MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Bigg Boss Kannada 13
ECI Internal Rift
Bay of Bengal Cyclone
India's Highest Civilian Award
Today's Horoscope
Satish Jarkiholi ED Probe
YouTuber Madhu Gowda
Karnataka Assembly Drama
Karnataka BJP vs Congress
India Rich List 2026
Indian Education System
Vande Bharat Express Arasikere
  • Home
  • Life
  • Snake On Bed: ಹಾವುಗಳು ಮನುಷ್ಯರ ಹಾಸಿಗೆ ಮೇಲೆ ಯಾಕೆ ಬರುತ್ತವೆ ಗೊತ್ತಾ?

Snake On Bed: ಹಾವುಗಳು ಮನುಷ್ಯರ ಹಾಸಿಗೆ ಮೇಲೆ ಯಾಕೆ ಬರುತ್ತವೆ ಗೊತ್ತಾ?

Why snakes hide under bed: ರಾತ್ರಿ ನೆಮ್ಮದಿಯಾಗಿ ನಿದ್ದೆ ಮಾಡುವಾಗ ದಿಢೀರ್ ಅಂತ ಹಾಸಿಗೆ ಮೇಲೆ ಹಾವು ಕಂಡರೆ ಹೇಗಿರುತ್ತೆ? ಅಬ್ಬಾ.. ನೆನಸಿಕೊಂಡರೆ ಮೈ ಜುಮ್ ಅನ್ನುತ್ತೆ ಅಲ್ವಾ? ಅಸಲಿಗೆ ಹಾವುಗಳು ಮನುಷ್ಯರ ಹಾಸಿಗೆ ಮೇಲೆ ಯಾಕೆ ಬರುತ್ತವೆ? ಇದರ ಹಿಂದಿನ ಅಸಲಿ ಕಾರಣ ಇಲ್ಲಿದೆ..

1 Min read
Author : Ashwini HR
Published : Sep 24 2026, 07:56 PM IST
Share this Photo Gallery
  • FB
  • TW
  • Linkdin
  • Whatsapp
14
ಮಂಚದ ಮೇಲೆ ಯಾಕೆ ಬರುತ್ತವೆ?
Image Credit : gemini ai

ಮಂಚದ ಮೇಲೆ ಯಾಕೆ ಬರುತ್ತವೆ?

ಹಾವುಗಳು ಸಾಮಾನ್ಯವಾಗಿ ಮನುಷ್ಯರನ್ನು ಹುಡುಕಿಕೊಂಡು ಮನೆಗೆ ಬರುವುದಿಲ್ಲ. ಆದರೆ ಮನೆಯಲ್ಲಿ ಇಲಿ, ಕಪ್ಪೆಗಳಿದ್ದರೆ ಅವುಗಳನ್ನು ಬೇಟೆಯಾಡಲು ಹಾವುಗಳು ಒಳಗೆ ನುಗ್ಗುತ್ತವೆ. ಮಂಚದ ಕೆಳಗೆ, ಗೋಡೆಯ ಮೂಲೆಗಳಲ್ಲಿ ಅಥವಾ ಫರ್ನಿಚರ್ ಸುತ್ತಮುತ್ತ ಇಲಿಗಳು ಓಡಾಡುತ್ತಿದ್ದರೆ, ಅವುಗಳನ್ನು ಬೆನ್ನಟ್ಟಿಕೊಂಡು ನೀವು ಮಲಗುವ ಹಾಸಿಗೆಯವರೆಗೂ ಬಂದು ಬಿಡುತ್ತವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
ಮತ್ತೊಂದು ಕಾರಣ ಗೊತ್ತಾ?
Image Credit : gemini ai

ಮತ್ತೊಂದು ಕಾರಣ ಗೊತ್ತಾ?

ಮತ್ತೊಂದು ಮುಖ್ಯ ಕಾರಣ ಬೆಚ್ಚಗಿನ ವಾತಾವರಣ. ಚಳಿಗಾಲದಲ್ಲಿ ಹಾವುಗಳು ತಮ್ಮ ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಲು ಬೆಚ್ಚಗಿರುವ ಜಾಗಗಳನ್ನು ಹುಡುಕುತ್ತವೆ. ಹಾಗಾಗಿ ಬ್ಲಾಂಕೆಟ್, ಹಾಸಿಗೆ ಅಥವಾ ಬೆಚ್ಚಗಿನ ಜಾಗ ಕಂಡರೆ ಅಲ್ಲಿಗೆ ಸೇರಿಕೊಳ್ಳುತ್ತವೆ. ಅಲ್ಲಿ ಅವುಗಳಿಗೆ ಆರಾಮದಾಯಕ ಎನಿಸಿದರೆ ಅಲ್ಲೇ ಉಳಿದುಬಿಡುತ್ತವೆ. ಯಾರಾದರೂ ತಮ್ಮ ಮೇಲೆ ದಾಳಿ ಮಾಡುತ್ತಾರೆ ಎಂದು ಅನಿಸಿದರೆ ಮಾತ್ರ ಕಚ್ಚುತ್ತವೆ.

Related Articles

Related image1
ಹಾವುಗಳಿಗೆ ಈ ವಾಸನೆ ಅಂದ್ರೆ ಆಗಲ್ಲ, ಸಿಕ್ಕಾಪಟ್ಟೆ ದ್ವೇಷ.. ಇವು ನಿಮ್ಮನೇಲೂ ಇದ್ಯಾ ನೋಡಿ..
Related image2
Snake Bite: ನೀರಿನಲ್ಲಿ ಹಾವುಗಳು ಕಚ್ಚುವುದಿಲ್ಲ ಎಂಬುದು ನಿಜವೇ? ಸತ್ಯ ಇಲ್ಲಿದೆ
34
ಮನೆ ಕ್ಲೀನ್ ಆಗಿರಬೇಕು
Image Credit : gemini ai

ಮನೆ ಕ್ಲೀನ್ ಆಗಿರಬೇಕು

ಮಂಚದ ಕೆಳಗಿರುವ ಕತ್ತಲು ಮತ್ತು ಶಾಂತ ವಾತಾವರಣ ಹಾವುಗಳಿಗೆ ಅಡಗಿಕೊಳ್ಳಲು ಹೇಳಿ ಮಾಡಿಸಿದ ಜಾಗ. ನೆಲದ ಮೇಲೆ ವಸ್ತುಗಳನ್ನು ಅಸ್ತವ್ಯಸ್ತವಾಗಿ ಬಿಸಾಕಿದ್ದರೆ ಅವುಗಳಿಗೆ ಅಡಗಿಕೊಳ್ಳಲು ಸುಲಭವಾಗುತ್ತದೆ. ಹಾಗಾಗಿ ಮಂಚದ ಕೆಳಗೆ, ಫರ್ನಿಚರ್ ಹತ್ತಿರ ವಸ್ತುಗಳನ್ನು ಗುಡ್ಡೆ ಹಾಕಬೇಡಿ. ಆಗಾಗ ಮನೆಯನ್ನು ಕ್ಲೀನ್ ಮಾಡುತ್ತಿರಿ. ಮಳೆಗಾಲದಲ್ಲಿ ಹಾವುಗಳು ಹೆಚ್ಚಾಗಿ ಹೊರಗೆ ಓಡಾಡುವುದರಿಂದ, ಬೆಚ್ಚಗಿನ ಜಾಗ ಹುಡುಕಿಕೊಂಡು ಮನೆಗೆ ನುಗ್ಗುತ್ತವೆ.

44
ತಕ್ಷಣ ಕೊಲ್ಲಬೇಡಿ
Image Credit : AI Image

ತಕ್ಷಣ ಕೊಲ್ಲಬೇಡಿ

ಹಾಸಿಗೆಯ ಮೇಲೆ ಅಥವಾ ಮನೆಯಲ್ಲಿ ಎಲ್ಲೇ ಹಾವು ಕಂಡರೂ ತಕ್ಷಣ ಅದನ್ನು ಕೊಲ್ಲಬೇಡಿ. ಹಾಗೇ ನೀವೇ ಅದನ್ನು ಹಿಡಿಯಲು ಹೋಗಬೇಡಿ. ಮನೆಯ ಸುತ್ತಮುತ್ತಲಿನ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳಿ. ಬಿಲಗಳು, ಗುಂಡಿಗಳು, ಇರುವೆ ಹುತ್ತಗಳು ಇಲ್ಲದಂತೆ ನೋಡಿಕೊಳ್ಳಿ. ಕಸವನ್ನು ಕ್ಲೀನ್ ಮಾಡಿ. ಎಲ್ಲಕ್ಕಿಂತ ಮುಖ್ಯವಾಗಿ ಮನೆಯಲ್ಲಿ ಇಲಿಗಳು ಬರದಂತೆ ಎಚ್ಚರವಹಿಸಿ. ಹಾವು ಕಂಡರೆ ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಜೀವನಶೈಲಿ
 

Latest Videos
Recommended Stories
Recommended image1
ಅಡುಗೆ ಕೆಲಸ ಸುಲಭ ಮಾಡಿಕೊಳ್ಳಲು ಅಮ್ಮ ಹೇಳಿದ 7 ಸಿಂಪಲ್ ಕಿಚನ್ ಟಿಪ್ಸ್
Recommended image2
ರವೆ ಇದ್ರೆ ಸಾಕು ದಿಢೀರ್ ಅಂತ ಮಾಡಬಹುದು ಆರೋಗ್ಯಕರ ತರಕಾರಿ ಕಡುಬು
Recommended image3
6 ವರ್ಷದ ಲವ್​ಗೆ ಮದ್ವೆಯ ಮುದ್ರೆ: ಹುಡುಗನ ಗುಟ್ಟು ರಿವೀಲ್​ ಮಾಡಿ ವಧುವಿನಂತೆ ಕಂಗೊಳಿಸಿದ Bigg Boss ಸ್ಪಂದನಾ
Related Stories
Recommended image1
ಹಾವುಗಳಿಗೆ ಈ ವಾಸನೆ ಅಂದ್ರೆ ಆಗಲ್ಲ, ಸಿಕ್ಕಾಪಟ್ಟೆ ದ್ವೇಷ.. ಇವು ನಿಮ್ಮನೇಲೂ ಇದ್ಯಾ ನೋಡಿ..
Recommended image2
Snake Bite: ನೀರಿನಲ್ಲಿ ಹಾವುಗಳು ಕಚ್ಚುವುದಿಲ್ಲ ಎಂಬುದು ನಿಜವೇ? ಸತ್ಯ ಇಲ್ಲಿದೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved