- Home
- Life
- Health
- ಜ್ವರ ಬಂದಾಗ ಸ್ನಾನ ಮಾಡಬಹುದೇ? ಹಿರಿಯರು ಹೇಳಿದ್ದೊಂದು, ಆದ್ರೆ ವೈದ್ಯಕೀಯ ವಿಜ್ಞಾನದಲ್ಲಿ ಇರೋದು ಇನ್ನೊಂದು
ಜ್ವರ ಬಂದಾಗ ಸ್ನಾನ ಮಾಡಬಹುದೇ? ಹಿರಿಯರು ಹೇಳಿದ್ದೊಂದು, ಆದ್ರೆ ವೈದ್ಯಕೀಯ ವಿಜ್ಞಾನದಲ್ಲಿ ಇರೋದು ಇನ್ನೊಂದು
Bathing during fever: ಜ್ವರ ಬಂದಾಗ ಸ್ನಾನ ಮಾಡಬಾರದು ಎಂಬ ತಪ್ಪು ಕಲ್ಪನೆ ಹಲವರಲ್ಲಿದೆ. ಆದರೆ ಜ್ವರವಿದ್ದಾಗ ಸ್ನಾನ ಮಾಡುವುದು ಸುರಕ್ಷಿತವೇ? ವೈದ್ಯರು ಸೂಚಿಸುವ ಸರಿಯಾದ ಕ್ರಮ ಮತ್ತು ಮುನ್ನೆಚ್ಚರಿಕೆಗಳ ಬಗ್ಗೆ ಇಲ್ಲಿದೆ ಮಾಹಿತಿ.

ಸ್ನಾನ ಮಾಡುವ ಸರಿಯಾದ ಕ್ರಮ
ಸ್ನಾನ ಮಾಡುವ ಸರಿಯಾದ ಕ್ರಮ
ವಾತಾವರಣ ಬದಲಾದಾಗ ಅಥವಾ ಇನ್ಫೆಕ್ಷನ್ ಆದಾಗ ಜ್ವರ ಬರುವುದು ಸಾಮಾನ್ಯ. ಇಂತಹ ಸಮಯದಲ್ಲಿ ಸ್ನಾನ ಮಾಡಬೇಕೇ ಅಥವಾ ಬೇಡವೇ ಎಂಬ ಗೊಂದಲ ಅನೇಕರಲ್ಲಿದೆ. ಹಿರಿಯರು ಸ್ನಾನ ಮಾಡಬಾರದು ಎನ್ನುತ್ತಾರೆ, ಆದರೆ ವೈದ್ಯಕೀಯ ವಿಜ್ಞಾನ ಏನೆನ್ನುತ್ತದೆ? ಜ್ವರದ ಸಮಯದಲ್ಲಿ ಸ್ನಾನ ಮಾಡುವ ಸರಿಯಾದ ಕ್ರಮ ಇಲ್ಲಿದೆ.
ಉಗುರು ಬೆಚ್ಚಗಿನ ನೀರು ಉತ್ತಮ
ಉಗುರು ಬೆಚ್ಚಗಿನ ನೀರು ಉತ್ತಮ
ಸ್ವಲ್ಪ ಜ್ವರ ಇದ್ದಾಗ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದು ದೇಹಕ್ಕೆ ಆರಾಮ ನೀಡುತ್ತದೆ. ಇದು ಚರ್ಮದ ಮೇಲಿರುವ ಬೆವರು ಮತ್ತು ಬ್ಯಾಕ್ಟೀರಿಯಾಗಳನ್ನು ತೆಗೆದುಹಾಕಿ, ಮನಸ್ಸಿಗೆ ಶಾಂತಿ ನೀಡುತ್ತದೆ ಮತ್ತು ಉತ್ತಮ ನಿದ್ರೆ ಬರಲು ಸಹಕರಿಸುತ್ತದೆ.
ತಣ್ಣೀರಿನ ಸ್ನಾನ ಅಪಾಯಕಾರಿ
ತಣ್ಣೀರಿನ ಸ್ನಾನ ಅಪಾಯಕಾರಿ
ಜ್ವರ ಇಳಿಸಲು ಕೆಲವರು ತಣ್ಣೀರಿನ ಸ್ನಾನ ಮಾಡುತ್ತಾರೆ, ಆದರೆ ಇದು ತಪ್ಪು. ತಣ್ಣೀರು ಸುರಿದಾಗ ದೇಹದಲ್ಲಿ ನಡುಕ ಉಂಟಾಗಿ, ಆಂತರಿಕವಾಗಿ ದೇಹದ ಉಷ್ಣತೆ ಇನ್ನಷ್ಟು ಹೆಚ್ಚಾಗಬಹುದು.
ಅತಿಯಾದ ಬಿಸಿ ನೀರು ಬೇಡ
ಅತಿಯಾದ ಬಿಸಿ ನೀರು ಬೇಡ
ತುಂಬಾ ಬಿಸಿಯಾದ ನೀರು ರಕ್ತನಾಳಗಳನ್ನು ವ್ಯಾಕೋಚಿಸಿ ದೇಹದ ತಾಪಮಾನವನ್ನು ಮತ್ತಷ್ಟು ಏರಿಸಬಹುದು. ಆದ್ದರಿಂದ ಬಿಸಿ ನೀರನ್ನು ಅತಿಯಾಗಿ ಬಳಸಬೇಡಿ.
ಸ್ಪಾಂಜ್ ಬಾತ್ (Sponge Bath) ಸುರಕ್ಷಿತ
ಸ್ಪಾಂಜ್ ಬಾತ್ (Sponge Bath) ಸುರಕ್ಷಿತ
ಹೆಚ್ಚು ಜ್ವರ ಅಥವಾ ಸುಸ್ತು ಇದ್ದಾಗ ಸ್ನಾನ ಮಾಡುವ ಬದಲು ಸ್ಪಾಂಜ್ ಬಾತ್ ಮಾಡುವುದು ಉತ್ತಮ. ಹತ್ತಿ ಬಟ್ಟೆಯನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಅದ್ದಿ ಹಣೆಯ ಮೇಲೆ, ಕುತ್ತಿಗೆ ಮತ್ತು ಕೈಕಾಲುಗಳನ್ನು ಒರೆಸಿಕೊಳ್ಳುವುದರಿಂದ ಜ್ವರ ಸುಲಭವಾಗಿ ಇಳಿಯುತ್ತದೆ.
ಮುನ್ನೆಚ್ಚರಿಕೆಗಳು
ಮುನ್ನೆಚ್ಚರಿಕೆಗಳು
*ಸ್ನಾನ ಮಾಡಿದ ತಕ್ಷಣ ಮೈಯನ್ನು ಚೆನ್ನಾಗಿ ಒರೆಸಿಕೊಂಡು ಒಣ ಬಟ್ಟೆ ಧರಿಸಿ.
*ತಲೆ ಸ್ನಾನ ಮಾಡುವುದನ್ನು ಆದಷ್ಟು ತಪ್ಪಿಸಿ, ಒಂದು ವೇಳೆ ಮಾಡಿದರೆ ಕೂಡಲೇ ತಲೆ ಒಣಗಿಸಿಕೊಳ್ಳಿ.
*ಫ್ಯಾನ್ ಅಥವಾ ಎಸಿ ಗಾಳಿ ನೇರವಾಗಿ ಮೈಗೆ ತಗುಲದಂತೆ ನೋಡಿಕೊಳ್ಳಿ.
*ಜ್ವರ ತೀವ್ರವಾಗಿದ್ದರೆ ಸ್ನಾನ ಮಾಡುವ ಸಾಹಸಕ್ಕೆ ಹೋಗದೆ ವೈದ್ಯರನ್ನು ಸಂಪರ್ಕಿಸಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

