MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
US Tariff on India
Mysuru Dasara 2026
Abhishek Sharma
Bengaluru Cantonment Railway Station
Kalyana Karnataka Development
Vande Mataram Row
Karnataka SSLC Mid-term Exam
Mangaluru Dharmasthala Railway Line
Shivamogga Mega Job Fair
Bengaluru Traffic
Mangaluru Cabinet Meeting
  • Home
  • Life
  • Health
  • Fatty Liver: ನಿರ್ಲಕ್ಷಿಸಬೇಡಿ.. ಲಿವರ್ ಅಪಾಯದಲ್ಲಿದೆ ಎನ್ನಲು ಮುಖ ನೀಡುವ 4 ಎಚ್ಚರಿಕೆಗಳಿವು!

Fatty Liver: ನಿರ್ಲಕ್ಷಿಸಬೇಡಿ.. ಲಿವರ್ ಅಪಾಯದಲ್ಲಿದೆ ಎನ್ನಲು ಮುಖ ನೀಡುವ 4 ಎಚ್ಚರಿಕೆಗಳಿವು!

Liver damage warning signs: ಈ ಕೆಳಗೆ ಕೊಟ್ಟಿರುವುದು ಮಾರಣಾಂತಿಕ ಫ್ಯಾಟಿ ಲಿವರ್ ಕಾಯಿಲೆಯ ಆರಂಭಿಕ ಎಚ್ಚರಿಕೆಯ ಲಕ್ಷಣವಾಗಿರಬಹುದು ಎಂಬುದು ನಿಮಗೆ ಗೊತ್ತಾ? ಮದ್ಯಪಾನ ಮಾಡದವರಿಗೂ ಕಾಡುವ ಈ ಕಾಯಿಲೆಯ ಆರಂಭಿಕ ಸೂಚನೆಗಳನ್ನು ಮುಖದ ಮೂಲಕ ಹೇಗೆ ಗುರುತಿಸುವುದು? ಇಲ್ಲಿದೆ ವೈದ್ಯಕೀಯ ಮಾಹಿತಿ.

2 Min read
Author : Ashwini HR
Published : Sep 18 2026, 11:47 AM IST
Share this Photo Gallery
  • FB
  • TW
  • Linkdin
  • Whatsapp
17
ವೇಗವಾಗಿ ಹೆಚ್ಚುತ್ತಿದೆ 'ನಾನ್ ಆಲ್ಕೋಹಾಲಿಕ್ ಫ್ಯಾಟಿ ಲಿವರ್'
Image Credit : Getty

ವೇಗವಾಗಿ ಹೆಚ್ಚುತ್ತಿದೆ 'ನಾನ್-ಆಲ್ಕೋಹಾಲಿಕ್ ಫ್ಯಾಟಿ ಲಿವರ್'

ವೇಗವಾಗಿ ಹೆಚ್ಚುತ್ತಿದೆ ‘ನಾನ್-ಆಲ್ಕೋಹಾಲಿಕ್ ಫ್ಯಾಟಿ ಲಿವರ್’
ಇಂದಿನ ಧಾವಂತದ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯಿಂದಾಗಿ 'ಫ್ಯಾಟಿ ಲಿವರ್' (Fatty Liver - ಯಕೃತ್ತಿನಲ್ಲಿ ಕೊಬ್ಬು ಶೇಖರಣೆ) ಎಂಬುದು ಅತ್ಯಂತ ಸಾಮಾನ್ಯ ಸಮಸ್ಯೆಯಾಗಿಬಿಟ್ಟಿದೆ. ಹಿಂದೆ ಕೇವಲ ಅತಿಯಾಗಿ ಮದ್ಯಪಾನ ಮಾಡುವವರಲ್ಲಿ ಮಾತ್ರ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಡಯಾಬಿಟಿಸ್, ಅಧಿಕ ರಕ್ತದೊತ್ತಡ, ಬೊಜ್ಜು ಮತ್ತು ಕೆಟ್ಟ ಕೊಲೆಸ್ಟ್ರಾಲ್‌ನಿಂದಾಗಿ ಮದ್ಯಪಾನ ಮುಟ್ಟದವರಲ್ಲೂ 'ನಾನ್-ಆಲ್ಕೋಹಾಲಿಕ್ ಫ್ಯಾಟಿ ಲಿವರ್' (NAFLD) ಅಪಾಯ ವೇಗವಾಗಿ ಹೆಚ್ಚುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
ಆರಂಭಿಕ ಲಕ್ಷಣಗಳು...
Image Credit : Getty

ಆರಂಭಿಕ ಲಕ್ಷಣಗಳು...

