Kangana Ranaut on Hanuman Ansh: ನಟಿ ಕಂಗನಾ ರಣಾವತ್ ತಮ್ಮ ಮುಂಬರುವ 'ಹನುಮಾನ್ ಅಂಶ್' ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಇದೊಂದು ಸಿನಿಮಾವಲ್ಲ, ಬದಲಿಗೆ ಸತ್ಸಂಗ. ನಿಮ್ಮ ಥೆರಪಿಯನ್ನು ಬಿಟ್ಟು ಈ ಚಿತ್ರವನ್ನು ನೋಡಿ ಎಂದು ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

ಹನುಮಾನ್ ಅಂಶ್(Hanuman Ansh) ಸದ್ದಿಲ್ಲದೆ ಬಿಡುಗಡೆಯಾಗಿ ಈಗ ದೇಶಾದ್ಯಂತ ಥಿಯೇಟರ್‌ಗಳಲ್ಲಿ ಸದ್ದು ಮಾಡುತ್ತಿದೆ. ಚಿತ್ರದಲ್ಲಿ ದೊಡ್ಡ ಸ್ಟಾರ್‌ ನಟರುಗಳಿಲ್ಲ, ಅದ್ದೂರಿ ಸೆಟ್ ಇಲ್ಲ. ಚಿತ್ರ ಬಿಡುಗಡೆ ಆರಂಭದಲ್ಲಿ ಪ್ರೇಕ್ಷಕರೇ ಬಾರದ ಸಿನಿಮಾವೊಂದು ಇದೀಗ ಎಲ್ಲೆಡೆ ಸದ್ದು ಮಾಡುತ್ತಿದೆ. ಇನ್ನು ಅಚ್ಚರಿ ಎಂದರೆ ಈ ಸಿನಿಮಾ ನಿರ್ಮಾಣಕ್ಕೆ ವಚ್ಚವಾಗಿ ಕೇವಲ ಎರಡು ಕೋಟಿ. ಇಷ್ಟೊಂದು ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾದ ಹನುಮಾನ್ ಅಂಶ್ ಸಿನಿಮಾ, ಟಾಕ್ಸಿಕ್, ಇರುಮುಡಿಯಂಥ ಬಿಗ್ ಬಜೆಟ್ ನಡುವೆ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುವುದು ಬಾಬಾ ನೀಮ್ ಕರೋಲಿ ಪವಾಡವೇ ಸರಿ.

ಬಾಲಿವುಡ್ ನಟಿ ಕಂಗನಾ ರಣಾವತ್ ಕೂಡ ಹನುಮಾನ್ ಅಂಶ್ ಚಿತ್ರದ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ. 'ಹನುಮಾನ್ ಅಂಶ್' ಇದು ಸಿನಿಮಾವಲ್ಲ ಸತ್ಸಂಗ' ಎಂದು ವಿಶಿಷ್ಟವಾಗಿ ಬಣ್ಣಿಸಿ ಪೋಸ್ಟ್ ಮಾಡಿದ್ದಾರೆ. ಸ್ವತಃ ನೀಮ್ ಕರೋಲಿ ಬಾಬಾ ಭಕ್ತೆಯಾಗಿರುವ ಕಂಗಾನ, ಈ ಸಿನಿಮಾ ನೋಡುವುದೊಂದು ದೈವಿಕ ಅನುಭವ ಎಂದು ಬರೆದಿದ್ದಾರೆ.

