- Home
- Entertainment
- Cine World
- 98.6 ಕೆಜಿಯಿಂದ 40 ಕೆಜಿ ತೂಕ ಇಳಿಕೆ! ‘ರಣಧೀರ’ ಚೆಲುವೆ ಅನುಸರಿಸಿದ ಜಪಾನೀಸ್ ಟ್ರಿಕ್ ಏನು?
98.6 ಕೆಜಿಯಿಂದ 40 ಕೆಜಿ ತೂಕ ಇಳಿಕೆ! ‘ರಣಧೀರ’ ಚೆಲುವೆ ಅನುಸರಿಸಿದ ಜಪಾನೀಸ್ ಟ್ರಿಕ್ ಏನು?
Khushbu Sundar: ಕೆಲವು ವರ್ಷಗಳ ಹಿಂದೆ ಸುಮಾರು 98ಕೆಜಿ ತೂಗುತ್ತಿದ್ದ ‘ರಣಧೀರ’ ಚೆಲುವೆ ಖುಷ್ಬೂ ಸುಂದರ್, ಇದೀಗ ಇದ್ದಕ್ಕಿದ್ದಂತೆ, ಇಷ್ಟೊಂದು ಸ್ಲಿಮ್ ಮತ್ತು ಫಿಟ್ ಆಗಲು ಕಾರಣ ಏನು ಗೊತ್ತಾ? ನಟಿ ಅನುಸರಿಸಿದ್ರು ಆ ಒಂದು ಜಪಾನೀಸ್ ಸೀಕ್ರೆಟ್. ಇದರಿಂದಲೇ 40ಕೆಜಿ ತೂಕ ಇಳಿಸಿಕೊಂಡರು ನಟಿ.

ನಟಿ ಖುಷ್ಬೂ ಸುಂದರ್
ತೂಕ ಹೆಚ್ಚಾಗುವುದು ಕೇವಲ ದೇಹದ ಆಕಾರದ ಮೇಲೆ ಪರಿಣಾಮ ಬೀರುವುದಿಲ್ಲ. ದಿನನಿತ್ಯದ ಚಟುವಟಿಕೆಗಳ ಮೇಲೂ ಅದರ ಪರಿಣಾಮ ಬೀರುತ್ತದೆ. ಮೆಟ್ಟಿಲು ಹತ್ತುವುದು, ಹೆಚ್ಚು ಹೊತ್ತು ನಿಲ್ಲುವುದು ಅಥವಾ ಸಾಮಾನ್ಯವಾಗಿ ನಡೆಯುವುದು ಕೂಡ ಕೆಲವರಿಗೆ ಕಷ್ಟವಾಗಬಹುದು. ಇಂತಹ ಅನುಭವವನ್ನು ತಾವೂ ಎದುರಿಸಿದ್ದಾಗಿ ನಟಿ ಹಾಗೂ ರಾಜಕಾರಣಿ ಖುಷ್ಬೂ ಸುಂದರ್ ಹೇಳಿಕೊಂಡಿದ್ದಾರೆ.
ಜಪಾನೀಸ್ ಟ್ರಿಕ್ ಮೂಲಕ ತೂಕ ಇಳಿಕೆ
ನಟಿ ಖುಷ್ಬೂ ಅವರ ತೂಕ ಹೆಚ್ಚಾಗಿ ಅವರಿಗೆ ನಡೆಯಲು ಕಷ್ಟವಾಗಿತ್ತಂತೆ. ಆದರೆ ಕ್ರಮೇಣ, ತಮ್ಮ ಜೀವನಶೈಲಿಯನ್ನು ಬದಲಾಯಿಸುವ ಮೂಲಕ ಮತ್ತು ವಿಶಿಷ್ಟವಾದ ಜಪಾನೀಸ್ ಫಿಟ್ನೆಸ್ ತಂತ್ರವನ್ನು ಅಳವಡಿಸಿಕೊಳ್ಳುವ ಮೂಲಕ, ಅವರು ಸುಮಾರು 40 ಕೆಜಿ ತೂಕ ಇಳಿಸಿಕೊಂಡರು. ನಟಿ 40 ಕಿಲೋಗ್ರಾಂಗಳಷ್ಟು ತೂಕ ಇಳಿಸಿಕೊಂಡಿದ್ದು ಹೇಗೆ ಮತ್ತು ಜಪಾನೀಸ್ ಪ್ಲೇಟ್ ಟ್ರಿಕ್ ಏನು ಎಂದು ಹೇಳೋಣ.
ತೂಕ ಹೆಚ್ಚಾಗಿ ದೈನಂದಿನ ಚಟುವಟಿಕೆಗಳೇ ಕಷ್ಟವಾಗಿತ್ತು
2019ರಲ್ಲಿ ರಜನಿಕಾಂತ್ ಅಭಿನಯದ ‘ಅಣ್ಣಾತ್ತೆ’ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ಖುಷ್ಬೂ ಅವರ ತೂಕ 98.6 ಕೆಜಿಯಷ್ಟಾಗಿತ್ತಂತೆ. ತೂಕ ಹೆಚ್ಚಾದ ಕಾರಣ ನಡೆಯುವುದು, ಮೆಟ್ಟಿಲು ಹತ್ತುವುದು ಸೇರಿದಂತೆ ಸಾಮಾನ್ಯ ಚಟುವಟಿಕೆಗಳಲ್ಲಿಯೂ ಸಾಕಷ್ಟು ತೊಂದರೆ ಎದುರಾಗುತ್ತಿತ್ತು. ದೇಹ ಬೇಗನೆ ದಣಿಯುತ್ತಿತ್ತು ಮತ್ತು ಕೆಲವೊಮ್ಮೆ ಸಾಮಾನ್ಯ ಕೆಲಸಗಳೂ ಕಷ್ಟವೆನಿಸುತ್ತಿದ್ದವು ಎಂದು ಅವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಏನಿದು ಜಪಾನೀಸ್ ‘ಪ್ಲೇಟ್ ಟ್ರಿಕ್’?
