MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • ತೆರೆಕಂಡಿತು ರಾಮಾಯಣ ಟ್ರೈಲರ್; ಒಂದೊಂದು ಪಾತ್ರದ ಅನಾವರಣ; ಯಶ್ ಲುಕ್ ಹೇಗಿದೆ ಗೊತ್ತಾ?

ತೆರೆಕಂಡಿತು ರಾಮಾಯಣ ಟ್ರೈಲರ್; ಒಂದೊಂದು ಪಾತ್ರದ ಅನಾವರಣ; ಯಶ್ ಲುಕ್ ಹೇಗಿದೆ ಗೊತ್ತಾ?

ಯಶ್, ರಣ್‌ಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ಅಭಿನಯದ 'ರಾಮಾಯಣ' ಚಿತ್ರದ ಟ್ರೈಲರ್ ಬ್ರಾಹ್ಮೀ ಮುಹೂರ್ತದಲ್ಲಿ ಬಿಡುಗಡೆಯಾಗಿದೆ. ರಾವಣನಾಗಿ ಯಶ್, ರಾಮನಾಗಿ ರಣ್‌ಬೀರ್ ಮತ್ತು ಸೀತೆಯಾಗಿ ಸಾಯಿ ಪಲ್ಲವಿ ಕಾಣಿಸಿಕೊಂಡಿದ್ದು, ಈ ಟ್ರೈಲರ್ ಚಿತ್ರದ ಬಗೆಗಿನ ನಿರೀಕ್ಷೆಯನ್ನು ಹೆಚ್ಚಿಸಿದೆ.

1 Min read
Author : Mahmad Rafik
Published : Jul 30 2026, 07:58 AM IST
Share this Photo Gallery
  • FB
  • TW
  • Linkdin
  • Whatsapp
15
ರಾಮಾಯಣ ಚಿತ್ರದ ಟ್ರೈಲರ್
Image Credit : Asianet News

ರಾಮಾಯಣ ಚಿತ್ರದ ಟ್ರೈಲರ್

ರಾಕಿಂಗ್ ಸ್ಟಾರ್ ಯಶ್, ರಣ್‌ಬೀರ್ ಕಪೂರ್ ಹಾಗೂ ಸಾಯಿ ಪಲ್ಲವಿ ನಟನೆಯ ಬಹುನಿರೀಕ್ಷಿತ 'ರಾಮಾಯಣ' ಚಿತ್ರದ ಟ್ರೈಲರ್ ಕೊನೆಗೂ ಬಿಡುಗಡೆಯಾಗಿದೆ. ಜುಲೈ 24 ಕ್ಕೆ ರಿಲೀಸ್ ಆಗಬೇಕಿದ್ದ ರಾಮಾಯಣ ಟ್ರೈಲರ್ ದಿನಾಂಕವನ್ನು ಚಿತ್ರತಂಡ ಕೊನೆ ಗಳಿಗೆಯಲ್ಲಿ ಮುಂದೂಡಿಕೆ ಮಾಡಲಾಗಿತ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಬ್ರಾಹ್ಮೀ ಮುಹೂರ್ತದಲ್ಲಿ ಬಿಡುಗಡೆ
Image Credit : X

ಬ್ರಾಹ್ಮೀ ಮುಹೂರ್ತದಲ್ಲಿ ಬಿಡುಗಡೆ

ಇಂದು ಬೆಳಗ್ಗೆ 4.15ರ ಬ್ರಾಹ್ಮೀ ಮುಹೂರ್ತದಲ್ಲಿ ಚಿತ್ರತಂಡ ಟ್ರೈಲರ್ ಬಿಡುಗಡೆ ಮಾಡಿದೆ. ಸಿನಿಮಾ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಬೆಳಗಿನ ಜಾವ ಟ್ರೈಲರ್ ಒಂದನ್ನು ಬಿಡುಗಡೆ ಮಾಡಲಾಗಿದ್ದು, ಸಿನಿಪ್ರಿಯರು ನಸುಕಿನಲ್ಲೇ ಇದನ್ನು ಕಣ್ತುಂಬಿಕೊಂಡಿದ್ದಾರೆ. ಬಿಡುಗಡೆಯಾದ ಕ್ಷಣದಿಂದಲೇ ರಾಮಾಯಾಣ ಟ್ರೈಲರ್ ಸಂಚಲನ ಮೂಡಿಸಿದ್ದು, ನಾಲ್ಕು ನಿಮಿಷದ ಕ್ಲಿಪ್ ನೋಡುಗರಿಗೆ ಅದ್ಭುತವಾದ ಅನುಭವ ನೀಡುತ್ತಿದೆ

Related Articles

Related image1
ರಾಮಾಯಾಣ ಟೀಸರ್ ಬೆನ್ನಲ್ಲೇ ಸಂಭಾವನೆ ಬಹಿರಂಗ, ರಣಬೀರ್‌ಗೆ 150 ಕೋಟಿ, ಯಶ್‌ಗೆ ಎಷ್ಟು?
Related image2
ರಾಮಾಯಾಣ, ಮಹಾಭಾರತ & ಆರ್‌ಆರ್‌ ನಗರ ಕುರುಕ್ಷೇತ್ರಕ್ಕೆ 'ಹೆಣ್ಣು' ಕಾರಣ ಎಂದ ಬಿಜೆಪಿ ಶಾಸಕ ಮುನಿರತ್ನ
35
ರಾವಣನಾಗಿ ಯಶ್ ಆರ್ಭಟ
Image Credit : Youtube Screenshot‎⁨@WorldOfRamayana

ರಾವಣನಾಗಿ ಯಶ್ ಆರ್ಭಟ

ಈ ಚಿತ್ರದಲ್ಲಿ ಕನ್ನಡದ ನಟ ಯಶ್ ರಾವಣನಾಗಿ ಆರ್ಭಟಿಸಿದ್ದು, ನಮಿತ್ ಮಲ್ಹೋತ್ರಾ ಜೊತೆಗೆ ಚಿತ್ರಕ್ಕೆ ಸ್ವತಃ ಬಂಡವಾಳವನ್ನೂ ಹೂಡಿದ್ದಾರೆ. ರಾವಣನಾಗಿ ನಟ ಯಶ್ ಅಕ್ಷರಶಃ ಸಿನಿಮಾದಲ್ಲಿ ಅಬ್ಬರಿಸಿದ್ದಾರೆ. ಸೌಮ್ಯ ಮತ್ತು ಮಂದಸ್ಮಿತನಾಗಿ ರಣ್‌ಬೀರ್ ಕಪೂರ್ ಕಾಣಿಸಿಕೊಂಡಿದ್ರೆ, ತಾಯಿ ಸೀತಾದೇವಿ ರೂಪದಲ್ಲಿ ನಟಿ ಸಾಯಿ ಪಲ್ಲವಿಯನ್ನು ನೋಡುವುದೇ ಚೆಂದ.

45
ಸಂಪೂರ್ಣ ಭಿನ್ನ
Image Credit : Youtube Screenshot‎⁨@WorldOfRamayana

ಸಂಪೂರ್ಣ ಭಿನ್ನ

ಎಆರ್ ರೆಹಮಾನ್ ಸಂಗೀತ ಚಿತ್ರದ ಪ್ರತಿಯೊಂದು ದೃಶ್ಯದ ಭಾವನೆಯನ್ನು ನೋಡುಗರಲ್ಲಿ ಜಾಗೃತಗೊಳಿಸುವಂತಿದೆ. ಯಶ್ ಮೊದಲ ಬಾರಿಗೆ ಪೌರಾಣಿಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ರಾವಣ ಅಂದ್ರೆ ಹೀಗೆಯೇ ಇದ್ರಾ ಎಂಬಂತೆ ನಟಿಸಿದ್ದಾರೆ. ಇನ್ನುಳಿದಂತೆ ಚಿತ್ರದ ಬಹುತೇಕ ಪಾತ್ರಗಳ ಪರಿಚಯವನ್ನ ಟ್ರೈಲರ್‌ನಲ್ಲಿ ತೋರಿಸಲಾಗಿದೆ. ಈ ಹಿಂದೆ ಬಂದಂತಹ ರಾಮಯಾಣ ಕಥೆ ಆಧರಿತ ಚಿತ್ರಗಳಿಗಿಂತಲೂ ಇದು ಸಂಪೂರ್ಣ ಭಿನ್ನ ಎಂಬುದನ್ನು ಟ್ರೈಲರ್ ಹೇಳುತ್ತಿದೆ.

55
4 ಸಾವಿರ ಕೋಟಿ ಬಜೆಟ್‌
Image Credit : Youtube Screenshot@WorldOfRamayana

4 ಸಾವಿರ ಕೋಟಿ ಬಜೆಟ್‌

ಲಕ್ಷ್ಮಣನಾಗಿ ರವಿ ದುಬೆ, ಹನುಮನಾಗಿ ಸನ್ನಿ ದಿಯೋಲ್, ಶೂರ್ಪನಕಿಯಾಗಿ ರಕುಲ್ ಪ್ರೀತ್ ಸಿಂಗ್ ಸೇರಿದಂತೆ ಹಲವು ಕಲಾವಿದರನ್ನು ಟ್ರೈಲರ್‌ನಲ್ಲಿ ನೋಡಬಹುದಾಗಿದೆ. ನಿತೀಶ್ ತಿವಾರಿ ನಿರ್ದೇಶನದ ಈ ಬೃಹತ್ ರಾಮಾಯಣ ಚಿತ್ರವು ಬರೋಬ್ಬರಿ 4 ಸಾವಿರ ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿದೆ.'ರಾಮಾಯಣ ಪಾರ್ಟ್ 1' ಮುಂಬರುವ ದೀಪಾವಳಿ ಹಬ್ಬದ ಶುಭಸಮಯದಲ್ಲಿ ಬೆಳ್ಳಿಪರದೆಗೆ ಬರಲಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ರಾಮಾಯಣ ಚಲನಚಿತ್ರ
ಯಶ್
ಸಾಯಿ ಪಲ್ಲವಿ
ರಣಬೀರ್ ಕಪೂರ್
Latest Videos
Recommended Stories
Recommended image1
ರಾಜಮೌಳಿ ಒಂದು ಸಿನಿಮಾಗೆ ಎಷ್ಟು ಸಂಭಾವನೆ ಪಡೀತಾರೆ? ವಾರಣಾಸಿಗೆ ಡಿಮ್ಯಾಂಡ್ ಮಾಡಿದ್ದೆಷ್ಟು?
Recommended image2
ಪಿವಿ ಸಿಂಧುಗೆ ವಿಶೇಷ ಉಡುಗೊರೆ ಕಳುಹಿಸಿ ಅಭಿನಂದಿಸಿದ ಕಿಚ್ಚ ಸುದೀಪ್‌!
Recommended image3
ಪವನ್ ಕಲ್ಯಾಣ್ ಪತ್ನಿ ಹೆಸರು ಬದಲಾವಣೆ.. ಅನ್ನಾ ಲೆಝ್ನೋವಾ ಹೊಸ ಹೆಸರೇನು ಗೊತ್ತಾ?
Related Stories
Recommended image1
ರಾಮಾಯಾಣ ಟೀಸರ್ ಬೆನ್ನಲ್ಲೇ ಸಂಭಾವನೆ ಬಹಿರಂಗ, ರಣಬೀರ್‌ಗೆ 150 ಕೋಟಿ, ಯಶ್‌ಗೆ ಎಷ್ಟು?
Recommended image2
ರಾಮಾಯಾಣ, ಮಹಾಭಾರತ & ಆರ್‌ಆರ್‌ ನಗರ ಕುರುಕ್ಷೇತ್ರಕ್ಕೆ 'ಹೆಣ್ಣು' ಕಾರಣ ಎಂದ ಬಿಜೆಪಿ ಶಾಸಕ ಮುನಿರತ್ನ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved