ಬಟ್ಟೆಗಳನ್ನು ಬೇಗನೆ ಒಣಗಿಸಲು, ಕರೆಂಟ್ ಬಿಲ್ ಕಡಿಮೆ ಬರಲು ಇಲ್ಲಿದೆ 5 ಸ್ಮಾರ್ಟ್ ಹ್ಯಾಕ್ಸ್
Dry clothes faster: ಮಳೆಗಾಲವಿರಲಿ ಅಥವಾ ತುರ್ತು ಸಮಯವಿರಲಿ, ಬಟ್ಟೆ ಒಣಗಿಸುವುದು ಒಂದು ಸವಾಲಿನ ಕೆಲಸ. ಆದರೆ ಸರಿಯಾದ ವಿಧಾನಗಳನ್ನು ಅನುಸರಿಸಿದರೆ ಡ್ರೈಯರ್‌ನಲ್ಲಿ ಬಟ್ಟೆಗಳನ್ನು ಕೇವಲ ಅರ್ಧ ಗಂಟೆಯಲ್ಲಿ ಮತ್ತು ಕಡಿಮೆ ವಿದ್ಯುತ್ ಬಳಸಿ ಒಣಗಿಸಲು ಸಾಧ್ಯ!
5 ಸರಳ ಕ್ರಮ
5 ಸರಳ ಕ್ರಮ
ಕೆಲವೊಮ್ಮೆ ವಾಷಿಂಗ್ ಮಷಿನ್‌ನಲ್ಲಿ ಡ್ರೈಯರ್ ಆಯ್ಕೆಯನ್ನು ಒಂದಕ್ಕಿಂತ ಹೆಚ್ಚು ಬಾರಿ ಬಳಸಿದರೂ ಬಟ್ಟೆಗಳು ಪೂರ್ತಿಯಾಗಿ ಒಣಗದೆ ತೇವವಾಗಿಯೇ ಇರುತ್ತವೆ. ಇದು ಕೇವಲ ಸಮಯವನ್ನು ವ್ಯರ್ಥ ಮಾಡುವುದಲ್ಲದೆ, ನಿಮ್ಮ ವಿದ್ಯುತ್ ಬಿಲ್ ಅನ್ನು ಕೂಡ ಹೆಚ್ಚಿಸುತ್ತದೆ. ಲಾಂಡ್ರಿ ಪರಿಣಿತರ ಪ್ರಕಾರ, ಈ ಕೆಳಗಿನ 5 ಸರಳ ಕ್ರಮ ಅನುಸರಿಸುವ ಮೂಲಕ ನೀವು ಬಟ್ಟೆಗಳನ್ನು ವೇಗವಾಗಿ ಒಣಗಿಸಬಹುದು ಮತ್ತು ನಿಮ್ಮ ಮಷಿನ್ ಶಕ್ತಿಯನ್ನು ಹೆಚ್ಚಿಸಬಹುದು.
ಬಟ್ಟೆಗಳನ್ನು ಬೇಗನೆ ಒಣಗಿಸುವ 5 ಮಾರ್ಗ
ಬಟ್ಟೆಗಳನ್ನು ಬೇಗನೆ ಒಣಗಿಸುವ 5 ಮಾರ್ಗ
ಡ್ರೈಯರ್ ಅತಿಯಾಗಿ ತುಂಬಿಸಬೇಡಿ (Don’t Overstuff Your Dryer)
ಹೆಚ್ಚಿನ ಬಟ್ಟೆಗಳನ್ನು ಒಂದೇ ಬಾರಿ ಒಣಗಿಸಲು ಡ್ರೈಯರ್ ಒಳಗೆ ತುರುಕಬೇಡಿ. ಬಟ್ಟೆಗಳು ಒಣಗಲು ಅವುಗಳ ನಡುವೆ ಗಾಳಿ ಸಂಚರಿಸಲು ಜಾಗ ಬೇಕು. ಬಟ್ಟೆಗಳು ಒಂದರ ಮೇಲೊಂದು ಬಿದ್ದಾಗ ತೇವಾಂಶವು ಅಲ್ಲೇ ಉಳಿದು ಒಣಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಬಟ್ಟೆಗಳನ್ನು ಎರಡು ಬಾರಿ ವಿಂಗಡಿಸಿ ಹಾಕುವುದರಿಂದ ಅವು ವೇಗವಾಗಿ ಒಣಗುತ್ತವೆ ಮತ್ತು ಬಟ್ಟೆಯ ಬಾಳಿಕೆ ಕೂಡ ಹೆಚ್ಚುತ್ತದೆ.
ವೂಲ್ ಡ್ರೈಯರ್ ಬಾಲ್‌ಗಳನ್ನು ಬಳಸಿ (Use Wool Dryer Balls)
ವೂಲ್ ಡ್ರೈಯರ್ ಬಾಲ್‌ಗಳನ್ನು ಬಳಸಿ (Use Wool Dryer Balls)
ವೂಲ್ ಡ್ರೈಯರ್ ಬಾಲ್‌ಗಳು (Wool Dryer Balls) ಸಾಮಾನ್ಯವಾಗಿ ಭಾರತದಲ್ಲಿ ಆನ್‌ಲೈನ್ ಸ್ಟೋರ್‌ಗಳಲ್ಲಿ ಅತಿ ಸುಲಭವಾಗಿ ಸಿಗುತ್ತವೆ. ಬಟ್ಟೆಗಳನ್ನು ಬೇಗನೆ ಒಣಗಿಸಲು 'ವೂಲ್ ಡ್ರೈಯರ್ ಬಾಲ್‌ಗಳು' ಅತ್ಯಂತ ಸುಲಭದ ದಾರಿ. ಇವು ಡ್ರೈಯರ್ ಒಳಗೆ ಬಟ್ಟೆಗಳು ಒಂದಕ್ಕೊಂದು ಅಂಟಿಕೊಳ್ಳದಂತೆ ಪ್ರತ್ಯೇಕಿಸುತ್ತವೆ, ಇದರಿಂದ ಬಿಸಿ ಗಾಳಿ ಸುಲಭವಾಗಿ ಎಲ್ಲೆಡೆ ಹರಡುತ್ತದೆ. ವಿಶೇಷವಾಗಿ ಟವೆಲ್ ಮತ್ತು ಬೆಡ್ ಶೀಟ್‌ಗಳನ್ನು ಒಣಗಿಸುವಾಗ ಇವು ಬಹಳ ಸಹಕಾರಿ. ಇವು ವರ್ಷಗಳ ಕಾಲ ಬಾಳಿಕೆ ಬರುವುದರಿಂದ ಹಣವನ್ನೂ ಉಳಿಸುತ್ತವೆ. ನೀವು ತೇವವಾದ ಬಟ್ಟೆಗಳನ್ನು ಡ್ರೈಯರ್‌ನಲ್ಲಿ ಹಾಕಿದಾಗ, ಅವುಗಳ ಜೊತೆಗೆ 3-4 ವೂಲ್ ಡ್ರೈಯರ್ ಬಾಲ್‌ಗಳನ್ನು ಹಾಕಬೇಕು.
ಪ್ರತಿ ಬಾರಿ ಬಳಸಿದ ನಂತರ ಲಿಂಟ್ ಟ್ರ್ಯಾಪ್ ಸ್ವಚ್ಛಗೊಳಿಸಿ (Clean the Lint Trap)
ಪ್ರತಿ ಬಾರಿ ಬಳಸಿದ ನಂತರ ಲಿಂಟ್ ಟ್ರ್ಯಾಪ್ ಸ್ವಚ್ಛಗೊಳಿಸಿ (Clean the Lint Trap)
ಪ್ರತಿ ಬಾರಿ ಬಟ್ಟೆ ಒಣಗಿಸಿದ ನಂತರ ಡ್ರೈಯರ್‌ನಲ್ಲಿರುವ ಲಿಂಟ್ ಟ್ರ್ಯಾಪ್ (ಧೂಳು ಮತ್ತು ನೂಲು ಸಂಗ್ರಹವಾಗುವ ಜಾಗ) ಅನ್ನು ಸ್ವಚ್ಛಗೊಳಿಸಿ. ಇದರಲ್ಲಿ ಧೂಳು ತುಂಬಿಕೊಂಡರೆ ಗಾಳಿಯ ಸಂಚಾರಕ್ಕೆ ಅಡ್ಡಿಯಾಗುತ್ತದೆ, ಇದರಿಂದ ಬಟ್ಟೆ ಒಣಗಲು ತಡವಾಗುತ್ತದೆ. ಪ್ರತಿ ಆರು ತಿಂಗಳಿಗೊಮ್ಮೆ ಇದನ್ನು ಡಿಟರ್ಜೆಂಟ್ ಮತ್ತು ಬ್ರಷ್ ಬಳಸಿ ಡೀಪ್ ಆಗಿ ಸ್ವಚ್ಛಗೊಳಿಸುವುದು ಉತ್ತಮ.
ಡ್ರೈಯರ್ ವೆಂಟ್ ಕ್ಲೀನಿಂಗ್ ಹೋಸ್ ಬಳಸಿ (Invest in a Dryer Vent Cleaning Hose)
ಡ್ರೈಯರ್ ವೆಂಟ್ ಕ್ಲೀನಿಂಗ್ ಹೋಸ್ ಬಳಸಿ (Invest in a Dryer Vent Cleaning Hose)
ವ್ಯಾಕ್ಯೂಮ್ ಕ್ಲೀನರ್ ಗೆ ಅಳವಡಿಸಬಹುದಾದ ಸಣ್ಣ ಪೈಪ್ ಅಥವಾ ಹೋಸ್ ಸಹಾಯದಿಂದ ಡ್ರೈಯರ್‌ನ ಒಳಭಾಗದ ಧೂಳನ್ನು ತೆಗೆಯಿರಿ. ಲಿಂಟ್ ಸ್ಕ್ರೀನ್ ಸೋಸಿಬಿಡುವ ಸಣ್ಣ ಧೂಳುಗಳು ಒಳಗೆ ಶೇಖರಣೆಯಾಗಿರುತ್ತವೆ. ಇವುಗಳನ್ನು ತೆಗೆದರೆ ಡ್ರೈಯರ್ ವೇಗವಾಗಿ ಕೆಲಸ ಮಾಡುತ್ತದೆ.
ವೆಂಟ್‌ಗಳ ತಪಾಸಣೆ ಮತ್ತು ಸ್ವಚ್ಛತೆ (Inspect and Clean the Vents)
ವೆಂಟ್‌ಗಳ ತಪಾಸಣೆ ಮತ್ತು ಸ್ವಚ್ಛತೆ (Inspect and Clean the Vents)
ಡ್ರೈಯರ್‌ನ ಒಳಭಾಗದ ಮತ್ತು ಹೊರಭಾಗದ ವೆಂಟ್‌ಗಳಲ್ಲಿ ಏನಾದರೂ ಅಡಚಣೆ ಇದೆಯೇ ಎಂದು ನಿಯಮಿತವಾಗಿ ಪರೀಕ್ಷಿಸಿ. ಪವರ್ ಕಾರ್ಡ್ ಕಿತ್ತು, ಡ್ರೈಯರ್‌ನ ಹಿಂಭಾಗದಲ್ಲಿರುವ ಪೈಪ್ ಅನ್ನು ಬಿಡಿಸಿ ಅಲ್ಲಿರುವ ಧೂಳನ್ನು ವ್ಯಾಕ್ಯೂಮ್ ಮೂಲಕ ಸ್ವಚ್ಛಗೊಳಿಸಿ. ಹೊರಗಿನ ಎಕ್ಸಾಸ್ಟ್ ವೆಂಟ್ ಅನ್ನು ಕೂಡ ಬ್ರಷ್ ಬಳಸಿ ಕ್ಲೀನ್ ಮಾಡಿ. ಇದರಿಂದ ಡ್ರೈಯರ್ ದೀರ್ಘಕಾಲ ಬಾಳಿಕೆ ಬರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

