ಬಟ್ಟೆ ತಿಕ್ಕಿ ತೊಳೆಯೋದನ್ನ ನಿಲ್ಲಿಸಿ.. ಈ ಎರಡು ಪದಾರ್ಥ ಬಳಸಿ ನೆನೆಸಿದರೆ ಕೊಳೆ ಮಾಯ
White clothes cleaning hacks: ಬಿಳಿ ಬಟ್ಟೆಗಳು ಬೇಗನೆ ಹಳದಿಯಾಗುತ್ತಿವೆಯೇ ಅಥವಾ ಕಾಲರ್ ಕೊಳೆ ಹೋಗುತ್ತಿಲ್ಲವೇ? ನಿಮ್ಮ ಉಡುಪುಗಳನ್ನು ವರ್ಷಗಳ ಕಾಲ ಹಾಲಿನಂತೆ ಪ್ರಕಾಶಮಾನವಾಗಿ ಮತ್ತು ಹೊಸದರಂತೆ ಇರಿಸಲು ಸಹಕಾರಿಯಾಗುವ ಅದ್ಭುತ ಸ್ಮಾರ್ಟ್ ಹ್ಯಾಕ್ಸ್ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಸಿಂಪಲ್ ಮತ್ತು ಸ್ಮಾರ್ಟ್ ಹ್ಯಾಕ್ಸ್
ಸಿಂಪಲ್ ಮತ್ತು ಸ್ಮಾರ್ಟ್ ಹ್ಯಾಕ್ಸ್
ಬಿಳಿ ಬಟ್ಟೆಗಳು ನೋಡಲು ಸುಂದರ ಮತ್ತು ಕ್ಲಾಸಿಯಾಗಿ ಕಾಣಿಸುತ್ತವೆ. ಆದರೆ ಅವುಗಳ ಸ್ವಚ್ಛತೆ ಮತ್ತು ಬಿಳಿದಾದ ಹೊಳಪನ್ನು ಕಾಪಾಡಿಕೊಳ್ಳುವುದು ಅಷ್ಟೇ ದೊಡ್ಡ ಸವಾಲು. ಕಲೆಗಳ ವಿಷಯ ಹಾಗಿರಲಿ, ಕೆಲವು ಬಾರಿ ನಾರ್ಮಲ್ ಆಗಿ ತೊಳೆದರೂ ಬಿಳಿ ಬಟ್ಟೆಗಳು ವಿಚಿತ್ರವಾದ ಹಳದಿ ಬಣ್ಣಕ್ಕೆ ತಿರುಗುತ್ತವೆ. ಇದರಿಂದ ಬೇಸತ್ತು ಅನೇಕರು ಬಿಳಿ ಬಟ್ಟೆಗಳನ್ನು ಧರಿಸುವುದನ್ನೇ ಬಿಟ್ಟುಬಿಡುತ್ತಾರೆ. ಆದರೆ, ಇನ್ನು ಮುಂದೆ ಆ ಚಿಂತೆ ಬೇಡ! ನಿಮ್ಮ ಬಿಳಿ ಬಟ್ಟೆಗಳು ವರ್ಷಗಳ ಕಾಲ ಪ್ರಕಾಶಮಾನವಾಗಿರಲು ಇಲ್ಲಿವೆ ಕೆಲವು ಸಿಂಪಲ್ ಮತ್ತು ಸ್ಮಾರ್ಟ್ ಹ್ಯಾಕ್ಸ್.
