಥೆಗೆ ಸಿಬಿ ಮಲಯಿಲ ಆಕ್ಷನ್ ಕಟ್ ಹೇಳಿದ್ದಾರೆ. ಇದು ಥಿಯೇಟರ್‌ಗೆ ಬಂದಾಗ ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ನಂತರದ ದಿನಗಳಲ್ಲಿ ಸಿನಿಮಾ ಅಪಾರ ಮೆಚ್ಚುಗೆ ಪಡೆದುಕೊಂಡಿತ್ತು.
ಮರು ಬಿಡುಗಡೆಯಾಗಿ ದಾಖಲೆ ಬರೆದ ಸಿನಿಮಾ
ಟಿವಿಯಲ್ಲಿ ದೇವದೂತನ್ ಪ್ರಸಾರವಾದಾಗ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ನಂತರ ಇದೇ ಸಿನಿಮಾ 2024ರಲ್ಲಿ ಬಿಡುಗಡೆಗೊಂಡಾಗ ಹೊಸ ದಾಖಲೆಯನ್ನು ದೇವದೂತನ್ ಬರೆದಿತ್ತು. ಮರುಬಿಡುಗಡೆಯಾದ ದೇವದೂತನ್ 5.4 ಕೋಟಿ ರೂ.ವರೆಗೆ ಕಲೆಕ್ಷನ್ ಮಾಡಿತ್ತು. ಅತ್ಯಧಿಕ ಕಲೆಕ್ಷನ್ ಮಾಡಿರುವ ರಿ-ರಿಲೀಸ್ ಸಿನಿಮಾ ಎಂಬ ದಾಖಲೆಯನ್ನು ಹೊಂದಿದೆ. ಐಎಂಡಿಬಿಯಲ್ಲಿ ಈ ಸಿನಿಮಾಗೆ 7.4 ರೇಟಿಂಗ್ ನೀಡಲಾಗಿದೆ. ಯುಟ್ಯೂಬ್‌ನಲ್ಲಿ ಉಚಿತವಾಗಿ ಈ ಸಿನಿಮಾ ನೋಡಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