ಆರಂಭಿಕ ಲಕ್ಷಣಗಳು…
ಫ್ಯಾಟಿ ಲಿವರ್‌ನ ಅತ್ಯಂತ ಅಪಾಯಕಾರಿ ಅಂಶವೆಂದರೆ ಇದು ಒಂದು 'ಸೈಲೆಂಟ್ ಕಿಲ್ಲರ್'. ಆರಂಭದಲ್ಲಿ ಇದು ಯಾವುದೇ ಗಂಭೀರ ನೋವನ್ನು ತೋರಿಸದೆ ಒಳಗೊಳಗೇ ಯಕೃತ್ತನ್ನು (ಲಿವರ್) ಹಾನಿ ಮಾಡುತ್ತದೆ. ಇದನ್ನು ನಿರ್ಲಕ್ಷಿಸಿದರೆ ಲಿವರ್ ಊತ, ಲಿವರ್ ಸಿರೋಸಿಸ್ ಮತ್ತು ಲಿವರ್ ಕ್ಯಾನ್ಸರ್‌ಗೆ ಕಾರಣವಾಗಬಹುದು. ಆದರೆ ಅದೃಷ್ಟವಶಾತ್, ಲಿವರ್ ಅಪಾಯದಲ್ಲಿದೆ ಎಂಬುದನ್ನು ನಮ್ಮ ಮುಖ ಮತ್ತು ಕತ್ತಿನ ಭಾಗದಲ್ಲಿ ಕಂಡುಬರುವ ಕೆಲವು ಆರಂಭಿಕ ಲಕ್ಷಣಗಳ ಮೂಲಕ ಪತ್ತೆಹಚ್ಚಬಹುದು. ಆ ಮುಖ್ಯ ಲಕ್ಷಣಗಳು ಇಲ್ಲಿವೆ…

Related Articles

Related image1
ಮದ್ಯಪಾನ ಮಾಡ್ದಿದ್ರೂ ಅನಾರೋಗ್ಯ ತಪ್ಪಿದ್ದಲ್ಲ, ಬೆಂಗಳೂರಿನಲ್ಲಿ ಶೇ.42 ಮಂದಿಗೆ ಕಾಡ್ತಿದೆ Fatty Liver ಸಮಸ್ಯೆ
Related image2
Fatty Liver: ಫ್ಯಾಟಿ ಲಿವರ್ ಸಮಸ್ಯೆಯೇ? ಚಿಂತೆ ಬಿಡಿ, ಈ 6 ಸ್ನ್ಯಾಕ್ಸ್ ಧೈರ್ಯವಾಗಿ ತಿನ್ನಿ!
37
1. ಮುಖ ಮತ್ತು ಕಣ್ಣಿನ ಸುತ್ತ ಊತ (Puffy Face)
Image Credit : Getty

1. ಮುಖ ಮತ್ತು ಕಣ್ಣಿನ ಸುತ್ತ ಊತ (Puffy Face)

1. ಮುಖ ಮತ್ತು ಕಣ್ಣಿನ ಸುತ್ತ ಊತ (Puffy Face)
ಲಿವರ್ ಸರಿಯಾಗಿ ಕೆಲಸ ಮಾಡದಿದ್ದಾಗ, ದೇಹದಲ್ಲಿ ಪ್ರೋಟೀನ್ ಉತ್ಪಾದನೆ ಗಣನೀಯವಾಗಿ ಕಡಿಮೆಯಾಗುತ್ತದೆ. ಇದರಿಂದಾಗಿ ದೇಹದಲ್ಲಿ ದ್ರವಗಳ ಸಮತೋಲನ (Fluid Balance) ಮತ್ತು ರಕ್ತಪರಿಚಲನೆ ತಪ್ಪಿ ಮುಖದಲ್ಲಿ ನೀರು ತುಂಬಿಕೊಂಡು ಊದಿಕೊಳ್ಳುತ್ತದೆ. ಯಾವುದೇ ಕಾರಣವಿಲ್ಲದೆ ಮುಖ, ಕೆನ್ನೆ ಮತ್ತು ಕಣ್ಣಿನ ಕೆಳಭಾಗ ಊದಿಕೊಂಡಂತೆ (Puffy) ಕಂಡರೆ ಅದು ಲಿವರ್ ನೀಡುತ್ತಿರುವ ಆರಂಭಿಕ ಎಚ್ಚರಿಕೆಯಾಗಿರಬಹುದು.

47
2. ಕತ್ತಿನ ಸುತ್ತ ಕಪ್ಪಾಗುವುದು (Dark Neck)
Image Credit : Getty

2. ಕತ್ತಿನ ಸುತ್ತ ಕಪ್ಪಾಗುವುದು (Dark Neck)

2. ಕತ್ತಿನ ಸುತ್ತ ಕಪ್ಪಾಗುವುದು (Dark Neck)
ಕತ್ತಿನ ಸುತ್ತ ಚರ್ಮ ಕಪ್ಪಾಗಿದ್ದರೆ, ಹಲವರು ಅದನ್ನು ಬಿಸಿಲಿನಿಂದ ಅಥವಾ ಕೊಳೆಯಿಂದಾಗಿದೆ ಎಂದು ನಿರ್ಲಕ್ಷಿಸುತ್ತಾರೆ. ಆದರೆ ಇದು ಇನ್ಸುಲಿನ್ ಪ್ರತಿರೋಧದಿಂದ (Insulin Resistance) ಬರುವ ಫ್ಯಾಟಿ ಲಿವರ್‌ನ ಪ್ರಮುಖ ಸಂಕೇತವಾಗಿದೆ. ದೇಹದಲ್ಲಿ ಇನ್ಸುಲಿನ್ ಮಟ್ಟ ಹೆಚ್ಚಾದಾಗ ಮೆಲನಿನ್ ಪಿಗ್ಮೆಂಟೇಶನ್ ಹೆಚ್ಚಾಗಿ ಮೊದಲು ಕತ್ತಿನ ಹಿಂಭಾಗ ಮತ್ತು ಪಕ್ಕದಲ್ಲಿ ಕಪ್ಪು ಪಟ್ಟಿಗಳಂತೆ (Acanthosis Nigricans) ಬದಲಾಗುತ್ತದೆ.

57
3. ಮುಖ ಕೆಂಪಾಗುವುದು ಮತ್ತು ಬಾಯಿಯ ಸುತ್ತ ದದ್ದುಗಳು (Redness & Rashes)
Image Credit : Getty

3. ಮುಖ ಕೆಂಪಾಗುವುದು ಮತ್ತು ಬಾಯಿಯ ಸುತ್ತ ದದ್ದುಗಳು (Redness & Rashes)

3. ಮುಖ ಕೆಂಪಾಗುವುದು ಮತ್ತು ಬಾಯಿಯ ಸುತ್ತ ದದ್ದುಗಳು (Redness & Rashes)
ಲಿವರ್ ಸಮಸ್ಯೆ ದೀರ್ಘಕಾಲದವರೆಗೆ ಇದ್ದರೆ ಮುಖವು ಕೆಂಪಾಗುವುದು ಅಥವಾ ಸಣ್ಣ ಸಣ್ಣ ಗುಳ್ಳೆಗಳು ಏಳುವುದು ಸಾಮಾನ್ಯ. ಲಿವರ್ ಹಾನಿಯಾದಾಗ ದೇಹವು ಪೋಷಕಾಂಶಗಳನ್ನು ಹೀರಿಕೊಳ್ಳುವ ಶಕ್ತಿ ಕಳೆದುಕೊಂಡು ಜಿಂಕ್ (ಸತು) ಕೊರತೆ ಉಂಟಾಗುತ್ತದೆ. ಇದರಿಂದ ಬಾಯಿಯ ಸುತ್ತ ಕಿರಿಕಿರಿ, ಒಣ ಚರ್ಮ ಮತ್ತು ದದ್ದುಗಳು ಉಂಟಾಗುತ್ತವೆ.