ಬಾಬಾ ನೀಮ್ ಕರೋಲಿ ಕುರಿತಾದ ಚಿತ್ರ

ನೀಮ್ ಕರೋಲಿ ಬಾಬಾ ಅವರ ಜೀವನ ಸುತ್ತ ಸುತ್ತುತ್ತದೆ. ನೀಮ್ ಕರೋರಿಬಾಬಾ ಅವರ ಮೊದಲ ಅನುಭವವನ್ನು ಹೊಂದಿದ್ದ ಜನರ ಸಣ್ಣ ಕಥೆಗಳನ್ನು ಸುಂದರವಾಗಿ ಹೆಣೆದಿದೆ. ನೀವು ಈ ಸಿನಿಮಾ ನೋಡಿದರೆ ಯಾವುದೇ ಚಿಕಿತ್ಸೆ (ಥೆರಪಿ) ಬೇಕಾಗಿಲ್ಲ ಎಂದು ಬಣ್ಣಿಸಿದ್ದಾರೆ. ಇನ್ನು ಕಂಗನಾಗಿಂತ ಮೊದಲು ಹನುಮಾನ್ ಅಂಶ್ ಚಿತ್ರದ ಬಗ್ಗೆ ಚಲನಚಿತ್ರ ನಿರ್ಮಾಪಕ ಮಧುರ್ ಭಂಡಾರ್ಕರ್ ಕೂಡ ವಿಮರ್ಶಿಸಿ ಬರೆದಿದ್ದರು. ಅತ್ಯಂತ ಕಡಿಮೆ ಬಜೆಟ್‌ನಲ್ಲಿ ಸುಂದರವಾಗಿ ನಿರ್ಮಾಣವಾದ ಚಿತ್ರವೊಂದು ಬಾಕ್ಸ್ ಆಫೀಸ್ ಯಶಸ್ಸು ಕಂಡಿದ್ದು ಶ್ಲಾಘಿಸಿದ್ದರು.

ಹನುಮಾನ್ ಅಂಶ್ ಯಶಸ್ಸಿನ ಗುಟ್ಟು

ವಿಶಾಲ್ ಚತುರ್ವೇದಿ ಬರೆದು ನಿರ್ದೇಶಿಸಿದ ಹನುಮಾನ್ ಅಂಶ್, ಮಹಾರಾಜ್-ಜಿ ಎಂದೇ ಜನಪ್ರಿಯವಾಗಿರುವ ನೀಮ್ ಕರೋಲಿ ಬಾಬಾ ಅವರ ಜೀವನವನ್ನು ಆಧರಿಸಿದೆ. ಈ ಸಿನಿಮಾ ಹಣ ಗಳಿಕೆ ಮಾಡಿದ್ದಲ್ಲ, ಯಾವುದೇ ಪ್ರಚಾರದ ಅಬ್ಬರವಿಲ್ಲ, ದೊಡ್ಡ ದೊಡ್ಡ ಸ್ಟಾರ್‌ನಟರುಗಳಿಲ್ಲ. ಆದರೆ ಸಿನಿಮಾ ನಿರ್ಮಾಣದಲ್ಲಿನ ಶಿಸ್ತು, ಭಾವ ಪರವಶತೆಯ ಅಭಿನಯ ಗಟ್ಟಿ ಕಥೆ ಚಿತ್ರದ ಯಶಸ್ಸಿನ ರಹಸ್ಯ. ಸಿನಿಮಾದ ಮುಖ್ಯ ಕಥೆಯ ತಿರುಳು ಹೀಗಿದೆ' ದುಃಖಿತ ಹುಡುಗನೊಬ್ಬ ತನ್ನ ಅಗಲಿದ ತಾಯಿಯನ್ನು ಭೇಟಿಯಾಗಲು ದೇವರನ್ನು ಹುಡುಕುತ್ತಾನೆ, ಈ ಆದ್ಯಾತ್ಮ ಪಯಣದಲ್ಲಿ ಲಕ್ಷ್ಮಣ್ ದಾಸ್ ಹೇಗೆ ನೀಮ್ ಕರೋಲಿ ಬಾಬಾ ಆಗಿ ಬದಲಾಗುತ್ತೇನೆ ಎಂಬ ಬಗ್ಗೆ ವಿಶಿಷ್ಟವಾಗಿ ಚಿತ್ರದಲ್ಲಿ ತೋರಿಸಲಾಗಿದೆ.