ಯಶ್ ನಟನೆಯ 'ಟಾಕ್ಸಿಕ್' ಸಿನಿಮಾದ ಕೊನೆಯಲ್ಲಿ ಏನಾಯ್ತು? ಅಪ್ಪ-ಮಗನ ಪಾತ್ರದಲ್ಲಿರೋ ರಾಯ ಮತ್ತು ಟಿಕೆಟ್ ನಡುವೆ ದೊಡ್ಡ ಫೈಟ್ ನಡೆಯುತ್ತೆ. ತನ್ನನ್ನ ಬಿಟ್ಟು ಹೋದ ಅಪ್ಪನ ಮೇಲೆ ಸೇಡು ತೀರಿಸಿಕೊಳ್ಳೋಕೆ ಟಿಕೆಟ್ ಬರ್ತಾನೆ. ಕೊನೆಗೆ, ಆತ ತನ್ನ ಅಪ್ಪನನ್ನ ಕೊಂದನಾ? ಇಲ್ವಾ? ಇಲ್ಲಿದೆ ಉತ್ತರ.
ಯಶ್ ಡಬಲ್ ರೋಲ್‌ನಲ್ಲಿ ಮಿಂಚಿರೋ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಸಿನಿಮಾ ಆಗಸ್ಟ್ 26, ಬುಧವಾರದಂದು ಥಿಯೇಟರ್‌ಗೆ ಬಂದಿದೆ. ಯಶ್ ನಟನೆಯ ಈ ಚಿತ್ರವನ್ನು ಗೀತು ಮೋಹನ್‌ದಾಸ್ ನಿರ್ದೇಶಿಸಿದ್ದಾರೆ. ಈ ಪೀರಿಯಡ್ ಗ್ಯಾಂಗ್‌ಸ್ಟರ್ ಡ್ರಾಮಾ ಸಖತ್ ಸದ್ದು ಮಾಡ್ತಿದೆ. ಆದರೆ, ಸಿನಿಮಾದ ಕಥೆ ಮತ್ತು ನಿರೂಪಣೆ ಪ್ರೇಕ್ಷಕರನ್ನು ಎರಡು ಭಾಗ ಮಾಡಿದೆ.
ಅಪರಾಧ, ಕುಟುಂಬ, ದ್ರೋಹ ಮತ್ತು ಸೇಡು - ಇವೇ 'ಟಾಕ್ಸಿಕ್' ಸಿನಿಮಾದ ಮುಖ್ಯ ಕಥಾವಸ್ತು. ರಾಯ ಮತ್ತು ಅವನ ಮಗ ಟಿಕೆಟ್ ನಡುವಿನ ಸಂಕೀರ್ಣ ಸಂಬಂಧವೇ ಕಥೆಯ ಜೀವಾಳ. ತಂದೆಯ ನಿರ್ಧಾರಗಳಿಂದ ಮಗನ ಬದುಕು ಹೇಗೆಲ್ಲಾ ಹಾಳಾಯ್ತು ಅನ್ನೋದೇ ಕಥೆಯ ತಿರುಳು.
ಸ್ಪಾಯ್ಲರ್ ಅಲರ್ಟ್: ಈ ಲೇಖನದಲ್ಲಿ 'ಟಾಕ್ಸಿಕ್' ಸಿನಿಮಾದ ಪ್ರಮುಖ ಕಥಾಹಂದರ ಮತ್ತು ಕ್ಲೈಮ್ಯಾಕ್ಸ್ ಬಗ್ಗೆ ವಿವರಿಸಲಾಗಿದೆ.
ರಾಯ ಮತ್ತು ಟಿಕೆಟ್ ಎರಡೂ ಪಾತ್ರಗಳಲ್ಲಿ ಯಶ್
ಈ ಸಿನಿಮಾದಲ್ಲಿ ಯಶ್ ಡಬಲ್ ರೋಲ್‌ನಲ್ಲಿ ಕಾಣಿಸಿಕೊಂಡಿರೋದು ದೊಡ್ಡ ಚರ್ಚೆಯ ವಿಷಯ. ಯಶ್, ಇದರಲ್ಲಿ ಕ್ರೂರಿ ತಂದೆ 'ರಾಯ' ಮತ್ತು ಅವನಿಂದಲೇ ನೋವುಂಡ ಮಗ 'ಟಿಕೆಟ್' ಎರಡೂ ಪಾತ್ರಗಳನ್ನು ಮಾಡಿದ್ದಾರೆ. ರಾಯ, ತನ್ನ ಸಂಪತ್ತು ಮತ್ತು ಸಾಮ್ರಾಜ್ಯವನ್ನು ಉಳಿಸಿಕೊಳ್ಳೋಕೆ, ಗೋವಾದ ಕೊಳೆಗೇರಿಯಲ್ಲಿ ತನ್ನ ಹೆಂಡತಿ ನಾಡಿಯಾ ಮತ್ತು ಆಗಷ್ಟೇ ಹುಟ್ಟಿದ ಮಗ ಟಿಕೆಟ್‌ನನ್ನು ಬಿಟ್ಟು ಹೋಗ್ತಾನೆ. ಆದರೆ, ಅವನು ಮಾಡಿದ ಈ ತಪ್ಪೇ ಮುಂದೆ ಅವನಿಗೆ ಮುಳುವಾಗುತ್ತೆ.
ಕಿಯಾರಾ ಅಡ್ವಾಣಿ ನಿರ್ವಹಿಸಿರುವ ನಾಡಿಯಾ ಪಾತ್ರ, ಮಗ ಟಿಕೆಟ್‌ನನ್ನು ಒಬ್ಬಳೇ ಸಾಕುತ್ತಾಳೆ. ತನ್ನ ಮಗ ಅಸಹಾಯಕನಾಗಿ ಉಳಿಯಬಾರದು ಅಂತ, ತಮಗೆ ಈ ಗತಿ ತಂದ ವ್ಯಕ್ತಿಯನ್ನು ಎದುರಿಸಲೆಂದೇ ಅವನನ್ನು ಬೆಳೆಸುತ್ತಾಳೆ. ಇದೇ ಸಿನಿಮಾದ ಮುಖ್ಯ ಸಂಘರ್ಷಕ್ಕೆ ಕಾರಣವಾಗುತ್ತೆ. ಅಪ್ಪನನ್ನು ಕೇವಲ ಎದುರಿಸುವುದಷ್ಟೇ ಅಲ್ಲ, ತಾನು ಅನುಭವಿಸಿದ ಪ್ರತಿಯೊಂದು ನೋವಿಗೂ ಆತನಿಂದ ಬೆಲೆ ತೆರುವಂತೆ ಮಾಡಬೇಕೆಂದು ಟಿಕೆಟ್ ಬಯಸುತ್ತಾನೆ.
ಅಪ್ಪನನ್ನು ಕೊಲ್ಲುವುದಷ್ಟೇ ಟಿಕೆಟ್ ಸೇಡಾಗಿರಲಿಲ್ಲ
ಟಿಕೆಟ್ ಮತ್ತೆ ರಾಯಾ ಜೀವನಕ್ಕೆ ಬಂದಾಗ, ಅವನ ಉದ್ದೇಶ ಕೇವಲ ಸೇಡು ತೀರಿಸಿಕೊಳ್ಳುವುದಷ್ಟೇ ಆಗಿರಲ್ಲ. ಅದಕ್ಕಿಂತ ದೊಡ್ಡದಾಗಿರುತ್ತೆ. ಅಪ್ಪನ ನಿರ್ಲಕ್ಷ್ಯದಿಂದಾದ ನೋವನ್ನು ಹೊತ್ತು ಬೆಳೆದ ಟಿಕೆಟ್, ರಾಯ ಕಟ್ಟಿದ ಸಾಮ್ರಾಜ್ಯವನ್ನೇ ನಾಶಮಾಡಲು ವಾಪಸ್ ಬಂದಿರುತ್ತಾನೆ. ಟಿಕೆಟ್, ರಾಯನನ್ನು ಸಮೀಪಿಸುತ್ತಿದ್ದಂತೆ ಅಪ್ಪ-ಮಗನ ನಡುವಿನ ಸಂಘರ್ಷ ತೀವ್ರಗೊಳ್ಳುತ್ತಾ ಹೋಗುತ್ತದೆ. ಈ ಸಂಬಂಧವನ್ನು ಸಿನಿಮಾ ಒಂದು ಹಿಂಸೆಯ ಚಕ್ರದಂತೆ ತೋರಿಸುತ್ತದೆ. ತನ್ನ ತಂದೆಗೆ ಸೇರಿದ್ದ ಜಗತ್ತನ್ನೇ ನಾಶಮಾಡಲು ಟಿಕೆಟ್ ಪ್ರಯತ್ನಿಸುತ್ತಾನೆ.
ನಾಡಿಯಾ ಪಾತ್ರವು ಈ ಸಂಘರ್ಷಕ್ಕೆ ಮತ್ತೊಂದು ಭಾವನಾತ್ಮಕ ಪದರವನ್ನು ಸೇರಿಸುತ್ತದೆ. ರಾಯಾ ತೆಗೆದುಕೊಂಡ ಒಂದು ನಿರ್ಧಾರದಿಂದ ನಾಡಿಯಾಳ ಜೀವನವೇ ಬದಲಾಗಿರುತ್ತದೆ. ಅದೇ ನಿರ್ಧಾರದ ಪರಿಣಾಮಗಳನ್ನು ಹೊತ್ತು ಟಿಕೆಟ್ ಬೆಳೆದಿರುತ್ತಾನೆ. ಇದೇ ವೇಳೆ, ನಯನತಾರಾ, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ಹುಮಾ ಖುರೇಷಿ ಮತ್ತು ರುಕ್ಮಿಣಿ ವಸಂತ್ ಅವರಂತಹ ದೊಡ್ಡ ತಾರಾಗಣವು ರಾಯ ಮತ್ತು ಟಿಕೆಟ್ ಸುತ್ತಲಿನ ಜಗತ್ತಿನ ಭಾಗವಾಗಿದ್ದಾರೆ.
'ಟಾಕ್ಸಿಕ್' ಕ್ಲೈಮ್ಯಾಕ್ಸ್ ವಿಶ್ಲೇಷಣೆ: ಟಿಕೆಟ್, ರಾಯನನ್ನು ಕೊಂದನಾ?
ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ರಾಯ ಮತ್ತು ಟಿಕೆಟ್ ಮುಖಾಮುಖಿಯಾಗುತ್ತಾರೆ. ವರ್ಷಗಳಿಂದ ತಾನು ದ್ವೇಷಿಸುತ್ತಿದ್ದ ಅಪ್ಪನನ್ನು ಎದುರಿಸುವ ಅವಕಾಶ ಕೊನೆಗೂ ಟಿಕೆಟ್‌ಗೆ ಸಿಗುತ್ತದೆ. ಈ ಮುಖಾಮುಖಿ ಹಿಂಸೆಗೆ ತಿರುಗುತ್ತೆ. ಟಿಕೆಟ್, ಚಾಕುವಿನಿಂದ ರಾಯ ಮೇಲೆ ಹಲವು ಬಾರಿ ಹಲ್ಲೆ ಮಾಡ್ತಾನೆ. ಅವನ ಈ ಕೃತ್ಯ, ವರ್ಷಗಳಿಂದ ಅವನೊಳಗೆ ತುಂಬಿದ್ದ ಕೋಪ ಮತ್ತು ನೋವನ್ನು ತೋರಿಸುತ್ತೆ. ಆದರೆ, ಕ್ಲೈಮ್ಯಾಕ್ಸ್‌ನ ಅಸಲಿ ಪ್ರಶ್ನೆ 'ಟಿಕೆಟ್, ರಾಯನನ್ನು ಕೊಂದನಾ?' ಅನ್ನೋದಲ್ಲ.
ಬದಲಿಗೆ, ಸೇಡು ತೀರಿಸಿಕೊಳ್ಳುವ ಭರದಲ್ಲಿ ಟಿಕೆಟ್ ಏನಾದ? ಅನ್ನೋದು. ಟಿಕೆಟ್ ತನ್ನ ಜೀವನದುದ್ದಕ್ಕೂ ರಾಯನನ್ನು ಮತ್ತು ಅವನು ಪ್ರತಿನಿಧಿಸುವ ಎಲ್ಲವನ್ನೂ ದ್ವೇಷಿಸಿದ್ದ. ಆದರೆ, ಈ ಹಿಂಸೆಯ ಮೂಲಕ, ತಾನು ಯಾರನ್ನು ನಾಶಮಾಡಲು ಹೊರಟಿದ್ದನೋ, ಅವನೇ ಆಗಿ ಬದಲಾಗುವ ಅಪಾಯದಲ್ಲಿರುತ್ತಾನೆ. ಇದು ಕ್ಲೈಮ್ಯಾಕ್ಸನ್ನು ಕೇವಲ ಸೇಡಿನ ವಿಜಯ ಎನ್ನುವುದಕ್ಕಿಂತ ಹೆಚ್ಚು ಸಂಕೀರ್ಣವಾಗಿಸುತ್ತದೆ.
ಹೀಗಾಗಿ, ಕ್ಲೈಮ್ಯಾಕ್ಸ್ ಎರಡು ಹಂತದಲ್ಲಿ ಕೆಲಸ ಮಾಡುತ್ತೆ. ಒಂದು, ರಾಯ ಜೊತೆಗಿನ ಟಿಕೆಟ್‌ನ ದೈಹಿಕ ಸಂಘರ್ಷ. ಇನ್ನೊಂದು, ಸೇಡು ತನ್ನನ್ನು ತನ್ನಪ್ಪನ ಮತ್ತೊಂದು ರೂಪವನ್ನಾಗಿ ಮಾಡುತ್ತದೆಯೇ ಎಂಬ ಅವನ ಆಂತರಿಕ ಹೋರಾಟ. ಸಿನಿಮಾ ಈ ಪರಿವರ್ತನೆಯನ್ನೇ ತನ್ನ ಅಂತ್ಯದ ಕೇಂದ್ರವನ್ನಾಗಿಸಿದೆ. ಟಿಕೆಟ್ ಹೋರಾಡುತ್ತಿರುವುದು ರಾಯ ವಿರುದ್ಧವಾದರೂ, ಅಂತಿಮವಾಗಿ ತನ್ನೊಳಗೆ ಇರುವ ಅದೇ ಕತ್ತಲನ್ನು ಆತ ಎದುರಿಸಬೇಕಾಗುತ್ತದೆ.


