ನಾಳೆ ಸಂಜೆ 5.36ಕ್ಕೆ ಬುಧ ಶನಿ ಷಡಷ್ಟಕ ಯೋಗ, 4 ರಾಶಿಗೆ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗೋದು ಪಕ್ಕಾ
ಸೆಪ್ಟೆಂಬರ್‌ನಲ್ಲಿ ಬುಧ ಶನಿಯಿಂದ ಷಡಷ್ಟಕ ಯೋಗ ಉಂಟಾಗಲಿದೆ. ಪರಿಣಾಮ ಈ ನಾಲ್ಕು ರಾಶಿಗಳಿಗೆ ಹಲವು ಲಾಭಗಳು ಸಿಗಲಿದೆ. ಆದಾಯ ಹೆಚ್ಚಳ, ಖರ್ಚು ಕಡಿಮೆ, ವ್ಯಾಪಾರದಲ್ಲಿ ಲಾಭ, ಆತ್ಮವಿಶ್ವಾಸ ಸೇರಿದಂತೆ ಹಲವು ವಿಶೇಷ ಲಾಭಗಳು ಘಟಿಸಲಿದೆ.

ಸೆಪ್ಟೆಂಬರ್‌ನಲ್ಲಿ ಲಕ್
ಸೆಪ್ಟೆಂಬರ್ ತಿಂಗಳಲ್ಲಿ ನಾಲ್ಕು ರಾಶಿಗಳಿಗೆ ಅದೃಷ್ಠ ಖುಲಾಯಿಸಲಿದೆ. ಬುಧ ಹಾಗೂ ಶನಿ ಗ್ರಹಗಳ ನಡುವಿನ ಷಡಷ್ಟಕ ಯೋಗದಿಂದ ನಾಲ್ಕು ರಾಶಿಗಳಿಗೆ ಶುಭ ಫಲ ನೀಡಲಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಷಡಷ್ಟಕ ಯೋಗ ಅಶುಭ ಯೋಗ ಎಂದು ಪರಿಗಣಿಸಲಾಗುತ್ತದೆ. ಆದರೆ ಕೆಲ ಸಂದರ್ಭದಲ್ಲೇ ಇದೇ ಅಶುಭ ಯೋಗ ವಿಶೇಷ ಫಲ ನೀಡುತ್ತದೆ. ಸೆಪ್ಟೆಂಬರ್ 01, 2026ರ ಸಂಜೆ 5.36ಕ್ಕೆ ಈ ಯೋಗ ಸಕ್ರಿಯಗೊಳ್ಳಲಿದೆ. ಪರಿಣಾಮ ನಾಲ್ಕು ಯೋಗಗಳಿಗೆ ಎಲ್ಲಾ ರೀತಿಯಲ್ಲಿ ವಿಶೇಷ ಲಾಭ ಸಿಗಲಿದೆ.
ಷಡಷ್ಟಕ ಯೋಗದಿಂದ ಲಾಭ ಪಡೆಯುವ 4 ರಾಶಿಗಳು
ಮೇಷ ರಾಶಿ: ಷಡಷ್ಟಕ ಯೋಗದಿಂದ ಮೇಷ ರಾಶಿಯ ಜಾತಕರಿಗೆ ಈ ಯೋಗ ವೃತ್ತಿಜೀವನದಲ್ಲಿ ಹೆಚ್ಚಿನ ಯಶಸ್ಸು ಪ್ರಾಪ್ತಿಯಾಗಲಿದೆ. ವ್ಯಾಪಾರದಲ್ಲಿ ಉತ್ತಮ ಲಾಭ ಹಾಗೂ ಅಭಿವೃದ್ಧಿ ಅವಕಾಶಗಳು ಸಿಗಲಿವೆ. ಮೇಷ ರಾಶಿಯ ವ್ಯಕ್ತಿಗಳ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಈ ಯೋಗದಿಂದ ಮಾನಸಿಕ ನೆಮ್ಮದಿ ಮತ್ತು ಆತ್ಮವಿಶ್ವಾಸ ಹೆಚ್ಚಳವಾಗಲಿದೆ. ದೀರ್ಘಕಾಲದ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ.
ಕರ್ಕಾಟಕ ರಾಶಿ
ಷಡಷ್ಟಕ ಯೋಗದಿಂದ ಕರ್ಕಾಟಕ ರಾಶಿಯವರಿಗೆ ವ್ಯಾಪಾರದಲ್ಲಿ ಹೆಚ್ಚಿನ ಲಾಭ ಸಿಗಲಿದೆ. ಆದಾಯ ಹೆಚ್ಚಳ, ಆರ್ಥಿಕ ಸ್ಥಿತಿ ಸುಧಾರಣೆಯಾಗಲಿದೆ. ಆರೋಗ್ಯ ವೃದ್ಧಿ, ಮಾನಸಿನಕ ನೆಮ್ಮದಿ ಇರಲಿದೆ. ಆದರೆ ಪ್ರಮುಖ ಹಾಗೂ ನಿರ್ಣಾಣಯ ನಿರ್ಧಾರ ತೆಗೆದುಕೊಳ್ಳುವಾಗ ಹಿರಿಯರು, ಮಾರ್ಗದರ್ಶಕರ ಸಲಹೆ ಪಡೆಯುವುದು ಉತ್ತಮ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತಿದೆ.
ತುಲಾ ರಾಶಿ
ಷಡಷ್ಟಕ ಯೋಗದಿಂದ ತುಲಾ ರಾಶಿ ಜಾತದವರಿಗೆ ಲಾಭದಾಯಕವಾಗಿದೆ. ದೀರ್ಘ ಕಾಲದ ಸಮಸ್ಯೆಗಳಿಗೆ ಪರಿಹಾರ, ಆದಾಯ ಹೆಚ್ಚಳ, ವ್ಯಾಪಾರದಲ್ಲಿ ಲಾಭ, ಉದ್ಯೋಗದಲ್ಲಿ ಯಶಸ್ಸು, ಜೀವನದಲ್ಲಿ ಹೊಸ ಉತ್ಸಾಹ, ಸಕಾರಾತ್ಮಕ ಬದಲಾವಣೆಗಳು ಆಗಲಿದೆ. ಸೆಪ್ಟೆಂಬರ್ 1 ರಿಂದ ತುಲಾ ರಾಶಿಗೆ ಎಲ್ಲಾ ರೀತಿಯಿಂದಲೂ ಯಶಸ್ಸು ಒಲಿಯಲಿದೆ. ಇಷ್ಟು ದಿನದ ಶ್ರಮಕ್ಕೆ ಪ್ರತಿಫಲ ಸ್ಪಷ್ಟವಾಗಿ ಗೋಚರಿಸಲಿದೆ.
ಮೀನರಾಶಿ
ಮೀನ ರಾಶಿ ವ್ಯಕ್ತಿಗಳಿಗೆ ಹೆಚ್ಚಿನ ಅವಕಾಶಗಳು ಲಭ್ಯವಾಗಲಿದೆ. ವ್ಯಾಪಾರದಲ್ಲಿ ಲಾಭ, ಆರ್ಥಿಕ ಸ್ಥಿತಿ ಸುಧಾರಣೆ, ಆರೋಗ್ಯ,ಶಾರೀರಿಕ ನೆಮ್ಮದಿ, ಮಾನಸಿಕ ನೆಮ್ಮದಿ ಸಿಗಲಿದೆ. ಸಮಸ್ಯೆಗಳಿಗೆ ಮುಕ್ತಿ ಸಿಗಲಿದೆ. ಆತ್ಮವಿಶ್ವಾಸ ಹೆಚ್ಚಳ, ಜೀವನದಲ್ಲಿ ಹೊಸ ಅವಕಾಶದ ಬಾಗಿಲು ತೆರೆಯಲಿದೆ.
ವಿಶೇಷ ಸೂಚನೆ:
ಈ ಯೋಗದ ಪ್ರಭಾವ ಕೆಲ ಸಮಯದವರಗೆ ಇರಲಿದೆ. ಈ ಸಮಯದಲ್ಲಿ ಸಿಗುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವುದು ಮುಖ್ಯ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವೈಯುಕ್ತಿಕ ಜಾತಕ ಪರಿಶೀಲಿಸಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ.

