- Home
- Entertainment
- ಕತ್ರಿನಾ ಟ್ರೋಲ್ ಆದಾಗ ಸಲ್ಮಾನ್ ಗುಡುಗಿದ್ರೂ ಪತಿ ವಿಕ್ಕಿ ಕೌಶಲ್ ಸೈಲೆಂಟಾಗಿದ್ದೇಕೆ? ಬಿ ಟೌನ್‌ನಲ್ಲಿ ಚರ್ಚೆ ಜೋರು
ಕತ್ರಿನಾ ಟ್ರೋಲ್ ಆದಾಗ ಸಲ್ಮಾನ್ ಗುಡುಗಿದ್ರೂ ಪತಿ ವಿಕ್ಕಿ ಕೌಶಲ್ ಸೈಲೆಂಟಾಗಿದ್ದೇಕೆ? ಬಿ ಟೌನ್‌ನಲ್ಲಿ ಚರ್ಚೆ ಜೋರು
Vicky Kaushal trolled: ಕತ್ರಿನಾ ಕೈಫ್ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆದಾಗ ಪತಿ ವಿಕ್ಕಿ ಕೌಶಲ್ ಸೈಲೆಂಟ್ ಆಗಿದ್ದರೆ, ಸಲ್ಮಾನ್ ಖಾನ್ ಬಹಿರಂಗವಾಗಿಯೇ ಬೆಂಬಲಕ್ಕೆ ನಿಂತಿದ್ದಾರೆ! ಇದು ನೆಟ್ಟಿಗರ ಕೆಂಗಣ್ಣಿಗೆ ಕಾರಣವಾಗಿದ್ದು, ವಿಕ್ಕಿ ಮೌನಕ್ಕೆ ಅಸಲಿ ಕಾರಣವೇನು ಅನ್ನೋದು ಇಲ್ಲಿದೆ ನೋಡಿ.
ಟ್ರೋಲಿಂಗ್‌ಗೆ ಗುರಿಯಾದ ಕತ್ರಿನಾ ಪತಿ ವಿಕ್ಕಿ ಕೌಶಲ್
ಟ್ರೋಲಿಂಗ್‌ಗೆ ಗುರಿಯಾದ ಕತ್ರಿನಾ ಪತಿ ವಿಕ್ಕಿ ಕೌಶಲ್
ಬಾಲಿವುಡ್ ಸ್ಟಾರ್ ಕತ್ರಿನಾ ಕೈಫ್ ಅವರ ಬಾಡಿ ಶೇಮಿಂಗ್ (ದೇಹದ ತೂಕದ ಬಗ್ಗೆ ಅಪಹಾಸ್ಯ) ವಿಚಾರವಾಗಿ ಸಲ್ಮಾನ್ ಖಾನ್ ಬಹಿರಂಗವಾಗಿಯೇ ಬೆಂಬಲಕ್ಕೆ ನಿಂತಿದ್ದಾರೆ. ಆದರೆ ಇದೇ ವಿಚಾರ ಈಗ ಕತ್ರಿನಾ ಅವರ ಪತಿ, ನಟ ವಿಕ್ಕಿ ಕೌಶಲ್ ಅವರಿಗೆ ಮುಳುವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರ ತೀವ್ರ ಟ್ರೋಲಿಂಗ್‌ಗೆ ಗುರಿಯಾಗಿದ್ದಾರೆ.
ಬಿಗ್ ಬಾಸ್ ವೇದಿಕೆಯಲ್ಲಿ ಗುಡುಗಿದ ಸಲ್ಮಾನ್ ಖಾನ್
ಬಿಗ್ ಬಾಸ್ ವೇದಿಕೆಯಲ್ಲಿ ಗುಡುಗಿದ ಸಲ್ಮಾನ್ ಖಾನ್
ಇತ್ತೀಚೆಗೆ ನಡೆದ ಅಂಬಾನಿ ಕುಟುಂಬದ ಸಮಾರಂಭದಲ್ಲಿ ಭಾಗವಹಿಸಿದ್ದ ಕತ್ರಿನಾ ಕೈಫ್ ಅವರ ಫೋಟೋಗಳು ವೈರಲ್ ಆಗುತ್ತಿದ್ದಂತೆ, ಹಲವರು ಅವರ ದೇಹದ ತೂಕವನ್ನು ಹೀಯಾಳಿಸಿ ಕಮೆಂಟ್ ಮಾಡಿದ್ದರು. ಈ ವಿಚಾರವಾಗಿ ‘ಬಿಗ್ ಬಾಸ್ ವೀಕೆಂಡ್ ಕಾ ವಾರ್’ ಸಂಚಿಕೆಯಲ್ಲಿ ನೇರವಾಗಿ ಹೆಸರು ಪ್ರಸ್ತಾಪಿಸದೆ ಆಕ್ರೋಶ ಹೊರಹಾಕಿದ ಸಲ್ಮಾನ್ ಖಾನ್, "ಇತ್ತೀಚೆಗಷ್ಟೇ ತಾಯಿಯಾದ ಮಹಿಳೆಯನ್ನು ಈ ರೀತಿ ಟ್ರೋಲ್ ಮಾಡುವುದು ಎಷ್ಟು ಸರಿ? ಅವರು ಮತ್ತೆ ನಟನೆಗೆ ಮರಳುವಾಗ ತಮ್ಮ ಫಿಟ್‌ನೆಸ್ ಸರಿಮಾಡಿಕೊಳ್ಳುತ್ತಾರೆ, ಅವರಿಗೆ ಸ್ವಲ್ಪ ಸಮಯ ನೀಡಿ" ಎಂದು ಗರಂ ಆಗಿ ಹೇಳಿದರು. ಇದೇ ವೇಳೆ, ತಮ್ಮ ಸಹೋದರ ಸೋಹೈಲ್ ಖಾನ್ ಅವರ ವಯಸ್ಸನ್ನು ಹೀಯಾಳಿಸುತ್ತಿರುವವರ ವಿರುದ್ಧ ಹಾಗೂ ತಮ್ಮ ಮೇಲಿನ ಟ್ರೋಲ್‌ಗಳ ಬಗ್ಗೆಯೂ ಸಲ್ಮಾನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಪತಿ ವಿಕ್ಕಿ ಕೌಶಲ್ ವಿರುದ್ಧ ನೆಟ್ಟಿಗರ ಕಿಡಿ
ಪತಿ ವಿಕ್ಕಿ ಕೌಶಲ್ ವಿರುದ್ಧ ನೆಟ್ಟಿಗರ ಕಿಡಿ
ಸಲ್ಮಾನ್ ಖಾನ್ ಈ ರೀತಿ ಕತ್ರಿನಾ ಪರವಾಗಿ ಮಾತನಾಡಿದ ಬೆನ್ನಲ್ಲೇ, ಸೋಶಿಯಲ್ ಮೀಡಿಯಾದಲ್ಲಿ ಹೊಸ ಚರ್ಚೆ ಆರಂಭವಾಗಿದೆ. "ಪತ್ನಿ ಕತ್ರಿನಾಗೆ ಇಷ್ಟೆಲ್ಲಾ ಅವಮಾನವಾಗುತ್ತಿದ್ದರೂ ಪತಿ ವಿಕ್ಕಿ ಕೌಶಲ್ ಸೈಲೆಂಟ್ ಆಗಿದ್ದಾರೆ. ಆದರೆ, ಮಾಜಿ ಪ್ರಿಯಕರ ಸಲ್ಮಾನ್ ಖಾನ್ ಆಕೆಯ ಪರವಾಗಿ ಧ್ವನಿ ಎತ್ತಿದ್ದಾರೆ" ಎಂದು ನೆಟ್ಟಿಗರು ವಿಕ್ಕಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇಂಟರ್ನೆಟ್‌ನಲ್ಲಿ ವಿಕ್ಕಿ ಅವರನ್ನು ಗುರಿಯಾಗಿಸಿಕೊಂಡು ಹಲವು ಟ್ರೋಲ್ ಹಾಗೂ ರೀಲ್ಸ್‌ಗಳು ಹರಿದಾಡುತ್ತಿವೆ.
ವಿಕ್ಕಿ ಮೌನಕ್ಕೆ ಕಾರಣವೇನು?
ವಿಕ್ಕಿ ಮೌನಕ್ಕೆ ಕಾರಣವೇನು?
ಆದರೆ, ಈ ವಿವಾದದ ಕುರಿತು ಬಾಲಿವುಡ್ ವಲಯದಲ್ಲಿ ಮತ್ತೊಂದು ಚರ್ಚೆಯೂ ನಡೆಯುತ್ತಿದೆ. ಕತ್ರಿನಾ ಕೈಫ್ ಮೊದಲಿನಿಂದಲೂ ಸೋಶಿಯಲ್ ಮೀಡಿಯಾ ವಿವಾದಗಳಿಂದ ದೂರ ಉಳಿಯುವ ಸ್ವಭಾವದವರು. ಅನಗತ್ಯ ಟ್ರೋಲ್‌ಗಳಿಗೆ ಪ್ರತಿಕ್ರಿಯಿಸದೆ ಸುಮ್ಮನಿರುವುದೇ ಅವರ ಶೈಲಿ. ಹೀಗಾಗಿ, ಪತ್ನಿಯ ಈ ನಿರ್ಧಾರ ಮತ್ತು ಅವರ ಗೌಪ್ಯತೆಯನ್ನು ಗೌರವಿಸಿಯೇ ವಿಕ್ಕಿ ಕೌಶಲ್ ಸಾರ್ವಜನಿಕವಾಗಿ ಯಾವುದೇ ಹೇಳಿಕೆ ನೀಡಿಲ್ಲ ಎನ್ನಲಾಗಿದೆ.
ಮುಂದುವರಿದ ಸಲ್ಮಾನ್-ಕತ್ರಿನಾ ಸ್ನೇಹ
ಮುಂದುವರಿದ ಸಲ್ಮಾನ್-ಕತ್ರಿನಾ ಸ್ನೇಹ
2003 ರಲ್ಲಿ ಆರಂಭವಾದ ಸಲ್ಮಾನ್ ಮತ್ತು ಕತ್ರಿನಾ ಅವರ ಪ್ರೇಮ ಸಂಬಂಧ 2008 ರಲ್ಲಿ ಮುರಿದುಬಿದ್ದಿತ್ತು. ಆದರೆ ಸಲ್ಮಾನ್ ಖಾನ್ ಯಾವುದೇ ಹಗೆತನ ಇಟ್ಟುಕೊಳ್ಳದೆ ಕತ್ರಿನಾ ಜೊತೆ ‘ಬಾಡಿಗಾರ್ಡ್’, ‘ಟೈಗರ್’ ಮುಂತಾದ ಯಶಸ್ವಿ ಚಿತ್ರಗಳಲ್ಲಿ ಕೆಲಸ ಮುಂದುವರಿಸಿದ್ದರು. ಅಲ್ಲದೆ, ಕತ್ರಿನಾ ಸಲ್ಮಾನ್ ಕುಟುಂಬದ ಜೊತೆ ಇಂದಿಗೂ ಆತ್ಮೀಯ ಸಂಬಂಧ ಹೊಂದಿದ್ದಾರೆ. ಹೀಗಾಗಿ, ಕಷ್ಟದ ಸಮಯದಲ್ಲಿ ಕತ್ರಿನಾ ಪರವಾಗಿ ಸಲ್ಮಾನ್ ನಿಂತಿರುವುದು ಅವರ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ, ಇದೇ ವಿಚಾರಕ್ಕೆ ಪತಿ ವಿಕ್ಕಿ ಕೌಶಲ್ ಅವರನ್ನು ಕೀಳಾಗಿ ಕಾಣುತ್ತಿರುವುದು ಎಷ್ಟು ಸರಿ ಎಂಬ ಪ್ರಶ್ನೆಯೂ ಎದ್ದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
