MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • ಬೇಡ ಎಂದಾಕೆಯನ್ನೇ ಮದ್ವೆಯಾಗ್ತಿರೋ Amruthadhaare ಜೈ: ತಾರಾ ಜೋಡಿಯ ಇಂಟರೆಸ್ಟಿಂಗ್​ ಲವ್‌ ಸ್ಟೋರಿ

ಬೇಡ ಎಂದಾಕೆಯನ್ನೇ ಮದ್ವೆಯಾಗ್ತಿರೋ Amruthadhaare ಜೈ: ತಾರಾ ಜೋಡಿಯ ಇಂಟರೆಸ್ಟಿಂಗ್​ ಲವ್‌ ಸ್ಟೋರಿ

'ಅಮೃತಧಾರೆ' ಖ್ಯಾತಿಯ ಜೈದೇವ್ ಮತ್ತು 'ಭಾರ್ಗವಿ ಎಲ್ಎಲ್​ಬಿ' ಖ್ಯಾತಿಯ ರಾಧಾ ಭಗವತಿ ನಿಜ ಜೀವನದಲ್ಲಿ ಒಂದಾಗುತ್ತಿದ್ದಾರೆ. ಆರಂಭದಲ್ಲಿ ರಾಧಾ ಅವರ ಪ್ರೀತಿಯನ್ನು ತಿರಸ್ಕರಿಸಿದ್ದ ನಟ ರಾಣವ್, ನಂತರ ಅವರ ವ್ಯಕ್ತಿತ್ವಕ್ಕೆ ಮನಸೋತು ಮದುವೆಗೆ ಒಪ್ಪಿಕೊಂಡಿದ್ದಾರೆ.

2 Min read
Author : Suchethana D
Published : Aug 01 2026, 07:47 PM IST
Share this Photo Gallery
  • FB
  • TW
  • Linkdin
  • Whatsapp
16
ಭಾರ್ಗವಿ ಎಲ್‌ಎಲ್‌ಬಿ ಜೈದೇವ್‌ ಜೋಡಿ
Image Credit : Social Media

ಭಾರ್ಗವಿ ಎಲ್‌ಎಲ್‌ಬಿ- ಜೈದೇವ್‌ ಜೋಡಿ

ಅಮೃತಧಾರೆಯಲ್ಲಿ ಪೆದ್ದು ಮಲ್ಲಿಯಾಗಿ ಎಲ್ಲರ ಮನಸ್ಸನ್ನು ಗೆದ್ದು ಇದೀಗ ಭಾರ್ಗವಿ ಎಲ್​ಎಲ್​ಬಿಯಲ್ಲಿ ಭಾರ್ಗವಿ ಆಗಿ ಮಿಂಚುತ್ತಿದ್ದಾರೆ ನಟಿ ರಾಧಾ ಭಗವತಿ. Amurthadhaare Serialನಲ್ಲಿ ಮೋಸ ಮಾಡಿ ಪ್ರೆಗ್ನೆಂಟ್​ ಮಾಡಿದ ಜೈದೇವ್​ನನ್ನೇ ರಿಯಲ್​ ಲೈಫ್​ನಲ್ಲಿ ಮದ್ವೆಯಾಗ್ತಿದ್ದಾರೆ ನಟಿ ರಾಧಾ. ಇವರ ಮದುವೆ ಡೇಟ್‌ ಬಗ್ಗೆ ಇನ್ನೂ ಬಹಿರಂಗಗೊಳ್ಳದಿದ್ದರೂ, ರಿಯಲ್‌ ಲೈಫ್‌ ಲವ್‌ ಸ್ಟೋರಿ ಮಾತ್ರ ರೋಚಕವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ನಟಿಯನ್ನು ಮೊದಲಿಗೆ ಒಪ್ಪಿಕೊಳ್ಳದ ನಟ
Image Credit : speedpluskarnataka Instagram

ನಟಿಯನ್ನು ಮೊದಲಿಗೆ ಒಪ್ಪಿಕೊಳ್ಳದ ನಟ

ಇದೀಗ ಆರಂಭದಲ್ಲಿ ನಟಿ ರಾಧಾ ಭಗವತಿ ಅವರು ಪ್ರಪೋಸ್‌ ಮಾಡಿದಾಗ, ರಾಣವ್‌ ಬೇಡ ಎಂದ ಬಗ್ಗೆ ನಟಿ ಮಾತನಾಡಿದ್ದಾರೆ. ಸುಮನ್ ಟಿವಿಗೆ ನೀಡಿರುವ ಸಂದರ್ಶನದಲ್ಲಿ ನಟಿ, ನನಗೆ ಗೊತ್ತಿಲ್ಲದೇ ಅವರ ಮೇಲೆ ಲವ್‌ ಆಯ್ತು, ಅವರ ಕ್ಯೂಟ್‌ನೆಸ್‌ ನನ್ನನ್ನ ಅಟ್ರ್ಯಾಕ್ಟ್‌ ಮಾಡಿತು. ಆದರೆ ಅವರ ಹಿನ್ನೆಲೆ ಏನೂ ಗೊತ್ತಿರಲಿಲ್ಲ. ಅವರು ಹಣವಂತರಾ, ಕಾರು, ಬಂಗ್ಲೆ ಇದ್ಯಾ ಏನೂ ಅರಿವು ಇರಲಿಲ್ಲ. ಮನಸ್ಸು ಅವರನ್ನು ಕೇಳುತ್ತಿತ್ತು ಅಷ್ಟೇ ಎಂದು ತಮಗೆ ಆರಂಭದಲ್ಲಿ ಆದ ಲವ್‌ ಫೀಲಿಂಗ್ಸ್‌ ಬಗ್ಗೆ ಹೇಳಿದ್ದಾರೆ.

