- Home
- Entertainment
- TV Talk
- Bigg Boss 13: 'ಭಾಗ್ಯಲಕ್ಷ್ಮಿ' ತಾಂಡವ್ಗಾಗಿ ರಿಯಲ್ ಮತ್ತು ರೀಲ್ ಹೆಂಡ್ತೀರ ನಡುವೆ ಶುರುವಾಗೇ ಬಿಟ್ಟಿತು ಸಮರ
Bigg Boss 13: 'ಭಾಗ್ಯಲಕ್ಷ್ಮಿ' ತಾಂಡವ್ಗಾಗಿ ರಿಯಲ್ ಮತ್ತು ರೀಲ್ ಹೆಂಡ್ತೀರ ನಡುವೆ ಶುರುವಾಗೇ ಬಿಟ್ಟಿತು ಸಮರ
'ಭಾಗ್ಯಲಕ್ಷ್ಮಿ' ಸೀರಿಯಲ್ ಖ್ಯಾತಿಯ ತಾಂಡವ್ ಪಾತ್ರಧಾರಿ ಸುದರ್ಶನ್, ಅವರ ರಿಯಲ್ ಪತ್ನಿ ಸಂಗೀತಾ ಮತ್ತು ರೀಲ್ ಪತ್ನಿ ಕಾವ್ಯಾ ಗೌಡ ಬಿಗ್‌ಬಾಸ್ ಮನೆಗೆ ಪ್ರವೇಶಿಸಿದ್ದಾರೆ. ಮನೆಯಲ್ಲಿ 'ತಾಂಡವ್ ಯಾರ ಗಂಡ' ಎಂಬ ವಿಷಯವಾಗಿ ಇಬ್ಬರು ಪತ್ನಿಯರ ನಡುವೆ ನಡೆದ ಹಾಸ್ಯಮಯ ಸಂಭಾಷಣೆ ನಡೆದಿದೆ.

ರಿಯಲ್-ರೀಲ್ ಪತ್ನಿಯರು
ಭಾಗ್ಯಲಕ್ಷ್ಮಿ ಸೀರಿಯಲ್ (Bhagyalakshmi Serial) ತಾಂಡವ್ನ ರೀಲ್ ಹೆಂಡ್ತಿ ಶ್ರೇಷ್ಠಾ ಉರ್ಫ್ ಕಾವ್ಯಾ ಗೌಡ ಮತ್ತು ರಿಯಲ್ ಹೆಂಡ್ತಿ ಸಂಗೀತಾ ಇಬ್ಬರನ್ನೂ ಬಿಗ್ಬಾಸ್ಗೆ ಕರೆಸಲಾಗಿದ್ದು, ಇವರ ನಡುವೆ ಮಾತಿನ ಸಮರ ಶುರುವಾಗಿಬಿಟ್ಟಿದೆ!
ಮೊದಲೇ ದಿನವೇ ವಾರ್ನಿಂಗ್
ತಾಂಡವ್ ಪಾತ್ರಧಾರಿ ಉರ್ಫ್ ಸುದರ್ಶನ್ ರಂಗಪ್ರಸಾದ್ ಅವರು ಮೊದಲ ದಿನ ಇಬ್ಬರೂ ಈ ಷೋನಲ್ಲಿ ಇರೋದನ್ನು ನೋಡಿ, ಅಯ್ಯಯ್ಯೋ ಇಬ್ಬರೂ ಕಚ್ಚಾಡಿಕೊಂಡರೆ ಏನು ಮಾಡೋದು ಎಂದು ಪ್ರಶ್ನೆ ಮಾಡಿದ್ದರು. ಇದೀಗ ಇಲ್ಲಿ ರಿಯಲ್ ಆಗಿದೆ.
ಕಾವ್ಯಾ ಗೌಡ ಏನಂದ್ರು
ಅಷ್ಟಕ್ಕೂ ಆಗಿದ್ದೇನೆಂದರೆ, ಕಾವ್ಯಾ ಗೌಡ ಅವರು, ಸುದರ್ಶನ್ ನನ್ನ ಫ್ರೆಂಡ್ ಅಷ್ಟೇ. ತಾಂಡವ್ ಮೊದಲು ನನಗೆ ಫ್ರೆಂಡ್ ಆಗಿದ್ರು, ಆಮೇಲೆ ಲವ್ ಆಯ್ತು, ಆಮೇಲೆ ಮದುವೆಯಾದೆ. ಈಗ ಸುದರ್ಶನ್ ನನ್ನ ಫ್ರೆಂಡ್ ಅಷ್ಟೇ ಎಂದಿದ್ದಾರೆ.
ಕಾಲೆಳೆದ ಸ್ಪರ್ಧಿಗಳು
ಆದರೆ ಅಲ್ಲಿದ್ದವರು ಎಲ್ಲರೂ ಇಬ್ಬರ ಕಾಲೆಳೆದಿದ್ದಾರೆ. ಸಂಗೀತಾ ಅವರು, ಸುದರ್ಶನ್ ಈಗ ನನ್ನ ರಿಯಲ್ ಗಂಡ ಎಂದಿದ್ದರೆ, ಅಲ್ಲಿರುವ ಸ್ಪರ್ಧಿಗಳು, ಇಬ್ಬರಲ್ಲಿ ಅವರು ಯಾರ ಗಂಡ ಎನ್ನೋದನ್ನು ಮೊದಲು ಸರಿಯಾಗಿ ಕನ್ಫರ್ಮ್ ಮಾಡಿಕೊಳ್ಳಿ ಎಂದರು.
ಹಾಸ್ಯದ ರೂಪದಲ್ಲಿ ಸಂಭಾಷಣೆ
ಹಾಸ್ಯದ ರೂಪದಲ್ಲಿ ಈ ಸಂಭಾಷಣೆ ನಡೆದಿದೆ. ಕಾವ್ಯಾ ಅವರು, ಸುದರ್ಶನ್ ಅಲ್ಲಿ ನನ್ನ ಗಂಡ ಆಗಿದ್ರು, ಈಗ ನನ್ನ ಗಂಡ ಅಲ್ಲ ಅಂತಿದ್ರೆ, ಸಂಗೀತಾ ಅವರು ಈಗ ನನ್ನ ಗಂಡ ಎಂದಿದ್ದಾರೆ. ಅಲ್ಲಿದ್ದೋರು ಅವರು ಯಾರ ಗಂಡನಪ್ಪಾ ಎಂದು ಪ್ರಶ್ನಿಸುತ್ತಿದ್ದಾರೆ.
ಮುಂದೇನಾಗತ್ತೆ?
ಸದ್ಯ ಈ ಸಂಭಾಷಣೆ ಹಾಸ್ಯದ ರೂಪದಲ್ಲಿ ನಡೆದಿದ್ದು, ಮುಂದೆ ಹೋಗುತ್ತಾ ಯಾರ ನಡುವೆ ದ್ವೇಷ ಹುಟ್ಟುತ್ತದೆ, ರಿಯಲ್ ಆಗಿ ಯಾರು ಕಿತ್ತಾಟ ಮಾಡುತ್ತಾರೆ ಎಂದು ನೋಡಬೇಕಿದೆಯಷ್ಟೇ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

