ನೇಪಾಳ ಪ್ರವಾಹದಲ್ಲಿ ಕೈಲಾಸ ಯಾತ್ರೆಯಲ್ಲಿದ್ದ ಹಲವರು ನಾಪತ್ತೆ, ನಟಿ ಮಾನಸಿ ಅಪಾಯದಿಂದ ಪಾರು
ನೇಪಾಳ ಪ್ರವಾಹದಲ್ಲಿ ಇಶಾ ಫೌಂಡೇಶನ್‌ನ 77 ಯಾತ್ರಿಕರು ನಾಪತ್ತೆಯಾಗಿದ್ದಾರೆ. ಮಾನಸ ಸರೋವರ ಯಾತ್ರೆ ವೇಳೆ ಪ್ರವಾಹಕ್ಕೆ ಸಿಲುಕಿ ನಾಪತ್ತೆಯಾಗಿದ್ದಾರೆ. ಅದೃಷ್ಟವಶಾತ್ ನಟಿ ಮಾನಸಿ ಅಪಾಯದಿಂದ ಪಾರಾಗಿದ್ದಾರೆ.

ನೇಪಾಳ ಪ್ರವಾಹ, ನಟಿ ಮಾನಸಿ ಸೇಫ್
ನೇಪಾಳ ಪ್ರವಾಹದಲ್ಲಿ ಮೃತರ ಸಂಖ್ಯೆ 160ಕ್ಕೆ ಏರಿಕೆಯಾಗಿದೆ. ನಾಪತ್ತೆಯಾದವರ ಸಂಖ್ಯೆ 1000 ಗಡಿ ದಾಟಿದೆ. ನೇಪಾಳ ಹಾಗೂ ಟಿಬೇಟ್ ಗಡಿ ಭಾಗದಲ್ಲಿ ಸಂಭವಿಸಿದ ಹಿಮಪಾತದಿಂದ 30 ನಿಮಿಷದಲ್ಲಿ ನೀರಿನ ಮಟ್ಟ 9 ಮೀಟರ್ ಏರಿಕೆಯಾಗಿದೆ. ಒಂದೇ ಸಮನೆ ಪ್ರವಾಹ ರೂಪದಲ್ಲಿ ನೀರು ಕೋಶಿ ನದಿ ತುಂಬ ಹರಿದಿದೆ. ಅಕ್ಕ ಪಕ್ಕದ ಗ್ರಾಮಗಳು, ನಗರ, ಪಟ್ಟಣ ಸೇರಿದಂತೆ ಎಲ್ಲವೂ ಪ್ರವಾಹದಲ್ಲಿ ಕೊಚ್ಚಿ ಹೋಗಿದೆ. ಈ ಟಿಬೇಟ್ ಗಡಿ ಮೂಲಕ ಮಾನಸ ಸರೋವರ ಯಾತ್ರೆಯಲ್ಲಿದ್ದ ಹಲವು ಭಾರತೀಯರು ನಾಪತ್ತೆಯಾಗಿದ್ದಾರೆ. ಈ ಪೈಕಿ ಸದ್ಗುರು ಜಗ್ಗಿವಾಸುದೇವ್ ಅವರ ಇಶಾ ಫೌಂಡೇಶನ್ ಮೂಲಕ ಮಾನಸ ಸರೋವರ ಯಾತ್ರೆಯಲ್ಲಿ 77 ಮಂದಿ ನಾಪತ್ತೆಯಾಗಿದ್ದಾರೆ. ಅದೃಷ್ಟವಶಾತ್ ಮಾನಸ ಸರೋವರ ಯಾತ್ರೆ ಕೈಗೊಂಡಿದ್ದ ನಟಿ ಮಾನಸಿ ಪರೇಖ್ ಅಪಾಯದಿಂದ ಪಾರಾಗಿದ್ದಾರೆ.
ಚೀನಾದಲ್ಲಿ ಸುರಕ್ಷಿತವಾಗಿದ್ದಾರೆ ನಟಿ ಮಾನಸಿ
ಕೈಲಾಸ ಹಾಗೂ ಮಾನಸ ಸರೋವರ ಯಾತ್ರೆಗಾಗಿ ಟಿಬೇಟ್ ಗಡಿಯ ಗಿರಿಯಾಂಗ್ ಪ್ರದೇಶದಲ್ಲಿದ್ದ ಇಶಾ ಫೌಂಡೇಶನ್ ಸಂಸ್ಥೆಯ 77 ಯಾತ್ರಿಕರು ನಾಪತ್ತೆಯಾಗಿದ್ದಾರೆ. ಹಂತ ಹಂತವಾಗಿ ಇಶಾ ಫೌಂಡೇಶನ್ ಯಾತ್ರಿಕರು ಕೈಲಾಸ ಹಾಗೂ ಮಾನಸಸರೋವರ ಯಾತ್ರೆ ಕೈಗೊಂಡಿದ್ದರು. ಗಿರಿಯಾಂಗ್ ಪ್ರದೇಶದಲ್ಲಿ ಪ್ರವಾಹ ಭೀಕರವಾಗಿದ್ದ ಕಾರಣ ಹಲವು ಭಾರತೀಯರು ನಾಪತ್ತೆಯಾಗಿದ್ದಾರೆ. ಆದರೆ ಮಾನಸಿ ಪರೇಖ್ ಗಿರಿಯಾಂಗ್ ಪ್ರದೇಶ ದಾಟಿದ್ದ ಕಾರಣ ಸುರಕ್ಷಿತವಾಗಿದ್ದಾರೆ. ಸದ್ಯ ಮಾನಸಿ ಪರೇಕ್ ಚೀನಾದಲ್ಲಿ ಸುರಕ್ಷಿತವಾಗಿದ್ದಾರೆ.
ಅಪಾಯದಿಂದ ಪಾರಾಗಿರುವ ಕುರಿತು ಅಪ್‌ಡೇಟ್ ನೀಡಿದ ನಟಿ
ನೇಪಾಳ ಪ್ರವಾಹ ಹೃದಯವಿದ್ರಾವಕವಾಗಿದೆ. ದುರಂತದಲ್ಲಿ ಸಿಲುಕಿದ ಜನರಿಗೆ ಪ್ರಾರ್ಥಿಸುತ್ತಿದ್ದೇವೆ. ಅದೃಷ್ಟವಶಾತ್ ದೇವರ ಆಶೀರ್ವಾದದಿಂದ ನಾವು ಚೀನಾದಲ್ಲಿ ಸುರಕ್ಷಿತವಾಗಿದ್ದೇವೆ. ಇಶಾ ಫೌಂಡೇಶನ್ ನಮ್ಮನ್ನು ಮನೆಗೆ ಕರೆತರಲು ಪ್ರಯತ್ನಿಸುತ್ತಿದೆ. ಜೊತೆಗೆ ನಾಪತ್ತೆಯಾದವರ ಯಾತ್ರಿಕರ ಪತ್ತೆಗೆ ಎಲ್ಲಾ ಪ್ರಯತ್ನ ನಡೆಸುತ್ತಿದೆ. ಎಲ್ಲರ ಕ್ಷೇಮಕ್ಕಾಗಿ ಪ್ರಾರ್ಥಿಸಿ ಎಂದು ಮಾನಸಿ ಪರೇಖ್ ಪೋಸ್ಟ್ ಮಾಡಿದ್ದಾರೆ.
ನಾಪತ್ತೆಯಾದವ ಸಂಪರ್ಕ ಸಿಗುತ್ತಿಲ್ಲ
ಸದ್ಗುರು ಜೊತೆ ಚೀನಾದಲ್ಲಿರುವುದಾಗಿ ಮಾನಸಿ ಪರೇಖ್ ಹೇಳಿದ್ದಾರೆ. ನಾವು ಹಲವು ಯಾತ್ರಿಕರು ಸದ್ಗುರು ಜೊತೆ ಚೀನಾದ ಹೊಟೆಲ್‌ನಲ್ಲಿ ತಂಗಿದ್ದೇವೆ. ಚೀನಾ ಸರ್ಕಾರದ ಗ್ರೀನ್ ಸಿಗ್ನಲ್‌ಗಾಗಿ ಕಾಯುತ್ತಿದ್ದೇವೆ. ಸದ್ಗುರು ಇಲ್ಲಿಂದಲೇ ತಮ್ಮ ಯಾತ್ರಿಕರ ಪತ್ತೆಗಾಗಿ ನಿರಂತರವಾಗಿ ಅಧಿಕಾರಿಗಳ ಸಂಪರ್ಕ ಮಾಡುತ್ತಿದ್ದಾರೆ. ಇಶಾ ಫೌಂಡೇಶನ್ ಮೂಲಕ ಕೈಲಾಸ, ಮಾನಸ ಸರೋವರ ಯಾತ್ರೆಗೆ ಬಂದ ಹಲವರು ನಾಪತ್ತೆಯಾಗಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅಧಿಕಾರಿಗಳ ಮೂಲಕ ಪತ್ತೆ ಕಾರ್ಯಕ್ಕೆ ಸದ್ಗುರು ಮನವಿ ಮಾಡಿದ್ದಾರೆ ಎಂದು ಮಾನಸಿ ಪರೇಕ್ ಹೇಳಿದ್ದಾರೆ.
ಭಾರತದಿಂದ ನೆರವು
ಭಾರತದಿಂದ ಕೈಲಾಸ ಮಾನಸಸರೋವರ ಯಾತ್ರೆಗೆ ಹೊರಟ ಸುಮಾರು 450ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿ ಹೇಳುತ್ತಿದೆ. ಭಾರತ ಸರ್ಕಾರ ಈಗಾಗಲೇ ನೇಪಾಳ ಸರ್ಕಾರದ ಜೊತೆ ಸಂಪರ್ಕದಲ್ಲಿದೆ. ಚೀನಾ ಈಗಾಗಲೇ ನೇಪಾಳದಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ. ಭಾರತ ಸರ್ಕಾರ ಎರಡು ವಿಮಾನಗಳ ಮೂಲಕ ಪರಿಹರ ಸಾಮಾಗ್ರಿಗಳನ್ನು ಕಳುಹಿಸಿಕೊಟ್ಟಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