ಬಿಳಿ ಬಟ್ಟೆಗಳನ್ನು ಪ್ರತ್ಯೇಕವಾಗಿ ಒಗೆಯಿರಿ
ಬಿಳಿ ಬಟ್ಟೆಗಳನ್ನು ಪ್ರತ್ಯೇಕವಾಗಿ ಒಗೆಯಿರಿ
ಬಿಳಿ ಬಟ್ಟೆಗಳ ಹೊಳಪು ಮಸಕಾಗಲು ಮುಖ್ಯ ಕಾರಣ ಅವುಗಳನ್ನು ಇತರ ಬಣ್ಣದ ಬಟ್ಟೆಗಳೊಂದಿಗೆ ಒಗೆಯುವುದು. ಇತರ ಬಟ್ಟೆಗಳಿಂದ ಬಿಡುಗಡೆಯಾಗುವ ಅಲ್ಪ ಪ್ರಮಾಣದ ಬಣ್ಣವೂ ಬಿಳಿ ಬಟ್ಟೆಯ ಮೇಲೆ ಹಳದಿ ಛಾಯೆ ಮೂಡಿಸುತ್ತದೆ. ಆದ್ದರಿಂದ, ಬಿಳಿ ಬಟ್ಟೆಗಳನ್ನು ಯಾವಾಗಲೂ ಇತರ ಬಣ್ಣದ ಬಟ್ಟೆಗಳಿಂದ ಪ್ರತ್ಯೇಕವಾಗಿ ತೊಳೆಯುವ ಅಭ್ಯಾಸ ಮಾಡಿಕೊಳ್ಳಿ.
ಹಠಮಾರಿ ಕಲೆಗಳಿಗೆ ನಿಂಬೆ ಮತ್ತು ಬೇಕಿಂಗ್ ಸೋಡಾ
ಹಠಮಾರಿ ಕಲೆಗಳಿಗೆ ನಿಂಬೆ ಮತ್ತು ಬೇಕಿಂಗ್ ಸೋಡಾ
ಬಿಳಿ ಬಟ್ಟೆಯ ಮೇಲಿನ ಕಲೆಗಳು ಸಾಮಾನ್ಯ ಡಿಟರ್ಜೆಂಟ್‌ನಿಂದ ಸುಲಭವಾಗಿ ಹೋಗುವುದಿಲ್ಲ. ಅಂತಹ ಸಂದರ್ಭದಲ್ಲಿ ನಿಂಬೆಹಣ್ಣಿನ ರಸ, ಉಪ್ಪು ಮತ್ತು ಬೇಕಿಂಗ್ ಸೋಡಾವನ್ನು ಬೆರೆಸಿ ಪೇಸ್ಟ್ ತಯಾರಿಸಿ. ಇದನ್ನು ಕಲೆಯಿರುವ ಜಾಗಕ್ಕೆ ಹಚ್ಚಿ ಸ್ವಲ್ಪ ಸಮಯ ಒಣಗಲು ಬಿಡಿ. ನಂತರ ತೊಳೆದರೆ ಎಷ್ಟೇ ಹಠಮಾರಿ ಕಲೆಯೂ ಮಾಯವಾಗುತ್ತದೆ.
ಹಳದಿ ಬಣ್ಣ ಹೋಗಲಾಡಿಸಲು ಆಸ್ಪರಿನ್ ಬಳಕೆ
ಹಳದಿ ಬಣ್ಣ ಹೋಗಲಾಡಿಸಲು ಆಸ್ಪರಿನ್ ಬಳಕೆ
ನಿಮ್ಮ ಬಟ್ಟೆ ಈಗಾಗಲೇ ಹಳದಿ ಬಣ್ಣಕ್ಕೆ ತಿರುಗಿದ್ದರೆ, ನೀರಿನಲ್ಲಿ 2 ರಿಂದ 3 ಆಸ್ಪರಿನ್ (Aspirin) ಮಾತ್ರೆಗಳನ್ನು ಹಾಕಿ ಕರಗಿಸಿ. ಈ ನೀರಿನಲ್ಲಿ ಬಟ್ಟೆಯನ್ನು ಸ್ವಲ್ಪ ಸಮಯ ನೆನೆಸಿಡಿ. ನಂತರ ಮಾಮೂಲಿಯಾಗಿ ಒಗೆದರೆ ಬಟ್ಟೆಯ ಮೇಲಿನ ಹಳದಿ ಛಾಯೆ ಮಾಯವಾಗಿ ಹೊಸ ಕಳೆ ಬರುತ್ತದೆ.
ವಿನೆಗರ್‌ನಿಂದ ಹೆಚ್ಚಿಸಿ ಹೊಳಪು
ವಿನೆಗರ್‌ನಿಂದ ಹೆಚ್ಚಿಸಿ ಹೊಳಪು
ಬಿಳಿ ಬಟ್ಟೆಗಳ ಹೊಳಪನ್ನು ದೀರ್ಘಕಾಲದವರೆಗೆ ಕಾಯ್ದುಕೊಳ್ಳಲು ವಿನೆಗರ್ ಅತ್ಯುತ್ತಮ. ಬಟ್ಟೆ ಒಗೆದ ನಂತರ, ಕೊನೆಯ ಬಾರಿ ತೊಳೆಯುವ ನೀರಿಗೆ ಅರ್ಧ ಕಪ್ ವಿನೆಗರ್ ಸೇರಿಸಿ ಬಟ್ಟೆಯನ್ನು ಅದರಲ್ಲಿ ನೆನೆಸಿ ತೆಗೆಯಿರಿ. ಇದರಿಂದ ಬಟ್ಟೆಯ ಬಿಳುಪು ಮತ್ತು ಮೃದುತ್ವ ಹೆಚ್ಚುತ್ತದೆ.
ಶರ್ಟ್ ಕಾಲರ್ ಸ್ವಚ್ಛತೆಗೆ ಶಾಂಪೂ ಟ್ರಿಕ್
ಶರ್ಟ್ ಕಾಲರ್ ಸ್ವಚ್ಛತೆಗೆ ಶಾಂಪೂ ಟ್ರಿಕ್
ಬಿಳಿ ಶರ್ಟ್‌ಗಳ ಕಾಲರ್ ಭಾಗವು ಅತೀ ಹೆಚ್ಚು ಕೊಳೆಯಾಗುತ್ತದೆ ಮತ್ತು ಒಗೆದ ನಂತರವೂ ಸಂಪೂರ್ಣವಾಗಿ ಕ್ಲೀನ್ ಆಗುವುದಿಲ್ಲ. ಇದಕ್ಕಾಗಿ ಯಾವುದೇ ಶಾಂಪೂವನ್ನು ಕಾಲರ್ ಮೇಲೆ ಹಚ್ಚಿ ಸ್ವಲ್ಪ ಹೊತ್ತು ಬಿಡಿ. ಕೊಳೆ ಹೆಚ್ಚಾಗಿದ್ದರೆ ಬಟ್ಟೆ ತೊಳೆಯುವ ಬ್ರಷ್‌ನಿಂದ ಲಘುವಾಗಿ ಉಜ್ಜಿರಿ. ಇದರಿಂದ ಕಾಲರ್ ಹಾಲಿನಂತೆ ಬೆಳ್ಳಗಾಗುತ್ತದೆ.
ಬಣ್ಣ ಹತ್ತಿದಾಗ ಹೈಡ್ರೋಜನ್ ಪೆರಾಕ್ಸೈಡ್
ಬಣ್ಣ ಹತ್ತಿದಾಗ ಹೈಡ್ರೋಜನ್ ಪೆರಾಕ್ಸೈಡ್
ಇತರ ಬಣ್ಣದ ಬಟ್ಟೆಗಳಿಂದಾಗಿ ಬಿಳಿ ಬಟ್ಟೆಗೆ ಬಣ್ಣ ಹತ್ತಿಕೊಂಡಿದ್ದರೆ, ಅಂತಹ ಬಟ್ಟೆಗಳನ್ನು ಹೈಡ್ರೋಜನ್ ಪೆರಾಕ್ಸೈಡ್ (Hydrogen Peroxide) ಬೆರೆಸಿದ ನೀರಿನಲ್ಲಿ ನೆನೆಸಿಡಿ. ಈ ಪ್ರಕ್ರಿಯೆಯು ಬಟ್ಟೆಯ ಮೇಲಿನ ಅನಗತ್ಯ ಬಣ್ಣವನ್ನು ತೆಗೆದುಹಾಕಿ ಬಿಳಿ ಬಣ್ಣವನ್ನು ಮತ್ತೆ ಪ್ರಕಾಶಮಾನಗೊಳಿಸುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
