- Home
- Technology
- Mobiles
- ಫೋನ್ ಕದ್ದ ನಂತರವೂ ನಿಮ್ಮ ಡೇಟಾವನ್ನ ಹೇಗೆ ಉಳಿಸಿಕೊಳ್ಳಬಹುದು.. ಈ ಟೆಕ್ನಿಕ್ ನಿಮಗೆ ಗೊತ್ತಿರಲೇಬೇಕು
ಫೋನ್ ಕದ್ದ ನಂತರವೂ ನಿಮ್ಮ ಡೇಟಾವನ್ನ ಹೇಗೆ ಉಳಿಸಿಕೊಳ್ಳಬಹುದು.. ಈ ಟೆಕ್ನಿಕ್ ನಿಮಗೆ ಗೊತ್ತಿರಲೇಬೇಕು
ಆಂಡ್ರಾಯ್ಡ್ 17 ಫೋನ್ ಕಳ್ಳತನವಾದರೂ ನಿಮ್ಮ ಡೇಟಾವನ್ನು ರಕ್ಷಿಸಲು 'ಐಡೆಂಟಿಟಿ ಚೆಕ್' ನಂತಹ ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳನ್ನು ಪರಿಚಯಿಸಿದೆ. ಈ ಕುರಿತ ಕಂಪ್ಲೀಟ್ ಮಾಹಿತಿ ಇಲ್ಲಿದೆ..

ಆಂಡ್ರಾಯ್ಡ್ 17 ರ ಹೊಸ ಸುರಕ್ಷತಾ ಕ್ರಮಗಳು
ಇವತ್ತು ಸ್ಮಾರ್ಟ್‌ಫೋನ್ ಕೇವಲ ಕರೆ ಮಾಡಲು ಅಥವಾ ಸಂದೇಶ ಕಳುಹಿಸಲು ಇರುವ ಸಾಧನವಲ್ಲ. ಅದರಲ್ಲಿ ನಮ್ಮ ಬ್ಯಾಂಕಿಂಗ್ ಆಪ್‌ಗಳು, UPI, ಇಮೇಲ್, ಸೋಶಿಯಲ್ ಮೀಡಿಯಾ ಮತ್ತು ವೈಯಕ್ತಿಕ ಫೋಟೋಗಳಂತಹ ಅತ್ಯಂತ ಸೂಕ್ಷ್ಮ ಮಾಹಿತಿಗಳಿರುತ್ತವೆ. ಹೀಗಿರುವಾಗ ಫೋನ್ ಕಳೆದುಹೋದರೆ ಅಥವಾ ಕಳ್ಳತನವಾದರೆ, ಫೋನ್ ಬೆಲೆಗಿಂತಲೂ ಅದರಲ್ಲಿರುವ ಡೇಟಾ ದುರುಪಯೋಗವಾಗಬಹುದು ಎಂಬ ಆತಂಕವೇ ದೊಡ್ಡದು. ಬಳಕೆದಾರರ ಈ ಭಯ ಓಡಿಸಲು ಗೂಗಲ್ ತನ್ನ ಹೊಸ Android 17 ಆವೃತ್ತಿಯಲ್ಲಿ ಅತ್ಯಂತ ಬಲಿಷ್ಠ ಸುರಕ್ಷತಾ ಫೀಚರ್‌ಗಳನ್ನು ಪರಿಚಯಿಸಿದೆ.
ಫೇಲ್ಡ್ ಅಥೆಂಟಿಕೇಶನ್ ಲಾಕ್ (Failed Authentication Lock):
ಆಂಡ್ರಾಯ್ಡ್ 17 ರಲ್ಲಿ ಕಳ್ಳರು ನಿಮ್ಮ ಫೋನ್ ಅನ್ನು ಸುಲಭವಾಗಿ ಅನ್‌ಲಾಕ್ ಮಾಡಲು ಸಾಧ್ಯವಿಲ್ಲ. ಯಾರಾದರೂ ಪದೇ ಪದೇ ತಪ್ಪು ಪಿನ್ (PIN) ಅಥವಾ ಪಾಸ್‌ವರ್ಡ್ ಹಾಕಿ ಫೋನ್ ಲಾಕ್ ತೆಗೆಯಲು ಯತ್ನಿಸಿದರೆ, ಅಂತಹ ಪ್ರಯತ್ನಗಳ ಮಿತಿಯನ್ನು ಕಡಿಮೆ ಮಾಡಲಾಗಿದೆ. ಪ್ರತಿ ತಪ್ಪು ಪ್ರಯತ್ನದ ನಂತರ ಕಾಯುವ ಸಮಯವನ್ನು (Wait Time) ಹೆಚ್ಚಿಸಲಾಗಿದೆ. ಇದರಿಂದ ಕಳ್ಳರು ರಾಂಡಮ್ ಆಗಿ ಪಿನ್ ಹಾಕಿ ಲಾಕ್ ಮುರಿಯುವುದನ್ನು ತಡೆಯಬಹುದು.
ಐಡೆಂಟಿಟಿ ಚೆಕ್ (Identity Check):
ಒಂದು ವೇಳೆ ಕಳ್ಳನಿಗೆ ನಿಮ್ಮ ಪಿನ್ ತಿಳಿದಿದ್ದರೂ ಸಹ, ಕೆಲವು ಸೂಕ್ಷ್ಮ ಸೆಟ್ಟಿಂಗ್‌ಗಳನ್ನು ಬದಲಾಯಿಸಲು ಹೋದಾಗ ಫೋನ್ ಬಯೋಮೆಟ್ರಿಕ್ (ಫಿಂಗರ್‌ಪ್ರಿಂಟ್ ಅಥವಾ ಫೇಸ್ ಲಾಕ್) ಕೇಳುತ್ತದೆ.
