ಕಸದ ಬುಟ್ಟಿಗೆ ಹೋಗೋ ವಸ್ತುವಿಂದಲೇ ಮಾಡಿ ಸಹಸ್ರಾರು ರೂ. ಬೆಲೆಯ ಹೈಫೈ ಲೈಟಿಂಗ್ಸ್
ಕಸದ ಬುಟ್ಟಿಗೆ ಎಸೆಯುವ ಚಹ ಫಿಲ್ಟರ್, ಬಲೂನ್, ಗಾಜಿನ ಬಳೆಗಳು ಮತ್ತು ಪ್ಲಾಸ್ಟಿಕ್ ಲೋಟಗಳಂತಹ ವಸ್ತುಗಳಿಂದ ಸುಂದರವಾದ ಅಲಂಕಾರಿಕ ಲೈಟಿಂಗ್‌ಗಳನ್ನು ತಯಾರಿಸುವ ಸರಳ ವಿಧಾನಗಳನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. ಈ ಉಪಾಯಗಳನ್ನು ಬಳಸಿ ನೀವೇ ಮನೆಯಲ್ಲಿ ಆಕರ್ಷಕ ದೀಪಗಳನ್ನು ಸಿದ್ಧಪಡಿಸಬಹುದು.

ಕಸದಿಂದ ರಸ
ಕಸದಿಂದ ರಸ ಎನ್ನೋದನ್ನು ನೀವು ಕೇಳಿಯೇ ಇರುತ್ತೀರಿ. ಹೀಗೆ ಕಸದಬುಟ್ಟಿಗೆ ಎಸೆಯುವ ವಸ್ತುಗಳಿಂದಲೇ ಎಷ್ಟೋ ಮಂದಿ ಚೆಂದ ಚೆಂದ ಸಾಮಗ್ರಿಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ. ಇವುಗಳಿಗೆ ಆನ್‌ಲೈನ್‌ನಲ್ಲಿಯೂ ಸಹಸ್ರಾರು ರೂಪಾಯಿ ಕೊಟ್ಟು ಖರೀದಿ ಮಾಡುವವರು ಇದ್ದಾರೆ. ಅವುಗಳಲ್ಲಿ ಒಂದು ಹೈ ಫೈ ಎನ್ನಿಸುವಂಥ ಲೈಟಿಂಗ್ಸ್‌ಗಳು. ಕಸದ ಬುಟ್ಟಿಗೆ ಎಸೆಯುವ ವಸ್ತುಗಳಿಂದ ನೀವೇ ಇವುಗಳನ್ನು ಸುಲಭದಲ್ಲಿ ಹೇಗೆ ಮಾಡಬಹುದು ಎನ್ನೋದನ್ನು ಇಲ್ಲಿ ತಿಳಿಸಲಾಗಿದೆ.
ಟೀ ಫಿಲ್ಟರ್ ಆಗಲಿದೆ ಲೈಟಿಂಗ್
ತಂತಿಯ ಚಹ ಫಿಲ್ಟರ್‌ಗಳು ಬಹುತೇಕ ಮನೆಗಳಲ್ಲಿ ಇರುತ್ತವೆ. ಅವು ಕೆಲ ವರ್ಷಗಳಲ್ಲಿ ಹಾಳಾಗುತ್ತವೆ. ಅದನ್ನು ಎಸೆಯುವ ಬದಲು ಅದಕ್ಕೆ ಗೋಲ್ಡನ್ ಪೇಂಟಿಂಗ್ ಸ್ಪ್ರೇ ಮಾಡಿ ಚಿತ್ರದಲ್ಲಿ ತೋರಿಸಿರುವಂತೆ, ಚಿಕ್ಕದೊಂದು ಎಲ್‌ಇಡಿ ಬಲ್ಬ್ ಹಾಕಿದರೆ, ಸಕತ್ ಲೈಟಿಂಗ್ ಆಗುತ್ತದೆ.
ಬಲ್ಬ್‌ಗೆ ಹೀಗೆ ಡಿಸೈನ್ ಮಾಡಿ
ನಿಮ್ಮ ಮನೆಯಲ್ಲಿ ಬಲ್ಬ್ ಇದ್ದರೆ ಒಂದು ಕಡೆ ಫೆವಿಕಾಲ್ ಹರಡಿ ಚಿಕ್ಕ ಚಿಕ್ಕ ಗ್ಲಾಸ್ (ಕನ್ನಡಿ) ಹಚ್ಚಿ. ಅದನ್ನು ನೇತು ಹಾಕಿದರೆ, ಸೂಪರ್ ಡೂಪರ್ ಲೈಟಿಂಗ್ಸ್ ರೆಡಿ.
ಬಲೂನ್‌ನಿಂದಲೂ ಸುಂದರ ಲೈಟಿಂಗ್
ಒಂದು ಬಲೂನ್‌ಗೆ ಫೆವಿಕಾಲ್ ಅಂಟನ್ನು ಹಚ್ಚಿ ಊಲ್ಲನ್ ಅನ್ನು ಸುತ್ತಿ. ಅದು ಒಣಗಿದ ಬಳಿಕ ಬಲೂನ್ ಅನ್ನು ಪಿನ್‌ನಿಂದ ಒಡೆಯಿರಿ. ಅದರ ಒಳಗೆ ಲೈಟಿಂಗ್ ಹಾಕಿ ಚಮತ್ಕಾರ ನೋಡಿ.
ಗಾಜಿನ ಬಳೆಗಳ ಕಮಾಲ್
ನಿಮ್ಮ ಮನೆಯಲ್ಲ ಇರುವ ಬಣ್ಣಬಣ್ಣದ ಗಾಜಿನ ಬಳೆಗಳನ್ನು ಫೆವಿಕಾಲ್ ಸಹಾಯದಿಂದ ಒಂದಕ್ಕೊಂದು ಅಂಟಿಸಿ. ಅದರ ನಡುವೆ ಮೇಣದ ಬತ್ತಿಯನ್ನು ಇಟ್ಟು ಸೌಂದರ್ಯ ಸವಿಯಿರಿ.
ಪ್ಲಾಸ್ಟಿಕ್ ಲೋಟದಲ್ಲಿ ಲೈಟಿಂಗ್ಸ್
ಪ್ಲಾಸ್ಟಿಕ್ ಲೋಟವನ್ನು ಚಿತ್ರದಲ್ಲಿ ತೋರಿಸಿರುವಂತೆ ಕಟ್ ಮಾಡಿ. ನಡುವೆ ಚಿಕ್ಕ ಎಲ್‌ಇಡಿ ಬಲ್ಬ್ ಹಾಕಿದರೆ ಸಹಸ್ರಾರು ರೂಪಾಯಿಗಳ ಲೈಟಿಂಗ್ ಸಿದ್ಧ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

