MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Health
  • ಹಾರ್ಟ್ ಅಟ್ಯಾಕ್‌ ಆಗುವ ಒಂದು ತಿಂಗಳು ಮುಂಚಿತವಾಗಿಯೇ ನಿಮ್ಮ ದೇಹ ನೀಡುವ ಸಂಕೇತಗಳಿವು

ಹಾರ್ಟ್ ಅಟ್ಯಾಕ್‌ ಆಗುವ ಒಂದು ತಿಂಗಳು ಮುಂಚಿತವಾಗಿಯೇ ನಿಮ್ಮ ದೇಹ ನೀಡುವ ಸಂಕೇತಗಳಿವು

Heart Attack symptoms: ಹೃದಯಾಘಾತವು ಹೇಳಿ ಕೇಳಿ ಬರುವುದಿಲ್ಲ ಎಂಬುದು ಸುಳ್ಳು. ವಾಸ್ತವವಾಗಿ, ಅಟ್ಯಾಕ್ ಆಗುವ ಒಂದು ತಿಂಗಳು ಮುಂಚಿತವಾಗಿಯೇ ದೇಹವು ಕೆಲವು ಎಚ್ಚರಿಕೆಗಳನ್ನು ನೀಡುತ್ತದೆ. ಖ್ಯಾತ ವೈದ್ಯ ಡಾ. ಬಿಮಲ್ ಛಾಜರ್ ಅವರು ತಿಳಿಸಿರುವ ಈ ಪ್ರಮುಖ ಲಕ್ಷಣಗಳ ಬಗ್ಗೆ ನಿಮಗೂ ತಿಳಿದಿರಲಿ.

2 Min read
Author : Ashwini HR
Published : Jul 26 2026, 05:10 PM IST
Share this Photo Gallery
  • FB
  • TW
  • Linkdin
  • Whatsapp
18
ಸಮಯಕ್ಕೆ ಸರಿಯಾಗಿ ಗುರುತಿಸಿ
Image Credit : Instagram

ಸಮಯಕ್ಕೆ ಸರಿಯಾಗಿ ಗುರುತಿಸಿ

ಸಮಯಕ್ಕೆ ಸರಿಯಾಗಿ ಗುರುತಿಸಿ
ಇಂದಿನ ಬದಲಾಗುತ್ತಿರುವ ಜೀವನಶೈಲಿಯಿಂದಾಗಿ ದೇಶದಲ್ಲಿ ಹೃದಯಾಘಾತದ (Heart Attack) ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಕೇವಲ ವಯಸ್ಸಾದವರು ಮಾತ್ರವಲ್ಲದೆ, ಈಗಿನ ಕಾಲದ ಯುವಕರು ಕೂಡ ಹೃದಯಾಘಾತಕ್ಕೆ ತುತ್ತಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಖ್ಯಾತ ವೈದ್ಯರಾದ ಡಾ. ಬಿಮಲ್ ಛಾಜರ್ ಅವರು ಹೃದಯಾಘಾತಕ್ಕೂ ಒಂದು ತಿಂಗಳ ಮೊದಲು ದೇಹವು ನೀಡುವ ಕೆಲವು ಸಂಕೇತಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಇವುಗಳನ್ನು ಸಮಯಕ್ಕೆ ಸರಿಯಾಗಿ ಗುರುತಿಸುವ ಮೂಲಕ ಪ್ರಾಣಾಪಾಯದಿಂದ ಪಾರಾಗಬಹುದು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
28
ಹೃದಯಾಘಾತಕ್ಕೂ ಒಂದು ತಿಂಗಳು ಮುಂಚಿತವಾಗಿ ದೇಹದಲ್ಲಿ ಕಂಡುಬರುವ ಲಕ್ಷಣಗಳು
Image Credit : Getty

ಹೃದಯಾಘಾತಕ್ಕೂ ಒಂದು ತಿಂಗಳು ಮುಂಚಿತವಾಗಿ ದೇಹದಲ್ಲಿ ಕಂಡುಬರುವ ಲಕ್ಷಣಗಳು

ಎದೆಯಲ್ಲಿ ಅಸ್ವಸ್ಥತೆ
ಎದೆಯಲ್ಲಿ ಇದ್ದಕ್ಕಿದ್ದಂತೆ ವಿಪರೀತ ಅಸ್ವಸ್ಥತೆ ಅಥವಾ ಒತ್ತಡ ಅನುಭವವಾಗುತ್ತಿದ್ದರೆ ಅದು ಹೃದಯಾಘಾತದ ಲಕ್ಷಣವಾಗಿರಬಹುದು. ಎದೆಯ ಭಾಗ ಬಿಗಿಯಾದಂತೆ ಅನಿಸುವುದು, ಭಾರ ಎನಿಸುವುದು ಅಥವಾ ಎದೆಯಲ್ಲಿ ಉರಿ ಕಂಡುಬಂದು ಸ್ವಲ್ಪ ಸಮಯದ ನಂತರ ಕಡಿಮೆಯಾಗುತ್ತಿದ್ದರೆ ಅದನ್ನು ನಿರ್ಲಕ್ಷಿಸಬೇಡಿ. ಇದು ಹೃದಯದ ಕಾಯಿಲೆಯ ಮುನ್ಸೂಚನೆಯಾಗಿದೆ.

Related Articles

Related image1
ಭಾರತದಲ್ಲಿ ಪ್ರತಿ 10 ರಲ್ಲಿ 9 ಜನರಿಗಿದೆ ಇದೇ ಸಮಸ್ಯೆ.. ICMRನಿಂದ ಬಂತು ಆಘಾತಕಾರಿ ವರದಿ!
Related image2
ಹಗಲಿನಲ್ಲಿ ಅಮೃತದಂತಿರುವ ಈ ಆಹಾರ ರಾತ್ರಿ ಸೇವಿಸಿದರೆ ಇಂತಹ ಸಮಸ್ಯೆ ನಿಮಗೂ ಬರಬಹುದು!
38
ಅತಿಯಾದ ಆಯಾಸ
Image Credit : Getty

ಅತಿಯಾದ ಆಯಾಸ

ಅತಿಯಾದ ಆಯಾಸ
ನೀವು ತುಂಬಾ ಬೇಗನೆ ಸುಸ್ತಾಗುತ್ತಿದ್ದರೆ ಅದು ಕೂಡ ಒಂದು ಲಕ್ಷಣವಾಗಿರಬಹುದು. ದೈನಂದಿನ ಸಾಮಾನ್ಯ ಕೆಲಸಗಳನ್ನು ಮಾಡುವಾಗಲೂ ದೇಹವು ಸಾಥ್ ನೀಡುತ್ತಿಲ್ಲ ಎಂದು ಅನಿಸಿದರೆ, ನೀವು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರಬಹುದು. ಇಂತಹ ಸಮಯದಲ್ಲಿ ತಕ್ಷಣ ವೈದ್ಯರನ್ನು ಭೇಟಿ ಮಾಡಿ.

48
ಕೈಗಳು ಮತ್ತು ಕುತ್ತಿಗೆಯಲ್ಲಿ ನೋವು:
Image Credit : Getty

ಕೈಗಳು ಮತ್ತು ಕುತ್ತಿಗೆಯಲ್ಲಿ ನೋವು:

ಕೈಗಳು ಮತ್ತು ಕುತ್ತಿಗೆಯಲ್ಲಿ ನೋವು
ಎರಡೂ ಕೈಗಳು, ಕುತ್ತಿಗೆ, ದವಡೆ, ಭುಜಗಳು ಅಥವಾ ಬೆನ್ನಿನ ಭಾಗದಲ್ಲಿ ಆಗಾಗ ನೋವು ಕಾಣಿಸಿಕೊಳ್ಳುತ್ತಿದ್ದರೆ ಅದನ್ನು ಸಾಮಾನ್ಯ ನೋವು ಎಂದು ಭಾವಿಸುವ ತಪ್ಪು ಮಾಡಬೇಡಿ. ಇದು ಹೃದಯಾಘಾತದ 'ಸೈಲೆಂಟ್' (Silent) ಸಂಕೇತಗಳಲ್ಲಿ ಒಂದಾಗಿದೆ.

58
ಉಸಿರಾಟದ ತೊಂದರೆ
Image Credit : Getty

ಉಸಿರಾಟದ ತೊಂದರೆ

ಉಸಿರಾಟದ ತೊಂದರೆ
ಸ್ವಲ್ಪ ದೂರ ನಡೆದರೂ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತಿದ್ದರೆ, ಮಾತನಾಡುವಾಗ ಉಸಿರು ಕಟ್ಟಿದಂತಾಗುತ್ತಿದ್ದರೆ ಅಥವಾ ಮೆಟ್ಟಿಲು ಹತ್ತುವಾಗ ಅತಿಯಾಗಿ ಏದುಸಿರು ಬರುತ್ತಿದ್ದರೆ ಅದನ್ನು ಎಚ್ಚರಿಕೆ ಎಂದು ಪರಿಗಣಿಸಿ. ವಿಶೇಷವಾಗಿ ವಯಸ್ಸಾದವರು ಮತ್ತು ಮಧುಮೇಹ (Diabetes) ಇರುವವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ.

68
ತಣ್ಣನೆಯ ಬೆವರುವಿಕೆ:
Image Credit : Getty

ತಣ್ಣನೆಯ ಬೆವರುವಿಕೆ:

ತಣ್ಣನೆಯ ಬೆವರುವಿಕೆ
ಚಳಿಯಲ್ಲೂ ನಿಮಗೆ ಬೆವರು ಬರುತ್ತಿದ್ದರೆ ಅಥವಾ ಯಾವುದೇ ಕಾರಣವಿಲ್ಲದೆ ಅತಿಯಾಗಿ ಬೆವರುತ್ತಿದ್ದರೆ ಇದು ದುರ್ಬಲ ಹೃದಯದ ಸಂಕೇತವಾಗಿದೆ. ಇದರೊಂದಿಗೆ ಹಸಿವಾಗದಿರುವುದು, ತಲೆತಿರುಗುವಿಕೆ ಅಥವಾ ವಾಕರಿಕೆ ಬಂದಂತೆ ಅನಿಸುವುದು ಕೂಡ ಹೃದಯದ ತೊಂದರೆಯನ್ನು ಸೂಚಿಸುತ್ತದೆ.

78
ನಿದ್ದೆಯ ತೊಂದರೆ:
Image Credit : Getty

ನಿದ್ದೆಯ ತೊಂದರೆ:

ನಿದ್ದೆಯ ತೊಂದರೆ
ರಾತ್ರಿಯ ಸಮಯದಲ್ಲಿ ಪದೇ ಪದೇ ನಿದ್ದೆ ಕೆಡುತ್ತಿದ್ದರೆ ಅಥವಾ ಬೇಗ ನಿದ್ದೆ ಬರುತ್ತಿಲ್ಲವೆಂದರೆ ಅದು ಕೂಡ ಹೃದಯಾಘಾತದ ಲಕ್ಷಣಗಳಲ್ಲೊಂದು. ತಿಂಗಳಲ್ಲಿ ಹಲವು ಬಾರಿ ಹೀಗಾಗುತ್ತಿದ್ದರೆ ವೈದ್ಯರ ಸಲಹೆ ಪಡೆಯುವುದು ಉತ್ತಮ.

88
ಯಾರಿಗೆ ಅಪಾಯ ಹೆಚ್ಚು?
Image Credit : Getty

ಯಾರಿಗೆ ಅಪಾಯ ಹೆಚ್ಚು?

ಯಾರಿಗೆ ಅಪಾಯ ಹೆಚ್ಚು?
ಅಧಿಕ ರಕ್ತದೊತ್ತಡ (BP), ಮಧುಮೇಹ (Diabetes), ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಿರುವವರು, ಧೂಮಪಾನ ಮಾಡುವವರು ಮತ್ತು ಕುಟುಂಬದಲ್ಲಿ ಹೃದಯಾಘಾತದ ಇತಿಹಾಸ ಇರುವವರಿಗೆ ಅಪಾಯ ಹೆಚ್ಚು. ಅಲ್ಲದೆ, 40 ವರ್ಷ ದಾಟಿದ ಮೇಲೆ ಯಾವುದೇ ದೈಹಿಕ ವ್ಯಾಯಾಮ ಮಾಡದವರಲ್ಲಿ ಹೃದಯಾಘಾತದ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ಡಾ. ಬಿಮಲ್ ಛಾಜರ್ ಎಚ್ಚರಿಸಿದ್ದಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಆರೋಗ್ಯ ಸಮಸ್ಯೆಗಳು
ಆರೋಗ್ಯ
ಜೀವನಶೈಲಿ
ಹೃದಯಾಘಾತ

Latest Videos
Recommended Stories
Recommended image1
ಮಟನ್ vs ಚಿಕನ್ ಲಿವರ್: ಈ ಎರಡರಲ್ಲಿರೋ ವ್ಯತ್ಯಾಸ ಏನು? ಹೆಲ್ತ್‌ಗೆ ಯಾವುದು ಬೆಸ್ಟ್?
Recommended image2
Mushrooms: "ಅಣಬೆ ಸಂಪೂರ್ಣ ಸಸ್ಯಹಾರ ಅನ್ಕೊಂಡಿದ್ದೀರಾ?" - ಅಣಬೆಯ ಅಸಲಿ ಗುಟ್ಟು ಬಿಚ್ಚಿಟ್ಟ ವಿಜ್ಞಾನ!
Recommended image3
ಮಸಾಲಾ ಟೀ ಮಾಡ್ತಾರೆ, ಆದ್ರೆ ಮಸಾಲಾ ಕಾಫಿ ಯಾಕೆ ಮಾಡಲ್ಲ? ಈ 'ಮಹಾನ್ ರಹಸ್ಯ'ಕ್ಕೆ ಉತ್ತರ ಇಲ್ಲಿದೆ ನೋಡಿ!
Related Stories
Recommended image1
ಭಾರತದಲ್ಲಿ ಪ್ರತಿ 10 ರಲ್ಲಿ 9 ಜನರಿಗಿದೆ ಇದೇ ಸಮಸ್ಯೆ.. ICMRನಿಂದ ಬಂತು ಆಘಾತಕಾರಿ ವರದಿ!
Recommended image2
ಹಗಲಿನಲ್ಲಿ ಅಮೃತದಂತಿರುವ ಈ ಆಹಾರ ರಾತ್ರಿ ಸೇವಿಸಿದರೆ ಇಂತಹ ಸಮಸ್ಯೆ ನಿಮಗೂ ಬರಬಹುದು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved