ನಿಮ್ಮ ಮನೆಯಲ್ಲಿ ಈ 4 ಗಿಡಗಳಿವೆಯಾ? ಹಾಗಾದ್ರೆ ಹಾವುಗಳು ಒಳಗೆ ಬರೋದು ಪಕ್ಕಾ ಬಿಡಿ
Plants that attract snakes: ಮನೆಯ ಗಾರ್ಡನ್ ಸುಂದರವಾಗಿ ಕಾಣಲಿ ಎಂದು ನಾವು ಬೆಳೆಸುವ ಕೆಲವು ಗಿಡಗಳು ಹಾವುಗಳಿಗೆ ಅಚ್ಚುಮೆಚ್ಚಿನ ಅಡಗುತಾಣಗಳಾಗಬಹುದು. ಮಳೆಗಾಲದಲ್ಲಿ ಹಾವಿನ ಭಯದಿಂದ ಪಾರಾಗಲು ನಿಮ್ಮ ಮನೆಯಲ್ಲಿ ಯಾವ ಗಿಡಗಳು ಇರಬಾರದು ಎಂಬ ಉಪಯುಕ್ತ ಮಾಹಿತಿ ಇಲ್ಲಿದೆ.

ಹಾವುಗಳನ್ನು ಆಕರ್ಷಿಸುವ ಗಿಡಗಳಿವು
ಹಾವುಗಳನ್ನು ಆಕರ್ಷಿಸುವ ಗಿಡಗಳಿವು
ಮನೆಯ ಅಂಗಳ ಅಥವಾ ಗಾರ್ಡನ್ ಸುಂದರವಾಗಿ ಕಾಣಲಿ ಎಂದು ನಾವು ತರಹೇವಾರಿ ಗಿಡಗಳನ್ನು ನೆಡುತ್ತೇವೆ. ಆದರೆ, ಕೆಲವು ಗಿಡಗಳು ಹಾವುಗಳಿಗೆ ಅಚ್ಚುಮೆಚ್ಚಿನ ತಾಣಗಳಾಗಿರುತ್ತವೆ ಎಂಬುದು ನಿಮಗೆ ಗೊತ್ತೇ? ಅದರಲ್ಲೂ ಮಳೆಗಾಲದಲ್ಲಿ ಹಾವಿನ ಬಿಲಗಳಿಗೆ ನೀರು ತುಂಬಿದಾಗ, ಅವು ಸುರಕ್ಷಿತ ಜಾಗವನ್ನು ಹುಡುಕುತ್ತಾ ಜನವಸತಿ ಪ್ರದೇಶಗಳಿಗೆ ಬರುತ್ತವೆ. ನಿಮ್ಮ ಗಾರ್ಡನ್‌ನಲ್ಲಿರುವ ಈ ಕೆಳಗಿನ 4 ಗಿಡಗಳು ಹಾವುಗಳನ್ನು ಆಕರ್ಷಿಸುವ ಸಾಧ್ಯತೆ ಹೆಚ್ಚು..
1. ಬಿದಿರು (Bamboo)
1. ಬಿದಿರು (Bamboo)
ಬಿದಿರಿನ ಗಿಡ ನೋಡಲು ಅತಿ ಸುಂದರವಾಗಿದ್ದರೂ, ಹಾವುಗಳಿಗೆ ಇದು ಹೇಳಿ ಮಾಡಿಸಿದ ಅಡಗುತಾಣ. ಬಿದಿರು ತುಂಬಾ ದಟ್ಟವಾಗಿ ಮತ್ತು ಗುಂಪಾಗಿ ಬೆಳೆಯುವುದರಿಂದ ಅದರ ಒಳಗೆ ಏನಿದೆ ಎಂಬುದು ಹೊರಗಿನಿಂದ ಸುಲಭವಾಗಿ ತಿಳಿಯುವುದಿಲ್ಲ. ಅದರಲ್ಲೂ ಮನೆಯ ಗೋಡೆ ಅಥವಾ ಬೇಲಿಯ ಬಳಿ ಬಿದಿರು ಇದ್ದರೆ ಹಾವುಗಳು ಅಲ್ಲಿ ಅಡಗಿಕೊಳ್ಳಲು ತುಂಬಾ ಇಷ್ಟಪಡುತ್ತವೆ.
2. ಲೆಮನ್ ಗ್ರಾಸ್ (Lemongrass)
2. ಲೆಮನ್ ಗ್ರಾಸ್ (Lemongrass)
ಲೆಮನ್ ಗ್ರಾಸ್ ತನ್ನ ಸುವಾಸನೆ ಮತ್ತು ಆರೋಗ್ಯಕಾರಿ ಗುಣಗಳಿಂದಾಗಿ ಅನೇಕರ ಮನೆಯಲ್ಲಿ ಇರುತ್ತದೆ. ಆದರೆ, ಈ ಗಿಡವು ಬುಡದಲ್ಲಿ ಅತಿಯಾಗಿ ದಟ್ಟವಾಗಿ ಬೆಳೆಯುತ್ತದೆ. ಈ ದಟ್ಟವಾದ ಪೊದೆಗಳ ನಡುವೆ ಕಪ್ಪೆ ಅಥವಾ ಸಣ್ಣ ಜೀವಿಗಳು ಆಶ್ರಯ ಪಡೆಯುತ್ತವೆ, ಇವುಗಳನ್ನು ತಿನ್ನಲು ಹಾವುಗಳು ಅಲ್ಲಿಗೆ ಬರುತ್ತವೆ ಮತ್ತು ಅಲ್ಲಿಯೇ ಅಡಗಿಕೊಳ್ಳುತ್ತವೆ.
3. ಮಲ್ಲಿಗೆ (Jasmine)
3. ಮಲ್ಲಿಗೆ (Jasmine)
ಮಲ್ಲಿಗೆಯ ಸುಗಂಧ ಎಲ್ಲರಿಗೂ ಇಷ್ಟ, ಆದರೆ ಇದು ಹಾವುಗಳಿಗೂ ಪ್ರಿಯವಾದ ಜಾಗ. ಮಲ್ಲಿಗೆಯ ಬಳ್ಳಿಗಳು ದಟ್ಟವಾಗಿ ಮತ್ತು ಒಂದಕ್ಕೊಂದು ಹೆಣೆದುಕೊಂಡಿರುತ್ತವೆ. ಈ ದಟ್ಟವಾದ ಎಲೆಗಳ ನಡುವೆ ಹಾವುಗಳಿಗೆ ತಂಪಾದ ಮತ್ತು ಸುರಕ್ಷಿತ ವಾತಾವರಣ ಸಿಗುತ್ತದೆ. ಅಲ್ಲದೆ, ಮಲ್ಲಿಗೆ ಗಿಡದ ಬಳಿ ಬರುವ ಕೀಟಗಳು ಹಾವಿನ ಆಹಾರವಾದ ಕಪ್ಪೆ ಅಥವಾ ಹಲ್ಲಿಗಳನ್ನು ಆಕರ್ಷಿಸುವುದರಿಂದ ಹಾವುಗಳು ಇಲ್ಲಿಗೆ ಸುಲಭವಾಗಿ ಬರುತ್ತವೆ.
4. ಚಂದನ (Sandalwood)
4. ಚಂದನ (Sandalwood)
ಚಂದನದ ಗಿಡದ ಸುವಾಸನೆ ಮತ್ತು ಧಾರ್ಮಿಕ ಮಹತ್ವ ಎಲ್ಲರಿಗೂ ತಿಳಿದಿದೆ. ಆದರೆ ಇದರ ದಟ್ಟವಾದ ಕೊಂಬೆಗಳು ಮತ್ತು ಬುಡವು ಹಾವುಗಳಿಗೆ ಪ್ರಿಯವಾದ ತಾಣ. ಚಂದನದ ಗಿಡವು ತಂಪಾಗಿರುವುದರಿಂದ ಹಾವುಗಳು ಇಲ್ಲಿ ಆಶ್ರಯ ಪಡೆಯಲು ಇಷ್ಟಪಡುತ್ತವೆ. ಆದ್ದರಿಂದ ಮನೆಯ ಅಂಗಳದಲ್ಲಿ ಇಂತಹ ಗಿಡಗಳನ್ನು ಬೆಳೆಸುವಾಗ ಎಚ್ಚರಿಕೆ ವಹಿಸುವುದು ಅವಶ್ಯಕ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