ಮಾರ್ಕ್ ಆಸ್ ಲಾಸ್ಟ್ (Mark as Lost):
ಗೂಗಲ್‌ನ 'Find My Device ನಲ್ಲಿರುವ 'ಮಾರ್ಕ್ ಆಸ್ ಲಾಸ್ಟ್' ಫೀಚರ್ ಅನ್ನು ಈಗ ಮತ್ತಷ್ಟು ಸುಧಾರಿಸಲಾಗಿದೆ. ಇದನ್ನು ಆಕ್ಟಿವೇಟ್ ಮಾಡಿದರೆ ಫೋನ್ ಬಯೋಮೆಟ್ರಿಕ್ ಮೂಲಕವೂ ಲಾಕ್ ಆಗುತ್ತದೆ. ಇದರೊಂದಿಗೆ ಕ್ವಿಕ್ ಸೆಟ್ಟಿಂಗ್ಸ್ (Quick Settings) ಹೈಡ್ ಮಾಡಬಹುದು ಮತ್ತು ಹೊಸ ವೈ-ಫೈ ಅಥವಾ ಬ್ಲೂಟೂತ್ ಕನೆಕ್ಷನ್ ಆಗದಂತೆ ತಡೆಯಬಹುದು.
ಫೋನ್ ಕಳ್ಳತನವಾದ್ರೆ ನೀವು ಮೊದಲು ಏನು ಮಾಡಬೇಕು?
ಸಿಮ್ ಕಾರ್ಡ್ ಬ್ಲಾಕ್ ಮಾಡಿ: ತಕ್ಷಣ ನಿಮ್ಮ ಟೆಲಿಕಾಂ ಆಪರೇಟರ್‌ನ ಕಸ್ಟಮರ್ ಕೇರ್‌ಗೆ ಕರೆ ಮಾಡಿ ಸಿಮ್ ಕಾರ್ಡ್ ಬ್ಲಾಕ್ ಅಥವಾ ಸಸ್ಪೆಂಡ್ ಮಾಡಿಸಿ. ಇದರಿಂದ ಕಳ್ಳರಿಗೆ ನಿಮ್ಮ ನಂಬರ್‌ಗೆ ಬರುವ OTP ಗಳು ಸಿಗುವುದಿಲ್ಲ.
Find My Device ಬಳಸಿ: ಮತ್ತೊಂದು ಫೋನ್ ಅಥವಾ ಕಂಪ್ಯೂಟರ್ ಬಳಸಿ 'Find My Device' (ಆಂಡ್ರಾಯ್ಡ್) ಅಥವಾ 'Find My iPhone' (ಐಫೋನ್) ಲಾಗಿನ್ ಮಾಡಿ. ಅಲ್ಲಿಂದ ನೀವು ಫೋನ್ ಲಾಕ್ ಮಾಡಬಹುದು ಅಥವಾ ದೂರದಲ್ಲಿದ್ದೇ ಫೋನ್‌ನಲ್ಲಿರುವ ಎಲ್ಲಾ ಡೇಟಾವನ್ನು ಡಿಲೀಟ್ (Factory Reset) ಮಾಡಬಹುದು.
UPI ಮತ್ತು ಬ್ಯಾಂಕ್ ಖಾತೆಗಳ ಸುರಕ್ಷತೆ: ಕೂಡಲೇ ನಿಮ್ಮ ಬ್ಯಾಂಕ್‌ಗೆ ಕರೆ ಮಾಡಿ ಯುಪಿಐ (UPI) ಮತ್ತು ಬ್ಯಾಂಕಿಂಗ್ ಆಪ್‌ಗಳನ್ನು ತಾತ್ಕಾಲಿಕವಾಗಿ ಬ್ಲಾಕ್ ಮಾಡಿ.
ಪಾಸ್‌ವರ್ಡ್ ಬದಲಾಯಿಸಿ: ನಿಮ್ಮ ಇಮೇಲ್ (Gmail), ಸೋಶಿಯಲ್ ಮೀಡಿಯಾ (FB, Instagram) ಮತ್ತು ಶಾಪಿಂಗ್ ಆಪ್‌ಗಳ ಪಾಸ್‌ವರ್ಡ್‌ಗಳನ್ನು ತಕ್ಷಣ ಬದಲಾಯಿಸಿ.
IMEI ನಂಬರ್ ಮತ್ತು FIR: ನಿಮ್ಮ ಫೋನ್‌ನ IMEI ನಂಬರ್ ಬಳಸಿ ಹತ್ತಿರದ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಿ. ಇತ್ತೀಚೆಗೆ ಸರ್ಕಾರವು ಪರಿಚಯಿಸಿರುವ 'Sanchar Saathi' (CEIR) ಪೋರ್ಟಲ್ ಮೂಲಕವೂ ನೀವು ಫೋನ್ ಅನ್ನು ಬ್ಲಾಕ್ ಮಾಡಬಹುದು. ಇದು ಇನ್ಶೂರೆನ್ಸ್ ಕ್ಲೈಮ್ ಮಾಡಲೂ ಸಹಕಾರಿಯಾಗುತ್ತದೆ.
ಯಾವುದಕ್ಕೂ ಹುಷಾರಾಗಿರಿ..
ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ ಫೋನ್‌ನಲ್ಲಿ ಯಾವಾಗಲೂ ಸ್ಟ್ರಾಂಗ್ ಪಾಸ್‌ವರ್ಡ್ ಮತ್ತು ಬಯೋಮೆಟ್ರಿಕ್ ಲಾಕ್ ಇಡುವುದು ನಿಮ್ಮ ಮೊದಲ ಜವಾಬ್ದಾರಿ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

