MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Engineer's Day Special
Karnataka Weather Update
Today's Horoscope in Kannada
Mandya Road Accident
Ind vs Afg T20 Series
Mohsin Naqvi Trophy Controversy
Talaguppa-Bengaluru Express
Belagavi DC Mohammad Roshan
Bengaluru Metro Stations
Karnataka Power Crisis
Belagavi Cantonment Board
  • Home
  • Life
  • Kitchen
  • ಸ್ಟೌವ್‌ನ ಈ ಭಾಗ ಮರೆತರೆ ಅಪಾಯ ಕಟ್ಟಿಟ್ಟ ಬುತ್ತಿ! ಈ ರೀತಿಯಾಗಿ ಕ್ಲೀನ್ ಮಾಡ್ಕೊಳ್ಳಿ

ಸ್ಟೌವ್‌ನ ಈ ಭಾಗ ಮರೆತರೆ ಅಪಾಯ ಕಟ್ಟಿಟ್ಟ ಬುತ್ತಿ! ಈ ರೀತಿಯಾಗಿ ಕ್ಲೀನ್ ಮಾಡ್ಕೊಳ್ಳಿ

ಅಡುಗೆಮನೆಯ ಸ್ಟೌವ್ ಕ್ಲೀನಿಂಗ್‌ನಲ್ಲಿ ರೆಗ್ಯುಲೇಟರ್ ಸ್ವಚ್ಛಗೊಳಿಸುವುದು ಬಹಳ ಮುಖ್ಯ. ರೆಗ್ಯುಲೇಟರ್ ಗ್ಯಾಪ್‌ನಲ್ಲಿ ಸೇರುವ ಎಣ್ಣೆಯ ಜಿಡ್ಡು ಗ್ಯಾಸ್ ಲೀಕ್‌ಗೆ ಕಾರಣವಾಗಬಹುದು. ಇದನ್ನು ಸುಲಭವಾಗಿ ಸ್ವಚ್ಛಗೊಳಿಸುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ.

1 Min read
Author : Mahmad Rafik
Published : Sep 15 2026, 02:20 PM IST
Share this Photo Gallery
  • FB
  • TW
  • Linkdin
  • Whatsapp
15
ಕ್ಲೀನಿಂಗ್ ಮಾಡೋದನ್ನು ಮರೀಬೇಡಿ!
Image Credit : Gemini

ಕ್ಲೀನಿಂಗ್ ಮಾಡೋದನ್ನು ಮರೀಬೇಡಿ!

ಒಲೆ ಇದ್ರೆ ಮಾತ್ರ ಅದನ್ನು ಅಡುಗೆಮನೆ ಎಂದು ಕರೀತಾರೆ. ಭಾರತದಲ್ಲಿ ಈ ಒಲೆಯನ್ನು ದೇವರು ಎಂದು ಪರಿಗಣಿಸಲಾಗುತ್ತದೆ. ಬೆಳಗ್ಗೆ ಅಡುಗೆ ಆರಂಭಕ್ಕೂ ಮುನ್ನ ಒಲೆಗೆ ಪೂಜೆ ಮಾಡಲಾಗುತ್ತದೆ. ಇಂದು ಬಹುತೇಕ ಎಲ್ಲರ ಮನೆಗಳಲ್ಲಿಂದು ಗ್ಯಾಸ್ ಸ್ಟೌವ್ ಕಾಣಬಹುದು. ಅಡುಗೆ ಮುಗಿದ ಬಳಿಕ ಸ್ಟೌವ್ ಕ್ಲೀನ್ ಮಾಡುತ್ತಾರೆ. ಆದ್ರೆ ಬಹುತೇಕರು ಸ್ಟೌವ್ ಆನ್ ಮಾಡುವ ರೆಗ್ಯುಲೇಟರ್ ಕ್ಲೀನ್ ಮಾಡೋದನ್ನು ಮರೆಯುತ್ತಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ರೆಗ್ಯುಲೇಟರ್ ಯಾಕೆ ಕ್ಲೀನ್ ಮಾಡಬೇಕು?
Image Credit : Gemini

ರೆಗ್ಯುಲೇಟರ್ ಯಾಕೆ ಕ್ಲೀನ್ ಮಾಡಬೇಕು?

