ಲೈವ್ ಕಾರ್ಯಕ್ರಮವೊಂದರಲ್ಲಿ ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರು ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸುವಾಗ ಮುಜುಗರದ ಸನ್ನಿವೇಶ ಎದುರಿಸಿದ ಹಳೆಯ ವಿಡಿಯೋವೊಂದು ಮತ್ತೆ ವೈರಲ್ ಆಗಿದೆ. ಸಾರ್ವಜನಿಕವಾಗಿ ಅನಿರೀಕ್ಷಿತವಾಗಿ ವರ್ತಿಸಿದ ನಟಿಯ ಈ ಘಟನೆಯು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಸೆಲೆಬ್ರಿಟಿಗಳು ಎಂದರೆ ಸಾಮಾನ್ಯವಾಗಿ ಹೋದಲ್ಲಿ, ಬಂದಲ್ಲಿ ಮೈಯೆಲ್ಲಾ ಕಣ್ಣಾಗಿರಬೇಕು. ಅದರಲ್ಲಿಯೂ ಡಿಜಿಟಲ್ ಈ ಯುಗದಲ್ಲಿ ಅವರ ಮೇಲೆ ಕ್ಯಾಮೆರಾ ಕಣ್ಣುಗಳು ನೆಟ್ಟಿರುವ ಕಾರಣ, ಅವರು ಪ್ರತಿಯೊಂದು ಹೆಜ್ಜೆಯನ್ನೂ ಅತ್ಯಂತ ಜಾಗರೂಕರಾಗಿ ಇಡಬೇಕಾಗುತ್ತದೆ. ಇಲ್ಲದಿದ್ದರೆ ಟ್ರೋಲ್ ಆಗುವುದು ಸಹಜ. ಇದೇ ಕಾರಣಕ್ಕೆ ಇಂದು ಹಲವಾರು ಸೆಲೆಬ್ರಿಟಿಗಳು ಟ್ರೋಲ್ ಆಗ್ತಿರೋದು ಇದೆ. ಅದರಲ್ಲಿಯೂ ಪಾಪರಾಜಿಗಳು ಸೆಲೆಬ್ರಿಟಿಗಳು ಅದರಲ್ಲಿಯೂ ನಟಿಯರು ಮಾಡುವ ಎಡವಟ್ಟುಗಳ ಕಡೆಗೇ ಗಮನ ಹರಿಸುತ್ತಾ ಇರುತ್ತಾರೆ. ಇದರಿಂದಾಗಿ ಇದಾಗಲೇ ಸಾಕಷ್ಟು ನಟಿಯರು ಪಾಪರಾಜಿಗಳ ವಿರುದ್ಧ ಹರಿಹಾಯ್ದಿರುವುದು ಇದೆ.
ಕತ್ರೀನಾ ಇದು ಸರೀನಾ?
ಇದು ಒಂದೆಡೆಯಾದರೆ, ಅದೇ ಇನ್ನೊಂದೆಡೆ, ಸೆಲೆಬ್ರಿಟಿಗಳ ಮಾಡುವ ಪ್ರತಿಯೊಂದು ಕಾರ್ಯವೂ ಜನರ ಗಮನಕ್ಕೆ ಹೋಗುವುದು ಇದೆ.ಇನ್ನು ಅವರು ಮಾಡುವುದು ಎಡವಟ್ಟಾದರೆ ಸಾಕು, ಟ್ರೋಲ್ ಪುಟಗಳು ವ್ಯೂವ್ಸ್ ಹೆಚ್ಚಿಸಿಕೊಳ್ಳಲು ಸುವರ್ಣಾವಕಾಶವೇ ಸಿಕ್ಕಿಬಿಡುತ್ತದೆ. ಅಂಥದ್ದೇ ಒಂದು ಎಡವಟ್ಟು ಮಾಡಿದ್ದಾರೆ ಬಾಲಿವುಡ್ ಬ್ಯೂಟಿ ಕತ್ರಿನಾ ಕೈಫ್. ಲೈವ್ ಕಾರ್ಯಕ್ರಮವೊಂದರಲ್ಲಿಯೇ ನಟಿ ಮಾಡಬಾರದ್ದು ಮಾಡಿಬಿಟ್ಟಿದ್ದಾರೆ. ಅವರಿಗೆ ಗ್ಯಾಸ್ ಸಮಸ್ಯೆಯಾಗಿತ್ತೋ ಏನೋ ಗೊತ್ತಿಲ್ಲ. ಒಟ್ಟಿನಲ್ಲಿ ಅಭಿಮಾನಿಗಳು ಪ್ರಶ್ನೆ ಕೇಳುತ್ತಿರುವಾಗಲೇ 2-3 ಬಾರಿ ಅವರು ಮಾಡಬಾರದ್ದು ಮಾಡಿಬಿಟ್ಟಿದ್ದಾರೆ. ಅರ್ಥಾತ್ ಹೂ... ಬಿಟ್ಟಿದ್ದು, ಇದರಿಂದ ಪ್ರೇಕ್ಷಕರು ಮೂಗು ಮುಚ್ಚಿಕೊಳ್ಳುವಂತಾಯಿತು. (ಇಲ್ಲಿ ತೋರಿಸುವುದು ಎಐ ಚಿತ್ರ ಮಾತ್ರ. ನಟಿ ಕತ್ರೀನಾ ಕೈಫ್ ಈ ಕೆಲಸ ಮಾಡಿದಾಗ ವೀಕ್ಷಕರು ಏನು ಮಾಡಿದರು ಎನ್ನುವ ಮಾಹಿತಿಯ ವಿಡಿಯೋ ಬಿಡುಗಡೆಗೊಂಡಿಲ್ಲ!)
ಮಾಡಬಾರದ್ದು ಮಾಡಿದ ನಟಿ
ಹಳೆಯ ವಿಡಿಯೋ ಇದಾಗಿದ್ದು, ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಭಿಮಾನಿಗಳು ಪ್ರಶ್ನೆ ಕೇಳಿದಾಗ, ನಟಿ ಮುಖವೆಲ್ಲಾ ತಿವುಚಿಕೊಂಡು ತಮ್ಮ ಕೆಲಸ ಮಾಡಿದರು. ಒಂದೆಡೆ ಅವರು ಉತ್ತರಿಸುತ್ತಲೇ ಇದ್ದರು, ಆದರೆ ಮತ್ತೊಂದೆಡೆ ಅವರಿಗೆ 'ಅದನ್ನು' ತಡೆದುಕೊಳ್ಳಲು ಆಗಲಿಲ್ಲ ಎನಿಸತ್ತೆ. ಆದ್ದರಿಂದ ಯಾರಿಗೂ ತಿಳಿಯುವುದಿಲ್ಲ ಎಂದು ತಮ್ಮ ಕೆಲಸ ಮಾಡಿದರು. ಆದರೆ ವೀಕ್ಷಕರಿಗೆ ಅದು ತಿಳಿದುಬಿಟ್ಟಿತು.
ಈ ವಿಡಿಯೋ ಆಗಿನಿಂದಲೂ ಸೋಷಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತಲೇ ಇದೆ. ಸೆಲೆಬ್ರಿಟಿಗಳು ಸಾರ್ವಜನಿಕವಾಗಿ ಹೇಗೆ ವರ್ತಿಸಬೇಕು ಎನ್ನುವುದನ್ನು ಈ ವಿಡಿಯೋ ಕಲಿಸುತ್ತದೆ. ಮನುಷ್ಯರು ಎಂದ ಮೇಲೆ ಇಂಥ ಸಮಸ್ಯೆ ಎಲ್ಲರಿಗೂ ಬರುವುದು ಸರ್ವೇ ಸಾಮಾನ್ಯ. ಆದರೆ, ಹಾಗೆಂದು, ಎಲ್ಲೆಂದರಲ್ಲಿ ಈ ರೀತಿ ಮಾಡುವುದು ಉಚಿತವಲ್ಲ ಎಂದು ನೆಟ್ಟಿಗರು ಹೇಳುತ್ತಿದ್ದರೆ, ಇದೊಂದು ರೀತಿಯಲ್ಲಿ ಹಾಸ್ಯದ ರೂಪದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. HindiRush ಎನ್ನುವ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋ ಇಲ್ಲಿದೆ ನೋಡಿ.


