ಹಾವುಗಳಿಗೆ ಈ ವಾಸನೆ ಅಂದ್ರೆ ಆಗಲ್ಲ, ಸಿಕ್ಕಾಪಟ್ಟೆ ದ್ವೇಷ.. ಇವು ನಿಮ್ಮನೇಲೂ ಇದ್ಯಾ ನೋಡಿ..
Scents snakes hate: ಮಳೆಗಾಲದಲ್ಲಿ ಮನೆಯೊಳಗೆ ಹಾವುಗಳು ನುಗ್ಗುವ ಭೀತಿ ಎಲ್ಲರನ್ನೂ ಕಾಡುತ್ತದೆ. ಆದರೆ ನಿಸರ್ಗದಲ್ಲೇ ಹಾವನ್ನು ಓಡಿಸುವ ದಿವ್ಯೌಷಧಗಳಿವೆ! ಕೆಲ ನಿರ್ದಿಷ್ಟ ವಾಸನೆಗೆ ಹಾವುಗಳು ಹತ್ತಿರವೂ ಸುಳಿಯುವುದಿಲ್ಲ. ಅಂತಹ ಹಾವಿನ ಶತ್ರು ಯಾವುವು ಎಂಬ ಆಸಕ್ತಿದಾಯಕ ಮಾಹಿತಿ ಇಲ್ಲಿದೆ.
ನಿಮ್ಮ ಮನೆಯತ್ತ ಸುಳಿಯಲ್ಲ
ನಿಮ್ಮ ಮನೆಯತ್ತ ಸುಳಿಯಲ್ಲ
ಮಳೆಗಾಲದಲ್ಲಿ ಕೀಟಗಳ ಜೊತೆಗೆ ಹಾವುಗಳು ಮನೆಗೆ ನುಗ್ಗುವ ಅಪಾಯವೂ ಹೆಚ್ಚಾಗಿರುತ್ತದೆ. ಅದರಲ್ಲೂ ನಿಮ್ಮ ಮನೆಯ ಸುತ್ತಮುತ್ತ ಪಾರ್ಕ್, ಕಾಡು, ಕೆರೆ ಅಥವಾ ಚರಂಡಿಗಳಿದ್ದರೆ ಈ ಭಯ ಇನ್ನೂ ಹೆಚ್ಚು. ಕೆಲವು ಹಾವುಗಳು ಎಷ್ಟು ವಿಷಪೂರಿತವಾಗಿರುತ್ತವೆ ಎಂದರೆ ಅವು ಕಚ್ಚಿದ ತಕ್ಷಣ ಮನುಷ್ಯ ಸಾವನ್ನಪ್ಪಬಹುದು. ಅಂತಹ ಸಮಯದಲ್ಲಿ ಹಾವನ್ನು ಹಿಡಿಯಲು ತಜ್ಞರನ್ನು ಕರೆಯುವುದು ಕೂಡ ಕಷ್ಟವಾಗಬಹುದು. ಹಾಗಾಗಿ ಮೊದಲೇ ಹಾವುಗಳು ನಿಮ್ಮ ಮನೆಯತ್ತ ಸುಳಿಯದಂತೆ ಮಾಡಲು ಇಲ್ಲಿ ಕೆಲವು ಸುಲಭ ಉಪಾಯಗಳಿವೆ.
ಫಿನೈಲ್ ವಾಸನೆ ಆಗಲ್ಲ
ಫಿನೈಲ್ ವಾಸನೆ ಆಗಲ್ಲ
ಮಳೆಗಾಲದಲ್ಲಿ ಮನೆಯ ಸುತ್ತಮುತ್ತ ಸ್ವಚ್ಛವಾಗಿಟ್ಟುಕೊಳ್ಳುವುದು ಬಹಳ ಮುಖ್ಯ. ಸಣ್ಣ ಪುಟ್ಟ ಗಿಡಗಂಟೆಗಳು ಅಥವಾ ಪೊದೆಗಳಿದ್ದರೆ ಅವುಗಳನ್ನು ಕತ್ತರಿಸಿ ಹಾಕಿ. ಮನೆಯ ಆಸುಪಾಸಿನಲ್ಲಿ ಇಲಿಗಳಿದ್ದರೆ ಮೊದಲು ಅವುಗಳನ್ನು ನಿಯಂತ್ರಿಸಿ, ಏಕೆಂದರೆ ಹಾವುಗಳು ಇಲಿಗಳನ್ನು ಹುಡುಕುತ್ತಾ ಮನೆಗೆ ಬರುತ್ತವೆ. ಕಿಟಕಿ ಮತ್ತು ಬಾಗಿಲುಗಳ ಸಂದನ್ನು ಸಂಪೂರ್ಣವಾಗಿ ಮುಚ್ಚಿ. ಮನೆಯ ಒಳಗೆ ಮತ್ತು ಹೊರಗೆ ಫಿನೈಲ್ (Phenyl) ಅಥವಾ ಸರ್ಪಗಂಧದ ಗಿಡ (Rauvolfia serpentina) ಗಳನ್ನು ಬೆಳೆಸುವುದರಿಂದ ಹಾವು ಬರುವ ಅಪಾಯ ಕಡಿಮೆಯಾಗುತ್ತದೆ.
ಹಾವು ಯಾವುದಕ್ಕೆ ಹೆದರುತ್ತದೆ?
ಹಾವು ಯಾವುದಕ್ಕೆ ಹೆದರುತ್ತದೆ?
ಸಾಮಾನ್ಯವಾಗಿ ಹಾವುಗಳು ಮನುಷ್ಯರಿಗೆ ಹೆದರುತ್ತವೆ. ಇದರ ಹೊರತಾಗಿ ಮುಂಗುಸಿ, ಗೂಬೆ ಮತ್ತು ದೊಡ್ಡ ಪಕ್ಷಿಗಳನ್ನು ಕಂಡರೆ ಹಾವುಗಳಿಗೆ ಭಯ. ಬೆಂಕಿ ಮತ್ತು ದೊಡ್ಡ ಶಬ್ದ ಕೇಳಿದರೂ ಹಾವುಗಳು ಅಲ್ಲಿಗೆ ಬರುವುದಿಲ್ಲ. ನೀವು ಹಾವನ್ನು ದೂರವಿಡಲು ಬಯಸಿದರೆ, ಬೆಳ್ಳುಳ್ಳಿ, ಈರುಳ್ಳಿ, ವಿನೆಗರ್ ಮತ್ತು ಪುದೀನಾದ (Mint) ತೀಕ್ಷ್ಣವಾದ ವಾಸನೆಯನ್ನು ಬಳಸಬಹುದು. ಈ ವಾಸನೆ ಕಂಡರೆ ಹಾವುಗಳು ಬಹುದೂರ ಓಡಿಹೋಗುತ್ತವೆ.
ಈ ಗಿಡದ ವಾಸನೆಯನ್ನು ದ್ವೇಷಿಸುತ್ತವೆ ಹಾವುಗಳು
ಈ ಗಿಡದ ವಾಸನೆಯನ್ನು ದ್ವೇಷಿಸುತ್ತವೆ ಹಾವುಗಳು
ಕೆಲವು ಗಿಡಗಳ ವಾಸನೆಯನ್ನು ಹಾವುಗಳು ಸಹಿಸುವುದಿಲ್ಲ. ಅಂತಹ ಗಿಡಗಳನ್ನು ಮನೆಯ ಬಾಲ್ಕನಿ ಅಥವಾ ಅಂಗಳದಲ್ಲಿ ಬೆಳೆಸಿದರೆ ಹಾವುಗಳು ಬರುವುದಿಲ್ಲ..
ನಾಗದೌನ (Nagadona): ಇದು ವಿಶಿಷ್ಟ ಗಂಧವನ್ನು ಹೊಂದಿರುವ ಗಿಡ.
ಸ್ನೇಕ್ ಪ್ಲಾಂಟ್ (Snake Plant): ಹೆಸರೇ ಸೂಚಿಸುವಂತೆ ಇದು ಹಾವನ್ನು ದೂರವಿಡಲು ಸಹಕಾರಿ.
ಚೆಂಡು ಹೂವು (Marigold): ಇದರ ತೀಕ್ಷ್ಣ ವಾಸನೆ ಹಾವನ್ನು ತಡೆಯುತ್ತದೆ.
ಲೆಮನ್ ಗ್ರಾಸ್ (Lemongrass): ಇದರ ನಿಂಬೆ ಹಣ್ಣಿನಂತಹ ವಾಸನೆ ಹಾವುಗಳಿಗೆ ಇಷ್ಟವಾಗುವುದಿಲ್ಲ.
ತುಳಸಿ ಮತ್ತು ಕಳ್ಳಿ ಗಿಡ (Cactus): ಇವುಗಳನ್ನು ಕೂಡ ಬೆಳೆಸಬಹುದು.
ಸರ್ಪಗಂಧ: ಇದರ ಹೆಸರಿನಲ್ಲೇ ಇರುವಂತೆ, ಈ ಗಿಡದ ಬಳಿ ಹಾವುಗಳು ಸುಳಿಯುವುದಿಲ್ಲ.
ಗರುಡ ವೃಕ್ಷ (Garud Tree): ಈ ಮರದ ಹಣ್ಣು ನೋಡಲು ಹಾವಿನಂತೆಯೇ ಇರುತ್ತದೆ ಮತ್ತು ಇದರ ಔಷಧೀಯ ಗುಣಗಳು ಹಾವಿನ ವಿಷ ಇಳಿಸಲು ಕೂಡ ಬಳಕೆಯಾಗುತ್ತವೆ.
ಮನೆಯೊಳಗೆ ಹಾವು ನುಗ್ಗಿದರೆ ಏನು ಮಾಡಬೇಕು?
ಮನೆಯೊಳಗೆ ಹಾವು ನುಗ್ಗಿದರೆ ಏನು ಮಾಡಬೇಕು?
*ಮನೆಯೊಳಗೆ ಹಾವು ಬಂದರೆ ಗಾಬರಿಯಾಗಬೇಡಿ. ತಕ್ಷಣ ಫಿನೈಲ್ ಸಿಂಪಡಿಸಿ. ಹಾವು ಹೊರಗೆ ಹೋಗಲು ಒಂದು ಅಥವಾ ಎರಡು ಕಿಟಕಿ/ಬಾಗಿಲುಗಳನ್ನು ತೆರೆದಿಡಿ. ಫಿನೈಲ್ ವಾಸನೆಗೆ ಅದು ಹೊರಬರುತ್ತದೆ.
*ನಿಮ್ಮ ಮನೆಯಲ್ಲಿ ಸೀಮೆಎಣ್ಣೆ (Kerosene) ಇದ್ದರೆ ಅದನ್ನು ಕೂಡ ಸಿಂಪಡಿಸಬಹುದು.
*ಲವಂಗ ಮತ್ತು ದಾಲ್ಚಿನ್ನಿ ಎಣ್ಣೆ (Clove and Cinnamon oil).. ಇವೆರಡನ್ನೂ ಸಮಪ್ರಮಾಣದಲ್ಲಿ ಬೆರೆಸಿ ಹಾವಿನ ಮೇಲೆ ದೂರದಿಂದ ಸಿಂಪಡಿಸಿದರೆ ಹಾವು ಓಡಿಹೋಗುತ್ತದೆ.
ಪ್ರಮುಖ ಸೂಚನೆ
ಪ್ರಮುಖ ಸೂಚನೆ
ಒಂದು ವೇಳೆ ಮನೆಯೊಳಗೆ ದೊಡ್ಡ ಮತ್ತು ವಿಷಪೂರಿತ ಹಾವು ಬಂದಿದ್ದರೆ, ಅದನ್ನು ನೀವೇ ಹಿಡಿಯಲು ಅಥವಾ ಕೆಣಕಲು ಹೋಗಬೇಡಿ. ಅದು ನಿಮ್ಮ ಮೇಲೆ ದಾಳಿ ಮಾಡಬಹುದು. ತಕ್ಷಣ ಮನೆಯವರನ್ನು ದೂರವಿರಿಸಿ ಮತ್ತು ಸ್ಥಳೀಯ ಸ್ನೇಕ್ ಹೆಲ್ಪ್‌ಲೈನ್ (Snake Helpline) ಅಥವಾ ಉರಗ ತಜ್ಞರನ್ನು ಕರೆಸಿ.
ಗಮನಿಸಿ: ಈ ಮಾಹಿತಿಯು ಕೇವಲ ಸಾಮಾನ್ಯ ತಿಳುವಳಿಕೆಗಾಗಿ ಮಾತ್ರ. ಯಾವುದೇ ತುರ್ತು ಸಂದರ್ಭದಲ್ಲಿ ಯಾವಾಗಲೂ ತಜ್ಞರ ಸಹಾಯವನ್ನು ಪಡೆಯಿರಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