ಖುಷ್ಬೂ ಹೇಳಿರುವ ತೂಕ ಇಳಿಕೆಯ ವಿಧಾನಗಳಲ್ಲಿ ಮುಖ್ಯವಾದುದು ಎಂದರೆ ಜಪಾನೀಸ್ ಪ್ಲೇಟ್ ಟ್ರಿಕ್. ಇದರ ಮೂಲ ಕಲ್ಪನೆ ತುಂಬಾ ಸರಳವಾಗಿದೆ. ದೊಡ್ಡ ಪ್ಲೇಟ್ ಬದಲಿಗೆ ಚಿಕ್ಕ ಪ್ಲೇಟ್ ಬಳಸುವುದರಿಂದ ಕಡಿಮೆ ಪ್ರಮಾಣದ ಆಹಾರವೂ ಪ್ಲೇಟ್ ತುಂಬಿರುವಂತೆ ಕಾಣುತ್ತದೆ. ಇದರಿಂದ ಮನಸ್ಸಿಗೆ ‘ನಾನು ಸಾಕಷ್ಟು ಆಹಾರ ಸೇವಿಸಿದ್ದೇನೆ’ ಎಂಬ ಭಾವನೆ ಉಂಟಾಗಬಹುದು. ಅದೇ ಪ್ರಮಾಣದ ಆಹಾರವನ್ನು ದೊಡ್ಡ ಪ್ಲೇಟ್‌ನಲ್ಲಿ ಹಾಕಿದರೆ ಅದು ಕಡಿಮೆಯಾಗಿ ಕಾಣುವ ಸಾಧ್ಯತೆ ಇರುತ್ತದೆ. ಆಗ ಇನ್ನಷ್ಟು ಆಹಾರ ತೆಗೆದುಕೊಳ್ಳುವ ಪ್ರೇರಣೆ ಉಂಟಾಗಬಹುದು. ಹೀಗಾಗಿ ಪ್ಲೇಟ್‌ನ ಗಾತ್ರವನ್ನು ಬದಲಿಸುವ ಮೂಲಕ ಪೋರ್ಷನ್ ಕಂಟ್ರೋಲ್ ಮಾಡಲು ಈ ಟ್ರಿಕ್ ನ್ನು ಖುಷ್ಬೂ ಕೂಡ ಅರ್ಥಮಾಡಿಕೊಂಡು ಅಳವಡಿಸಿಕೊಂಡರು.
ಆಹಾರದಲ್ಲೂ ಹಲವು ಬದಲಾವಣೆ
ತೂಕ ಇಳಿಕೆಯ ಪ್ರಯಾಣದಲ್ಲಿ ಆಹಾರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದಾಗಿ ಖುಷ್ಬೂ ಹೇಳಿದ್ದಾರೆ. ಆಹಾರದ ಪ್ರಮಾಣವನ್ನು ಕಡಿಮೆ ಮಾಡುವುದರ ಜೊತೆಗೆ ಪೌಷ್ಟಿಕಾಂಶ ಇರುವ ಆಹಾರ ಸೇವಿಸಲು ಗಮನಹರಿಸಿದರು. ಗ್ಲೂಟನ್ ಇಂಟಾಲರೆನ್ಸ್ ಇರುವುದರಿಂದ ಗೋಧಿ ಮತ್ತು ಮೈದಾ ಸೇವನೆಯನ್ನು ನಿಲ್ಲಿಸಿದ್ದಾಗಿ ಅವರು ತಿಳಿಸಿದ್ದಾರೆ. ಇವುಗಳನ್ನು ಸೇವಿಸಿದಾಗ ಹೊಟ್ಟೆ ಉಬ್ಬುವ ಸಮಸ್ಯೆ ಎದುರಾಗುತ್ತಿತ್ತು ಎಂದು ಹೇಳಿದ್ದಾರೆ.
ವಾಕಿಂಗ್ ಮಾತ್ರವಲ್ಲ, ಜೀವನಶೈಲಿಯಲ್ಲೂ ಬದಲಾವಣೆ
ತೂಕ ಇಳಿಸಿಕೊಳ್ಳುವ ಸಂದರ್ಭದಲ್ಲಿ ಕೇವಲ ವಾಕಿಂಗ್‌ಗೆ ಸೀಮಿತವಾಗದೆ, ಆಹಾರ ಪದ್ಧತಿ, ನಿಯಮಿತ ದೈಹಿಕ ಚಟುವಟಿಕೆ ಮತ್ತು ಶಿಸ್ತಿನ ದಿನಚರಿಗೂ ಅವರು ಗಮನ ನೀಡಿದರು. ಕ್ರಮೇಣ ತಮ್ಮ ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಅಳವಡಿಸಿಕೊಂಡು ತೂಕವನ್ನು ಕಡಿಮೆ ಮಾಡಿಕೊಂಡಿದ್ದಾಗಿ ಖುಷ್ಬೂ ತಿಳಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