ರೆಗ್ಯುಲೇಟರ್ ಮತ್ತು ಸ್ಟೌವ್ ಮಧ್ಯೆ ಸಣ್ಣದಾದ ಗ್ಯಾಪ್ ಇರುತ್ತದೆ. ದಿನನಿತ್ಯದ ಅಡುಗೆ ಕೆಲಸಗಳಿಂದ ಗ್ಯಾಪ್ ಭಾಗದಲ್ಲಿ ಎಣ್ಣೆಯ ಜಿಡ್ಡಿನಂತ ಕೊಳೆ ಸೇರಿಕೊಂಡಿರುತ್ತದೆ. ಈ ಜಿಡ್ಡಿನ ಪದಾರ್ಥ ಆ ಗ್ಯಾಪ್ ಮುಚ್ಚುತ್ತದೆ. ಇದರಿಂದ ರೆಗ್ಯುಲೇಟರ್ ಪೂರ್ಣಪ್ರಮಾಣದಲ್ಲಿ ಕೆಲಸ ಮಾಡೋದನ್ನು ನಿಲ್ಲಿಸುತ್ತದೆ. ಈ ಕೊಳೆಯಿಂದಾಗಿ ನೀವು ಒಲೆ ಆಫ್ ಮಾಡಿದ್ರೂ ಸಣ್ಣದಾಗಿ ಗ್ಯಾಸ್ ಲೀಕ್ ಆಗುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಸ್ಟೌವ್ ಜೊತೆ ರೆಗ್ಯುಲೇಟರ್ ಸಹ ಸ್ವಚ್ಛಗೊಳಿಸಬೇಕು.

Related Articles

Related image1
Cleaning Hacks: ಬಾತ್‌ರೂಮ್‌ ಜಗ್ ಮೇಲಿರುವ ಹಠಮಾರಿ ಕಲೆ ತೆಗೆಯುವ ಸುಲಭ ಉಪಾಯಗಳು
Related image2
ಡ್ರೈ ಕ್ಲೀನಿಂಗ್ ಅಂಗಡಿಯವರು ಹೇಳಿದ ರಹಸ್ಯ .. ಕೇವಲ 10 ರೂಪಾಯಿಯಲ್ಲಿ ಮನೆಯಲ್ಲೇ ಈ ರೀತಿ ಬಟ್ಟೆ ಕ್ಲೀನ್ ಮಾಡಿ
35
ರೆಗ್ಯುಲೇಟರ್ ಕ್ಲೀನ್ ಮಾಡೋದು ಹೇಗೆ?
Image Credit : Gemini

ರೆಗ್ಯುಲೇಟರ್ ಕ್ಲೀನ್ ಮಾಡೋದು ಹೇಗೆ?

ಕೆಲವೊಂದು ಸ್ಟೌವ್‌ಗಳ ರೆಗ್ಯುಲೇಟರ್ ತೆಗೆಯಬಹುದು. ಈ ಸ್ಟೌವ್‌ಗಳಿದ್ರೆ ರೆಗ್ಯುಲೇಟರ್ ತೆಗೆದು 10 ನಿಮಿಷ ಬಿಸಿನೀರಿನಲ್ಲಿ ಹಾಕಿಕೊಳ್ಳಿ. ನಂತರ ಬೇಕಿಂಗ್ ಸೋಡಾಗೆ ನಿಂಬೆರಸ ಸೇರಿಸಿ ರೆಗ್ಯುಲೇಟರ್ ಕ್ಲೀನ್ ಮಾಡಬಹುದು. ಒಂದು ವೇಳೆ ರೆಗ್ಯುಲೇಟರ್ ಸ್ಟೌವ್‌ಗೆ ಫಿಕ್ಸ್ ಆಗಿದ್ರೆ, ಸಣ್ಣದಾಗ ಕಡ್ಡಿಯಿಂದ ಗ್ಯಾಪ್ ಮಧ್ಯೆ ಸಿಲುಕಿರೋ ಕಸ ತೆಗೆಯಿರಿ.

45
ರೆಗ್ಯುಲೇಟರ್ ಬದಲಿಸಿಕೊಳ್ಳಿ
Image Credit : Gemini

ರೆಗ್ಯುಲೇಟರ್ ಬದಲಿಸಿಕೊಳ್ಳಿ

ಸಾಮಾನ್ಯವಾಗಿ ಬರ್ನರ್‌ನಿಂದ ಬೆಂಕಿ ಸರಿಯಾಗಿ ಉರಿಯದಿದ್ದಾಗ, ಅವುಗಳನ್ನು ಕ್ಲೀನ್ ಮಾಡುತ್ತಾರೆ. ಕೆಲವೊಮ್ಮೆ ಬದಲಿಸುತ್ತಾರೆ. ಅದೇ ರೀತಿ ರೆಗ್ಯುಲೇಟರ್‌ ಹಿಡತ ಬಿಗಿ ಅಥವಾ ಸಡಿಲವಾಗುತ್ತಿದ್ದರೆ ಕೂಡಲೇ ಬದಲಿಸಿ. ಈ ಸಣ್ಣ ಬದಲಾವಣೆಯೊಂದು ದೊಡ್ಡಮಟ್ಟದ ಅಪಾಯವನ್ನು ತಡೆಯುತ್ತದೆ.

55
ಸ್ಟೌವ್ ಕ್ಲೀನಿಂಗ್
Image Credit : Asianet News

ಸ್ಟೌವ್ ಕ್ಲೀನಿಂಗ್

ಇಂದು ಸ್ಟೌವ್‌ಗಳು ಸ್ಟೀಲ್, ಮಾರ್ಬಲ್, ಗ್ಲಾಸ್ ಮಾದರಿಯಲ್ಲಿ ಬರುತ್ತವೆ. ನಿಮ್ಮ ಮನೆಯಲ್ಲಿ ಯಾವುದೇ ಮಾದರಿಯ ಸ್ಟೌವ್ ಇದ್ರೂ ಒಂದು ಬೌಲ್‌ಗೆ ಬೇಕಿಂಗ್ ಸೋಡಾ ಮತ್ತು ನಿಂಬೆರಸ ಸೇರಿಸಿ ಗಾಢವಾದ ಪೇಸ್ಟ್ ತಯಾರಿಸಿ. ಈ ಪೇಸ್ಟ್‌ನ್ನು ಸ್ಟೌವ್ ಮೇಲೆ ಸವರಿ 10-15 ನಿಮಿಷದ ಬಳಿಕ ಸ್ವಚ್ಛ ನೀರಿನಿಂದ ತೊಳೆದುಕೊಂಡು, ಒಣ ಬಟ್ಟೆಯಿಂದ ಒರೆಸಿಕೊಳ್ಳಬೇಕು. ಈ ವಿಧಾನ ಬಳಸಿದ್ರೆ ಪ್ರತಿ ಬಾರಿಯೂ ನಿಮ್ಮ ಸ್ಟೌವ್ ಹೊಸದರಂತೆ ಹೊಳೆಯುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

MR
Mahmad Rafik
ಮಹ್ಮದ್ ರಫಿಕ್ ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಅಡುಗೆಮನೆ ಸಲಹೆಗಳು
 

Latest Videos
Recommended Stories
Recommended image1
ಮಜ್ಜಿಗೆ ಹುಳಿ ಸಂಜೆಯಾದ್ರೂ ಹುಳಿಯಾಗಬಾರದೆಂದರೆ ಇಷ್ಟು ಮಾಡಿ ಸಾಕು
Recommended image2
ಸಮಯ ಕಡಿಮೆ ಇದ್ದಾಗ ಮಾಡ್ಕೊಳ್ಳಿ ಸೋಂಬೇರಿ ರೈಸ್‌ ಬಾತ್; ಕಡಿಮೆ ಮಸಾಲೆ, ಹದವಾದ ಅಡುಗೆ
Recommended image3
ಗಣಪತಿಗೆ ಪ್ರಿಯವಾದ ಬಟಾಣಿ ಕಡಲೆ ಉಸ್ಲಿ ಟೆಂಪಲ್ ಸ್ಟೈಲ್‌ನಲ್ಲಿ ಮಾಡೋ ವಿಧಾನ
Related Stories
Recommended image1
Cleaning Hacks: ಬಾತ್‌ರೂಮ್‌ ಜಗ್ ಮೇಲಿರುವ ಹಠಮಾರಿ ಕಲೆ ತೆಗೆಯುವ ಸುಲಭ ಉಪಾಯಗಳು
Recommended image2
ಡ್ರೈ ಕ್ಲೀನಿಂಗ್ ಅಂಗಡಿಯವರು ಹೇಳಿದ ರಹಸ್ಯ .. ಕೇವಲ 10 ರೂಪಾಯಿಯಲ್ಲಿ ಮನೆಯಲ್ಲೇ ಈ ರೀತಿ ಬಟ್ಟೆ ಕ್ಲೀನ್ ಮಾಡಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved