ಖ್ಯಾತ ಗಾಯಕಿ ಅಶಾ ಭೋಸ್ಲೆ ನಿಧನರಾಗಿ ಸರಿಸುಮಾರು 5 ತಿಂಗಳು ಕಳೆದಿದೆದ. ಇದೀಗ ಅಶಾ ಭೋಸ್ಲೆ ಹಾಡಿದ ಕೊನೆಯ ಹಾಡು ಇದೀಗ ರಿಲೀಸ್ ಆಗಿದೆ. ಮೇರಿ ಜಿಂದಗಿ ಹಾಡು ಕೇಳಿ ಅಭಿಮಾನಿಗಳು ಭಾವುಕರಾಗಿದ್ದಾರೆ.
ಮುಂಬೈ (ಸೆ.08) ಬಾಲಿವುಡ್‌ನ ಖ್ಯಾತ ಗಾಯಕಿ ಅಶಾ ಭೋಸ್ಲೆ ನಿಧನರಾಗಿ ಐದು ತಿಂಗಳ ಬಳಿಕ ಇದೀಗ ಅವರು ಹಾಡಿದ ಕೊನೆಯ ಹಾಡು ಬಿಡುಗಡೆಯಾಗಿದೆ. ಅಶಾ ಭೋಸ್ಲೆ ಹುಟ್ಟುಹಬ್ಬದ ದಿನವೇ ಹಾಡು ಬಿಡುಗಡೆ ಮಾಡಲಾಗಿದೆ. ಇದು ಆಶಾ ಭೋಸ್ಲೆ ರೆಕಾರ್ಡ್ ಮಾಡಿದ ಕೊನೆಯ ಹಾಡು.ಓಂ ಕಾ ಹರಿ ಸಿನಿಮಾ ತಂಡ ಈ ಹಾಡನ್ನು ಬಿಡುಗಡೆ ಮಾಡಿದೆ. ಯೂಟ್ಯೂಬ್ ಸೇರಿದಂತೆ ಸೋಶಿಯಲ್ ಮೀಡಿಯಾಗಳಲ್ಲಿ ಎ ಮೇರಿ ಜಿಂದಗಿ ಹಾಡು ರಿಲೀಸ್ ಮಾಡಲಾಗಿದೆ.
2023ರಲ್ಲಿ ಸ್ಟುಡಿಯೋಗೆ ಆಗಮಿಸಿ ರೆಕಾರ್ಡ್ ಮಾಡಿದ್ದ ಹಾಡು
ನಟ ಅಂಶುಮಾನ್ ಝಾ ಅಭಿನಯದ ಸಿನಿಮಾಗಾಗಿ ಆಶಾ ಭೋಸ್ಲೆ ಹಾಡು ಹಾಡಿದ್ದರು. ಈ ಹಾಡನ್ನು ರೆಕಾರ್ಡ್ ಮಾಡಿದ್ದು 2023ರಲ್ಲಿ. ಈ ವೇಳೆ ಸ್ಟುಡಿಯೋಗೆ ಆಗಮಿಸಿದ ಆಶಾ ಭೋಸ್ಲೆ ನಟ ಅಂಶುಮಾನ್ ಝಾ ಸೇರಿದಂತೆ ಸಿನಿಮಾ ತಂಡದ ಜೊತೆ ಮಾತಕತೆ ನಡೆಸಿದ್ದಾರೆ. ಇದೇ ವೇಳೆ ಆಶಾ ಭೋಸ್ಲೆ ಈ ಹಾಡು ಒಪ್ಪಿಕೊಂಡ ಕುರಿತು ಮಾಹಿತಿ ನೀಡಲಾಗಿದೆ.
ಟ್ರಾಕ್ ಕೇಳಿ ಒಪ್ಪಿಕೊಂಡ ಹಾಡು
ಸಿನಿಮಾ ತಂಡ ಏ ಮೇರಿ ಜಿಂದಗಿ ಹಾಡನ್ನು ಅಶಾ ಭೋಸ್ಲೆ ಹಾಡಬೇಕು ಎಂದು ಪ್ಲಾನ್ ಮಾಡಿತ್ತು. ಇದಕ್ಕಾಗಿ ಮೊದಲು ಟ್ರಾಕ್ ರೆಡಿ ಮಾಡಿ ಅಶಾ ಭೋಸ್ಲೆ ಜೊತೆ ಮಾತುಕತೆ ನಡೆಸಿತ್ತು. ಟ್ರಾಕ್ ಕಳುಹಿಸಿ ಕೊಡಲಾಗಿತ್ತು. ಹಾಡಿನ ಟ್ರಾಕ್ ಕೇಳಿದ ಮರು ಕ್ಷಣವೇ ಅಶಾ ಭೋಸ್ಲೆ ಹಾಡು ಒಪ್ಪಿಕೊಂಡಿದ್ದಾರೆ. ಆಶಾ ಭೋಸ್ಲೆಗೆ ಈ ಹಾಡು ಇಷ್ಟವಾಗಿತ್ತು. ಹೀಗಾಗಿ ಅವರು ಪ್ರೀತಿಯಿಂದ ಈ ಹಾಡು ಹಾಡಿದ್ದಾರೆ ಎಂದು ಖುದ್ದು ಆಶಾ ಭೋಸ್ಲೆ ಈ ಸಾಂಗ್ ರೆಕಾರ್ಡಿಂಗ್ ವೇಳೆ ಹೇಳಿದ ಮಾತುಗಳು ಸದ್ದು ಮಾಡುತ್ತಿದೆ.
ನನಗೆ ಫೋನ್ ಮಾಡಿ ಹಾಡು ಕಳಿಸುತ್ತಿದ್ದೇವೆ ಎಂದಿದ್ದಾರೆ. ಹಾಡು, ಟ್ರಾಕ್ ಕೇಳಿದಾಗಲೇ ನಾನು ಯಾವುದೇ ಮರು ಪ್ರಶ್ನೆ ಕೇಳದೆ ಹಾಡು ಒಪ್ಪಿಕೊಂಡಿದೆ. ಈ ಹಾಡು ಅಷ್ಟು ಉತ್ತಮವಾಗಿತ್ತು. ಇದರ ಕಂಪೋಸ್ , ಸಾಹಿತ್ಯಗಳು ಉತ್ತಮವಾಗಿತ್ತು ಎಂದು ಆಶಾ ಭೋಸ್ಲೆ ಹೇಳಿರುವ ವಿಡಿಯೋ ಕೂಡ ಸಿನಿಮಾ ತಂಡ ಬಿಡುಗಡೆ ಮಾಡಲಾಗಿದೆ. ರಾಜೀವ್ ಸಾರಂಗ್ ಈ ಹಾಡು ಕಂಪೋಸ್ ಮಾಡಿದ್ದಾರೆ.
ದುರದೃಷ್ಠವಶಾತ್ ಇದು ಅವರ ಕೊನೆಯ ಹಾಡಾಗಿದೆ. ಈ ಹಾಡಿನ ಬಳಿಕ ಆಶಾ ಭೋಸ್ಲೆ ಯಾವುದೇ ಹಾಡು ರೆಕಾರ್ಡ್ ಮಾಡಿಲ್ಲ. ಬಳಿಕ ಅವರ ಆರೋಗ್ಯವೂ ಕ್ಷೀಣಿಸಿತ್ತು. ಚಿಕಿತ್ಸೆ ಪಡೆಯುತ್ತಿದ್ದ ಆಶಾ ಭೋಸ್ಲೆ 2026ರ ಎಪ್ರಿಲ್‌ನಲ್ಲಿ ನಿಧನರಾದರು. ಇಂದು ಆಶಾ ಭೋಸ್ಲೆ ಹುಟ್ಟಿದ ದಿನ. 93ನೇ ಬರ್ತ್ ಆ್ಯನಿವರ್ಸರಿ ದಿನ ಈ ಹಾಡು ಬಿಡುಗಡೆ ಮಾಡಲಾಗಿದೆ. ಈ ಹಾಡು ಕೇಳಿದ ಅಭಿಮಾನಿಗಳು ಆಶಾ ಭೋಸ್ಲೆ ಕೊನೆಯ ಧ್ವನಿಗೆ ಭಾವುಕರಾಗಿದ್ದಾರೆ. ಇಂಪಾದ ಹಾಡಿಗೆ ಮನಸೋತಿದ್ದಾರೆ.