Related Articles

Related image1
ಗೂಗಲ್​ ನೋಡಿ 'ಮಿಸ್ ಟೀನ್ ಯೂನಿವರ್ಸ್ ಇಂಡಿಯಾ' ಕಿರೀಟ ಗೆದ್ದ 17ರ ಬಾಲೆ: ಸುಂದರ ಫೋಟೋಗಳು ಇಲ್ಲಿವೆ
Related image2
ರೋಚಕ ಟ್ವಿಸ್ಟ್‌ ಜೊತೆ Brahmagantu Serial ಮುಕ್ತಾಯ: ಕುತೂಹಲ ಕೆರಳಿಸಿದ ಅಂತ್ಯ
36
ಒಲ್ಲೆ ಎಂದು ಬಿಟ್ಟರು
Image Credit : Ranav Gowda Instagram

ಒಲ್ಲೆ ಎಂದು ಬಿಟ್ಟರು

ಮನಸ್ಸು ಕೇಳದೇ ನಾನೇ ಒಂದು ದಿನ ನಾನು ಅವರಿಗೆ ಹೋಗಿ ಹೇಳಿಬಿಟ್ಟೆ. ಆದರೆ ಅವರು ಅದಕ್ಕೆ ಒಪ್ಪಲಿಲ್ಲ. ಈಗ ಸದ್ಯಕ್ಕೆ ಅದರ ಬಗ್ಗೆ ಏನೂ ಪ್ಲ್ಯಾನ್ಸ್‌ ಇಲ್ಲ, ಸಾರಿ ಅಂತ ಹೇಳಿಬಿಟ್ಟರು. ನನಗೆ ಆಗ ಏನು ಮಾತಾಡಬೇಕು ಅಂತ ಗೊತ್ತಾಗಿರ್ಲಿಲ್ಲ. ಕಂಪ್ಲೀಟ್‌ ಆಗಿ ಬ್ಲ್ಯಾಂಕ್‌ ಆಗಿಬಿಟ್ಟೆ. ಅದು ನನಗೆ ಹರ್ಟ್‌ ಆಯ್ತು ಎಂದು ನಟಿ ಹೇಳಿದ್ದಾರೆ.

46
ಅವರೇ ನನ್ನ ಗಂಡ ಎಂದು ಫಿಕ್ಸ್‌ ಆಗಿಬಿಟ್ಟಿದ್ದೆ
Image Credit : Instagram

ಅವರೇ ನನ್ನ ಗಂಡ ಎಂದು ಫಿಕ್ಸ್‌ ಆಗಿಬಿಟ್ಟಿದ್ದೆ

ಅವರು ನನ್ನ ಪ್ರೀತಿಯನ್ನ ರಿಜೆಕ್ಟ್‌ ಮಾಡಿದ್ದಾರೆ ಅಂತ ಗೊತ್ತಿದ್ರೂ ಕೂಡ, ಅವರ ಮೇಲೆ ಇದ್ದ ಪ್ರೀತಿ ಹೋಗ್ತಾನೆ ಇರ್ಲಿಲ್ಲ. ಮದುವೆ ಆದರೆ ಇವರನ್ನೇ ಆಗ್ತೀನಿ. ಇಲ್ಲದೇ ಇದ್ರೆ ಆ ಮದುವೆ ಅನ್ನೋ ಕಾನ್ಸೆಪ್ಟ್‌ ಬೇಡ ನನ್ನ ಜೀವನದಲ್ಲಿ ಅಂತ ನಾನು ಫಿಕ್ಸ್‌ ಅಗಿಬಿಟ್ಟಿದ್ದೆ. ಆದರೂ ಶೂಟಿಂಗ್‌ನಲ್ಲಿ ಏನೂ ಗೊತ್ತಿಲ್ಲದವರ ರೀತಿ ಭಾಗಿಯಾಗಿದ್ದೆ ಎಂದು ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

56
ಏಕಾಏಕಿ ನಿರ್ಧಾರ ಸಲ್ಲ
Image Credit : Instagram

ಏಕಾಏಕಿ ನಿರ್ಧಾರ ಸಲ್ಲ

ಇದಕ್ಕೆ ರಾಣವ್‌ ಅವರು, ಮೊದಲು ಪಾತ್ರದ ಪರಿಚಯ ಆಗಿತ್ತು ಬಿಟ್ರೆ, ನಮ್ಮಿಬ್ಬರ ವ್ಯಕ್ತಿತ್ವದ ಪರಿಚಯ ಅಗಿರ್ಲಿಲ್ಲ. ಅವರಿಗೆ ಯಾವಾಗ ನನ್ನ ವ್ಯಕ್ತಿತ್ವದ ಪರಿಚಯ ಆಯ್ತೋ ಅವರಿಗೆ ನನ್ನ ಮೇಲೆ ಆಸೆ ಆಗೋಕೆ ಶುರುವಾಯ್ತು. ಅವರ ವ್ಯಕ್ತಿತ್ವದ ಪರಿಚಯ ನನಗೆ ಆಗಿದ್ರೂ ಕೂಡ ನಾನು ಅದರ ಮೇಲೆ ಗಮನ ಕೊಟ್ಟಿರಲಿಲ್ಲ. ಬಹುಶಃ ಗಮನ ಕೊಟ್ಟಿದಿದ್ರೆ ನನಗೇ ಮೊದಲು ಇವರ ಮೇಲೆ ಫೀಲಿಂಗ್ಸ್‌ ಶುರುವಾಗುತ್ತಿತ್ತೋ ಗೊತ್ತಿಲ್ಲ. ಅಷ್ಟಕ್ಕೂ ಇಂಥ ನಿರ್ಧಾರ ಏಕಾಏಕಿ ತೆಗೆದುಕೊಳ್ಳುವುದು ಅಲ್ಲವಲ್ಲ ಎಂದಿದ್ದಾರೆ.

66
ವ್ಯಕ್ತಿತ್ವ ಬದಲಾಗಲಿಲ್ಲ
Image Credit : Social Media

ವ್ಯಕ್ತಿತ್ವ ಬದಲಾಗಲಿಲ್ಲ

ಆದಕ್ಕೆ ಅವರು ಪ್ರಪೋಸ್‌ ಮಾಡಿದಾಗ ನಾನು ಒಪ್ಪಿಕೊಂಡಿರಲಿಲ್ಲ. ಆದರೆ, ಈಕೆಯ ವ್ಯಕ್ತಿತ್ವ ಬದಲಾಗಲಿಲ್ಲ ಅನ್ನೋದು ಗೊತ್ತಾಯ್ತು. ಆಮೇಲೆ ನಾನೇ ಇದಕ್ಕೆ ಒಪ್ಪಿಕೊಂಡೆ ಎಂದಿದ್ದಾರೆ. ಮುಂಚೆ ನನ್ನ ಜೊತೆಗೆ ಇವರ ಒಡನಾಟ ಹೇಗಿತ್ತೋ ಹಾಗೆ ಇತ್ತು. ಅದು ನನಗೆ ಇಷ್ಟ ಆಯ್ತು. ಅಲ್ಲಿಗೆ ನಮ್ಮ ಮದುವೆ ಫಿಕ್ಸ್‌ ಆಯ್ತು ಎಂದರು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಸಂಬಂಧಗಳು
ಟಿವಿ ಶೋ
ಮನರಂಜನಾ ಸುದ್ದಿ
ಸ್ಯಾಂಡಲ್‌ವುಡ್
ಪ್ರೇಮ ವಿವಾಹ
ಪ್ರೀತಿ
ಮದುವೆ
Latest Videos
Recommended Stories
Recommended image1
ವಿವಾಹೇತರ ಸಂಬಂಧ‌ ತಪ್ಪಲ್ಲ.. ಜನ ಸಂಗಾತಿಗೆ ಏಕೆ ದ್ರೋಹ ಮಾಡ್ತಾರೆ? ಅಚ್ಚರಿ ಸತ್ಯ ರಿವೀಲ್..!
Recommended image2
ನಿಮ್ಮನ್ನು ನೀವು ಪ್ರೀತಿಸಲು ಇಂದೇ ಬೆಸ್ಟ್ ದಿನ: ಹೀಗೆ ಆಚರಿಸಿ National Girlfriend Day!
Recommended image3
ಸಾವಿನಲ್ಲೂ ಸಾರ್ಥಕತೆ: ಕಳೆದುಕೊಂಡ ಮಗನ ಎದೆಬಡಿತ ಬೇರೊಬ್ಬ ಮಗುವಿನಲ್ಲಿ ಜೀವಂತ – ಕಣ್ಣೀರಾದ ತಾಯಿ!
Related Stories
Recommended image1
ಗೂಗಲ್​ ನೋಡಿ 'ಮಿಸ್ ಟೀನ್ ಯೂನಿವರ್ಸ್ ಇಂಡಿಯಾ' ಕಿರೀಟ ಗೆದ್ದ 17ರ ಬಾಲೆ: ಸುಂದರ ಫೋಟೋಗಳು ಇಲ್ಲಿವೆ
Recommended image2
ರೋಚಕ ಟ್ವಿಸ್ಟ್‌ ಜೊತೆ Brahmagantu Serial ಮುಕ್ತಾಯ: ಕುತೂಹಲ ಕೆರಳಿಸಿದ ಅಂತ್ಯ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved