ಬಹುನಿರೀಕ್ಷಿತ 'ರಾಮಾಯಣ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಡಬಲ್‌ ರೋಲ್ ನಿಮ್ಮ ಗಮನಕ್ಕೂ ಬಂದಿದೆಯಾ? ರಾಕಿಂಗ್ ಸ್ಟಾರ್‌ ಯಶ್ ಮತ್ತು ಸಾಯಿ ಪಲ್ಲವಿ ನಟನೆ ಮುಂದೆ ರಣಬೀರ್ ಮಂಕಾಗಿದ್ದಾರೆ ಎಂಬ ಚರ್ಚೆಯೂ ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿದೆ.

ಮುಂಬೈ: ಸ್ಯಾಂಡಲ್‌ವುಡ್ ರಾಕಿಂಗ್ ಸ್ಟಾರ್ ಯಶ್ ಅಭಿಯನದ ರಾಮಾಯಣ -1 ಸಿನಿಮಾದ ಅದ್ಧೂರಿಯಾದ ಟ್ರೈಲರ್ ಇಂದು ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಬಿಡುಗಡೆಯಾಗಿದೆ. ಪ್ರತಿಯೊಂದು ದೃಶ್ಯವನ್ನು ಅಚ್ಚುಕಟ್ಟಾಗಿ ತೋರಿಸಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಲಾಗಿದೆ. ಮಂಡೋದರಿ ಮತ್ತು ಆಂಜನೇಯನ ಪಾತ್ರ ಹೊರತುಪಡಿಸಿ ಬಹುತೇಕ ಎಲ್ಲಾ ಪಾತ್ರಗಳನ್ನು ಪರಿಚಯಿಸಲಾಗಿದೆ. ಬಿಡುಗಡೆಗೊಂಡ ಕೆಲವೇ ಸಮಯದಲ್ಲಿ ರಾಮಾಯಣ ಟ್ರೈಲರ್‌ ಟ್ರೆಂಡಿಂಗ್ ಪಟ್ಟಿಯಲ್ಲಿ ಸೇರ್ಪಡೆಗೊಂಡಿದೆ. ಟ್ರೈಲರ್ ನೋಡಿದ ಜನರು ಸಹ ಸಿನಿಮಾ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಳ್ಳಲಾರಂಭಿಸಿದ್ದಾರೆ.

ಡಬಲ್ ರೋಲ್ ನೋಡಿದ್ರಾ?

ಬರೋಬ್ಬರಿ 4 ಸಾವಿರ ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿರುವ ರಾಮಾಯಣ ಸಿನಿಮಾ ಎರಡು ಭಾಗಗಳಾಗಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಇಂದು ಬಿಡುಗಡೆಯಾದ ಟ್ರೈಲರ್‌ನಲ್ಲಿ ವಿಷ್ಣುವಿನ ಅವತಾರ ಶ್ರೀರಾಮನ ಪಾತ್ರದಲ್ಲಿ ನಟಿಸುವುದರ ಜೊತೆಗೆ, ರಣಬೀರ್ ಕಪೂರ್ ವಿಷ್ಣುವಿನ ಮತ್ತೊಂದು ಅವತಾರವಾದ ಪರಶುರಾಮನ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ.

ಎರಡು ಅವತಾರ

ನಾಲ್ಕು ನಿಮಿಷಗಳ ಟ್ರೇಲರ್‌ನಲ್ಲಿ, ರಣ್‌ಬೀರ್ ಕಪೂರ್ ಒಂದು ದೃಶ್ಯದಲ್ಲಿ ಪರಶುರಾಮನ ಪಾತ್ರದಲ್ಲಿಯೂ ಕಾಣಿಸಿಕೊಳ್ಳುತ್ತಾರೆ. ಒಂದು ದೃಶ್ಯದಲ್ಲಿ, ಪರಶುರಾಮನು ದೈವಿಕ ಬಿಲ್ಲು ಹಿಡಿದು ಶ್ರೀರಾಮನ ಮುಂದೆ ಮಂಡಿಯೂರಿ ಕುಳಿತಿರುವುದು ಕಂಡುಬರುತ್ತದೆ. ಪರಶುರಾಮನ ನೋಟದಲ್ಲಿ, ರಣಬೀರ್ ಉದ್ದ ಕೂದಲು, ಗಡ್ಡ ಮತ್ತು ಮೀಸೆಯನ್ನು ಹೊಂದಿರುವಂತೆ ಕಂಡುಬರುತ್ತದೆ. ಪರಶುರಾಮನು ವಿಷ್ಣುವಿನ ಆರನೇ ಅವತಾರವಾಗಿದ್ದರೆ, ಶ್ರೀರಾಮನು ಅವನ ಏಳನೇ ಅವತಾರ. ರಾಮಾಯಣದಲ್ಲಿ ರಣಬೀರ್ ಎರಡೂ ಅವತಾರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಯಶ್‌, ಸಾಯಿ ಪಲ್ಲವಿ ಮುಂದೆ ಮಂಕಾದ್ರಾ ರಣ್‌ಬೀರ್?

ಶ್ರೀರಾಮಚಂದ್ರನ ಪಾತ್ರದಲ್ಲಿರುವ ರಣ್‌ಬೀರ್ ಕಪೂರ್ ಆಯ್ಕೆ ಬಗ್ಗೆ ಹಿಂದಿನಿಂದಲೂ ಪರ-ವಿರೋಧದ ಚರ್ಚೆಗಳು ನಡೆಯುತ್ತಿದೆ. ಈ ಸಂಬಂಧ ಸ್ವತಃ ರಣ್‌ಬೀರ್ ಕಪೂರ್, ಯಶ್ ಸೇರಿದಂತೆ ಚಿತ್ರತಂಡ ಸ್ಪಷ್ಟನೆಯನ್ನು ನೀಡಿದ್ದಾರೆ. ಯಶ್ ಅವರ ಪ್ರಚಂಡ ಮತ್ತು ಸಾಯಿ ಪಲ್ಲವಿ ಸಹಜ ನಟನೆಯಿಂದಾಗಿ ರಣ್‌ಬೀರ್ ಕಪೂರ್ ಕೊಂಚ ಮಂಕಾದಂತೆ ಕಾಣಿಸುತ್ತಿದ್ದಾರೆ ಎಂಬ ಕಮೆಂಟ್‌ಗಳು ಹರಿದಾಡುತ್ತಿವೆ. ಆದ್ರೆ ರಣ್‌ಬೀರ್ ಕಪೂರ್ ಅಭಿಮಾನಿಗಳು ಮಾತ್ರ ಇದೆಲ್ಲವನ್ನೂ ಅಲ್ಲಗಳೆದಿದ್ದಾರೆ.

ಇದನ್ನೂ ಓದಿ: ತೆರೆಕಂಡಿತು ರಾಮಾಯಣ ಟ್ರೈಲರ್; ಒಂದೊಂದು ಪಾತ್ರದ ಅನಾವರಣ; ಯಶ್ ಲುಕ್ ಹೇಗಿದೆ ಗೊತ್ತಾ?

ಇದು ಭಾರತದ ಸಿನಿಮಾ ಇತಿಹಾಸದಲ್ಲಿ ಅತ್ಯಂತ ದೊಡ್ಡ ಬಜೆಟ್ ಸಿನಿಮಾ ಆಗಿದೆ. ರಾಮಯಾಣ ಕಥೆ ದೊಡ್ಡದಾಗಿರುವ ಕಾರಣ ಚಿತ್ರವನ್ನು ಎರಡು ಭಾಗಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಸಿನಿಮಾದ ನಿರ್ಮಾಪಕರು ಸಂದರ್ಶನವೊಂದರಲ್ಲಿ ಹೇಳಿದ್ದರು.

ಇದನ್ನೂ ಓದಿ: Ramayana Trailer: 'ರಾಮಾಯಣ' ಟ್ರೇಲರ್ ರಿಲೀಸ್ ಬಳಿಕ ಜಗತ್ತಿನ ರೆಸ್ಪಾನ್ಸ್ ಹೇಗಿದೆ? ನೆಟ್ಟಿಗರು ಹೇಳ್ತಿರೋದೇನು? ಇಲ್ಲಿ ನೋಡಿ

YouTube video player