
ಅವಳು 9ನೇ ಕ್ಲಾಸ್, ಅವನು ಮ್ಯಕಾನಿಕ್; ಹೋಗೋ ಮುನ್ನ ಎದುರು ಮನೆ ಅಂಕಲ್ನ ಹೆಣ ಉರುಳಿಸಿದ್ರು!
ಒಬ್ಬ ಮೆಕ್ಯಾನಿಕ್ ಮತ್ತು ಅಪ್ರಾಪ್ತ ಬಾಲಕಿಯ ಪ್ರೇಮಕಥೆಯೊಂದು ಘೋರ ಕೊಲೆಯಲ್ಲಿ ಅಂತ್ಯಗೊಳ್ಳುತ್ತದೆ. ಊರು ಬಿಟ್ಟು ಓಡಿಹೋಗಲು ಯತ್ನಿಸುತ್ತಿದ್ದಾಗ, ಅದಕ್ಕೆ ಸಾಕ್ಷಿಯಾದ ಎದುರುಮನೆ ನಿವಾಸಿ ಈಶಪ್ಪನನ್ನು ಪ್ರೇಮಿಗಳು ಬರ್ಬರವಾಗಿ ಹತ್ಯೆ ಮಾಡುತ್ತಾರೆ.
ಅದೊಂದು ಬಡಕುಟುಂಬ.. ಗಂಡ ಹೆಂಡತಿ ಇಬ್ಬರು ಮಕ್ಕಳು.. ಗಂಡ ಟೆಂಟ್ ಹೌಸ್ನಲ್ಲಿ ಕೆಲಸ ಮಾಡ್ತಿದ್ದ.. ಹೆಂಡತಿ ಮಕ್ಕಳನ್ನ ನೋಡಿಕೊಂಡು ಮನೆಯಲ್ಲೇ ಇರುತ್ತಿದ್ದಳು.. ಇತ್ತಿಚೆಗೆ ಬೇಸಿಗೆ ರಜೆ ಇದೆ ಅಂತ ಹೆಂಡತಿ, ಮಕ್ಕಳನ್ನ ಕರೆದುಕೊಂಡು ತವರುಮನೆಗೆ ಹೋಗಿದ್ಲು.. ಆದ್ರೆ ಆವತ್ತೊಂದು ದಿನ ಕೆಲಸದಿಂದ ಬಂದ ಗಂಡ ಮಹಡಿಯ ಮೇಲೆ ಮಲಗಿದ್ದ.. ಆದ್ರೆ ಬೆಳಗಾಗುವಷ್ಟರಲ್ಲೇ ಹೆಣವಾಗಿದ್ದ.. ಆತನನ್ನ ಯಾರೋ ಕೊಲೆ ಮಾಡಿದ್ರು.. ಪೊಲೀಸರು ತನಿಖೆ ಶುರು ಮಾಡಿದ್ರು.. ಯಾವಾಗ ತನಿಖೆ ತೀವ್ರವಾಯ್ತೋ ಆತನ ಸಾವಿಗೆ ಒಂದು ಲವ್ ಸ್ಟೋರಿ ಕಾರಣ ಅನ್ನೋದು ಗೊತ್ತಾಗುತ್ತೆ.
Add Asianetnews Kannada as a Preferred Source