67
4. ಕಣ್ಣುಗಳು ಹಳದಿಯಾಗುವುದು & ಮುಖದಲ್ಲಿ ತೀವ್ರ ತುರಿಕೆ
Image Credit : Getty

4. ಕಣ್ಣುಗಳು ಹಳದಿಯಾಗುವುದು & ಮುಖದಲ್ಲಿ ತೀವ್ರ ತುರಿಕೆ

4. ಕಣ್ಣುಗಳು ಹಳದಿಯಾಗುವುದು & ಮುಖದಲ್ಲಿ ತೀವ್ರ ತುರಿಕೆ
ಫ್ಯಾಟಿ ಲಿವರ್ ಸಮಸ್ಯೆ ಉಲ್ಬಣಗೊಂಡಾಗ ರಕ್ತದಲ್ಲಿ 'ಬಿಲಿರುಬಿನ್' (Bilirubin) ಪ್ರಮಾಣ ಹೆಚ್ಚಾಗಿ ಕಾಮಾಲೆಯ ಲಕ್ಷಣಗಳು (ಕಣ್ಣು ಮತ್ತು ಚರ್ಮ ಹಳದಿಯಾಗುವುದು) ಕಾಣಿಸಿಕೊಳ್ಳುತ್ತವೆ. ಜೊತೆಗೆ ರಕ್ತದಲ್ಲಿ ಪಿತ್ತರಸದ ಲವಣಗಳು (Bile salts) ಶೇಖರಣೆಯಾಗುವುದರಿಂದ ಮುಖ ಮತ್ತು ದೇಹದ ಚರ್ಮದಲ್ಲಿ ತೀವ್ರ ತುರಿಕೆ ಉಂಟಾಗುತ್ತದೆ.

77
ವೈದ್ಯರ ಸಲಹೆ
Image Credit : Getty

ವೈದ್ಯರ ಸಲಹೆ

ವೈದ್ಯರ ಸಲಹೆ
ನಿಮ್ಮ ಮುಖ ಅಥವಾ ಕತ್ತಿನ ಭಾಗದಲ್ಲಿ ಯಾವುದೇ ಕಾರಣವಿಲ್ಲದೆ ಈ ಬದಲಾವಣೆಗಳು ಪದೇ ಪದೇ ಕಾಣಿಸಿಕೊಳ್ಳುತ್ತಿದ್ದರೆ, ತಕ್ಷಣ ವೈದ್ಯರನ್ನು ಭೇಟಿ ಮಾಡಿ ಲಿವರ್ ಫಂಕ್ಷನ್ ಟೆಸ್ಟ್ (LFT) ಮತ್ತು ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಾಡಿಸಿಕೊಳ್ಳುವುದು ಜಾಣತನ.
(ಗಮನಿಸಿ: ಈ ಲೇಖನವು ಸಾಮಾನ್ಯ ಮಾಹಿತಿಗಾಗಿ ಮಾತ್ರ. ಯಾವುದೇ ರೋಗ ಲಕ್ಷಣಗಳಿದ್ದಲ್ಲಿ ಸ್ವಯಂ ಚಿಕಿತ್ಸೆ ಮಾಡದೆ ತಜ್ಞ ವೈದ್ಯರನ್ನು ಸಂಪರ್ಕಿಸಿ).

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಆರೋಗ್ಯ
ಜೀವನಶೈಲಿ
ಲಿವರ್ ಆರೋಗ್ಯ
 

Latest Videos
Recommended Stories
Recommended image1
ಬೇರೆಯವರು ಆಕಳಿಸಿದರೆ ನಮಗೂ ಯಾಕೆ ಆಕಳಿಕೆ ಬರುತ್ತೆ? ಇಲ್ಲಿದೆ ಇಂಟ್ರೆಸ್ಟಿಂಗ್ ಕಾರಣ
Recommended image2
ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ 7 ಸೂಪರ್ ಫುಡ್‌ಗಳು
Recommended image3
Health Tips: ಮಂಡಿ ನೋವು, ಹಲ್ಲಿನ ಸಮಸ್ಯೆ, ಕಫ ದೂರವಿಡಲು ಈ 5 ಟಿಪ್ಸ್ ಫಾಲೋ ಮಾಡಿ
Related Stories
Recommended image1
ಮದ್ಯಪಾನ ಮಾಡ್ದಿದ್ರೂ ಅನಾರೋಗ್ಯ ತಪ್ಪಿದ್ದಲ್ಲ, ಬೆಂಗಳೂರಿನಲ್ಲಿ ಶೇ.42 ಮಂದಿಗೆ ಕಾಡ್ತಿದೆ Fatty Liver ಸಮಸ್ಯೆ
Recommended image2
Fatty Liver: ಫ್ಯಾಟಿ ಲಿವರ್ ಸಮಸ್ಯೆಯೇ? ಚಿಂತೆ ಬಿಡಿ, ಈ 6 ಸ್ನ್ಯಾಕ್ಸ್ ಧೈರ್ಯವಾಗಿ ತಿನ್ನಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved