MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Bengaluru Weather Today
Kasturi Rangan Report
Karnataka Kodava Language
Wife Appreciation Day
Milk Price Hike Karnataka
Amit Shah Karnataka Visit
Karnataka Govt Social Pension
US Tariff on India
Mysuru Dasara 2026
Abhishek Sharma
Bengaluru Cantonment Railway Station
Kalyana Karnataka Development
Vande Mataram Row
Karnataka SSLC Mid-term Exam
Mangaluru Dharmasthala Railway Line
Shivamogga Mega Job Fair
Bengaluru Traffic
Mangaluru Cabinet Meeting
  • Home
  • Life
  • ತುಳಸಿ ಸದಾ ನಳನಳಿಸುತ್ತಿರಲು ಐದು ಸೂಪರ್​ ಟಿಪ್ಸ್​: ಹೀಗೆ ಮಾಡಿದ್ರೆ ಬಾಡುತ್ತಿರುವ ಗಿಡವೂ ಚಿಗುರುತ್ತೆ

ತುಳಸಿ ಸದಾ ನಳನಳಿಸುತ್ತಿರಲು ಐದು ಸೂಪರ್​ ಟಿಪ್ಸ್​: ಹೀಗೆ ಮಾಡಿದ್ರೆ ಬಾಡುತ್ತಿರುವ ಗಿಡವೂ ಚಿಗುರುತ್ತೆ

ಹಿಂದೂ ಸಂಪ್ರದಾಯದಲ್ಲಿ ಪವಿತ್ರವಾದ ತುಳಸಿ ಗಿಡವು ಒಣಗದಂತೆ ಕಾಪಾಡಲು ಕೆಲವು ಸರಳ ವಿಧಾನಗಳಿವೆ. ಪ್ರತಿನಿತ್ಯ ನೀರು ಹಾಕದಿರುವುದು, ಹೂವುಗಳನ್ನು ತೆಗೆಯುವುದು, ಮೊಸರು ಮತ್ತು ಅರಿಶಿನದ ಬಳಕೆ ಹಾಗೂ ಬಿರುಬಿಸಿಲಿನಿಂದ ರಕ್ಷಿಸುವ ಮೂಲಕ ತುಳಸಿಯನ್ನು ಸದಾ ಹಸಿರಾಗಿಡಬಹುದು.

1 Min read
Author : Suchethana D
Published : Sep 20 2026, 12:46 PM IST
Share this Photo Gallery
  • FB
  • TW
  • Linkdin
  • Whatsapp
16
ತುಳಸಿಗೆ  ವಿಶೇಷ ಸ್ಥಾನಮಾನ
Image Credit : ai

ತುಳಸಿಗೆ ವಿಶೇಷ ಸ್ಥಾನಮಾನ

ತುಳಸಿ ಗಿಡ ಸಾಮಾನ್ಯವಾಗಿ ಪ್ರತಿಯೊಂದು ಹಿಂದೂ ಮನೆಗಳಲ್ಲಿಯೂ ಇರುತ್ತದೆ. ಹಿಂದೂ ಸಂಪ್ರದಾಯದಲ್ಲಿ ತುಳಸಿಗೆ ವಿಶೇಷ ಸ್ಥಾನಮಾನ ಇದೆ. ಅದನ್ನು ದೇವರೆಂದು ಪ್ರತಿನಿತ್ಯ ಪೂಜಿಸುವ ದೊಡ್ಡ ವರ್ಗವೇ ಇದೆ. ಇದೇ ಕಾರಣಕ್ಕೆ ತುಳಸಿ ಗಿಡವನ್ನು ಸದಾ ಆರೈಕೆಮಾಡಲಾಗುತ್ತದೆ. ಆದರೆ, ಕೆಲವೊಂದು ಕಾರಣಗಳಿಂದ ತುಳಸಿ ಒಣಗಿ ಹೋಗಿಬಿಡುತ್ತದೆ. ಇದಕ್ಕೆ ಕಾರಣವೇ ಇರುವುದಿಲ್ಲ. ಹೀಗೆ ತುಳಸಿ ಒಣಗಿದರೆ ಅದು ಅಪಶಕುನ ಎಂದು ಭಾವಿಸುವವರು ಹಲವರು. ಆದ್ದರಿಂದ ತುಳಸಿ ಒಣಗಿದರೆ ತುಂಬಾ ನೋವು ಅನುಭವಿಸುತ್ತಾರೆ. ಸದಾ ತುಳಸಿ ನಳನಳಿಸುತ್ತಿರಬೇಕು ಎಂದರೆ ಏನು ಮಾಡಬೇಕು? ಇದಕ್ಕೆ ಇಲ್ಲಿ ಐದು ಸಿಂಪಲ್​ ಪರಿಹಾರ ನೀಡಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಪ್ರತಿನಿತ್ಯ ನೀರು ಬೇಡ
Image Credit : shree_ram_nursery108 Instagram

ಪ್ರತಿನಿತ್ಯ ನೀರು ಬೇಡ

ತುಳಸಿ ಗಿಡಕ್ಕೆ ಅದರಲ್ಲಿಯೂ ಕುಂಡದಲ್ಲಿ ಇರುವ ತುಳಸಿಗೆ ಪ್ರತಿನಿತ್ಯ ಬುಡಕ್ಕೆ ನೀರು ಹಾಕಬೇಡಿ. ಇದರಿಂದ ಬುಡ ಕೊಳೆಯುವ ಸಾಧ್ಯತೆಯೇ ಇದೆ. ಆದ್ದರಿಂದ ಎರಡು ದಿನಕ್ಕೆ ಒಮ್ಮೆ ಸ್ಟ್ರೇ ಮಾಡುತ್ತಿದ್ದರೆ ತುಳಸಿ ಚೆನ್ನಾಗಿ ಇರುತ್ತದೆ. ಇದೇ ಕಾರಣಕ್ಕೆ ಸಾಮಾನ್ಯವಾಗಿ ಭಾನುವಾರ ಮತ್ತು ಏಕಾದಶಿಯಂದು ತುಳಸಿಗೆ ನೀರು ನಿಷಿದ್ಧ ಎಂದೂ ಹೇಳಲಾಗುತ್ತದೆ.

Related Articles

Related image1
ಬೇಳೆ ಬೇಯಿಸುವಾಗ ಕುಕ್ಕರ್‌ ಸೀಟಿಯಿಂದ ಬೇಳೆ ಹೊರಕ್ಕೆ ಬರುತ್ತಾ? ಈ ಟಿಪ್ಸ್‌ ಫಾಲೋ ಮಾಡಿ
Related image2
ಮನೆಯಲ್ಲಿ ಮಾಡೋ ಕೊಬ್ಬರಿ ಚಟ್ನಿಗೂ ಹೋಟೆಲ್ ಟೇಸ್ಟ್​ ಬರಬೇಕಾ? ಈ 5 ಟ್ರಿಕ್ಸ್​ ಹೇಳಿಕೊಟ್ಟ ಮಾಸ್ಟರ್​ಷೆಫ್​
36
ಹೂವನ್ನು ಕೂಡಲೇ ತೆಗೆಯಿರಿ
Image Credit : shree_ram_nursery108 Instagram

ಹೂವನ್ನು ಕೂಡಲೇ ತೆಗೆಯಿರಿ

ತುಳಸಿಗೆ ಬಿಡುವ ಹೂವನ್ನು (ಕಸ್ತ್ರ) ಕೂಡಲೇ ತೆಗೆಯಬೇಕು. ಇಲ್ಲದಿದ್ದರೆ ಇದು ಗಿಡ ಒಣಗಲು ಕಾರಣ ಆಗಬಹುದು. ಆದ್ದರಿಂದ ಹೂವನ್ನು ಬೆರಳಿನಿಂದ ಕಿತ್ತು ತೆಗೆಯಿರಿ. ಅದನ್ನು ಉಗುರಿನಿಂದ ಚಿವುಟಿ ತೆಗೆಯುವುದು ಅಪರಾಧ.

46
ಮೊಸರನ್ನು ಹೀಗೆ ಹಾಕಿ
Image Credit : shree_ram_nursery108 Instagram

ಮೊಸರನ್ನು ಹೀಗೆ ಹಾಕಿ

ಒಂದು ಕಪ್​ ಮೊಸರನ್ನು ನೀರಿನಲ್ಲಿ ಕಲಸಿ ಅದನ್ನು ಬುಡಕ್ಕೆ ಆಗಾಗ್ಗೆ ಹಾಕಿ. ಇದರಿಂದ ತುಳಸಿ ಗಿಡ ಮಾತ್ರವಲ್ಲದೇ ಎಲೆಗಳು ಕೂಡ ಸದಾ ನಳನಳಿಸುತ್ತಲೇ ಇರುತ್ತವೆ.

56
ಅರಿಶಿಣದ ಪುಡಿ ಮ್ಯಾಜಿಕ್​
Image Credit : shree_ram_nursery108 Instagram

ಅರಿಶಿಣದ ಪುಡಿ ಮ್ಯಾಜಿಕ್​

ಒಂದು ಗ್ಲಾಸ್​ ನೀರಿನಲ್ಲಿ ಅರಿಶಿಣದ ಪುಡಿಯನ್ನು ಸೇರಿಸಿ ಆಗಾಗ್ಗೆ ತುಳಸಿಯ ಬುಡಕ್ಕೆ ಹಾಕುತ್ತಿದ್ದರೆ,, ಗಿಡಕ್ಕೆ ಏನಾದರೂ ಫಂಗಸ್​ ಬಂದಿದ್ದರೆ ಅದು ತೊಲಗಿ ಗಿಡ ಕೊಳೆಯುವುದಿಲ್ಲ, ಬಾಡುವುದೂ ಇಲ್ಲ.

66
ಬಿರುಬಿಸಿಲಿನಲ್ಲಿ ಇಡಬೇಡಿ
Image Credit : shree_ram_nursery108 Instagram

ಬಿರುಬಿಸಿಲಿನಲ್ಲಿ ಇಡಬೇಡಿ

ತುಳಸಿ ಗಿಡವನ್ನು ಬಿರುಬಿಸಿಲಿನಲ್ಲಿ ಇಡಬೇಡಿ. ಅದಕ್ಕೆ ಬೆಳಗಿನ ಬೆಚ್ಚಗಿನ ಬಿಸಿಲೇ ಸಾಕಾಗುತ್ತದೆ. ಬಿರು ಬಿಸಿಲಿನಲ್ಲಿ ಇಟ್ಟರೆ ಎಲೆಗಳು ಬಾಡಿ ಹೋಗುತ್ತವೆ. ಇದರಿಂದ ಎಲೆಗಳು ಕೂಡ ಸದಾ ಘಮಘಮಿಸುತ್ತವೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ತುಳಸಿ ಗಿಡ
ಜೀವನಶೈಲಿ
ಮಹಿಳೆಯರು
 

Latest Videos
Recommended Stories
Recommended image1
Bigg Boss ಗಗನ್ ಸ್ಕೂಲ್​ಡೇಸ್​ ಆ ರಹಸ್ಯ ಪ್ರೇಮಕಥೆ: ಅವಳ ನಗುವಿಗಾಗಿ ಮಾಡಿದ್ದೇನು? ರೋಚಕ ಘಟನೆ ನೆನೆದ ನಟ
Recommended image2
ಬಾಯಲ್ಲಿಟ್ಟರೆ ಕರಗುವ ಗರಿಗರಿ ಪಡ್ಡು ಮಾಡೋದು ಹೇಗೆ? ಇಲ್ಲಿದೆ ಹೊಸ ರೆಸಿಪಿ! ಇಂದೇ ಟ್ರೈ ಮಾಡಿ
Recommended image3
'ಆ..' ಸೀರಿಯಸ್‌ ಸಮಸ್ಯೆಯಿಂದ ಬಳಲುತ್ತಿದ್ದಾರಾ ನಟಿ ಶ್ರುತಿ ಹಾಸನ್? ದತ್ತು ಸ್ವೀಕರಿಸೋಕೂ ರೆಡಿಯಾಗಿದ್ದು ಅದಕ್ಕೇನಾ?
Related Stories
Recommended image1
ಬೇಳೆ ಬೇಯಿಸುವಾಗ ಕುಕ್ಕರ್‌ ಸೀಟಿಯಿಂದ ಬೇಳೆ ಹೊರಕ್ಕೆ ಬರುತ್ತಾ? ಈ ಟಿಪ್ಸ್‌ ಫಾಲೋ ಮಾಡಿ
Recommended image2
ಮನೆಯಲ್ಲಿ ಮಾಡೋ ಕೊಬ್ಬರಿ ಚಟ್ನಿಗೂ ಹೋಟೆಲ್ ಟೇಸ್ಟ್​ ಬರಬೇಕಾ? ಈ 5 ಟ್ರಿಕ್ಸ್​ ಹೇಳಿಕೊಟ್ಟ ಮಾಸ್ಟರ್​ಷೆಫ್​
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved