- Home
- Entertainment
- Toxic ಸೆಟ್ನಲ್ಲೇ ಪ್ರೆಗ್ನೆನ್ಸಿ ವಿಷ್ಯ ರಿವೀಲ್ ಮಾಡಿದ್ದ ಕಿಯಾರಾ: ಯಶ್ ಭಾವುಕ- ಅಂದಿನ ರೋಚಕ ಘಟನೆ ನೆನೆದ ನಟಿ
Toxic ಸೆಟ್ನಲ್ಲೇ ಪ್ರೆಗ್ನೆನ್ಸಿ ವಿಷ್ಯ ರಿವೀಲ್ ಮಾಡಿದ್ದ ಕಿಯಾರಾ: ಯಶ್ ಭಾವುಕ- ಅಂದಿನ ರೋಚಕ ಘಟನೆ ನೆನೆದ ನಟಿ
'ಟಾಕ್ಸಿಕ್' ಸಿನಿಮಾ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದು, ನಟಿ ಕಿಯಾರಾ ಅಡ್ವಾಣಿ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಶೂಟಿಂಗ್ ಸಮಯದಲ್ಲಿ ತಾನು ಗರ್ಭಿಣಿ ಎಂಬ ವಿಷಯ ತಿಳಿದಾಗ, ಯಶ್ ಮತ್ತು ನಿರ್ದೇಶಕಿ ಗೀತು ಮೋಹನ್‌ದಾಸ್ ಅವರು ತೋರಿದ ಪ್ರೀತಿ ಮತ್ತು ಬೆಂಬಲವನ್ನು ಕಿಯಾರಾ ಹಂಚಿಕೊಂಡಿದ್ದಾರೆ.

ಟಾಕ್ಸಿಕ್ ಹವಾ
ನಾಲ್ಕು ವರ್ಷಗಳಿಂದ ಯಶ್ ಫ್ಯಾನ್ಸ್ ಕಾಯುತ್ತಿದ್ದ ಬಹು ನಿರೀಕ್ಷಿತ ‘Toxic’ ಸಿನಿಮಾ ಭರ್ಜರಿಯಾಗಿ ಓಡುತ್ತಿದೆ. ಹಲವಾರು ಚಿತ್ರಮಂದಿರಗಳಲ್ಲಿ, ವಿಭಿನ್ನ ದೇಶಗಳಲ್ಲಿ ತೆರೆ ಕಂಡಿರುವ ಚಿತ್ರಕ್ಕೆ ಉತ್ತಮ ರಿಸ್ಪಾನ್ಸ್ ದೊರೆತಿದೆ. ನಿರ್ದೇಶಕಿ ಗೀತು ಮೋಹನ್ ದಾಸ್, ಕೆವಿಎನ್ ನಿರ್ಮಾಣ ಸಂಸ್ಥೆಯ ಈ ಸಿನಿಮಾದ ಕುರಿತು ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ ವಿಶ್ಲೇಷಣೆ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಯಶ್ ಜೊತೆಗೆ, ನಟಿ ಕಿಯಾರಾ ಅವರ ಅಭಿನಯಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ನಾಡಿಯಾ ಪಾತ್ರದಲ್ಲಿನ ಇವರ ನಟನೆಗೆ ಫಿದಾ ಆಗದವರೇ ಇಲ್ಲವೇನೋ.
ಅಂದು ನಡೆದದ್ದೇನು?
ಇದರ ನಡುವೆಯೇ ನಾಲ್ಕು ವರ್ಷಗಳ ಹಿಂದಿನ ನಟಿ ಕಿಯಾರಾ ಸುದ್ದಿಯೊಂದು ಸದ್ದು ಮಾಡುತ್ತಿದೆ. ಅದನ್ನು ಖುದ್ದು ಇದೀಗ ನಟಿಯೇ ಶೇರ್ ಮಾಡಿಕೊಂಡಿದ್ದಾರೆ. ಮೊದಲ ಬಾರಿಗೆ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿರುವ 35 ವರ್ಷದ ನಟಿ ಕಿಯಾರಾ ಬದುಕನ್ನೇ ಬದಲಿಸಿದ ಚಿತ್ರ ಟಾಕ್ಸಿಕ್. ಕನ್ನಡ, ತೆಲುಗು, ತಮಿಳು, ಮಲಯಾಳಂ, ಇಂಗ್ಲಿಷ್ ಹಾಗೂ ಹಿಂದಿ ಭಾಷೆಗಳ ‘ಟಾಕ್ಸಿಕ್’ ಪ್ರಚಾರದ ಪ್ರತಿ ಸ್ಟೇಜ್‌ನಲ್ಲೂ ನಟಿ ಕಾಣಿಸಿಕೊಂಡಿದ್ದಾರೆ.
ಆ ಘಟನೆ ನೆನೆದ ಕಿಯಾರಾ
ಆದರೆ ಬಹುತೇಕರಿಗೆ ತಿಳಿಯದ ಒಂದು ಸಂಗತಿ ಇದೆ. ಅದನ್ನೀಗ ಕಿಯಾರಾ ಶೇರ್ ಮಾಡಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಟಾಕ್ಸಿಕ್ ಸಿನಿಮಾ ಶೂಟಿಂಗ್ ವೇಳೆ ಕಿಯಾರಾಗೆ ತಾನು ಗರ್ಭಿಣಿ ಎನ್ನುವುದು ತಿಳಿದಿತ್ತು. ಕಿಯಾರಾ ಅಡ್ವಾಣಿ ಅವರು ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರನ್ನ 2023ರಲ್ಲಿ ಮದುವೆ ಆದರು. ಟಾಕ್ಸಿಕ್ ಶೂಟಿಂಗ್ ವೇಳೆ ಅಮ್ಮನಾಗುವ ಭಾಗ್ಯ ಅವರಿಗೆ ಲಭಿಸಿತ್ತು. ಇದನ್ನು ತಮ್ಮ ಪತಿಗೆ ಹೇಳಿದ ಬಳಿಕ, ಮೊದಲು ತಾನು ಈ ಸುದ್ದಿ ಹೇಳಿದ್ದು, ನಟ ಯಶ್ ಮತ್ತು ಗೀತು ಅವರಿಗೆ ಎಂದು ನಟಿ ಹೇಳಿದ್ದಾರೆ. ಆ ಸಮಯದಲ್ಲಿ ಯಶ್ ಮತ್ತು ಗೀತು ಮೋಹನ್‌ದಾಸ್ ಭಾವುಕರಾಗಿದ್ದರು. ಇಬ್ಬರ ಕಣ್ಣಲ್ಲೂ ಪ್ರೀತಿ, ಭಾವುಕತೆ ಇತ್ತು ಎಂದಿದ್ದಾರೆ ನಟಿ.
ಕಣ್ತುಂಬಿಕೊಂಡು ಶುಭ ಹಾರೈಕೆ
ಈ ಕುರಿತು ಚೆನ್ನೈನಲ್ಲಿ ನಡೆದ ‘ಟಾಕ್ಸಿಕ್’ ಸಿನಿಮಾ ಈವೆಂಟ್‌ನಲ್ಲಿ ನಟಿ ನುಡಿದಿದ್ದಾರೆ. ಈ ವಿಚಾರವನ್ನ ನಾನು ಇದುವರೆಗೂ ಹಂಚಿಕೊಂಡಿಲ್ಲ. ಈಗ ಶೇರ್ ಮಾಡ್ಬೇಕು ಅನ್ಸುತ್ತಿದೆ. ನಾನು ಗರ್ಭಿಣಿ ಎಂದು ಗೊತ್ತಾದಾಗ ಮೊದಲ ಹೇಳಿದ್ದು ನನ್ನ ಕುಟುಂಬಕ್ಕೆ, ನಂತರ ಹಂಚ್ಕೊಂಡಿದ್ದೇ ಯಶ್ ಮತ್ತು ಗೀತು ಹತ್ರ. ಆ ಕ್ಷಣ ನೀವು ಸಿನಿಮಾ ಹೇಗೆ ಮುಗಿಸುವುದು, ಏನು ಮಾಡೋದು, ಆ ಯಾವ ವಿಚಾರಗಳನ್ನು ನೀವು ಯೋಚನೆ ಮಾಡಲಿಲ್ಲ. ಇಬ್ಬರೂ ಕಣ್ತುಂಬಿಕೊಂಡು ನನಗೆ ಶುಭ ಹಾರೈಸಿದ್ರಿ ಎಂದು ನಟಿ ಹೇಳಿದ್ದಾರೆ.
ನನ್ನ ಹೃದಯ ತುಂಬಿ ಬಂತು
ಅದೇ ಎಕ್ಸೈಟ್‌ಮೆಂಟ್‌ನಲ್ಲಿ ಪ್ರೀತಿ ತೋರಿಸಿದ್ರಿ. ನನಗೋಸ್ಕರ ನಿಮ್ಮ ಖುಷಿ ನೋಡಿ, ನನ್ನ ಹೃದಯ ತುಂಬಿ ಬಂತು. ನಾನು ಯಾವತ್ತೂ ಆ ಕ್ಷಣವನ್ನ ಮರೆಯುವುದಿಲ್ಲ. ಕಮಾನ್ ಕಿಯಾರಾ, ನಿಂಗೆ ಏನು ಬೇಕು ಅದು ತಿನ್ನು, ಶೂಟಿಂಗ್ ಸೆಟ್‌ಗೆ ಬಾ, ಆರಾಮಾಗಿ ಶೂಟ್ ಮಾಡೋಣ ಎಂದು ಹೇಳಿದ್ದು ಹಾಗೇ ನನ್ನ ಕಿವಿಯಲ್ಲಿದೆ. ನೀವು ಹೇಳಿದ ಮಾತಿನಂತೆ ಹಾಗೇ ನಡೆದುಕೊಂಡಿರಿ. ನಾನು ಏನು ಬೇಕಾದ್ರೂ ಮಾಡ್ಬಹುದು ಎಂಬುವುದನ್ನ ನನಗೆ ಅರಿವು ಮಾಡಿಸಿದ್ರಿ. ನಿಮ್ಮ ಮಾನವೀಯತಯ ಗುಣಕ್ಕೆ ನಾನು ಯಾವಾಗಲೂ ಆಭಾರಿ ಎಂದು ನಟಿ ಹೇಳಿದ್ದಾರೆ.
ಮಗಳು ಹೆತ್ತ ನಟಿ
ಅಂದಹಾಗೆ, ಕಿಯಾರಾ ಟಾಕ್ಸಿಕ್ ಸಿನಿಮಾ ಚಿತ್ರೀಕರಣದ ಸಮಯದಲ್ಲಿಯೇ ಮಗಳನ್ನು ಹೆತ್ತರು. ಆಕೆಗೆ ಸರಾಯಾ ಮಲ್ಹೋತ್ರಾ ಎಂದು ನಾಮಕರಣ ಮಾಡಿದ್ದಾರೆ. ಈ ಪುಟಾಣಿ ಕೂಡ 'ಟಾಕ್ಸಿಕ್' ಸಿನಿಮಾದ ಪಾರ್ಟ್ ಆಗಿದ್ದಳು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

